ಅಕ್ಕನ ಸಾವಿನಿಂದ ನೊಂದ ಸೋದರರು, ಗಂಗಾ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿ ಹೋಟೆಲ್‌ನಲ್ಲಿ ಆ*ತ್ಮಹ*ತ್ಯೆ! | Hyderabad Siblings Self Death In Varanasi Hotel After Sisters Death News San

ಅಕ್ಕನ ಸಾವಿನಿಂದ ನೊಂದ ಸೋದರರು, ಗಂಗಾ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿ ಹೋಟೆಲ್‌ನಲ್ಲಿ ಆ*ತ್ಮಹ*ತ್ಯೆ! | Hyderabad Siblings Self Death In Varanasi Hotel After Sisters Death News San



ಅಕ್ಕನ ಸಾವಿನಿಂದ ನೊಂದ ಸೋದರರು, ಗಂಗಾ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿ ಹೋಟೆಲ್‌ನಲ್ಲಿ ಆ*ತ್ಮಹ*ತ್ಯೆ! | Hyderabad Siblings Self Death In Varanasi Hotel After Sisters Death News San

Tragic: Hyderabad Siblings Die in Varanasi Hotel Room ಹೈದರಾಬಾದ್‌ನಲ್ಲಿ ಅಕ್ಕ ಆತ್ಮ*ಹ*ತ್ಯೆ ಮಾಡಿಕೊಂಡ ಎರಡು ವಾರಗಳ ನಂತರ, ಆಕೆಯ ಚಿತಾಭಸ್ಮ ವಿಸರ್ಜನೆಗೆ ವಾರಣಾಸಿಗೆ ತೆರಳಿದ್ದ ಇಬ್ಬರು ಸಹೋದರರು ಹೋಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೈದರಾಬಾದ್‌ (ಫೆ.14): ಅತಿಯಾಗಿ ಪ್ರೀತಿ ಮಾಡುತ್ತಿದ್ದ ಅಕ್ಕ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಎರಡು ವಾರಗಳ ನಂತರ, ಸಹೋದರರಿಬ್ಬರು ಹೋಟೆಲ್ ಕೊಠಡಿ ತೆಗೆದುಕೊಂಡು ಆತ್ಮ*ಹ*ತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಗಣೇಶ್ ಗೌಡ್ (44) ಮತ್ತು ಧನಲಕ್ಷ್ಮಿ ಗೌಡ್ (37) ವಾರಣಾಸಿಯ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸಹೋದರರಿಬ್ಬರು ತಮ್ಮ ಸಹೋದರಿ ಆಮ್ಲಾ ದೇವಿಯ ಚಿತಾಭಸ್ಮವನ್ನು ವಿಸರ್ಜಿಸಲು ವಾರಣಾಸಿಗೆ ಬಂದಿದ್ದರು. ಸಹೋದರಿಯ ಸಾವಿನಿಂದ ಅವರು ತೀವ್ರ ದುಃಖಿತರಾಗಿದ್ದರು ಎಂದು ಸಂಬಂಧಿಕರೊಬ್ಬರು ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲರೂ ಚಿಕ್ಕವರಿದ್ದಾಗಲೇ ತಾಯಿ ಸಾವು ಕಂಡಿದ್ದರು. ಇವರನ್ನು ಸಾಕಿ ದೊಡ್ಡವರನ್ನಾಗಿ ಮಾಡಿದ್ದ ತಂದೆ ಮೂರು ವರ್ಷಗಳ ಹಿಂದೆ ಸಾವು ಕಂಡಿದ್ದರು. ಸಹೋದರರ ಸೋದರಸಂಬಂಧಿ ಸ್ವರೂಪ್ ಅವರ ಸಾವಿನ ಬಗ್ಗೆ ತಿಳಿದು ವಾರಣಾಸಿಗೆ ಬಂದಿದ್ದರು ಎಂದು ಸಿಗ್ರಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ಸಂಜಯ್ ಕುಮಾರ್ ಮಿಶ್ರಾ ಹೇಳಿದ್ದಾರೆ.

ತಂದೆಯ ಮರಣದ ನಂತರ, ಗಣೇಶ್ ಮತ್ತು ಲಕ್ಷ್ಮಿ ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ತಮ್ಮ ಅಕ್ಕನ ಮೇಲೆ ಅವಲಂಬಿತರಾಗಿದ್ದರು. ಗಣೇಶ್ ಮತ್ತು ಲಕ್ಷ್ಮಿ ಇಬ್ಬರಿಗೂ ಮದುವೆಯಾಗಿರಲಿಲ್ಲ. ಜನವರಿ 28 ರಂದು, ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಅವರ ಸಹೋದರಿ ಆಮ್ಲಾ ಆತ್ಮ*ಹ*ತ್ಯೆ ಮಾಡಿಕೊಂಡಿದ್ದರು. ಕಳೆದ ಭಾನುವಾರ ಸಹೋದರರು ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದರು. ಹೋಟೆಲ್‌ ರೂಮ್‌ ಚೆಕ್‌ಔಟ್‌ ಮಾಡುವ ಸಮಯವಾಗಿದೆ ಎಂದು ಸಿಬ್ಬಂದಿ ಬಾಗಿಲು ತಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೋಣೆಗೆ ಕರೆ ಮಾಡಿದರೂ ಉತ್ತರ ಬಂದಿರಲಿಲ್ಲ. ಅನುಮಾನಾಸ್ಪದವಾಗಿ, ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಅಧಿಕಾರಿಗಳ ಸಮ್ಮುಖದಲ್ಲಿ ನಕಲಿ ಕೀಲಿಯನ್ನು ಬಳಸಿ ಕೊಠಡಿಯನ್ನು ತೆರೆದಾಗ ಇಬ್ಬರೂ ಮೃತಪಟ್ಟಿರುವುದು ಕಂಡುಬಂದಿದೆ.

6 ಲಕ್ಷ ರೂಪಾಯಿ ಹಣ ಬಿಟ್ಟು ಸಾವು ಕಂಡ ಸಹೋದರರು

ಕೋಣೆಯಲ್ಲಿ ಹಲವಾರು ಮಾತ್ರೆಗಳು ಸಹ ಕಂಡುಬಂದಿವೆ. ಅವುಗಳು ಮಿತಿಮೀರಿದ ಪ್ರಮಾಣದಲ್ಲಿ ಸೇವಿಸಿದ್ದಾಗಿ ಪೊಲೀಸರು ಶಂಕಿಸಿದ್ದಾರೆ. ಕೋಣೆ ಶೋಧಿಸುವಾಗ, ಪ್ಯಾನ್ ಕಾರ್ಡ್‌ಗಳು ಮತ್ತು ಚಾಲನಾ ಪರವಾನಗಿಗಳು ಸೇರಿದಂತೆ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡರು. ಕೋಣೆಯಿಂದ 6 ಲಕ್ಷ ರೂ.ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಕೋಣೆಯಲ್ಲಿ ಕಂಡುಬಂದ ಆತ್ಮ*ಹ*ತ್ಯೆ ಪತ್ರದಲ್ಲಿ ‘ಕ್ಷಮಿಸಿ, ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಬರೆಯಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು ಮತ್ತು ಆಂತರಿಕ ಅಂಗಗಳನ್ನು ಪರೀಕ್ಷೆಗಾಗಿ ಸಂರಕ್ಷಿಸಲಾಗಿದೆ. ಮೃತ ಗಣೇಶ್ ಖಾಸಗಿ ಸಂಸ್ಥೆಯಲ್ಲಿ ಡೇಟಾ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದರು.



Source link

Leave a Reply

Your email address will not be published. Required fields are marked *