Headlines

ವರದಕ್ಷಿಣೆ ಕೇಳಿದ್ರೆ ಗ್ಯಾಸ್​ ಕನೆಕ್ಷನ್​ ಕಟ್​: ಸರ್ಕಾರದಿಂದ ಬಂತು ಹೊಸ ರೂಲ್ಸ್​- ಏನಿದೆ ನಿಯಮ ನೋಡಿ | Rajasthan Govt Warns Of Lpg Supply Cut In Dowry Cases Netizens React Online Suc

ವರದಕ್ಷಿಣೆ ಕೇಳಿದ್ರೆ ಗ್ಯಾಸ್​ ಕನೆಕ್ಷನ್​ ಕಟ್​: ಸರ್ಕಾರದಿಂದ ಬಂತು ಹೊಸ ರೂಲ್ಸ್​- ಏನಿದೆ ನಿಯಮ ನೋಡಿ | Rajasthan Govt Warns Of Lpg Supply Cut In Dowry Cases Netizens React Online Suc



ವರದಕ್ಷಿಣೆ ಕೇಳಿದ್ರೆ ಗ್ಯಾಸ್​ ಕನೆಕ್ಷನ್​ ಕಟ್​: ಸರ್ಕಾರದಿಂದ ಬಂತು ಹೊಸ ರೂಲ್ಸ್​- ಏನಿದೆ ನಿಯಮ ನೋಡಿ | Rajasthan Govt Warns Of Lpg Supply Cut In Dowry Cases Netizens React Online Suc

ವರದಕ್ಷಿಣೆ ಪಿಡುಗು ತಡೆಯಲು ಸರ್ಕಾರ ಒಂದು ವಿಶಿಷ್ಟ ಕಾನೂನು ಜಾರಿಗೆ ತಂದಿದೆ. ವರದಕ್ಷಿಣೆ ಕೇಳಿದ್ದು ಸಾಬೀತಾದರೆ, ಗಂಡಿನ ಮನೆಯ ಗ್ಯಾಸ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಗ್ಯಾಸ್ ಸಿಲಿಂಡರ್‌ಗಳನ್ನೇ ವರದಕ್ಷಿಣೆಯಾಗಿ ಕೇಳುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ವರದಕ್ಷಿಣೆ ವಿರೋಧಿ ಕಾನೂನು ಬಂದು ಅದೆಷ್ಟೋ ದಶಕಗಳು ಕಳೆದು ಹೋಗಿದ್ದರೂ, ಇದಂತೂ ಇಂದಿಗೂ ನಿಂತಿಲ್ಲ. ಹಲವು ಗಂಡಿನ ಮನೆಯವರ ಹಣದ ದಾಹಕ್ಕೆ ಬಲಿಯಾದವರು ಅದೆಷ್ಟೋ ಹೆಣ್ಣುಮಕ್ಕಳು. ಮಗಳ ಮದುವೆಯಾದರೆ ಸಾಕು ಎಂದು ಕೇಳಿದಷ್ಟು ದುಡ್ಡು ಕೊಟ್ಟು, ಆಮೇಲೆ ಇನ್ನಷ್ಟು ಬೇಕೆಂದಾಗ ಕೊಡಲು ಆಗದೇ ಮಗಳನ್ನೇ ಸಾವಿನ ಬಾಯಿಗೆ ನೂಕುವ ಅಪ್ಪ ಅಮ್ಮ ಒಂದೆಡೆಯಾದರೆ, ಧನಪಿಶಾಚಿ ಗಂಡ, ಅತ್ತೆ-ಮಾವಂದಿರ ದುಡ್ಡಿನ ಮೋಹಕ್ಕೆ ನಲುಗುವ ಹೆಣ್ಣುಗಳು ಅದೆಷ್ಟೋ ಮಂದಿ. ವರದಕ್ಷಿಣೆ ತೆಗೆದುಕೊಳ್ಳುವುದು ಮಾತ್ರವಲ್ಲ, ಕೊಡುವುದೂ ಅಪರಾಧವೇ ಎನ್ನುವುದು ಕಾನೂನಾದರೂ ಹೆಣ್ಣು ಹೆತ್ತವರಿಗೆ ಮಗಳ ಮದುವೆ ಆಗುವುದಿಲ್ಲ ಎನ್ನುವ ಸಂಕಷ್ಟವೇ, ಗಂಡು ಹೆತ್ತವರಿಗೆ ಬಂಡವಾಳ!

