Headlines

Bigg Boss ರಘು ಪಾಲಿಗೆ ಅದೃಷ್ಟದೇವತೆಯಾದ ರಕ್ಷಿತಾ ಶೆಟ್ಟಿ; ಏನ್ರೀ…ಇದು.. ಇಂಥ ದಾಖಲೆ! | Bigg Boss Kannada Season 12 Mutant Raghu Rakshita Kitchen Recipe Video

Bigg Boss ರಘು ಪಾಲಿಗೆ ಅದೃಷ್ಟದೇವತೆಯಾದ ರಕ್ಷಿತಾ ಶೆಟ್ಟಿ; ಏನ್ರೀ…ಇದು.. ಇಂಥ ದಾಖಲೆ! | Bigg Boss Kannada Season 12 Mutant Raghu Rakshita Kitchen Recipe Video



Bigg Boss ರಘು ಪಾಲಿಗೆ ಅದೃಷ್ಟದೇವತೆಯಾದ ರಕ್ಷಿತಾ ಶೆಟ್ಟಿ; ಏನ್ರೀ…ಇದು.. ಇಂಥ ದಾಖಲೆ! | Bigg Boss Kannada Season 12 Mutant Raghu Rakshita Kitchen Recipe Video

Bigg Boss Raghu And Rakshita Shetty: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಘು ಮನೆಗೆ ತಂಗಿ ರಕ್ಷಿತಾ ಅವರು ಬಂದಿದ್ದರು. ಅಲ್ಲಿ ಇವರಿಬ್ಬರು ಸೇರಿಕೊಂಡು ವಿಡಿಯೋ ಮಾಡಿದ್ದಾರೆ. ಈ ವಿಡಿಯೋಗಳಿಗೆ ಭಾರೀ ವೀಕ್ಷಣೆ ಸಿಕ್ಕಿದೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಣ್ಣ-ತಂಗಿ ಎಂದು ಫೇಮಸ್‌ ಆದ ರಘು, ರಕ್ಷಿತಾ ಈಗ ಒಟ್ಟಿಗೆ ಸೇರಿ ಅಡುಗೆ ಮಾಡಿದ್ದಾರೆ. ರಘು ಅವರು ಯುಟ್ಯೂಬ್‌ ಚಾನೆಲ್‌ ಆರಂಭಿಸಿದ್ದು, ಅಣ್ಣ-ತಂಗಿ ಸೇರಿ ಅಡುಗೆ ವಿಡಿಯೋ ಮಾಡಿದ್ದಾರೆ.

ರಘು ಮನೆಗೆ ರಕ್ಷಿತಾ ಅವರು ಎಂಟ್ರಿಕೊಟ್ಟಿದ್ದು, ಅಲ್ಲಿ ಅಡುಗೆ ಮಾಡಿದ್ದಾರೆ. ಅಂದಹಾಗೆ ಈ ವಿಡಿಯೋ ಅಪ್‌ಲೋಡ್‌ ಆದ 9.6 ಲಕ್ಷ ವೀಕ್ಷಣೆ ಕಂಡಿದೆ. ರಘು ಪಾಲಿಗೆ ರಕ್ಷಿತಾ ಭಾಗ್ಯಲಕ್ಷ್ಮೀ ಆಗಿದ್ದಾರೆ.

ರಘು ಹೇಳಿದ್ದೇನು?

ಇದು ಬಿಗ್‌ ಬಾಸ್‌ ಮನೆಯಲ್ಲೇ ಫೇಮಸ್ ಆದ Egg & Potato Recipe! ಈ ಶೋನಲ್ಲಿ ನಾನು ಮಾಡಿದ ಈ ಸರಳ ಆದರೆ mass taste recipe ನಿಮಗಾಗಿ ಇವತ್ತು ಶೇರ್ ಮಾಡ್ತಿದ್ದೀನಿ. ಕಡಿಮೆ ಪದಾರ್ಥ, ಜಾಸ್ತಿ ರುಚಿ. ಮನೆಯಲ್ಲಿ ಸುಲಭವಾಗಿ ಮಾಡಬಹುದು ಸ್ಪೆಷಲ್‌ ಕೌಶಲ ಬೇಡ!

ಬಿಗ್‌ ಬಾಸ್‌ ಮನೆಯ vibe, ನನ್ನ ಸ್ಟೈಲ್‌, ಮತ್ತು ಫುಲ್‌ ಟೇಸ್ಟ್‌ ಗ್ಯಾರಂಟಿ. ಇಬ್ರನ್ನೂ ಕಂಡು ತುಂಬ ಖುಷಿ ಆಯ್ತು. ಸೂರಜ್‌ಗೂ ಕರಿಯಿರಿ. ನಿಮ್ಮ ಮೂವರ ಜೋಡಿ ನನಗೆ ತುಂಬ ಇಷ್ಟ. ಇಬ್ಬರ ತುಂಟಾಟ ತರಲೆ ತಮಾಷೆ ಮಂಗನಾಟ ಜಗಳ ನನಗೆ ತುಂಬಾ ಇಷ್ಟ.

