Headlines

ಟ್ರಂಪ್ ಕದನ ವಿರಾಮ ಘೋಷಣೆ ಬಳಿಕ 20 ನಿಮಿಷದಲ್ಲಿ 840 ಕೋಟಿ ಬಾಚಿದ ಅನಾಮಿಕ ಟ್ರೇಡರ್ | Us Man Got 840 Crore Profit In 20 Minutes After Trumps Ceasefire Announcement

ಟ್ರಂಪ್ ಕದನ ವಿರಾಮ ಘೋಷಣೆ ಬಳಿಕ 20 ನಿಮಿಷದಲ್ಲಿ 840 ಕೋಟಿ ಬಾಚಿದ ಅನಾಮಿಕ ಟ್ರೇಡರ್ | Us Man Got 840 Crore Profit In 20 Minutes After Trumps Ceasefire Announcement



ಟ್ರಂಪ್ ಕದನ ವಿರಾಮ ಘೋಷಣೆ ಬಳಿಕ 20 ನಿಮಿಷದಲ್ಲಿ 840 ಕೋಟಿ ಬಾಚಿದ ಅನಾಮಿಕ ಟ್ರೇಡರ್ | Us Man Got 840 Crore Profit In 20 Minutes After Trumps Ceasefire Announcement

US stock market insider trading: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಕದನ ವಿರಾಮ ಘೋಷಿಸುವ ಕೆಲವೇ ನಿಮಿಷಗಳ ಮೊದಲು, ಅನಾಮಿಕ ವ್ಯಕ್ತಿಯೊಬ್ಬರು ಷೇರು ಮಾರುಕಟ್ಟೆಯಲ್ಲಿ ಭಾರಿ ಹೂಡಿಕೆ ಮಾಡಿ  20 ನಿಮಿಷಗಳಲ್ಲಿ 840 ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಭಾರಿ ಲಾಭ ಮಾಡಿದ ಅನಾಮಿಕ

ವಾಷಿಂಗ್ಟನ್: ಸಾಮಾನ್ಯವಾಗಿ ಷೇರುಪೇಟೆಯಲ್ಲಿ ಷೇರುಗಳ ಬೆಲೆ ಏರಿಕೆ ಹಾಗೂ ಇಳಿಕೆಗಳು ಜಗತ್ತಿನಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳನ್ನು ಆಧರಿಸಿದೆ. ಅವುಗಳನ್ನು ಆಧರಿಸಿಯೇ ಷೇರು ಮಾರುಕಟ್ಟೆ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಯುದ್ಧ ಭೂಕಂಪಗಳಂತಹ ಸಂದರ್ಭದಲ್ಲಿ ಷೇರು ಮಾರುಕಟ್ಟೆ ಕುಸಿತ ಕಾಣುತ್ತದೆ. ಹಾಗೆಯೇ ಸರ್ಕಾರದ ಕೆಲ ಮಹತ್ವದ ಘೋಷಣೆಗಳಾದ ಅವುಗಳು ಮಾರುಕಟ್ಟೆ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅವಲಂಬಿಸಿ ಮಾರುಕಟ್ಟೆಯ ಏರಿಕೆ ಅಥವಾ ಇಳಿಕೆ ನಿಂತಿದೆ. ಹೀಗಿರುವಾಗ ಅಮೆರಿಕಾ ಅಧ್ಯಕ್ಷರು ಮಾಡಿದ ಘೋಷಣೆಯೊಂದು ಅಮೆರಿಕಾದ ಷೇರು ಮಾರುಕಟ್ಟೆಯಲ್ಲಿ ಓರ್ವ ಅನಾಮಿಕನಿಗೆ 840ಕೋಟಿ ರೂ ಲಾಭ ನೀಡಿದೆ.

