Headlines

Surajkund Melaದಲ್ಲಿ ತುಂಡಾಗಿ ಬಿದ್ದ ದೈತ್ಯ ಜಾಯಿಂಟ್ ವ್ಹೀಲ್; ಪೊಲೀಸ್ ಇನ್ಸ್‌ಪೆಕ್ಟರ್ ಸಾವು, 13 ಮಂದಿಗೆ ಗಾಯ! | Surajkund Mela Accident Police Inspector Dies Giant Wheel Collapse Faridabad Sat

Surajkund Melaದಲ್ಲಿ ತುಂಡಾಗಿ ಬಿದ್ದ ದೈತ್ಯ ಜಾಯಿಂಟ್ ವ್ಹೀಲ್; ಪೊಲೀಸ್ ಇನ್ಸ್‌ಪೆಕ್ಟರ್ ಸಾವು, 13 ಮಂದಿಗೆ ಗಾಯ! | Surajkund Mela Accident Police Inspector Dies Giant Wheel Collapse Faridabad Sat



Surajkund Melaದಲ್ಲಿ ತುಂಡಾಗಿ ಬಿದ್ದ ದೈತ್ಯ ಜಾಯಿಂಟ್ ವ್ಹೀಲ್; ಪೊಲೀಸ್ ಇನ್ಸ್‌ಪೆಕ್ಟರ್ ಸಾವು, 13 ಮಂದಿಗೆ ಗಾಯ! | Surajkund Mela Accident Police Inspector Dies Giant Wheel Collapse Faridabad Sat

ಪ್ರಸಿದ್ಧ ಸೂರಜ್‌ಕುಂಡ್ ಕರಕುಶಲ ಮೇಳದಲ್ಲಿ ದೈತ್ಯ ಜಾಯಿಂಟ್ ವ್ಹೀಲ್ ಮುರಿದು ಬಿದ್ದಿದೆ. ಈ ದುರಂತದಲ್ಲಿ ಜನರನ್ನು ರಕ್ಷಿಸಲು ಹೋದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಮೃತಪಟ್ಟಿದ್ದು, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯು ಮೇಳದ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆ ಹುಟ್ಟುಹಾಕಿದೆ.

ಸಂಭ್ರಮ, ಸಡಗರದಿಂದ ಕೂಡಿದ್ದ ಅಂತರರಾಷ್ಟ್ರೀಯ ಖ್ಯಾತಿಯ ಸೂರಜ್‌ಕುಂಡ್ ಕರಕುಶಲ ಮೇಳವು ಕ್ಷಣಾರ್ಧದಲ್ಲಿ ದುರಂತದ ಕಣಿವೆಯಾಗಿ ಮಾರ್ಪಟ್ಟಿದೆ. ಹರಿಯಾಣದ ಫರಿದಾಬಾದ್‌ನಲ್ಲಿ ನಡೆಯುತ್ತಿರುವ ಮೇಳದಲ್ಲಿ ಮನರಂಜನೆಗಾಗಿ ಅಳವಡಿಸಲಾಗಿದ್ದ ದೈತ್ಯ ಜಾಯಿಂಟ್ ವ್ಹೀಲ್ (ಆಕಾಶ ತೊಟ್ಟಿಲು) ಮುರಿದು ಬಿದ್ದ ಪರಿಣಾಮ, ಕರ್ತವ್ಯನಿರತ ಪೊಲೀಸ್ ಇನ್ಸ್‌ಪೆಕ್ಟರ್‌ ಒಬ್ಬರು ದಾರುಣವಾಗಿ ಮೃತಪಟ್ಟಿದ್ದು, 13ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಆಘಾತಕಾರಿ ಘಟನೆ ಶನಿವಾರ ಸಂಜೆ ನಡೆದಿದೆ.

ಘಟನೆ ನಡೆದಿದ್ದು ಹೇಗೆ?

