
ನಟ ನಟಿಯರ ಫೋಟೋಗಳನ್ನು ಫಿಲಂಫೇರ್ ಮ್ಯಾಗಜೀನ್‌ನ ಮುಖಪುಟದಲ್ಲಿ ಹಾಕುತ್ತಾರೆ. ಆದರೆ, ಈ ಮುಖಪುಟದಲ್ಲಿ ಕನ್ನಡದವರು ಮಾತ್ರ ಇರಲ್ಲ. ಯಾಕೆ ಈ ನಿರ್ಲಕ್ಷ್ಯ ಧೋರಣೆ ಎಂಬುದು ಅರ್ಥವಾಗುತ್ತಿಲ್ಲ.
‘ನಾವಾಗಿಯೇ ಹೋಗಿ ಕೇಳಿ ಪಡೆದುಕೊಂಡ ಪ್ರಶಸ್ತಿ ಅಲ್ಲ. ಅವರೇ ಕರೆದು ಗುರುತಿಸಿ ಕೊಡುವ ಪ್ರಶಸ್ತಿಯನ್ನು ಮತ್ತು ಪ್ರಶಸ್ತಿ ಪಡೆದುಕೊಂಡ ಕನ್ನಡದ ಕಲಾವಿದರನ್ನು ಅತ್ಯಂತ ನಿರ್ಲಕ್ಷ್ಯದಿಂದ ನಡೆಸಿಕೊಳ್ಳುವುದು ಯಾಕೆ?’ -ಹೀಗೆ ಪ್ರಶ್ನೆ ಮಾಡಿರುವುದು ನಟ ಶ್ರೀಮುರಳಿ. ಅವರ ಈ ಬೇಸರ ಫಿಲಂಫೇರ್ ಅವಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ.
ಈ ಕುರಿತು ನಟ ಶ್ರೀಮುರಳಿ, ‘ಫಿಲಂಫೇರ್ ಅವಾರ್ಡ್ ತೆಗೆದುಕೊಂಡ ನಟ ನಟಿಯರ ಫೋಟೋಗಳನ್ನು ಫಿಲಂಫೇರ್ ಮ್ಯಾಗಜೀನ್‌ನ ಮುಖಪುಟದಲ್ಲಿ ಹಾಕುತ್ತಾರೆ. ಆದರೆ, ಈ ಮುಖಪುಟದಲ್ಲಿ ಕನ್ನಡದವರು ಮಾತ್ರ ಇರಲ್ಲ. ಯಾಕೆ ಈ ನಿರ್ಲಕ್ಷ್ಯ ಧೋರಣೆ ಎಂಬುದು ಅರ್ಥವಾಗುತ್ತಿಲ್ಲ. ನಾವು ಹೋಗಿ ಕೇಳಿ ಪಡೆದುಕೊಂಡ ಪ್ರಶಸ್ತಿ ಅಲ್ಲ ಅದು. ಅವರೇ ಕರೆದು ಗೌರವಿಸಿದ್ದು.
ಅವರ ಗೌರವಕ್ಕೆ ಪ್ರಾಮುಖ್ಯತೆ ಕೊಡುವಾಗ ಕನ್ನಡದವರನ್ನು ನಿರ್ಲಕ್ಷಿಸುವ ಅಥವಾ ಉಡಾಫೆಯಿಂದ ನಡೆಸಿಕೊಳ್ಳುವ ಮನಸ್ಥಿತಿ ಯಾಕೆ, ಕನ್ನಡದವರು ಏನು ತಪ್ಪು ಮಾಡಿದ್ದಾರೆ. ಈ ರೀತಿಯ ತಾತ್ಸಾರ ಧೋರಣೆ ಸರಿಯಲ್ಲ’ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೆ 70ನೇ ಫಿಲಮ್ ಫೇರ್ ಅವಾರ್ಡ್ ಕಾರ್ಯಕ್ರಮ ಕೇರಳದ ಕೊಚ್ಚಿಯಲ್ಲಿ ನಡೆಯಿತು. ‘ಬಘೀರ’ ಚಿತ್ರಕ್ಕಾಗಿ ನಟ ಶ್ರೀಮುರಳಿ ಅವರಿಗೆ ಪ್ರಶಸ್ತಿ ನೀಡಲಾಗಿತ್ತು.
ಕ್ಯಾಲೆಂಡರ್ ಚಿತ್ರದ ಟ್ರೇಲರ್ ಬಿಡುಗಡೆ
ಆದರ್ಶ ಗುಂಡುರಾಜ್ ನಟನೆಯ ‘ಕ್ಯಾಲೆಂಡರ್’ ಚಿತ್ರವು ಏಪ್ರಿಲ್ 3ಕ್ಕೆ ತೆರೆಗೆ ಬರಲಿದ್ದು, ಈಗ ಟ್ರೇಲರ್ ಬಿಡುಗಡೆ ಆಗಿದೆ. ನವೀನ್ ಶಕ್ತಿ ನಿರ್ದೇಶನದ ಈ ಚಿತ್ರದಲ್ಲಿ ನಿವಿಷ್ಕಾ ಪಾಟೀಲ್, ಸುಶ್ಮಿತ ನಾಯಕಿಯರು. ಆದರ್ಶ ಗುಂಡುರಾಜ್, ‘ನಟನೆ ಜೊತೆಗೆ ನಾನೇ ನಿರ್ಮಾಣ ಕೂಡ ಮಾಡಿದ್ದೇನೆ. ಇದೊಂದು ಮಹಿಳಾ ಪ್ರಧಾನ ಚಿತ್ರ. ಕುಟುಂಬ ಸಮೇತ ನೋಡಬೇಕಾದ ಚಿತ್ರ. ನನ್ನದು ಈ ಚಿತ್ರದಲ್ಲಿ ವೈದ್ಯನ ಪಾತ್ರ’ ಎಂದರು. ಮಾಲಾಶ್ರೀ, ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು, ಸುಚೇಂದ್ರ ಪ್ರಸಾದ್, ಚಂದ್ರಪ್ರಭ ತಾರಾಬಳಗದಲ್ಲಿದ್ದಾರೆ.