ರಾಜಧಾನಿ ಬೆಂಗಳೂರಲ್ಲಿ ಪೈಶಾಚಿಕ ಕೃತ್ಯ; ಮಾತು ಬಾರದ, ಕಾಲಿಲ್ಲದ ವಿಶೇಷ ಚೇತನ ಯುವತಿಯ ಅತ್ಯಾಚಾರಕ್ಕೆ ಯತ್ನ! | Bengaluru Sexual Assault Attempt Disabled Girl Mob Beats Vignesh Arrested San

ರಾಜಧಾನಿ ಬೆಂಗಳೂರಲ್ಲಿ ಪೈಶಾಚಿಕ ಕೃತ್ಯ; ಮಾತು ಬಾರದ, ಕಾಲಿಲ್ಲದ ವಿಶೇಷ ಚೇತನ ಯುವತಿಯ ಅತ್ಯಾಚಾರಕ್ಕೆ ಯತ್ನ! | Bengaluru Sexual Assault Attempt Disabled Girl Mob Beats Vignesh Arrested San



ರಾಜಧಾನಿ ಬೆಂಗಳೂರಲ್ಲಿ ಪೈಶಾಚಿಕ ಕೃತ್ಯ; ಮಾತು ಬಾರದ, ಕಾಲಿಲ್ಲದ ವಿಶೇಷ ಚೇತನ ಯುವತಿಯ ಅತ್ಯಾಚಾರಕ್ಕೆ ಯತ್ನ! | Bengaluru Sexual Assault Attempt Disabled Girl Mob Beats Vignesh Arrested San

ಬೆಂಗಳೂರಿನ ಆಡುಗೋಡಿಯಲ್ಲಿ, ವಿಶೇಷ ಚೇತನ ಯುವತಿ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ವಿಘ್ನೇಶ್ ಎಂಬ ಕಾಮುಕ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತಾಯಿಯಿಂದ ಕೃತ್ಯ ಬಯಲಾಗಿದ್ದು, ಸ್ಥಳೀಯರು ಆರೋಪಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಂಗಳೂರು (ನ.12): ರಾಜಧಾನಿ ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ನಡೆದಿದೆ. ವಿಶೇಷ ಚೇತನ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಜನರಿಂದ ಧರ್ಮದೇಟು ತಿಂದಿದ್ದಾನೆ. ಮಾತು ಬಾರದ, ಕಾಲು ಸ್ವಾಧೀನವಿಲ್ಲದ ಯುವತಿಯ ಮೇಲೆ ಕಾಮುಕ ಕಣ್ಣುಹಾಕಿದ್ದಾನೆ. ಸರಿಯಾದ ಬೆಳವಣಿಗೆ ಇಲ್ಲದೆ ಇನ್ನು ಮಗುವಿನಂತೆ ಇರುವ ವಿಶೇಷ ಚೇತನ ಯುವತಿಯನ್ನು ಮನೆಯಲ್ಲಿ ಯಾರೂ ಇಲ್ಲದಾಗ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ.

ನ.6 ರಂದು ಆಡುಗೋಡಿಯ ಎಂಆರ್‌ ನಗರದಲ್ಲಿ ವಿಘ್ನೇಶ್‌ ಅಲಿಯಾಸ್‌ ದಾಡು ಎಂಬಾತನಿಂದ ಕೃತ್ಯ ನಡೆದಿದೆ. ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಕಾಮುಕನಿಗೆ ಧರ್ಮದೇಟು ನೀಡಿದ್ದು, ಏರಿಯಾದ ರಸ್ತೆಯಲ್ಲೇ ಆತನನ್ನು ಉರುಳಿಸಿ ಹಲ್ಲೆ ಮಾಡಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಪಾಪಿ ಮಾಡಿ ಕೃತ್ಯವೇನು