ಕೇವಲ 20 ನಿಮಿಷದಲ್ಲಿ 840 ಕೋಟಿ ರೂ ಗಳಿಕೆ

ಹೌದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧದ ಸಮರಕ್ಕೆ 5 ದಿನ ಬ್ರೇಕ್ ಹಾಕುವ ಘೋಷಣೆ ಮಾಡಿದ್ದ ಅವಕಾಶ ಬಳಸಿಕೊಂಡ ಅಮೆರಿಕದ ಓರ್ವ ವ್ಯಕ್ತಿ ಅಥವಾ ಗುಂಪು, ಯುಎಸ್ ಷೇರುಪೇಟೆಯಲ್ಲಿ ಕೇವಲ 20 ನಿಮಿಷದಲ್ಲಿ 840 ಕೋಟಿ ರು. ಲಾಭ ಮಾಡಿಕೊಂಡ ಪ್ರಸಂಗ ನಡೆದಿದೆ. ಇದರಿಂದಾಗಿ ಟ್ರಂಪ್ ಘೋಷಣೆಯ ಸುಳಿವು ಇವರಿಗೆ ಮೊದಲೇ ಸಿಕ್ಕಿತ್ತೇ ಎಂబ ಅನುಮಾನ ಮೂಡಿದೆ.

ಇದನ್ನೂ ಓದಿ: 2 ವಾರ ಡೈಪರ್ ಚೇಂಜ್ ಮಾಡದೇ 4 ತಿಂಗಳ ಮಗು ಸಾವಿಗೆ ಕಾರಣರಾದ ಪಾಪಿ ಪೋಷಕರು

ಟ್ರಂಪ್ ಕದನ ವಿರಾಮ ಘೋಷಿಸಿದ್ದು ಅಮೆರಿಕ ಕಾಲಮಾನ ಸೋಮವಾರ ಬೆಳಗ್ಗೆ 7.05ಕ್ಕೆ. ಆದರೆ ಅದಕ್ಕಿಂತ 15 ನಿಮಿಷ ಮೊದಲು ಒಬ್ಬ ಅನಾಮಧೇಯ ಟ್ರೇಡರ್ ಅಥವಾ ಒಂದು ಸಂಸ್ಥೆ, ಬರೋಬ್ಬರಿ 12,600 ಕೋಟಿ ರು. ಮೌಲ್ಯದ ಎಸ್ ಆ್ಯಂಡ್ ಪಿ 500 ಪ್ಯೂಚರ್ಸ್ ಷೇರನ್ನು ಖರೀದಿಸಿದ್ದಾರೆ. ಸಾಮಾನ್ಯವಾಗಿ ಈ ವೇಳೆ ತುರುಸಿನ ವಹಿವಾಟು ನಡೆಯದಿದ್ದರೂ ಈ ಮಟ್ಟದ ಷೇರು ಖರೀದಿ ನಡೆದಿದೆ.

ಇದನ್ನೂ ಓದಿ: ಇದು ಡಿಸೇಲ್‌ನಿಂದ ಚಾಲಿತವಾಗುವ ಇಲೆಕ್ಟ್ರಿಕ್ ಬಸ್: ಹೇಗೆ ಅಂತೀರಾ ವೀಡಿಯೋ ನೋಡಿ

ಬಳಿಕ 7.05ಕ್ಕೆ ಟ್ರಂಪ್‌ರಿಂದ ಕದನ ವಿರಾಮ ಘೋಷಣೆ ಹೊರಬೀಳುತ್ತಿದ್ದಂತೆಯೇ ಐದೇ ನಿಮಿಷದಲ್ಲಿ (7.10ರಷ್ಟೊತ್ತಿಗೆ), ಷೇರುಪೇಟೆ ಚೇತರಿಕೆ ಕಂಡಿದೆ. ಟ್ರಂಪ್ ಘೋಷಣೆಗೂ ಮುನ್ನ ಸರಿಯಾಗಿ ಲೆಕ್ಕಾಚಾರ ಹಾಕಿ ಹೂಡಿಕೆ ಮಾಡಿದ್ದ ಆ ‘ಮಿಸ್ಟರಿ ಟ್ರೇಡರ್’ಗೆ ತಾನು ಹೂಡಿದ ಹಣಕ್ಕಿಂತ 840 ಕೋಟಿ ರು. ಲಾಭವಾಗಿದೆ. ಹೀಗಾಗಿ ಟ್ರಂಪ್ ಘೋಷಣೆ ಅರಿವು ಇವರಿಗೆ ಮೊದಲೇ ಇತ್ತೆಂಬ ಅನುಮಾನ ಮೂಡಿದೆ.



Source link

Leave a Reply

Your email address will not be published. Required fields are marked *