Headlines

ನಾಯಿ ಹೆಸರಿಗೆ ಬಂದು ಮದುವೆ ಇನ್ವಿಟೇಶನ್ ಕಾರ್ಡ್, ಪಶುವೈದ್ಯರ ಪ್ರೀತಿ ಮೆಚ್ಚಿದ ನೆಟ್ಟಿಗರು | Vet Addresses Daughters Wedding Invitation To Pet Dog

ನಾಯಿ ಹೆಸರಿಗೆ ಬಂದು ಮದುವೆ ಇನ್ವಿಟೇಶನ್ ಕಾರ್ಡ್, ಪಶುವೈದ್ಯರ ಪ್ರೀತಿ ಮೆಚ್ಚಿದ ನೆಟ್ಟಿಗರು | Vet Addresses Daughters Wedding Invitation To Pet Dog



ನಾಯಿ ಹೆಸರಿಗೆ ಬಂದು ಮದುವೆ ಇನ್ವಿಟೇಶನ್ ಕಾರ್ಡ್, ಪಶುವೈದ್ಯರ ಪ್ರೀತಿ ಮೆಚ್ಚಿದ ನೆಟ್ಟಿಗರು | Vet Addresses Daughters Wedding Invitation To Pet Dog

Viral wedding invitation Card : ಎಕ್ಸ್ ನಲ್ಲಿ ಇನ್ವಟೇಶನ್ ಕಾರ್ಡ್ ಗಮನ ಸೆಳೆದಿದೆ. ಕಾರ್ಡ್ ಮೇಲಿದ್ದ ಹೆಸರು ನೆಟ್ಟಿಗರನ್ನು ಅಚ್ಚರಿಗೊಳಿಸಿದೆ. ಪಶುವೈದ್ಯರ ವೃತ್ತಿ ಪ್ರೀತಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. 

ಸೋಶಿಯಲ್ ಮೀಡಿಯಾ (social media )ದಲ್ಲಿ ಮದುವೆ ಇನ್ವಟೇಶನ್ ಕಾರ್ಡ್ (wedding invitation card) ಒಂದು ವೈರಲ್ ಆಗಿದೆ. ಸಾಮಾನ್ಯವಾಗಿ ಮದುವೆ ಇನ್ವಟೇಶನ್ ಕಾರ್ಡ್ ಕವರ್ ಮೇಲೆ ಮಾಲೀಕರ ಹೆಸರನ್ನು ಬರೆದಿರ್ತಾರೆ. ಆದ್ರೆ ಪಶು ವೈದ್ಯರೊಬ್ಬರು ಮಾಲಿಕರ ಹೆಸರಿನ ಬದಲು ನಾಯಿ ಹೆಸರಿನಲ್ಲಿ ಇನ್ವಟೇಶನ್ ಕಾರ್ಡ್ ನೀಡಿದ್ದಾರೆ. ಪಶುವೈದ್ಯರು ಒಂದು ಕುಟುಂಬದ ನಾಯಿಗೆ ಕಳುಹಿಸಿದ ಮದುವೆ ಆಮಂತ್ರಣ ಪತ್ರ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ.

ನಾಯಿ ಹೆಸರಿಗೆ ಇನ್ವಟೇಶನ್ ಕಾರ್ಡ್ 

@Sunidiee ಹೆಸರಿನ ಎಕ್ಸ್ ಖಾತೆಯಲ್ಲಿ ಇನ್ವಟೇಶನ್ ಕಾರ್ಡ್ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಪಶು ವೈದ್ಯರ ಮಗಳ ಮದುವೆ ಇನ್ವಟೇಶನ್ ಕಾರ್ಡ್ ಇದು. ಇದ್ರಲ್ಲಿ ಮನೆ ಮಾಲಿಕರ ಹೆಸರಿನ ಬದಲು ಮನೆಯಲ್ಲಿರುವ ಸಾಕು ನಾಯಿ ಹೆಸರನ್ನು ಹಾಕಲಾಗಿದೆ. ನಾಯಿ ಹೆಸರು ಎದ್ದು ಕಾಣ್ತಿದೆ. ಕನ್ನಡದಲ್ಲಿ ಇನ್ವಿಟೇಷನ್ ಇದೆ. ಶ್ರೀಮತಿ / ಶ್ರೀ ಮುಂದೆ ಮಿಸ್ಟರ್ ಚಿಕೋರಿ ಮತ್ತು ಕುಟುಂಬದವರು ಎಂದು ಬರೆಯಲಾಗಿದೆ. ಅದ್ರ ಕೆಳಗೆ, ಸ್ನೇಹ ಸಂಬಂಧಗಳಲ್ಲಿ ಪ್ರೀತಿಯ ಮಾತಲ್ಲಿ ಮಮತೆಯ ಮಡಿಲಲ್ಲಿ ಎಲ್ಲಾರೂ ಒಂದಾಗಿ ಸೇರೋಣ ಬನ್ನಿ ಮದುವೆಯ ಮನೆಯಲ್ಲಿ ಅಂತ ಬರೆಯಲಾಗಿದೆ.