ಶನಿವಾರ ಸಂಜೆ ಸುಮಾರು 6:15ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಮೇಳದಲ್ಲಿ ಅಳವಡಿಸಲಾಗಿದ್ದ ಜಾಯಿಂಟ್ ವ್ಹೀಲ್‌ನಲ್ಲಿ ಜನರು ಕುಳಿತು ಖುಷಿಪಡುತ್ತಿದ್ದರು. ಇದ್ದಕ್ಕಿದ್ದಂತೆ ಅದರ ಒಂದು ಭಾಗ ಮುರಿಯಲಾರಂಭಿಸಿತು. ಇದನ್ನು ಗಮನಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಪ್ರಸಾದ್ ಅವರು ತಕ್ಷಣ ಜನರನ್ನು ರಕ್ಷಿಸಲು ಮತ್ತು ಪರಿಸ್ಥಿತಿ ನಿಭಾಯಿಸಲು ಮುಂದೆ ಧಾವಿಸಿದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಮುರಿದು ಬಿದ್ದ ತೊಟ್ಟಿಲದ ಬೃಹತ್ ಭಾಗವೊಂದು ನೇರವಾಗಿ ಇನ್ಸ್‌ಪೆಕ್ಟರ್ ಅವರ ತಲೆ ಮತ್ತು ಮುಖಕ್ಕೆ ಬಲವಾಗಿ ಅಪ್ಪಳಿಸಿತು. ತೀವ್ರ ರಕ್ತಸ್ರಾವದಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ರಕ್ಷಣೆಗೆ ಹೋಗಿ ಪ್ರಾಣ ಬಿಟ್ಟರು:

ಜಿಲ್ಲಾಧಿಕಾರಿ (DC) ಆಯುಷ್ ಸಿನ್ಹಾ ಈ ಬಗ್ಗೆ ಮಾಹಿತಿ ನೀಡಿ, ‘ಇದು ಅತ್ಯಂತ ದುಃಖಕರ ಘಟನೆ. ಜಗದೀಶ್ ಪ್ರಸಾದ್ ಅವರು ಜನರ ಪ್ರಾಣ ಉಳಿಸಲು ಹೋಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಘಟನೆಯಲ್ಲಿ ಒಟ್ಟು 13 ಜನರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ’ ಎಂದು ತಿಳಿಸಿದರು.

Scroll to load tweet…

ಮೇಳದಲ್ಲಿ ಆತಂಕ, ಕಾಲ್ಕಿತ್ತ ಜನ:

ಜಾಯಿಂಟ್ ವ್ಹೀಲ್ ಮುರಿಯುತ್ತಿದ್ದಂತೆಯೇ ಮೇಳದಲ್ಲಿ ಹಾಹಾಕಾರ ಉಂಟಾಯಿತು. ಜನರ ಚೀರಾಟ, ಅಳು ಮುಗಿಲುಮುಟ್ಟಿತ್ತು. ಭಯಭೀತರಾದ ಜನರು ತಮ್ಮ ಮಕ್ಕಳನ್ನು ಎತ್ತಿಕೊಂಡು ಮೇಳದಿಂದ ಹೊರ ಓಡಲು ಆರಂಭಿಸಿದರು. ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತ ವರ್ಗ, ಪ್ರದೇಶವನ್ನು ಬ್ಯಾರಿಕೇಡ್ ಹಾಕಿ ಮುಚ್ಚಿದ್ದು, ರಕ್ಷಣಾ ಕಾರ್ಯ ಕೈಗೊಂಡರು.

ಸರ್ಕಾರದ ಕ್ರಮವೇನು?

ಘಟನೆ ಬಗ್ಗೆ ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತ ಇನ್ಸ್‌ಪೆಕ್ಟರ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಘಟನೆಯ ತನಿಖೆಗೆ ಹೆಚ್ಚುವರಿ ಜಿಲ್ಲಾಧಿಕಾರಿ (ADC) ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ನಿರ್ಲಕ್ಷ್ಯ ವಹಿಸಿದ ಆಯೋಜಕರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಳ್ಳಲಾಗಿದ್ದು, ಕಠಿಣ ಕ್ರಮದ ಭರವಸೆ ನೀಡಲಾಗಿದೆ. ಈ ಹಿಂದೆ ಇದೇ ಮೇಳದಲ್ಲಿ ದ್ವಾರಬಾಗಿಲು ಬಿದ್ದ ಘಟನೆ ನಡೆದಿದ್ದು, ಈಗ ಪ್ರಾಣಹಾನಿಯಾಗಿರುವುದು ಮೇಳದ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಒಟ್ಟಾರೆಯಾಗಿ, ಸಂತೋಷಪಡಲು ಬಂದ ಕುಟುಂಬಗಳು ಕಣ್ಣೀರಿನೊಂದಿಗೆ ಮನೆಗೆ ಮರಳುವಂತಾಗಿದ್ದು, ಸುರಕ್ಷತೆಯಿಲ್ಲದ ಮನರಂಜನಾ ಸಾಧನಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *