Headlines

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಈ ರಾಜಕಾರಣಿಯ ಕರ್ಮಕಾಂಡ ಬಯಲು: ಮೃತ್ಯುಗಿಂತಲೂ ಘೋರ ರಾಜಕೀಯ ಅಂತ್ಯ! | Exclusive Information To Asianet Suvarna On War And Pm Modi Administration By Kiran Kumar Guruji Suc

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಈ ರಾಜಕಾರಣಿಯ ಕರ್ಮಕಾಂಡ ಬಯಲು: ಮೃತ್ಯುಗಿಂತಲೂ ಘೋರ ರಾಜಕೀಯ ಅಂತ್ಯ! | Exclusive Information To Asianet Suvarna On War And Pm Modi Administration By Kiran Kumar Guruji Suc



ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಈ ರಾಜಕಾರಣಿಯ ಕರ್ಮಕಾಂಡ ಬಯಲು: ಮೃತ್ಯುಗಿಂತಲೂ ಘೋರ ರಾಜಕೀಯ ಅಂತ್ಯ! | Exclusive Information To Asianet Suvarna On War And Pm Modi Administration By Kiran Kumar Guruji Suc

ಕಿರಣ್ ಕುಮಾರ್ ಗುರೂಜಿ ಅವರ ಪ್ರಕಾರ, ಇರಾನ್-ಇಸ್ರೇಲ್ ಯುದ್ಧವು 40-55 ದಿನಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಈ ಯುದ್ಧವು ರಷ್ಯಾದ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಜಾಗತಿಕ ಮಟ್ಟದಲ್ಲಿ ಒಬ್ಬ ಪ್ರಮುಖ ನಾಯಕನ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 

ಇದೀಗ ಇರಾನ್​, ಇಸ್ರೇಲ್​ ಮತ್ತು ಅಮೆರಿಕದ ಯುದ್ಧ ಇಡೀ ಪ್ರಪಂಚಕ್ಕೂ ಭಾರಿ ಆಘಾತ ತಂದಿದೆ. ಪ್ರತಿಯೊಂದು ದೇಶದಲ್ಲಿಯೂ ಒಂದಿಲ್ಲೊಂದು ಬಿಕ್ಕಟ್ಟು ಈ ಯುದ್ಧದಿಂದ ಸೃಷ್ಟಿಯಾಗಿದೆ. ಮುಸ್ಲಿಂ ರಾಷ್ಟ್ರಗಳು ಅಲ್ಲೋಲ ಕಲ್ಲೋಲವಾಗಿವೆ. ಭಾರತದ ಜನರು ನೆಮ್ಮದಿಯಿಂದ ಇರುವುದಕ್ಕಾಗಿಯೇ ಕುಹಕದ ಮಾತುಗಳನ್ನಾಡುತ್ತಾ ಸಾವನ್ನು ಸಂಭ್ರಮಿಸುತ್ತಾ, ರಾಜಕಾರಣಿಗಳನ್ನು ಟೀಕಿಸುತ್ತಾ ಮಜವಾಗಿದ್ದಾರೆ. ಆದರೆ ಇವೆಲ್ಲವುಗಳ ನಡುವೆ ಮುಂಬರುವ ದಿನಗಳು ಹೇಗಿರುತ್ತವೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಜೊತೆಗೆ, ಯುದ್ಧದಿಂದ ಭಾರತದಲ್ಲಿನ ಸ್ಥಿತಿ ಯಾವ ರೀತಿ ಆಗಬಹುದು ಜೊತೆಗೆ ರಾಜಕಾರಣದಿಂದ ಏನೆಲ್ಲಾ ಏರುಪೇರು ಆಗಲಿದೆ ಎನ್ನುವ ಬಗ್ಗೆ ಏಷ್ಯಾನೆಟ್​ ಸುವರ್ಣ ಟಿವಿಗೆ, ಕಿರಣ್​ ಕುಮಾರ್​ ಗುರೂಜಿ (Kiran Kumar Guruji) ಮಾಹಿತಿ ನೀಡಿದ್ದಾರೆ.

ಯಾವಾಗ ಮುಗಿಯಲಿದೆ ಯುದ್ಧ?