ಶೂಟಿಂಗ್‌ ವೇಳೆ ವಿದ್ಯಾಗೆ ನಿಜಕ್ಕೂ ತಾಳಿ ಕಟ್ಟಲು ಹೋಗೋದಾ ಭದ್ರ? Muddu Sose

ಆನ್ಲೈನ್ ನಲ್ಲಿ ಮಹಿಳೆ ಈ ಇನ್ವಿಟೇಶನ್ ಕಾರ್ಡ್ ಹಂಚಿಕೊಂಡಿದ್ದಾರೆ. ಪಶುವೈದ್ಯರು (vets) ತಮ್ಮ ಮಗಳ ವಿವಾಹ ಆಮಂತ್ರಣ ಪತ್ರಿಕೆಯನ್ನು ನಮ್ಮ ನಾಯಿಯ ಹೆಸರಿನಲ್ಲಿ ಕಳುಹಿಸಿದ್ದಾರೆ. ಇದು ನನಗೆ ಇಷ್ಟವಾಯ್ತು ಅಂತ ಶೀರ್ಷಿಕೆ ಹಾಕಿದ್ದಾರೆ.

ಇಂಟರ್ ನೆಟ್ ನಲ್ಲಿ ವೈರಲ್

ಮಹಿಳೆ ಹಾಕಿದ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ವೈರಲ್ ಆಗಿದೆ. ಈವರೆಗೆ 75 ಸಾವಿರಕ್ಕಿಂತ ಹೆಚ್ಚು ವೀವ್ಸ್ ಪಡೆದಿದೆ. ಅನೇಕರು ಈ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ. ನಾಯಿಯ ಹೆಸರನ್ನು ಅನೇಕರು ಇಷ್ಟಪಟ್ಟಿದ್ದಾರೆ. ಮತ್ತೊಬ್ಬರು ಇದು ಮುದ್ದಾದ ಕರೆಯೋಲೆ ಅಂತ ಕಮೆಂಟ್ ಮಾಡಿದ್ದಾರೆ. ಮೂರನೇ ವ್ಯಕ್ತಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನನ್ನ ಪಶುವೈದ್ಯರು ನನ್ನ ಸಾಕುಪ್ರಾಣಿಯನ್ನು ಪಶುವೈದ್ಯಕೀಯ ಚಿಕಿತ್ಸಾಲಯದ ಉದ್ಘಾಟನೆಗೆ ಆಹ್ವಾನಿಸಿದ್ದರು. ಸಾಕುಪ್ರಾಣಿ ಚಲಿಸುತ್ತಿರಲಿಲ್ಲ, ಅದನ್ನು ಒಂಟಿಯಾಗಿ ಬಿಡಲಾಗಲಿಲ್ಲ, ಹಾಗಾಗಿ ಅದಕ್ಕೆ ಪ್ರತ್ಯೇಕ ರೂಮಿನ ವ್ಯವಸ್ಥೆ ಮಾಡಲಾಗಿತ್ತು ಎಂದು ಫೋಟೋ ಹಾಕಿ ತಮ್ಮ ಪ್ರೀತಿ ತೋರಿಸಿದ್ದಾರೆ. 

ಉಪಯೋಗ ಇಲ್ದೆ ಇದ್ರೂ ಪುರುಷರಿಗೆ ನಿಪ್ಪಲ್ಸ್ ಇರೋದೇಕೆ? ಇದ್ರ ಹಿಂದಿದೆ ರಹಸ್ಯ

ಸಾಕುನಾಯಿ ಮಾಲೀಕರು ಮಾತ್ರ ಇದನ್ನು ಅರ್ಥ ಮಾಡಿಕೊಳ್ಳಬಲ್ಲರು ಅಂತ ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಪಶು ವೈದ್ಯರು ಅವರ ವೃತ್ತಿಗೆ ತುಂಬಾ ನಿಷ್ಠಾವಂತರು ಅಂತ ಜನರು ಪಶುವೈದ್ಯರ ಕೆಲ್ಸವನ್ನು ಹೊಗಳಿದ್ದಾರೆ. ಮತ್ತೆ ಕೆಲವರಿಗೆ ಚಿಕೋರಿ ನೋಡುವ ಆಸೆಯಾಗಿದೆ. ಚಿಕೋರಿ ಫೋಟೋ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ. Sunidiee ಎಕ್ಸ್ ಖಾತೆಯ ಡಿಪಿಯಲ್ಲೇ ಚಿಕೋರಿಯನ್ನು ನೀವು ಕಾಣ್ಬಹುದು. ಚಿಕೋರಿ ಇಲ್ದೆ ನಿಮಗೆ ಮದುವೆಗೆ ಪ್ರವೇಶವಿಲ್ಲ. ಮದುವೆಗೆ ಚಿಕೋರಿ ಜೊತೆ ಹೋಗಿ ಅಂತ ಮತ್ತೆ ಕೆಲವರು ಸಲಹೆ ಕೂಡ ನೀಡಿದ್ದಾರೆ.

Scroll to load tweet…



Source link

Leave a Reply

Your email address will not be published. Required fields are marked *