Headlines

Jide Nage Song: ಯಕ್ಷದ್ರುವರ ಧ್ವನಿಯಲ್ಲಿ ‘ಬನ’ ಚಿತ್ರದ ಮೊದಲ ‘ನಾಗ’ ಹಾಡಿಗೆ ಮನಸೋತ ತುಳುನಾಡು | Bana Tulu Song Jide Nage Release Nitin Rai Kukkuvalli Hit Song Gvd

Jide Nage Song: ಯಕ್ಷದ್ರುವರ ಧ್ವನಿಯಲ್ಲಿ ‘ಬನ’ ಚಿತ್ರದ ಮೊದಲ ‘ನಾಗ’ ಹಾಡಿಗೆ ಮನಸೋತ ತುಳುನಾಡು | Bana Tulu Song Jide Nage Release Nitin Rai Kukkuvalli Hit Song Gvd


ತುಳು ಚಿತ್ರರಂಗದ ಪೂರ್ಣ ಪ್ರಮಾಣದ ಮೊದಲ ‘ನಾಗ ‘ಹಾಡು ‘ಜಿಡೆ ನಾಗೆ’ ಬಿಡುಗಡೆಗೊಂಡಿದ್ದು ಹಾಡು ಎಲ್ಲರ ಮೆಚ್ಚುಗೆ ಗಳಿಸಿದೆ. ಪ್ರತಿಷ್ಠಿತ ಲಹರಿ ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿರುವ ಜಿಡೆ ನಾಗೆ ಹಾಡಿಗೆ ಜಯ ಕೀರ್ತಿ ಸಂಗೀತ ನೀಡಿದ್ದಾರೆ.

ತುಳು ಚಿತ್ರರಂಗದ ಪೂರ್ಣ ಪ್ರಮಾಣದ ಮೊದಲ ‘ನಾಗ ‘ಹಾಡು ‘ಜಿಡೆ ನಾಗೆ’ ಬಿಡುಗಡೆಗೊಂಡಿದ್ದು ಹಾಡು ಎಲ್ಲರ ಮೆಚ್ಚುಗೆ ಗಳಿಸಿದೆ. ಕೆ.ಕೆ ಪೇಜಾವರ ಅವರ ಸಾಹಿತ್ಯ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಗಾಯನ ಹಾಗು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ನುಳಿಯಾಲು ಅವರ ಸತತ ಮೂರನೇ ಹಿಟ್ ಹಾಡು ಇದಾಗಿದೆ. ಈ ಜೋಡಿ ಈ ಹಿಂದೆ ಧರ್ಮ ದೈವ ಹಾಗು ಧರ್ಮ ಚಾವಡಿ ಚಿತ್ರದ ಎರಡು ಹಿಟ್ ಹಾಡುಗಳನ್ನು ತುಳುನಾಡಿಗೆ ನೀಡಿತ್ತು ಎಂಬುದು ವಿಶೇಷ.

ಪ್ರತಿಷ್ಠಿತ ಲಹರಿ ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿರುವ ಜಿಡೆ ನಾಗೆ ಹಾಡಿಗೆ ಜಯ ಕೀರ್ತಿ ಸಂಗೀತ ನೀಡಿದ್ದಾರೆ. ಹಾಡಿನ ಗ್ರಾಫಿಕ್ಸ್ ಕೆಲಸ ಗಮನ ಸೆಳೆದಿದೆ. ಈಷಿ ಪ್ರೊಡಕ್ಷನ್ ಅಡಿಯಲ್ಲಿ ಮನೋಹರ್ ರೈ ವೈಪಾಲ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಚಿತ್ರದಲ್ಲಿ ಮಾಧ್ಯಮ ಲೋಕದ ಜನಪ್ರಿಯ ನಿರೂಪಕ ಜಯಪ್ರಕಾಶ್ ಶೆಟ್ಟಿ ಮೊದಲ ಸಲ ಬಣ್ಣ ಹಚ್ಚಿದ್ದು ವಿಶೇಷ. ಚಿತ್ರ ತುಳು ಮತ್ತು ಕನ್ನಡ ಎರಡರಲ್ಲೂ ನಿರ್ಮಾಣವಾಗುತ್ತಿದ್ದು ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

YouTube video player

ಬಣ್ಣದ ಲೋಕಕ್ಕೆ ಕಾಲಿಟ್ಟ ಪತ್ರಕರ್ತ ಜಯಪ್ರಕಾಶ್‌ ಶೆಟ್ಟಿ

ಕನ್ನಡ ಪ್ರಖ್ಯಾತ ಸುದ್ದಿ ನಿರೂಪಕ ಹಾಗೂ ಪತ್ರಕರ್ತ ಜಯಪ್ರಕಾಶ್‌ ಶೆಟ್ಟಿ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌, ರಿಪಬ್ಲಿಕ್‌ ಕನ್ನಡದಲ್ಲಿ ಕೆಲಸ ಮಾಡಿದ್ದ ಜಯಪ್ರಕಾಶ್‌ ಶೆಟ್ಟಿ ಈಗ ಸುದ್ದಿ ನಿರೂಪಣೆ ಬಿಟ್ಟು ತುಳು ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಿರುವುದು ಅಧಿಕೃತವಾಗಿದೆ. ನಿತಿನ್‌ ರೈ ಕುಕ್ಕುವಳ್ಳಿ ನಿರ್ದೇಶನದ ಬಹುನಿರೀಕ್ಷಿತ ‘ಬನ’ ಚಿತ್ರದಲ್ಲಿ ಅಪರೂಪದ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ.

ಮೂಲಗಳ ಪ್ರಕಾರ ಬನ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಇದರಲ್ಲಿ ಜಯಪ್ರಕಾಶ್‌ ಶೆಟ್ಟಿ ಅವರು ನಟಿಸಿರುವುದೇ ವಿಶೇಷವಾಗಿದೆ. ಆತ್ಮೀಯರಿಂದ ಜೆಪಿ ಎಂದೇ ಕರೆಸಿಕೊಳ್ಳುತ್ತಿದ್ದ ಜಯಪ್ರಕಾಶ್‌ ಶೆಟ್ಟಿ ಅವರು ಸಿನಿಮಾದಲ್ಲಿ ಒಟ್ಟು 6 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಿನಿಮಾದ ಶೂಟಿಂಗ್‌ ಮಂಗಳೂರು ಹಾಗೂ ಪುತ್ತೂರು ಭಾಗದಲ್ಲಿ ಹೆಚ್ಚಾಗಿ ನಡೆದಿದೆ.



Source link

Leave a Reply

Your email address will not be published. Required fields are marked *