ನವಂಬರ್ 9 ರಂದು ಮದುವೆಗೆ ಎಂದು ಯುವತಿಯ ಕುಟುಂಬಸ್ಥರು ತೆರಳಿದ್ದರು. ಈ ವೇಳೆ ವಿಶೇಷ ಚೇತನ ಯುವತಿಯನ್ನ ಮನೆಯಲ್ಲೇ ಬಿಟ್ಟು ತೆರಳಿದ್ದರು. ಯುವತಿ ಒಳಗಿದ್ದರೆ, ಹೊರಗಿನಿಂದ ಚಿಲಕ ಹಾಕಿ ಕುಟುಂಬಸ್ಥರು ತೆರಳಿದ್ದರು. ಬೆಳಗ್ಗೆ 11 ಗಂಟೆಗೆ ವೇಳೆಗೆ ಕಾಮುಕ ವಿಘ್ನೇಶ್ ಮನೆ ಬಳಿ ಬಂದಿದ್ದ. ಗಾಂಜಾ ನಶೆಯಲ್ಲಿದ್ದವ ಚಿಲಕ ತೆಗೆದು ಮನೆ ಒಳಗೆ ನುಗ್ಗಿದ್ದಾನೆ. ಆ ಬಳಿಕ ಮನೆಯ ಒಳಗಿನಿಂದ ಚಿಲಕ ಹಾಕಿಕೊಂಡಿದ್ದ. ಈ ಹಂತದಲ್ಲಿ ಮಗಳನ್ನು ನೋಡಿಕೊಂಡು ಹೋಗೋಣ ಎಂದು ಆಕೆಯ ತಾಯಿ ಬಂದಿದ್ದಾರೆ. ಈ ಹಂತದಲ್ಲಿ ಮನೆಯ ಒಳಗಿನಿಂದ ಚಿಲಕ ಹಾಕಿದ್ದು ಗೊತ್ತಾಗಿದೆ.

ಏನೋ ಗಂಭೀರ ಸಮಸ್ಯೆ ಆಗಿದೆ ಎಂದು ಅರಿತ ತಾಯಿ, ಕಾಲಿನಿಂದ ಒದ್ದು ಬಾಗಿಲು ಒಡೆದಿದ್ದಾಳೆ. ಈ ವೇಳೆ ಮಗಳ ಸ್ಥಿತಿ ಕಂಡು ಆಕೆ ಬೆಚ್ಚಿಬಿದ್ದಿದ್ದಳು. ಮಗಳ ದೇಹದ ಮೇಲೆ ಬಟ್ಟೆಯೇ ಇದ್ದಿರಲಿಲ್ಲ.ಕಾಮುಕ ವಿಘ್ನೇಶ್‌ ಬಾಗಿಲ ಬಳಿ ಅವಿತು ಕುಳಿತಿದ್ದ. ವಿಶೇಷ ಚೇತನ ಯುವತಿ ತಾಯಿ ನೋಡ್ತಿದ್ದಂತೆ ಒಳ ಉಡುಪು ಧರಿಸಿ ಎಸ್ಕೇಪ್‌ ಆಗಲು ಯತ್ನಿಸಿದ. ತಕ್ಷಣ ಸ್ಥಳೀಯರೆಲ್ಲ ಆತನನ್ನ ಹಿಡಿದು ಥಳಿಸಿದ್ದಾರೆ. ಆ ನಂತರ ಪೊಲೀಸರಿಗೆ ಒಪ್ಪಿಸಿ ಕುಟುಂಬದವರು ದೂರು ನೀಡಿದ್ದಾರೆ.

ಆಡುಗೋಡಿ ಪೊಲೀಸರಿಂದ ಆರೋಪಿ ಬಂಧನವಾಗಿದ್ದು, ಘಟನೆಯಿಂದ ಸ್ಥಳೀಯ ಜನ ರೊಚ್ಚಿಗೆದ್ದಿದ್ದಾರೆ. ಇವತ್ತು ಆ ಮಗುವಿಗೆ ಈ ರೀತಿ ಮಾಡಿದ್ದಾನೆ ನಾಳೆ ನಮ್ಮ ಮನೆಯ ಮಕ್ಕಳಿಗೂ ಇದೇ ರೀತಿ ಮಾಡಬಹುದು. ಆತನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.



Source link

Leave a Reply

Your email address will not be published. Required fields are marked *