ವೀಕ್ಷಕರ ಕಾಮೆಂಟ್‌ ಏನು?

ಓಕೆ ಅಣ್ಣ ನಾವು ಟ್ರೈ ಮಾಡ್ತೀವಿ. ಸೂಪರ್ ಜೋಡಿ ನಿಮ್ಮ ಜೊತೆಗೆ ಈಗ ಗಿಲ್ಲಿ ಇದಿದ್ರೆ ಚನ್ನಾಗಿ ಇರೋದು. ಮಂಗಳೂರು ವಿಡಿಯೋಗೋಸ್ಕರ ಕಾಯ್ತಾ ಇರ್ತಿವಿ.

ರಕ್ಷಿತಾ ಅಭಿಮಾನಿಗಳು ರಘುಗೆ ಫುಲ್ ಸಪೋರ್ಟ್

ನಿಮಗೋಸ್ಕರ ಬಿಗ್ ಬಾಸ್ ನೋಡ್ತಾ ಇದ್ದರು. ಬಿಗ್ ಬಾಸ್ ಮುಗಿದ ಮೇಲೆ ತುಂಬಾ ಬೇಜಾರಾಗುತ್ತೆ. ನೀವು ಯಾವುದಾದರೂ ಕಾರ್ಯಕ್ರಮಕ್ಕೆ ಬಂದರೆ ನನಗೆ ತುಂಬಾ ಖುಷಿಯಾಗುತ್ತದೆ. ಆದರೂ ರಘು ಅಣ್ಣ ಯುಟ್ಯೂಬ್ ಚಾನೆಲ್ ಓಪನ್ ಮಾಡಿದ್ದು ನಾವು ಫಾಲೋ ಮಾಡ್ತೀವಿ. ಎಲ್ಲ ರೆಸಿಪಿಗಳನ್ನು ನಾವು ಟ್ರೈ ಮಾಡ್ತೀವಿ

ಎಷ್ಟು ಖುಷಿ ಆಯ್ತು ಗೊತ್ತುಂಟಾ. ತುಂಬ ಖುಷಿ ಆಯ್ತು. ಗಿಲ್ಲಿ ಇದ್ದಿದಿದ್ದರೆ ಇನ್ನು ಖುಷಿಯಾಗಿರೋದು.

ನಿಮ್ಮಿಬ್ಬರ ಜೊತೆಯಲ್ಲಿರುವ ವಿಡಿಯೋ ನೋಡಿ ತುಂಬಾನೇ ಖುಷಿ ಆಯ್ತು.

ಅಣ್ಣ-ತಂಗಿ ಅಂದ್ರೆ ಹೀಗೇನೇ ಇರ್ಬೇಕು.. ನೀವು ಹೀಗೇಯೇ ಕೊನೆಯವರೆಗೂ.

ಹುಟ್ಟುವ ಪ್ರತಿ ಹೆಣ್ಣು ಮಕ್ಕಳೂ ನಿಮ್ಮಂತಹ ತಂದೆ, ನಿಮ್ಮಂತಹ ಅಣ್ಣನನ್ನೆ ಬಯಸುತ್ತಾರೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡಿ ಕಲಿಯುವುದು ತುಂಬ ಇತ್ತು. ನನ್ನ ಪ್ರಕಾರ ನಿಜವಾದ ಬಿಗ್ ಬಾಸ್ ವಿನ್ನರ್ ನೀವೆ..

ಮೊದಲಿಗೆ ನಿಮ್ಮಿಬರಿಗೂ ಒಳ್ಳೇಯದು ಆಗಲಿ. ಆಗ ರಘು ಸರ್ ನಿಮ್ಮ ಹೊಸ ಚಾನಲ್‌ಗೆ ಒಳ್ಳೆಯದು ಆಗಲಿ. ನಿಮ್ಮಿಬ್ಬರ ಬಂಧ ಅನುಬಂಧಕ್ಕೆ ಯಾರ ದೃಷ್ಟಿ ಬೀಳದ್ದಿರಲಿ. ಯಾಕಂದರೆ ಒಂದೇ ತಾಯಿ ಮಕ್ಕಳು ನಿಮ್ಮ ಹಾಗೆ ಇರೋಲ್ಲ. ಅಷ್ಟು ಪ್ರೀತಿ ವಿಶ್ವಾಸ ನಂಬಿಕೆ ಇದೆ. ರಕ್ಷಿತಾ ರಘು ಸರ್ ಮತ್ತು ಗಿಲ್ಲಿ ಮೂವರಿಗೂ ಒಳ್ಳೇದು ಆಗಲಿ



Source link

Leave a Reply

Your email address will not be published. Required fields are marked *