Headlines

Wife protests at husband’s house ದಾವಣಗೆರೆ: ನನಗೆ ಗಂಡ ಬೇಕು ಎಂದು ಮಗಳೊಂದಿಗೆ ಪತಿ ಮನೆ ಮುಂದೆ ಪತ್ನಿ ಧರಣಿ! | Davanagere Wife Protests With Daughter In Front Of Husband S House For Justice

Wife protests at husband’s house ದಾವಣಗೆರೆ: ನನಗೆ ಗಂಡ ಬೇಕು ಎಂದು ಮಗಳೊಂದಿಗೆ ಪತಿ ಮನೆ ಮುಂದೆ ಪತ್ನಿ ಧರಣಿ! | Davanagere Wife Protests With Daughter In Front Of Husband S House For Justice



Wife protests at husband’s house ದಾವಣಗೆರೆ: ನನಗೆ ಗಂಡ ಬೇಕು ಎಂದು ಮಗಳೊಂದಿಗೆ ಪತಿ ಮನೆ ಮುಂದೆ ಪತ್ನಿ ಧರಣಿ! | Davanagere Wife Protests With Daughter In Front Of Husband S House For Justice

ದಾವಣಗೆರೆಯಲ್ಲಿ, ವಿದ್ಯಾಶ್ರೀ ಎಂಬ ಮಹಿಳೆ ತನ್ನ ಪತಿ ಭಾರ್ಗವ್ ಬೇಕೆಂದು 11 ವರ್ಷದ ಮಗಳೊಂದಿಗೆ ಅವರ ಮನೆ ಮುಂದೆ ಧರಣಿ ನಡೆಸುತ್ತಿದ್ದಾರೆ. ಹೆಣ್ಣು ಮಗು ಜನಿಸಿದ್ದೇ ಕಲಹಕ್ಕೆ ಕಾರಣ ಎಂದು ಆರೋಪಿಸಿದ್ದು, ಮೂರು ವರ್ಷಗಳಿಂದ ಬೇರೆಯಾಗಿ ವಾಸಿಸುತ್ತಿರುವ ದಂಪತಿಯ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ದಾವಣಗೆರೆ (ಜ.8): ‘ನನಗೆ ನನ್ನ ಪತಿ ಬೇಕು, ಮಗಳಿಗೆ ತಂದೆ ಬೇಕು’ ಎಂದು ಪಟ್ಟು ಹಿಡಿದು ಮಹಿಳೆಯೊಬ್ಬರು ತನ್ನ ಹನ್ನೊಂದು ವರ್ಷದ ಮಗಳೊಂದಿಗೆ ಪತಿ ಮನೆ ಮುಂದೆ ಧರಣಿ ಕುಳಿತಿರುವ ಘಟನೆ ದಾವಣಗೆರೆ ನಗರದ ಚರ್ಚ್ ರಸ್ತೆಯ ಪಿಜೆ ಬಡಾವಣೆಯಲ್ಲಿ ಈ ಹೈಡ್ರಾಮಾ ನಡೆದಿದೆ.

ಮಾವನ ಮನೆ ಮುಂದೆ ಸೊಸೆಯ ಪ್ರತಿಭಟನೆ

ವಿದ್ಯಾಶ್ರೀ ಎಂಬುವವರೇ ಪ್ರತಿಭಟನೆಗೆ ಕುಳಿತ ಮಹಿಳೆ. ಪಿಜೆ ಬಡಾವಣೆಯಲ್ಲಿರುವ ತಮ್ಮ ಮಾವ ವೆಂಕಟೇಶ ಮೂರ್ತಿ ಅವರ ಮನೆ ಮುಂದೆ ವಿದ್ಯಾಶ್ರೀ ಮಗಳೊಂದಿಗೆ ಕುಳಿತಿದ್ದಾರೆ. ಕಳೆದ 12 ವರ್ಷಗಳ ಹಿಂದೆ ವೆಂಕಟೇಶ ಮೂರ್ತಿ ಅವರ ಪುತ್ರ ಭಾರ್ಗವ್ ಎಂಬುವವರ ಜೊತೆ ವಿದ್ಯಾಶ್ರೀ ವಿವಾಹವಾಗಿತ್ತು. ಸುಖವಾಗಿದ್ದ ಸಂಸಾರದಲ್ಲಿ ಈಗ ಬಿರುಗಾಳಿ ಎದ್ದಿದ್ದು, ನ್ಯಾಯಕ್ಕಾಗಿ ಬೀದಿಗಿಳಿಯುವಂತಾಗಿದೆ.

