Headlines

ರೀಲ್ಸ್‌ಗಾಗಿ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ತಂದೆ: ಬಾಲ್ಕನಿಯಿಂದ ಹಾರುವಂತೆ ಪುಟ್ಟ ಮಗುವಿಗೆ ಒತ್ತಾಯ: ವೀಡಿಯೋ | Father Risks Child Life For Reels Little Boy Forced To Jump From Balcony Video

ರೀಲ್ಸ್‌ಗಾಗಿ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ತಂದೆ: ಬಾಲ್ಕನಿಯಿಂದ ಹಾರುವಂತೆ ಪುಟ್ಟ ಮಗುವಿಗೆ ಒತ್ತಾಯ: ವೀಡಿಯೋ | Father Risks Child Life For Reels Little Boy Forced To Jump From Balcony Video



ರೀಲ್ಸ್‌ಗಾಗಿ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ತಂದೆ: ಬಾಲ್ಕನಿಯಿಂದ ಹಾರುವಂತೆ ಪುಟ್ಟ ಮಗುವಿಗೆ ಒತ್ತಾಯ: ವೀಡಿಯೋ | Father Risks Child Life For Reels Little Boy Forced To Jump From Balcony Video

ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ತಂದೆಯೊಬ್ಬ ತನ್ನ ಪುಟ್ಟ ಮಗನನ್ನು ಮೊದಲ ಮಹಡಿಯ ಬಾಲ್ಕನಿಯಿಂದ ಕೆಳಗೆ ಹಾರುವಂತೆ ಪ್ರೇರೇಪಿಸಿದ್ದಾನೆ. ಅಪ್ಪನ ಮೇಲೆ ನಂಬಿಕೆಯಿಟ್ಟು ಮಗು ಕೆಳಗೆ ಹಾರಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಪೋಷಕರ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸೋಶಿಯಲ್ ಮೀಡಿಯಾ ಲೈಕ್ಸ್‌ಗಾಗಿ ಏನೂ ಮಾಡುವುದಕ್ಕೂ ಹೇಸದ ಜನ

ಇಂದು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕೋಸ್ಕರ ಜನ ಏನು ಬೇಕಾದರೂ ಮಾಡುತ್ತಾರೆ. ರೀಲ್ಸ್‌ಗಾಗಿ ಸ್ವಂತ ಮಕ್ಕಳನ್ನೂ ಕೂಡ ಅಪಾಯಕ್ಕೆ ಎಳೆಯುವುದಕ್ಕೆ ಕೆಲ ಪೋಷಕರು ಹೇಸುವುದಿಲ್ಲ. ಅದೇ ರೀತಿ ಇಲ್ಲೊಂದು ಕಡೆ ತಂದೆಯೋರ್ವ ರೀಲ್ಸ್‌ಗಾಗಿ ತನ್ನ ಪುಟ್ಟ ಮಗನನ್ನು ಮೊದಲನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಹಾರುವಂತೆ ಒತ್ತಾಯಿಸಿದ್ದಾನೆ. ಅದರಂತೆ ಮಗುವು ಅಪ್ಪನ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಬಾಲ್ಕನಿಯಿಂದ ಕೆಳಗೆ ಹಾರಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುವುದರ ಜೊತೆಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಪುಟ್ಟ ಮಗುವನ್ನು ಬಾಲ್ಕನಿಯಿಂದ ಕೆಳಗೆ ಹಾರುವುದಕ್ಕೆ ಪ್ರೇರೇಪಣೆ

ವೈರಲ್ ಆದ ವೀಡಿಯೋದಲ್ಲಿ 2 ರಿಂದ 3 ವರ್ಷ ಪ್ರಾಯದ ಮಗು ಮೊದಲ ಮಹಡಿಯ ಬಾಲ್ಕನಿಯ ಸುರಕ್ಷತಾ ಕಂಬಿಗಳ ಬಳಿ ನಿಂತಿದ್ದಾನೆ. ಈ ಕಂಬಿಗಳ ಪಕ್ಕದಲ್ಲಿ ಮಗು ತನ್ನನ್ನು ತಾನು ಬ್ಯಾಲೆನ್ಸ್ ಮಾಡುವುದಕ್ಕೆ ನೋಡುತ್ತಿದ್ದು, ಜೊತೆಗೆ ಚಪ್ಪಾಳೆ ತಟ್ಟುತ್ತಿದ್ದಾನೆ. ಕೆಳಗೆ ನಿಂತಿರುವ ಅಪ್ಪ ಕೆಳಗೆ ಹಾರಲಿರುವ ಮಗುವನ್ನು ಹಿಡಿದುಕೊಳ್ಳುವುದಕ್ಕಾಗಿ ಕೈಗಳನ್ನು ಚಾಚಿ ನಿಂತಿದ್ದು, ಪುಟ್ಟ ಮಗನಿಗೆ ಮೇಲಿನಿಂದ ಹಾರುವಂತೆ ಹೇಳುತ್ತಾನೆ. ಅಪ್ಪನ ಮಾತಿನಂತೆ, ಅಪ್ಪನ ಮೇಲೆ ಸಂಪೂರ್ಣ ವಿಶ್ವಾಸವಿಟ್ಟ ಆ ಪುಟ್ಟ ಕಂದ ಕೆಳಗೆ ಹಾರಿದ್ದು, ಅಪ್ಪ ಆ ಮಗುವನ್ನು ಹಿಡಿದುಕೊಂಡಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೀಡಿಯೋ ನೋಡಿದ ಅನೇಕರು ಪೋಷಕರ ಈ ಹುಚ್ಚುತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರಿಂದ ವೀಡಿಯೋಗೆ ತೀವ್ರ ಆಕ್ರೋಶ:

ಜನರ ಹುಚ್ಚುತನಕ್ಕೂ ಒಂದು ಮಿತಿ ಎಂಬುದು ಇದೆ. ಆದರೆ ಇಲ್ಲಿ ಮಗುವನ್ನೇ ಅಪಾಯಕ್ಕೀಡು ಮಾಡಲಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ಘಟನೆ ಎಲ್ಲಿ ನಡೆದಿದೆ ಎಂದು ಕೇಳಿದ್ದು, ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡುವಂತೆ ಆಗ್ರಹಿಸಿದ್ದಾರೆ. ರೀಲ್ಸ್‌ಗೋಸ್ಕರ ಜನ ಯಾವ ಹಂತಕ್ಕೂ ಇಳಿದು ಬಿಡ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ರೀಲ್ಸ್ ಮಾಡುವ ಭರದಲ್ಲಿ ಮಗುವಿನ ಜೀವವನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ರೀಲ್ಸ್‌ನಲ್ಲಿ ಫೇಮಸ್ ಅಗುವುದಕ್ಕಾಗಿ ಮಕ್ಕಳ ಖಾಸಗಿತನವನ್ನು ಆನ್‌ಲೈನ್‌ನಲ್ಲಿ ಹರಾಜು ಹಾಕುತ್ತಿರುವ ಪೋಷಕರ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮದುವೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ: ಯುವ ಕಾಂಗ್ರೆಸ್ ನಾಯಕನ ಮರ್ಡರ್ ಕೇಸ್‌ನಲ್ಲಿ ಸ್ನೇಹಿತರ ಬಂಧನ



Source link

Leave a Reply

Your email address will not be published. Required fields are marked *