Headlines

ಪಂಚರಾಜ್ಯ ವಿಧಾನಸಭಾ ಚುನಾವಣೆ: ಮಾರ್ಚ್‌ನಲ್ಲಿ ಮುಹೂರ್ತ ಫಿಕ್ಸ್?

ಪಂಚರಾಜ್ಯ ವಿಧಾನಸಭಾ ಚುನಾವಣೆ: ಮಾರ್ಚ್‌ನಲ್ಲಿ ಮುಹೂರ್ತ ಫಿಕ್ಸ್?

ಪಂಚರಾಜ್ಯ ವಿಧಾನಸಭಾ ಚುನಾವಣೆ: ಮಾರ್ಚ್‌ನಲ್ಲಿ ಮುಹೂರ್ತ ಫಿಕ್ಸ್?

ಪಂಚರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೆ ಶೀಘ್ರದಲ್ಲೇ ದಿನಾಂಕ ಫಿಕ್ಸ್:

ನವದೆಹಲಿ: ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಮಾರ್ಚ್ ಮಧ್ಯದಲ್ಲಿ ಭಾರತೀಯ ಚುನಾವಣಾ ಆಯೋಗ ಪ್ರಕಟಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಏಪ್ರಿಲ್‌ನಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಐದು ವಿಧಾನಸಭಾ ಕ್ಷೇತ್ರಗಳ ಚುನಾವಣಾ ದಿನಾಂಕಗಳನ್ನು ಮಾರ್ಚ್ ಮಧ್ಯದಲ್ಲಿ ಘೋಷಿಸಲು ಚುನಾವಣಾ ಆಯೋಗ ಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯವನ್ನು ಅವಲಂಬಿಸಿ ಮತದಾನವು ಬಹು ಹಂತಗಳಲ್ಲಿ ನಡೆಯಬಹುದು. ಐದು ವಿಧಾನಸಭೆಗಳ ಅವಧಿ ಮೇ ಮತ್ತು ಜೂನ್‌ನಲ್ಲಿ ವಿಭಿನ್ನ ದಿನಾಂಕಗಳಲ್ಲಿ ಕೊನೆಗೊಳ್ಳುತ್ತದೆ. ಪುದುಚೇರಿ ವಿಧಾನಸಭೆ ಚುನಾವಣೆ ಅವಧಿ ಜೂನ್ 15 ರಂದು ಕೊನೆಗೊಂಡರೆ, ಅಸ್ಸಾಂ ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ವಿಧಾನಸಭೆಗಳ ಅವಧಿ ಕ್ರಮವಾಗಿ ಮೇ 20, ಮೇ 23, ಮೇ 10 ಮತ್ತು ಮೇ 7 ರಂದು ಮುಕ್ತಾಯಗೊಳ್ಳಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ನಿದ್ರಿಸುತ್ತಿದ್ದ 4 ವರ್ಷದ ಮಗುವನ್ನು ಕ್ಯಾಬಲ್ಲೇ ಬಿಟ್ಟು ಹೋದ ಬೆಂಗಳೂರು ಪೋಷಕರು

ಚುನಾವಣಾ ಆಯೋಗವು ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದ್ದು, ಚುನಾವಣೆಗೆ ಸಿದ್ಧತೆಯನ್ನು ನಿರ್ಣಯಿಸಲು ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿದೆ. ಚುನಾವಣಾ ಸಿದ್ಧತೆಯನ್ನು ಪರಿಶೀಲಿಸಲು ಚುನಾವಣಾ ತಂಡವು ಪ್ರಸ್ತುತ ಅಸ್ಸಾಂನಲ್ಲಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆಗೆ ನಡೆಯಿತು.

ಅಸ್ಸಾಂನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆದರೆ ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಒಂದೇ ಹಂತದ ಚುನಾವಣೆ ನಡೆದಿತ್ತು. ಪೂರ್ವಸಿದ್ಧತಾ ಕಾರ್ಯಗಳ ಭಾಗವಾಗಿ, ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗಳ ನಂತರ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ಫೆಬ್ರವರಿ 14 ರಂದು ಪುದುಚೇರಿ ತನ್ನ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಎಸ್‌ಐಆರ್ ನಂತರ ಮತದಾರರ ಪಟ್ಟಿ ಪ್ರಕಟಿಸಿದ ಮೊದಲ ರಾಜ್ಯವೆನಿಸಿದೆ.

ಇದನ್ನೂ ಓದಿ:  10 ವರ್ಷ ಕಾನೂನು ಹೋರಾಟ ನಡೆಸಿ ಅಪರಿಚಿತೆಗೆ ಸ್ವತಃ ಕಿಡ್ನಿದಾನ ಮಾಡಿದ ವೈದ್ಯೆ

ತಮಿಳುನಾಡು ಇಂದು ಎಸ್‌ಐಆರ್ ನಂತರದ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದ್ದು, ಕೇರಳವು ಫೆಬ್ರವರಿ 21 ರಂದು ತನ್ನ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಪಶ್ಚಿಮ ಬಂಗಾಳದ ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 28 ರಂದು ಪ್ರಕಟಿಸಲಾಗುವುದು. ಅಸ್ಸಾಂನಲ್ಲಿ ಎಸ್‌ಐಆರ್ ಬದಲಿಗೆ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯನ್ನು ನಡೆಸಿ ಅಂತಿಮ ಪಟ್ಟಿಯನ್ನು ಫೆಬ್ರವರಿ 10 ರಂದು ಪ್ರಕಟಿಸಲಾಗಿದೆ.

Source link

Leave a Reply

Your email address will not be published. Required fields are marked *