Headlines

ಕಾಮಸೂತ್ರದ ಹಾಡಾಯ್ತು ‘ಕೆಡಿ’ಯ ಸರ್ಸೆ ಸಾಂಗ್; ಪ್ರೇಮ್‌ಗೆ ಉಗಿದು ಉಪ್ಪಿನಕಾಯಿ ಹಾಕ್ತಿರೋ ನೆಟ್ಟಿಗರು | Kannada Cinema Director Jogi Prem Kd Movie Sarse Song Lyrics Are Obscene And Full Of Double Meanings Mrq

ಕಾಮಸೂತ್ರದ ಹಾಡಾಯ್ತು ‘ಕೆಡಿ’ಯ ಸರ್ಸೆ ಸಾಂಗ್; ಪ್ರೇಮ್‌ಗೆ ಉಗಿದು ಉಪ್ಪಿನಕಾಯಿ ಹಾಕ್ತಿರೋ ನೆಟ್ಟಿಗರು | Kannada Cinema Director Jogi Prem Kd Movie Sarse Song Lyrics Are Obscene And Full Of Double Meanings Mrq



ಕಾಮಸೂತ್ರದ ಹಾಡಾಯ್ತು ‘ಕೆಡಿ’ಯ ಸರ್ಸೆ ಸಾಂಗ್; ಪ್ರೇಮ್‌ಗೆ ಉಗಿದು ಉಪ್ಪಿನಕಾಯಿ ಹಾಕ್ತಿರೋ ನೆಟ್ಟಿಗರು | Kannada Cinema Director Jogi Prem Kd Movie Sarse Song Lyrics Are Obscene And Full Of Double Meanings Mrq

ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ‘ಸರ್ಸೆ ಸರ್ಸೆ ಸೆರಗ ಸರ್ಸೆ’ ಹಾಡಿನ ಸಾಹಿತ್ಯವು ಅಶ್ಲೀಲ ಮತ್ತು ಡಬಲ್ ಮೀನಿಂಗ್‌ನಿಂದ ಕೂಡಿದೆ ಎಂದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಸಾಹಿತ್ಯಕ್ಕೆ ನೆಟ್ಟಿಗರು, ಪತ್ರಕರ್ತರು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದ ಹಾಡಿನ ಸಾಹಿತ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಸೆ ಸರ್ಸೆ ಸೆರಗ ಸರ್ಸೆ ಹಾಡಿನ ಸಾಹಿತ್ಯ ಅಶ್ಲೀಲತೆಯಿಂದ ತುಂಬಿ ತುಳುಕಿದೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತದ್ದಾರೆ. ಬೇಡುವೆನು ವರ, ಕೊಡೆತಾಯಿ ಜನ್ಮವನ್ನು ಎಂಬಂತಹ ಅದ್ಭುತ ಗೀತೆಯನ್ನು ನೀಡಿದ್ದ ಪ್ರೇಮ್ ಅವರ ಲೇಖನದಲ್ಲಿ ಮೂಡಿ ಬಂದ ಕೆಡಿ ಸಿನಿಮಾದ ಹಾಡನ್ನು ಕೇಳಿದ ಜನರು ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ. ಅಷ್ಟೇ ಅಲ್ಲ ಜನರು ನಿರ್ದೇಶಕ ಪ್ರೇಮ್ ಸೇರಿದಂತೆ ಚಿತ್ರತಂಡದ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಿಸುತ್ತಿದ್ದಾರೆ. ಅಶ್ಲೀಲತೆ ತುಂಬಿ ತುಳುಕುತ್ತಿರೋ ಹಾಡನ್ನು ಕೂಡಲೇ ಡಿಲೀಟ್ ಮಾಡಬೇಕು ಮತ್ತು ಸಿನಿಮಾದಲ್ಲಿಯೂ ಸೇರಿಸಬಾರದು ಎಂಬ ಆಗ್ರಹಗಳು ಕೇಳಿ ಬರುತ್ತಿವೆ.