ಈ ಹಿಂದೆ ಧರ್ಮಸ್ಥಳದ ಪ್ರೆಡಿಕ್ಷನ್​ ಮಾಡಿದ್ದು, ಇದು ಹೇಗೆ ಸತ್ಯವಾಗಿತ್ತೋ ಅದೇ ರೀತಿ ಈ ಮಾತು ಕೂಡ ಸತ್ಯ ಎಂದು ಅವರು ತಿಳಿಸಿದ್ದಾರೆ. ಗುರುಜೀ ಹೇಳಿದ್ದೇನೆಂದರೆ, ಪ್ರಪಂಚದಾದ್ಯಂತ ಸದ್ಯ ಮೋಡಕವಿದ ವಾತಾವರಣ ಇದೆ. ಅದಕ್ಕೆ ಕಾರಣ ಮಹಾಯುದ್ಧ. ಈ ಯುದ್ಧ ಯಾವಾಗ ನಿಲ್ಲುತ್ತೆ ಎನ್ನುವ ಬಗ್ಗೆ ಎಲ್ಲರಲ್ಲಿಯೂ ಪ್ರಶ್ನೆ ಇದದ್ದೇ ಎಂದಿರುವ ಗುರೂಜಿ, ಇನ್ನು 40 ರಿಂದ 55 ದಿನಗಳ ಒಳಗೆ ಒಂದು ಟರ್ನಿಂಗ್​ ಪಾಯಿಂಗ್​ ಬರುತ್ತದೆ. ಆ ಸಮಯದಲ್ಲಿ ಒಂದು ಸೇನೆಯ ಪ್ರಬಲತೆ ಕುಗ್ಗಬಹುದು ಅಥವಾ ಕಾಂಪ್ರಮೈಸ್ ಆಗಬಹುದು. ಅಂಥ ಸಂದರ್ಭದಲ್ಲಿ ಯುದ್ಧ ಸಂಪೂರ್ಣ ನಿಲ್ಲದಿದ್ದರೂ ತಾತ್ಕಾಲಿಕವಾಗಿ ಸ್ಥಗಿತವಂತೂ ಆಗಲಿದೆ ಎಂದಿದ್ದಾರೆ. 40 ರಿಂದ 55 ದಿನಗಳ ಒಳಗೆ ಒಂದು ಹೆಚ್ಚು ಕಡಿಮೆ ಶೇಡಕಾ 70ರಷ್ಟು ಕುಗ್ಗಿ 30% ಮಾತ್ರ ಇರುತ್ತೆ. ಆ ಬಳಿಕ ಅದು ಕೂಡ ಮುಗಿದು ವಾಷ್​ ಔಟ್ ಆಗುತ್ತದೆ ಎಂದಿದ್ದಾರೆ.

ರಷ್ಯಾ ಗಡಗಡ

ಆದರೆ ಜಾಗತಿಕ ಮಟ್ಟವನ್ನು ತೆಗೆದುಕೊಂಡರೆ, ರಷ್ಯಾದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ರಷ್ಯಾದ ಅಧ್ಯಕ್ಷ ಬದಲಾಗಬಹುದು, ಇಲ್ಲವೇ ಆರೋಗ್ಯದಲ್ಲಿ ಏರುಪೇರಾಗಿ ಗಂಡಾಂತರ ಆಗಬಹುದು. ಒಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಮುಂಬರುವ ದಿನಗಳಲ್ಲಿ ರಷ್ಯಾ ಮಾತ್ರ ಸುದ್ದಿಯಾಗೋದು ಶತಃಸಿದ್ಧ ಎಂದಿದ್ದಾರೆ ಕಿರಣ್​ ಕುಮಾರ್​ ಗುರೂಜಿ.

ನಾಯಕನ ಅಂತ್ಯ

ರಾಜ್ಯ ಮಟ್ಟದಲ್ಲಿ, ದೇಶ ಮಟ್ಟದಲ್ಲಿ, ಜಾಗತಿಕ ಮಟ್ಟದಲ್ಲಿ ಒಬ್ಬ ಹೆಸರಾದಂತ, ಒಬ್ಬ ನಾಯಕ ಅಥವಾ ನೇತಾರನ ಸ್ಕ್ಯಾಂಡಲ್ ಇಲ್ಲವೇ ಸ್ಕ್ಯಾಮ್ ಸಂಪೂರ್ಣವಾಗಿ ಬಯಲಿಗೆ ಬರಲಿದೆ. ಇದರಿಂದ ಆ ರಾಜಕಾರಣಿಯ ಯುಗ ಅಂತ್ಯವಾಗುವಂತ ಸಾಧ್ಯತೆ ಕೂಡ ಇದೆ. ಆ ರಾಜಕಾರಣಿ ಅಂತ್ಯ ಎಂದರೆ ಅದು ಎರಡು ರೀತಿಯಲ್ಲಿ ಆಗಬಹುದು. ಒಂದು ಅವನು ನೇರವಾಗಿ ಸಾವನ್ನಪ್ಪಬಹುದು ಇಲ್ಲವೇ ಆತನ ಮೇಲೆ ದಾಳಿ ಆಗಬಹುದು. ಇಲ್ಲದೇ ಹೋದರೆ, ಆತನ ರಾಜಕೀಯದ ಯುಗ ಅಂತ್ಯವಾಗುತ್ತದೆ. ಒಬ್ಬ ರಾಜಕಾರಣಿಗೆ ರಾಜಕೀಯ ಯುಗದ ಅಂತ್ಯ ಎಂದರೆ ಸಾವಿಗಿಂತಲೂ ಘೋರವಾದದ್ದು ಎಂದು ಸ್ವಾಮೀಜಿ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿಯೂ ದೊಡ್ಡ ನಾಯಕರಿಗೆ ಮಹಾ ಗಂಡಾಂತರ ಇದೆ ಎಂದಿದ್ದಾರೆ.

