Breaking: ಜಗತ್ತಿನ ಮೇಲೆ ಟ್ರಂಪ್‌ ವಿಧಿಸಿರುವ ಸುಂಕ ಅಸಿಂಧುಗೊಳಿಸಿದ ಅಮೆರಿಕ ಸುಪ್ರೀಂ ಕೋರ್ಟ್! | Us Supreme Court Strikes Down Donald Trump Illegal Tariffs Ruling San

Breaking: ಜಗತ್ತಿನ ಮೇಲೆ ಟ್ರಂಪ್‌ ವಿಧಿಸಿರುವ ಸುಂಕ ಅಸಿಂಧುಗೊಳಿಸಿದ ಅಮೆರಿಕ ಸುಪ್ರೀಂ ಕೋರ್ಟ್! | Us Supreme Court Strikes Down Donald Trump Illegal Tariffs Ruling San



Breaking: ಜಗತ್ತಿನ ಮೇಲೆ ಟ್ರಂಪ್‌ ವಿಧಿಸಿರುವ ಸುಂಕ ಅಸಿಂಧುಗೊಳಿಸಿದ ಅಮೆರಿಕ ಸುಪ್ರೀಂ ಕೋರ್ಟ್! | Us Supreme Court Strikes Down Donald Trump Illegal Tariffs Ruling San

ಅಮೆರಿಕದ ಸುಪ್ರೀಂ ಕೋರ್ಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸುಂಕದ ಆದೇಶಗಳನ್ನು ‘ಅಕ್ರಮ’ ಎಂದು ಘೋಷಿಸಿ ರದ್ದುಗೊಳಿಸಿದೆ. ಈ ತೀರ್ಪು ಅಧ್ಯಕ್ಷರ ಕಾರ್ಯನಿರ್ವಾಹಕ ಅಧಿಕಾರದ ವ್ಯಾಪ್ತಿಯನ್ನು ಪ್ರಶ್ನಿಸಿದೆ.

ವಾಷಿಂಗ್ಟನ್ (ಫೆ.20): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಪಾರ ಸುಂಕದ (Tariff) ಆದೇಶಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಟ್ರಂಪ್ ಅವರ ಈ ಆದೇಶಗಳು ‘ಅಕ್ರಮ’ (Illegitimate) ಎಂದು ನ್ಯಾಯಾಲಯ ಘೋಷಿಸಿದ್ದು, ಈ ತೀರ್ಪು ಅಮೆರಿಕದ ವ್ಯಾಪಾರ ಮತ್ತು ಆರ್ಥಿಕ ನೀತಿಯ ಪಥವನ್ನೇ ಬದಲಿಸುವ ಸಾಧ್ಯತೆಯಿದೆ. ಕಳೆದ ಕೆಲವು ತಿಂಗಳುಗಳಿಂದ ಕನಿಷ್ಠ ಮೂರು ಬಾರಿ ಈ ತೀರ್ಪನ್ನು ಮುಂದೂಡಿದ್ದ ಸುಪ್ರೀಂ ಕೋರ್ಟ್, ಮಾರುಕಟ್ಟೆ ಮತ್ತು ನೀತಿ ನಿರೂಪಕರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಟ್ರಂಪ್ ವಿಧಿಸಿದ್ದ ಸುಂಕಗಳ ವ್ಯಾಪ್ತಿ ಮತ್ತು ಪ್ರಮಾಣವು ಅಮೆರಿಕದ ಒಟ್ಟಾರೆ ಆರ್ಥಿಕತೆಯ ಮೇಲೆ ಬೀರುತ್ತಿದ್ದ ಪರಿಣಾಮವನ್ನು ಗಮನಿಸಿದರೆ, ಈ ತೀರ್ಪು ಅತ್ಯಂತ ನಿರ್ಣಾಯಕ ಎಂದು ಪರಿಗಣಿಸಲಾಗಿದೆ.

ಪ್ರಕರಣದ ಹಿನ್ನೆಲೆ

2025ರಲ್ಲಿ ದಾಖಲಾಗಿದ್ದ ‘ಲರ್ನಿಂಗ್ ರಿಸೋರ್ಸಸ್ ವರ್ಸಸ್‌ ಟ್ರಂಪ್’ (Learning Resources v. Trump) ಮತ್ತು ‘ಟ್ರಂಪ್ ವಿರುದ್ಧ ವಿ.ಓ.ಎಸ್. ಸೆಲೆಕ್ಷನ್ಸ್ ಇಂಕ್’ (Trump v. V.O.S. Selections, Inc.) ಎಂಬ ಎರಡು ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಒಟ್ಟುಗೂಡಿಸಿ ವಿಚಾರಣೆ ನಡೆಸಿತ್ತು. ಅಂತರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (International Emergency Economic Powers Act – IEEPA), ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಟ್ರಂಪ್ ಆಡಳಿತಕ್ಕೆ ಕೇವಲ ಕಾರ್ಯನಿರ್ವಾಹಕ ಆದೇಶಗಳ (Executive Orders) ಮೂಲಕ ಇಷ್ಟೊಂದು ವ್ಯಾಪಕವಾದ ಸುಂಕಗಳನ್ನು ಹೇರಲು ಅಧಿಕಾರ ನೀಡುತ್ತದೆಯೇ? ಎಂಬ ಬಗ್ಗೆ ಸ್ಪಷ್ಟನೆ ಕೋರಿ ಈ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಇದೀಗ ದೇಶದ ಉನ್ನತ ನ್ಯಾಯಾಲಯವು ಈ ಸುಂಕಗಳು ಕಾನೂನುಬಾಹಿರ ಎಂದು ಘೋಷಿಸಿರುವುದರಿಂದ, ಇದು ಅಂತರಾಷ್ಟ್ರೀಯ ವ್ಯಾಪಾರ ವಹಿವಾಟು, ಅಧ್ಯಕ್ಷರ ಕಾರ್ಯನಿರ್ವಾಹಕ ಅಧಿಕಾರ ಮತ್ತು ವಾಷಿಂಗ್ಟನ್‌ನ ಆರ್ಥಿಕ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ.



Source link

Leave a Reply

Your email address will not be published. Required fields are marked *