ಹೆಣ್ಣು ಮಗು ಎಂಬ ಕಾರಣಕ್ಕೆ ಕಲಹ?

ದಂಪತಿಗೆ ಹನ್ನೊಂದು ವರ್ಷದ ಹೆಣ್ಣು ಮಗು ಇದೆ. ಆದರೆ, ತನಗೆ ಹೆಣ್ಣು ಮಗು ಆಗಿದೆ ಎಂಬ ಕಾರಣಕ್ಕೆ ಕುಟುಂಬದಲ್ಲಿ ಕಲಹ ಶುರುವಾಗಿದೆ ಎಂದು ವಿದ್ಯಾಶ್ರೀ ಗಂಭೀರವಾಗಿ ಆರೋಪಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ದಂಪತಿ ಬೇರೆಯಾಗಿ ವಾಸಿಸುತ್ತಿದ್ದಾರೆ. ‘ನನ್ನ ಮೇಲೆ ಇಲ್ಲದ ಸಲ್ಲದ ಆರೋಪಗಳನ್ನು ಹೊರಿಸಿ ಈಗ ವಿಚ್ಛೇದನಕ್ಕೆ (Divorce) ಅರ್ಜಿ ಹಾಕಿದ್ದಾರೆ. ಆದರೆ ನನಗೆ ಸಂಸಾರ ಮಾಡಬೇಕಿದೆ, ನನ್ನ ಗಂಡ ನನಗೆ ಬೇಕು’ ಎಂದು ವಿದ್ಯಾಶ್ರೀ ಅಳಲು ತೋಡಿಕೊಂಡಿದ್ದಾರೆ.

ಆಕೆಯಿಂದ ನಮಗೆ ಭಯ ಎಂದ ಪತಿ ಕುಟುಂಬ

ಇನ್ನೊಂದೆಡೆ, ವಿದ್ಯಾಶ್ರೀ ಪ್ರತಿಭಟನೆಗೆ ಪತಿ ಭಾರ್ಗವ್ ಮನೆಯವರು ಆತಂಕ ವ್ಯಕ್ತಪಡಿಸಿದ್ದಾರೆ. ಆಕೆಯಿಂದ ನಮಗೆ ಭಯ ಇದೆ. ಒಂದು ವೇಳೆ ಆಕೆ ಅಲ್ಲಿ ಏನಾದರೂ ಮಾಡಿಕೊಂಡರೆ ಅದಕ್ಕೆ ಜವಾಬ್ದಾರಿ ಯಾರು? ಎಂದು ಪ್ರಶ್ನಿಸಿದ್ದಾರೆ. ಈಗಾಗಲೇ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಕಾನೂನು ಮೂಲಕವೇ ಈ ಸಮಸ್ಯೆಯನ್ನು ಇತ್ಯರ್ಥ ಮಾಡಿಕೊಳ್ಳುವುದಾಗಿ ಪತಿ ಮನೆಯವರು ತಿಳಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಬಡಾವಣೆ ಪೊಲೀಸರು

ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಬಡಾವಣೆ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಧರಣಿ ಕುಳಿತಿದ್ದ ವಿದ್ಯಾಶ್ರೀ ಹಾಗೂ ಪತಿ ಕುಟುಂಬದವರನ್ನು ಮಾತುಕತೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎರಡು ಕುಟುಂಬಗಳ ನಡುವೆ ಸಂಧಾನ ಅಥವಾ ಕಾನೂನು ಪ್ರಕ್ರಿಯೆಯ ವಿಚಾರಣೆ ನಡೆಯುತ್ತಿದೆ.



Source link

Leave a Reply

Your email address will not be published. Required fields are marked *