ಕೇರಳದಲ್ಲೂ ಕಾಂಗ್ರೆಸ್‌ನಿಂದ ಪಂಚ ಗ್ಯಾರಂಟಿ ಸ್ಕೀಂ ಭರವಸೆ-ಫ್ರೀ ಬಸ್‌ ಪ್ರಯಾಣ, ₹3000 ಪಿಂಚಣಿ ಸೇರಿ 5 ಭರವಸೆ | Indian National Congress Promises Five Guarantee Schemes In Kerala

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್‌, ಇದೀಗ ನೆರೆಯ ಕೇರಳದಲ್ಲೂ ಅದೇ ದಾಳ ಪ್ರಯೋಗಿಸಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರು, ವಿದ್ಯಾರ್ಥಿನಿಯರು, ವೃದ್ಧರು, ಉದ್ಯಮಿಗಳನ್ನು ಗುರಿಯಾಗಿಸಿದ 5 ಯೋಜನೆ

ತಿರುವನಂತಪುರಂ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿ ಘೋಷಿಸಿ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್‌, ಇದೀಗ ನೆರೆಯ ಕೇರಳದಲ್ಲೂ ಅದೇ ದಾಳ ಪ್ರಯೋಗಿಸಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರು, ವಿದ್ಯಾರ್ಥಿನಿಯರು, ವೃದ್ಧರು, ಉದ್ಯಮಿಗಳನ್ನು ಗುರಿಯಾಗಿಸಿದ 5 ಯೋಜನೆಗಳನ್ನು ಜಾರಿಗೆ ತರುವುದಾಗಿ ಪಕ್ಷ ಘೋಷಿಸಿದೆ.

ಯುಡಿಎಫ್‌ ಮೈತ್ರಿ ಕೂಟದ ಭಾಗವಾಗಿರುವ ಕಾಂಗ್ರೆಸ್‌

ಕೇರಳದಲ್ಲಿ ಯುಡಿಎಫ್‌ ಮೈತ್ರಿ ಕೂಟದ ಭಾಗವಾಗಿರುವ ಕಾಂಗ್ರೆಸ್‌ ಈ ಘೋಷಣೆ ಮಾಡಿದೆ. ಶನಿವಾರ ಇಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ನಾಯಕ ರಾಹುಲ್‌ ಗಾಂಧಿ ಪಂಚ ಗ್ಯಾರಂಟಿಗಳನ್ನು ಪ್ರಕಟಿಸಿದರು.

ಏನೇನು ಗ್ಯಾರಂಟಿ?:

ಕರ್ನಾಟಕದ ಶಕ್ತಿ ಯೋಜನೆಯಂತೆ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಕಾಲೇಜು ವಿದ್ಯಾರ್ಥಿನಿಯರಿಗೆ ಮಾಸಿಕ 1 ಸಾವಿರ ರು., ವೃದ್ಧರು, ಅಂಗವಿಕಲರು, ವಿಧವೆಯರು ಸೇರಿದ ವಿವಿಧ ವರ್ಗದವರಿಗೆ ಕಲ್ಯಾಣ ಪಿಂಚಣಿ ಯೋಜನೆ ಮೊತ್ತ 1600 ರು.ನಿಂದ 3 ಸಾವಿರ ರು.ಗೆ ಏರಿಕೆ, ಮಾಜಿ ಸಿಎಂ ಊಮ್ಮನ್ ಚಾಂಡಿ ಹೆಸರಿನಲ್ಲಿ ಅರ್ಹ ಕುಟುಂಬಕ್ಕೆ 25 ಲಕ್ಷ ರು.ತನಕ ಆರೋಗ್ಯ ವಿಮೆ, ಸಣ್ಣ ಉದ್ದಿಮೆದಾರರಿಗೆ 5 ಲಕ್ಷ ರು. ತನಕ ಬಡ್ಡಿ ರಹಿತ ಸಾಲ ನೀಡುವುದಾಗಿ ಕಾಂಗ್ರೆಸ್‌ ಭರವಸೆ ನೀಡಿದೆ.

Source link

Leave a Reply

Your email address will not be published. Required fields are marked *