ಚಾರ್ಜ್ ಮಾಡಿದ್ರೆ 26 ಗಂಟೆ ವಿಡಿಯೋ ನೋಡಬಹುದು! ಸ್ಯಾಮ್‌ಸಂಗ್‌ನಿಂದ ಪವರ್‌ಫುಲ್ ಫೋನ್, ಬಜೆಟ್‌ ಬೆಲೆಯಲ್ಲಿ ಬಿಡುಗಡೆ! | Samsung Galaxy M17e 5g Price India Features 6000mah Battery Amazon Listing San

ಸ್ಯಾಮ್‌ಸಂಗ್ ತನ್ನ ‘M’ ಸರಣಿಯಲ್ಲಿ ಹೊಸ Galaxy M17e 5G ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 6000 mAh ದೈತ್ಯ ಬ್ಯಾಟರಿಯನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 26 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ನೀಡುತ್ತದೆ. 

ಬೆಂಗಳೂರು (ಮಾ.19): ಸ್ಯಾಮ್‌ಸಂಗ್ ಕಂಪನಿಯು ತನ್ನ ಜನಪ್ರಿಯ ಮಿಡ್-ರೇಂಜ್ ‘M’ ಸರಣಿಯ ಅಡಿಯಲ್ಲಿ ಹೊಸ Galaxy M17e 5G ಅನ್ನು ಬಿಡುಗಡೆ ಮಾಡಿದೆ. ಈ ಫೋನ್ ಪ್ರಮುಖವಾಗಿ ತನ್ನ ದೈತ್ಯ ಬ್ಯಾಟರಿ ಬ್ಯಾಕಪ್‌ನಿಂದಾಗಿ ಗಮನ ಸೆಳೆಯುತ್ತಿದೆ. ಕಂಪನಿಯ ಪ್ರಕಾರ, ಈ ಫೋನ್ ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ ಸತತ 26 ಗಂಟೆಗಳ ಕಾಲ ವಿಡಿಯೋ ಪ್ಲೇಬ್ಯಾಕ್ ನೀಡುವ ಸಾಮರ್ಥ್ಯ ಹೊಂದಿದೆ.

ಭಾರತದಲ್ಲಿ Samsung Galaxy M17e 5G ಬೆಲೆ

ಸ್ಯಾಮ್‌ಸಂಗ್ ಅಧಿಕೃತವಾಗಿ ಬೆಲೆ ಘೋಷಿಸದಿದ್ದರೂ, ಅಮೆಜಾನ್ (Amazon) ವೆಬ್‌ಸೈಟ್‌ನಲ್ಲಿ ಈ ಫೋನ್ ಲಿಸ್ಟ್ ಆಗಿದೆ. ಅದರ ಪ್ರಕಾರ 4GB RAM + 128GB ಸ್ಟೋರೇಜ್ ವೇರಿಯಂಟ್‌ನ ಬೆಲೆ ₹11,749 ರೂಪಾಯಿ ಆಗಿದ್ದರೆ, 6GB RAM + 128GB ಸ್ಟೋರೇಜ್ ವೇರಿಯಂಟ್‌ನ ಬೆಲೆ ₹13,249 ರೂಪಾಯಿ ಆಗಿದೆ.

ಮಾರುಕಟ್ಟೆಯಲ್ಲಿ ಈ ಫೋನ್ ನೇರವಾಗಿ Motorola G57 Power 5G, Redmi Note 14 SE 5G, Vivo T4X 5G, ಮತ್ತು Poco M7 Plus 5G ಫೋನ್‌ಗಳಿಗೆ ಪ್ರಬಲ ಪೈಪೋಟಿ ನೀಡಲಿದೆ.

ಈ ಫೋನಿನ ಪವರ್‌ಫುಲ್ ಫೀಚರ್ಸ್‌ಗಳು

6.58-ಇಂಚಿನ HD Plus LCD ಸ್ಕ್ರೀನ್ ಹೊಂದಿದ್ದು, ಸುಗಮ ಬಳಕೆಗೆ 120 Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ವೇಗದ ಕಾರ್ಯಕ್ಷಮತೆಗಾಗಿ ಇದರಲ್ಲಿ ಆಕ್ಟಾ-ಕೋರ್ MediaTek Dimensity 6300 ಚಿಪ್‌ಸೆಟ್ ನೀಡಲಾಗಿದೆ. ಈ ಫೋನ್ ಆಂಡ್ರಾಯ್ಡ್ 16 ಆಧಾರಿತ OneUI 8.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ವಿಶೇಷವೆಂದರೆ, ಇದಕ್ಕೆ 6 ವರ್ಷಗಳ ಓಎಸ್ ಅಪ್‌ಗ್ರೇಡ್ ಮತ್ತು 6 ವರ್ಷಗಳ ಸೆಕ್ಯೂರಿಟಿ ಅಪ್‌ಡೇಟ್ ಸಿಗಲಿದೆ.

ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಒಳಗೊಂಡ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಈ ಫೋನಿನ ಹೈಲೈಟ್ ಎಂದರೆ 6000 mAh ದೈತ್ಯ ಬ್ಯಾಟರಿ. ಇದು ದೀರ್ಘಕಾಲದ ಬ್ಯಾಕಪ್ ನೀಡುತ್ತದೆ. 6GB ವರೆಗೆ RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಇದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 2TB ವರೆಗೆ ವಿಸ್ತರಿಸಬಹುದು. ಡ್ಯುಯಲ್ ಬ್ಯಾಂಡ್ Wi-Fi, 5G, 4G LTE, USB Type-C ಪೋರ್ಟ್, ಬ್ಲೂಟೂತ್ 5.3 ಮತ್ತು 3.5mm ಹೆಡ್‌ಫೋನ್ ಜಾಕ್ ಸೌಲಭ್ಯವಿದೆ.

Source link

Leave a Reply

Your email address will not be published. Required fields are marked *