ಸಾಕ್ಷ್ಯಾಧಾರದ ಕೊರತೆ

ಎಷ್ಟೇ ಕಾನೂನುಗಳಿದ್ದರೂ, ಅದು ಜಾರಿಯಾಗುವುದು ಅತಿ ವಿರಳ. ವರದಕ್ಷಿಣೆ ಸಾವಿನ ಪ್ರಕರಣ ದಾಖಲಾದಾಗಲೂ ಸೂಕ್ತ ಸಾಕ್ಷಿಗಳು ಇಲ್ಲವೆಂದು ಅಪರಾಧಿಗಳು ಖುಲಾಸೆಗೊಳ್ಳುವ ಘಟನೆಗಳೂ ನಡೆಯುತ್ತವೆ. ಆದ್ದರಿಂದ ಇದೀಗ ಹೊಸ ಕಾನೂನನ್ನು ಜಾರಿಗೊಳಿಸಲಾಗಿದೆ. ಅದೇನೆಂದರೆ, ವರದಕ್ಷಿಣೆ ಕೇಳಿದ್ದು ಗೊತ್ತಾದರೆ ಅವರ ಮನೆಯ ಗ್ಯಾಸ್​ ಕನೆಕ್ಷನ್​ ಕಟ್​ ಮಾಡುವ ಯೋಜನೆ ಇದಾಗಿದೆ.

ಎಲ್ಲಿ ಬಂದಿದೆ ಈ ರೂಲ್ಸ್​

ರಾಜಸ್ಥಾನ ಸರ್ಕಾರ ಇಂಥದ್ದೊಂದು ಯೋಜನೆ ಜಾರಿಗೊಳಿಸಿದೆ. ಸದ್ಯ ಅಲ್ಲಿ ಗ್ಯಾಸ್​​ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಈಗ ಮದುವೆಯಾಗುವ ಗಂಡು ಮಕ್ಕಳ ಪಾಲಕರು ಹೆಣ್ಣಿನ ಮನೆಯವರಿಗೆ ವರದಕ್ಷಿಣೆಯ ರೂಪದಲ್ಲಿ ಗ್ಯಾಸ್​ ಸಿಲಿಂಡರ್​ ಕೇಳುತ್ತಿದ್ದಾರೆ. ಇದರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಈ ಸ್ಟ್ರಿಕ್ಟ್​ ಕಾನೂನನ್ನು ಸರ್ಕಾರ ಜಾರಿಗೊಳಿಸಿದೆ.

ಗ್ಯಾಸ್​ ಪೂರೈಕೆ ಕಟ್

ಸದ್ಯ ಎಲ್​ಪಿಜಿ ಸಿಲಿಂಡರ್​ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ತಿಂಗಳಿಗೆ ಒಮ್ಮೆ ಬುಕ್​ ಮಾಡಿದರೆ ನೀಡಲಾಗುತ್ತದೆ. ಇದರ ಹೊರತಾಗಿಯೂ ವರದಕ್ಷಿಣೆ ಕೇಳಿರುವುದು ತಿಳಿದರೆ, ಅವರ ಮನೆಯ ಗ್ಯಾಸ್​ ಸಿಲಿಂಡರ್​ ಕನೆಕ್ಷನ್​ ಕಟ್​ ಮಾಡಲಾಗುತ್ತದೆ ಎಂದು ಆದೇಶ ಹೊರಡಿಸಿದೆ ಸರ್ಕಾರ. ಗೃಹಬಳಕೆಯ ಅನಿಲ ಸಿಲಿಂಡರ್‌ಗಳ ಪೂರೈಕೆ ಸಾಮಾನ್ಯವಾಗಿ ಮುಂದುವರಿಯುತ್ತಿದೆ ಮತ್ತು ನಾಗರಿಕರು ಭಯಭೀತರಾಗಬಾರದು. ಎಲ್ಲವೂ ಸುಸೂತ್ರವಾಗಿದೆ ಎಂದು ಹೇಳಿದ್ದಾರೆ. ಅಥವಾ ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಇದು ಕೇವಲ ಗ್ಯಾಸ್​ ಸಿಲಿಂಡರ್​ ಕೇಳಿದರೆ ಮಾತ್ರವಲ್ಲದೇ, ಪ್ರತಿಯೊಂದು ವರದಕ್ಷಿಣೆಗೂ ಈ ಕ್ರಮ ತೆಗೆದುಕೊಳ್ಳಬೇಕು, ಗ್ಯಾಸ್​ನಂಥ ಅಗತ್ಯ ಪೂರೈಕೆಗಳನ್ನು ಕಟ್​ ಮಾಡಿದರೆ ತಾವಾಗಿಯೇ ಗಂಡು ಹೆತ್ತವರು ದಾರಿಗೆ ಬರುತ್ತಾರೆ ಎಂದು ಹಲವರು ಹೇಳುತ್ತಿದ್ದಾರೆ. ಇದನ್ನು ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೆ ತರುವ ಅಗತ್ಯವಿದೆ ಎನ್ನುವ ಕೂಗು ಜೋರಾಗಿದೆ.



Source link

Leave a Reply

Your email address will not be published. Required fields are marked *