ಯುದ್ಧದ ಪ್ರಭಾವ

ಈ ಯುದ್ಧದ ಪ್ರಭಾವ ಹೆಚ್ಚಾಗಿ ಎಫೆಕ್ಟ್​ ಆಗುವುದು ಏರ್​ಲೈನ್ಸ್​ ಮೇಲೆ, ಸಾರಿಗೆ ಮೇಲೆ. ಅದು ಬಿಟ್ರೆ ಬೆಲೆ ಏರಿಕೆ ಆಗುತ್ತದೆ. ಇದು ಸರ್ವೇ ಸಾಮಾನ್ಯ. ಈವಾಗಲೇ ನೀವು ಪಾಕಿಸ್ತಾನದಲ್ಲಿ ನೋಡಬಹುದು, ಪೆಟ್ರೋಲ್ ಡೀಸಲ್ ಸಿಕ್ಕಿಲ್ಲ ಅಂತ ಹೆಚ್ಚು ಕಡಿಮೆ ಭಾಗಶಃ ಪಾಕಿಸ್ತಾನ ಕೂಡ ಶಟ್ ಡೌನ್ ಆಗಿದೆ. ಆದರೆ ಅಂಥ ಸ್ಥಿತಿ ಭಾರತದಲ್ಲಿಬರುವುದಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ ಯುದ್ಧದ ಟೈಮ್​ನಲ್ಲಿ ಅನಿವಾರ್ಯವಾದರೂ, ಭೀಕರ ಪರಿಸ್ಥಿತಿ ಅಂತೂ ಸದ್ಯ ಬರುವುದಿಲ್ಲ. ಕೆಲವು ರಾಜಕಾರಣಿಗಳು ಕುತಂತ್ರಿ ಬುದ್ಧಿಯಿಂದ ಕರೋನಾ, ಯುದ್ಧದ ಟೈಮ್​ನಲ್ಲಿ ಅಗತ್ಯ ವಸ್ತುಗಳನ್ನು ತಡೆಹಿಡಿದು ಕೆಟ್ಟ ಹೆಸರು ತರಲು ನೋಡುತ್ತಾರೆ. ಇಂಥವರ ಶುದ್ಧಿಯ ಟೈಮ್​ ಶೀಘ್ರದಲ್ಲಿಯೇ ಇದೆ ಎಂದಿದ್ದಾರೆ ಸ್ವಾಮೀಜಿ.

ಮೋದಿ ನೇತೃತ್ವದಲ್ಲಿ…

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಎಲ್ಲವೂ ಕೂಡ ಸುಭಿಕ್ಷೆ ಆಘಿದೆ. ಯಾವುದೇ ಕಾರಣದಿಂದ ದೇಶದ ಜನರು ಹಾಹಾಕಾರ ಪಡುವ ಸ್ಥಿತಿ ಕಾಣುತ್ತಿಲ್ಲ. ಜನರು ಯಾವುದೇ ಕಾರಣಕ್ಕೆ ಮತ್ತೊಬ್ಬರ ಮಾತಿಗೆ ಕಿವಿ ಕೊಡದೇ ಏನು ಸರಿ, ತಪ್ಪು ಎನ್ನುವುದನದ್ನು ತಿಳಿದುಕೊಂಡರೆ ಎಲ್ಲವೂ ಒಳಿತಾಗಿ ಇರುತ್ತದೆ ಎಂದಿದ್ದಾರೆ ಗುರೂಜಿ.



Source link

Leave a Reply

Your email address will not be published. Required fields are marked *