ಹಾಡುಗಳು ಸಿನಿಮಾಗೆ ಪ್ಲಸ್ ಪಾಯಿಂಟ್ 

ಸಾಮಾನ್ಯವಾಗಿ ಒಂದು ಸಿನಿಮಾ ಯಶಸ್ಸು ಕಾಣಲು ಹಲವು ಕಾರಣಗಳಿರುತ್ತವೆ. ಹಾಡುಗಳು ಸಿನಿಮಾಗೆ ಪ್ಲಸ್ ಪಾಯಿಂಟ್. ಎಷ್ಟೋ ಸಿನಿಮಾಗಳು ಹಾಡುಗಳಿಂದಲೇ ಬಾಕ್ಸ್‌ಆಫಿಸ್‌ನಲ್ಲಿ ದೊಡ್ಡ ಕಲೆಕ್ಷನ್ ಮಾಡಿವೆ. ಈ ಹಿಂದೆ ಹಾಡುಗಳಲ್ಲಿ ಎಲ್ಲೋ ಒಂದು ಕಡೆ ಶೃಂಗಾರ ಸಾಹಿತ್ಯವನ್ನು ಅಳವಡಿಸಿಕೊಳ್ಳುತ್ತಿದ್ದರು. ಸರ್ಸೆ ಸರ್ಸೆ ಎಂಬ ಪದದಿಂದ ಆರಂಭವಾಗುವ ಹಾಡು ಎಲ್ಲಾ ಎಲ್ಲೆಗಳನ್ನು ಮೀರಿದೆ.

ಸಾಹಿತಿಗಳು, ಚಿಂತಕರು, ಹಿರಿಯ ಪತ್ರಕರ್ತರು, ಮಹಿಳೆಯರು ಸೇರಿದಂತೆ ನಾಡಿನ ಜನತೆ ಕೆಡಿ ಸಿನಿಮಾದ ಹಾಡನ್ನು ತೀವ್ರವಾಗಿ ಖಂಡನೆ ಮಾಡುತ್ತಿದ್ದಾರೆ. ಒಂದು ಸಿನಿಮಾ ಹಿಟ್ ಮಾಡಲು ನಿರ್ದೇಶಕ ಪ್ರೇಮ್ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು. ಇದು ಚೀಪ್ ಮೆಂಟಾಲಿಟಿ ಮತ್ತು ಇಂತಹ ಹಾಡುಗಳು ಸಮಾಜಕ್ಕೆ ಏನು ಸಂದೇಶ ನೀಡುತ್ತವೆ ಎಂದು ಪ್ರಶ್ನೆ ಮಾಡಿದ್ದಾರೆ.

ಶೇಮ್ ಆನ್ ಯು ಪ್ರೇಮ್ ಎಂದು ಉಗಿದ ಜನ

ಹಿರಿಯ ಪತ್ರಕರ್ತೆಯಾದ ಶೋಭಾ ಮಳವಳ್ಳಿ ಸಹ ಹಾಡಿನ ಸಾಹಿತ್ಯದ ಆಕ್ರೋಶ ವ್ಯಕ್ತಪಡಿಸಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡು, ಶೇಮ್ ಆನ್ ಯು ಪ್ರೇಮ್ ಎಂದು ಉಗಿದಿದ್ದಾರೆ. ಬರೆದ್ಯೋ, ಗೀಚಿದ್ಯೋ, ಯಾವುದ್ಯಾವುದೋ ಧ್ಯಾನದಲ್ಲಿ ಅಕ್ಷರಗಳನ್ನೇ ಮರೆತು, ಬರೀ ನೋರಾ‌ ನೆನಪಿಸಿಕೊಂಡು, ಏದುಸಿರುಬಿಡ್ತಾ ಬರೆದ್ಯೋ. ನಿನ್ನೊಳಗಿನ ಕಾಮಕವಿಯನ್ನು ಬಡಿದೆಬ್ಬಿಸಿ, ಬರೆದಿರೋ ಹಾಡು ಕೇಳಿ, ಇಡೀ ಕರ್ನಾಟಕ ಅಲ್ಲ, ಬಾಲಿವುಡ್ ನವರೂ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ ಎಂದು ಖಂಡಿಸಿದ್ದಾರೆ. 

ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಸಂದೇಶ ಎಂಬವರು ಖ್ಯಾತ ನಿರ್ದೇಶಕರಾದ ಸಿದ್ದಲಿಂಗಯ್ಯ, ಪುಟ್ಟಣ್ಣ ಕಣಗಲ್ ಅವರು ಎಲ್ಲಾ ನಿರ್ದೇಶಕರಿಗೂ ಮಾದರಿ ನಿರ್ದೇಶಕರು. ಅವರ ಯಾವುದೇ ಚಿತ್ರಗಳ ಸಾಹಿತ್ಯವನ್ನು ಗಮನಿಸಿ ಅವರ ಚಿತ್ರದ ಸಾಹಿತ್ಯ ತುಂಬಾ ಅತ್ಯುತ್ತಮ ಗುಣಮಟ್ಟವನ್ನು ಹೊಂದಿರುತ್ತದೆ. ಅವರಿಂದ ಕಲಿಯುವುದು ತುಂಬಾ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Nandagokula Serial ಚಿತ್ರೀಕರಣದ ವೇಳೆ ಕಣ್ಣೀರಿಟ್ಟ ನಂದಗೋಕುಲದ ಸೊಸೆ ನಟಿ ಊರ್ಜಿತಾ

ಸಿನಿಮಾ ಬಿಡುಗಡೆಗೂ ಮುನ್ನ ಟೀಸರ್, ಟ್ರೈಲರ್ ಮತ್ತು ಹಾಡುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ. ಈ ಮೂಲಕ ಸಿನಿಮಾದ ಪ್ರಚಾರ ನಡೆಸಲಾಗುತ್ತದೆ. ಸಿನಿಮಾಗೆ ಪ್ರಚಾರ ಸಿಗಲಿ ಅಂತ ಟ್ರೈಲರ್ ಅಥವಾ ಟೀಸರ್‌ನಲ್ಲಿ ಜನರನ್ನು ಅತಿ ಬೇಗ ಆಕರ್ಷಿಸುವ ಕಂಟೆಂಟ್ ಸೇರಿಸಲಾಗುತ್ತದೆ. ಕೆಲವರು ಆಕರ್ಷಿಸುವ ಕಂಟೆಂಟ್ ಅಂದ್ರೆ ಹಸಿಬಿಸಿ ದೃಶ್ಯ ಅಂತಾನೇ ತಿಳಿದುಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಟ್ರೈಲರ್‌ಗಳಲ್ಲಿ ಇಂತಹ ದೃಶ್ಯಗಳನ್ನು ಕಾಣಬಹುದಾಗಿದೆ. ಆದ್ರೆ ನಿರ್ದೇಶಕ ಪ್ರೇಮ್ ಮಾತ್ರ ನಾಡಿನ ಜನತೆಯ ಕೆಂಗಣ್ಣಿಗೆ ಗುರಿಯಾಗಿರೋದಂತು ನಿಜ.

ಈ ಎಲ್ಲಾ ವಿವಾದದ ಕುರಿತು ಪ್ರೇಮ್ ಸ್ಪಷ್ಟನೆ ನೀಡ್ತಾರಾ ಎಂಬುವುದು ಮುಂದಿನ ದಿನಗಳಲ್ಲಿ ತಿಳಿದು ಬರಬೇಕಿದೆ.

ಇದನ್ನೂ ಓದಿ: ಅಪ್ಪ ಸತ್ತಾಗ ತಾಯಿಗೆ 21 ವರ್ಷ, ನಮಗಾಗಿ ಎರಡನೇ ಮದುವೆ ಆಗಲಿಲ್ಲ; ಹಾಸ್ಯನಟ ಸುನೀಲ್

Scroll to load tweet…



Source link

Leave a Reply

Your email address will not be published. Required fields are marked *