
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದೇಶಾದ್ಯಂತ ಟೋಲ್ ದರವನ್ನು ಹೆಚ್ಚಿಸಿದ್ದು, ಉಡುಪಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲೂ ದರ ಏರಿಕೆಯಾಗಿದೆ. ಕಾರು, ಬಸ್, ಟ್ರಕ್‌ಗಳ ಶುಲ್ಕದಲ್ಲಿ 5 ರಿಂದ 30 ರೂ.ವರೆಗೆ ಹೆಚ್ಚಳವಾಗಿದ್ದು, ಇನ್ನು ಮುಂದೆ ಯುಪಿಐ ಮೂಲಕವೇ ಪಾವತಿ ಕಡ್ಡಾಯವಾಗಿದೆ.
ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಹೆಚ್ಚಳ
ಉಡುಪಿ/ ಕೊಪ್ಪಳ: ದೇಶದೆಲ್ಲೆಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಟೋಲ್ ದರ ಹೆಚ್ಚಳ ಮಾಡಿದ್ದು, ಇದರ ಬಿಸಿ ಜನ ಸಾಮಾನ್ಯರಿಗೂ ತಟ್ಟಿದೆ. ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಮೂರು ಟೋಲ್‌ಗಳಿವೆ. ಜಿಲ್ಲೆಯ ಗಡಿ ಭಾಗಗಳಾದ ಹೆಜಮಾಡಿ, ಶಿರೂರು ಹಾಗೂ ಸಾಸ್ತಾನ ಈ ಮೂರು ಟೋಲ್‌ಗಳಲ್ಲೂ ಮಧ್ಯರಾತ್ರಿ 12 ಗಂಟೆಯಿಂದಲೇ ಟೋಲ್ ದರ ಏರಿಕೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊಸ ಸೂಚನೆಯಂತೆ ಟೋಲ್‌ದರದಲ್ಲಿ 5 ರಿಂದ 10 ರೂಪಾಯಿವರೆಗೆ ಏರಿಕೆ ಆಗಿದೆ. ಹೀಗಾಗಿ 60 ರೂಪಾಯಿ ಇದ್ದ ಕಾರ್ ಜೀಪ್ ವ್ಯಾನ್‌ಗಳ ಟೋಲ್ ದರ 65ಕ್ಕೆ ಏರಿಕೆ ಆಗಿದೆ. ಹಾಗೆಯೇ ಬಸ್ ಹಾಗೂ ಟ್ರಕ್‌ಗಳ ಟೋಲ್ ದರ 210 ರಿಂದ 215 ಕ್ಕೆ ಏರಿಕೆಯಾಗಿದೆ. ಮೂರರಿಂದ ಆರು ಎಕ್ಸೆಲ್ ವಾಹನಗಳ ದರ 325 ರಿಂದ 335 ರೂಪಾಯಿಗೆ ಏರಿಕೆ.
ನಗದು ಸ್ವೀಕಾರ ಇಲ್ಲ ಯುಪಿಐ ಮೂಲಕವೇ ಪಾವತಿ
ಟೋಲ್‌ಗಳಲ್ಲಿ ಇನ್ನು ಮುಂದೆ ನಗದು ಸ್ವೀಕರಿಸುವುದಕ್ಕೆ ಅವಕಾಶ ಇರುವುದಿಲ್ಲ, ಯುಪಿಐ ಮೂಲಕವೇ ಪೇಮೆಂಟ್ ಮಾಡಬೇಕಾಗುತ್ತದೆ. ಉಡುಪಿ ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿ ಅತೀಹೆಚ್ಚು ವಾಹನಗಳು ಓಡಾಟ ನಡೆಸುತ್ತವೆ. ಇಲ್ಲಿಂದ ಮಂಗಳೂರು ಬಂದರಿಗೆ ಅತೀ ಹೆಚ್ಚು ವಾಹನಗಳು ಓಡಾಡುತ್ತವೆ. ಗ್ಯಾಸ್ ತುಂಬಿ ಟ್ಯಾಂಕರ್‌ಗಳ ಓಡಾಟ ಹೆಚ್ಚಾಗಿದ್ದು, ಈಗ ಟೋಲ್ ದರ ಏರಿಕೆಯಿಂದಾಗಿ ಎಲ್ಲರಿಗೂ ದರ ಏರಿಕೆಯ ಬಿಸಿ ತಟ್ಟಿದೆ.
ಹಾಗೆಯೇ ಕೊಪ್ಪಳದಲ್ಲೂ ಜಿಲ್ಲೆಯ ಮೂರು ಟೋಲ್‌ಗಳಲ್ಲಿ ದರ ಏರಿಕೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 50 ಹಾಗೂ 67 ರಲ್ಲಿ ಟೋಲ್ ದರ ಕನಿಷ್ಠ 5 ರಿಂದ ಗರಿಷ್ಠ 30ಕ್ಕೆ ಏರಿಕೆಯಾಗಿದೆ. ಕಾರುಗಳಿಗೆ ಇಲ್ಲಿ ಈ ಮೊದಲು ಸಿಂಗಲ್ ಟ್ರಿಪ್ ಗೆ 50 ಇತ್ತು ಈಗ 55 ಆಗಿದೆ. ರಿಟರ್ನ್ ಟ್ರಿಪ್ 75ರಿಂದ ನಿಂದ 80ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಕಾಮಕ್ಯ ದೇಗುಲದ ಪುರೋಹಿತರ ಮಾತು ನಿಜವಾಯ್ತು: ಕೊಲೆ ನಡೆದು ಸರಿಯಾಗಿ 9 ತಿಂಗಳ ನಂತರ ರಾಜ ರಘುವಂಶಿ ಮನೆಗೆ ಹೊಸ ಸದಸ್ಯನ ಆಗಮನ
ಮಿನಿ ಬಸ್‌ನ ಟೋಲ್ ದರ 10 ರೂ ಏರಿಕೆಯಾಗಿದೆ. ಬಸ್ ಹಾಗೂ ಲಾರಿಗಳ ಟೋಲ್ ದರ 5ರಿಂದ 15ರೂಗೆ ಏರಿಕೆಯಾಗಿದೆ. 3 ಎಕ್ಸ್ ಎಲ್ ನಿಂದ 6 ಎಕ್ಸ್ ಎಲ್ ನ ವಾಹನಗಳ ಟೋಲ್ ದರ 15 ರಿಂದ 20 ಕ್ಕೆ ಏರಿಕೆ ಆಗಿದೆ.7 ಎಕ್ಸ್ ಎಲ್ ಮೇಲ್ಪಟ್ಟ ವಾಹನಗಳ ಟೋಲ್ ದರ 20 ರಿಂದ 25ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಹೆದ್ದಾರಿ ಪ್ರಯಾಣ ಮತ್ತಷ್ಟು ದುಬಾರಿ: ದೇಶದೆಲ್ಲೆಡೆ ಟೋಲ್ ದರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