Headlines

ಈ ಖ್ಯಾತಿಗೆ 1.4 M ಫಾಲೋವರ್ಸ್ ಇದ್ರೂ ಕಾಮನ್ ಸೆನ್ಸ್ ಇಲ್ಲ; ಕಬ್ಬನ್ ಪಾರ್ಕ್ ನೋ-ಕಿಸ್ ಬೋರ್ಡ್ ಮುಂದೆ ಲಿಪ್‌ಲಾಕ್! | Influencer Khyati Shree Kisses Husband Bengaluru Cubbon Park No Kissing Board Viral Video Sat

ಈ ಖ್ಯಾತಿಗೆ 1.4 M ಫಾಲೋವರ್ಸ್ ಇದ್ರೂ ಕಾಮನ್ ಸೆನ್ಸ್ ಇಲ್ಲ; ಕಬ್ಬನ್ ಪಾರ್ಕ್ ನೋ-ಕಿಸ್ ಬೋರ್ಡ್ ಮುಂದೆ ಲಿಪ್‌ಲಾಕ್! | Influencer Khyati Shree Kisses Husband Bengaluru Cubbon Park No Kissing Board Viral Video Sat



ಈ ಖ್ಯಾತಿಗೆ 1.4 M ಫಾಲೋವರ್ಸ್ ಇದ್ರೂ ಕಾಮನ್ ಸೆನ್ಸ್ ಇಲ್ಲ; ಕಬ್ಬನ್ ಪಾರ್ಕ್ ನೋ-ಕಿಸ್ ಬೋರ್ಡ್ ಮುಂದೆ ಲಿಪ್‌ಲಾಕ್! | Influencer Khyati Shree Kisses Husband Bengaluru Cubbon Park No Kissing Board Viral Video Sat

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ‘ಅಸಭ್ಯ ವರ್ತನೆ ನಿಷಿದ್ಧ’ ಎಂಬ ಫಲಕದ ಮುಂದೆಯೇ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ಪತಿಗೆ ಮುತ್ತಿಟ್ಟು ವಿವಾದ ಸೃಷ್ಟಿಸಿದ್ದಾರೆ. ಪ್ರೀತಿಯನ್ನು ವ್ಯಕ್ತಪಡಿಸುವುದು ಅಸಭ್ಯವಲ್ಲ ಎಂದು ವಾದಿಸಿ ಅವರು ಚಿತ್ರೀಕರಿಸಿದ ವಿಡಿಯೋ ವೈರಲ್ ಆಗಿದೆ.

ಬೆಂಗಳೂರು (ಫೆ.16): ಸಿಲಿಕಾನ್ ಸಿಟಿಯ ಶ್ವಾಸಕೋಶ ಎಂದೇ ಕರೆಯಲ್ಪಡುವ ಕಬ್ಬನ್ ಪಾರ್ಕ್ ಯಾವಾಗಲೂ ತನ್ನ ಹಸಿರು ಸಿರಿಯಿಂದ ಮಾತ್ರವಲ್ಲದೆ, ಅಲ್ಲಿನ ಕಟ್ಟುನಿಟ್ಟಾದ ನಿಯಮಗಳಿಂದಲೂ ಸುದ್ದಿಯಲ್ಲಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಉದ್ಯಾನವನದ ಒಳಗೆ ಪ್ರೇಮಿಗಳ ಸಾರ್ವಜನಿಕ ಪ್ರೇಮ ಪ್ರದರ್ಶನಕ್ಕೆ (PDA) ಬ್ರೇಕ್ ಹಾಕಲು ಆಡಳಿತ ಮಂಡಳಿ ಹಲವು ಕಡೆಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿದೆ. ಆದರೆ, ಈ ಬಾರಿಯ ವ್ಯಾಲೆಂಟೈನ್ಸ್ ಡೇ ದಿನದಂದು ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರು ಈ ನಿಯಮವನ್ನೇ ಪ್ರಶ್ನಿಸಿ, ಫಲಕದ ಮುಂದೆಯೇ ಪತಿಗೆ ಮುತ್ತಿಡುವ ಮೂಲಕ ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ.

ಘಟನೆಯ ವಿವರ:

ಖ್ಯಾತ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಖ್ಯಾತಿ ಶ್ರೀ ಅವರು ತಮ್ಮ ಪತಿ ಶಹಬಾಜ್ ಅನ್ಸಾರ್ ಅವರೊಂದಿಗೆ ಕಬ್ಬನ್ ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಉದ್ಯಾನವನದ ಹಾದಿಯಲ್ಲಿ ಸಾಗುತ್ತಿದ್ದಾಗ ಅವರಿಗೆ ‘ಅಸಭ್ಯ ವರ್ತನೆ ನಿಷೇಧಿಸಲಾಗಿದೆ, ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು’ ಎಂಬ ಎಚ್ಚರಿಕೆ ಫಲಕವೊಂದು ಕಾಣಿಸಿತು. ಆ ಫಲಕದ ಮೇಲೆ ಪ್ರೇಮಿಗಳು ಬೆಂಚ್ ಮೇಲೆ ಕುಳಿತು ಮುತ್ತಿಡುವುದನ್ನು ತೋರಿಸುವ ಚಿತ್ರಕ್ಕೆ ಕ್ರಾಸ್ (Cross) ಮಾರ್ಕ್ ಹಾಕಲಾಗಿತ್ತು. ಅಂದರೆ, ಅಲ್ಲಿ ಮುತ್ತಿಡುವುದು ನಿಷಿದ್ಧ ಎಂಬುದು ಅದರ ಅರ್ಥವಾಗಿತ್ತು.

ಆದರೆ, ಈ ಫಲಕವನ್ನು ಕಂಡು ಸುಮ್ಮನಾಗದ ಖ್ಯಾತಿ ಶ್ರೀ, ಕ್ಯಾಮರಾ ಮುಂದೆ ನಿಂತು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ‘ನಾನು ನಿಮಗೆ ಕಬ್ಬನ್ ಪಾರ್ಕ್‌ನಲ್ಲಿರುವ ಒಂದು ಬೋರ್ಡ್ ತೋರಿಸುತ್ತೇನೆ. ಇಲ್ಲಿ ಅಸಭ್ಯ ವರ್ತನೆಗೆ ದಂಡ ವಿಧಿಸಲಾಗುವುದು ಎಂದು ಬರೆಯಲಾಗಿದೆ. ಇಲ್ಲಿ ತೋರಿಸಲಾಗಿರುವ ಚಿತ್ರವೇ ತಪ್ಪು. ಒಬ್ಬ ವ್ಯಕ್ತಿ ತನ್ನ ಪತ್ನಿ ಅಥವಾ ಪ್ರೇಯಸಿಯನ್ನು ಪ್ರೀತಿಸುವುದು ಅಥವಾ ಮುತ್ತಿಡುವುದು ಅಸಭ್ಯ ವರ್ತನೆಯಲ್ಲ. ಬದಲಿಗೆ ಬೇರೆಯವರನ್ನು ಚುಡಾಯಿಸುವುದು (Teasing), ಗಲಾಟೆ ಮಾಡುವುದು ಅಥವಾ ರೇಗಿಸುವುದು ನಿಜವಾದ ಅಸಭ್ಯ ವರ್ತನೆ. ಇದನ್ನು ನಾವು ಪ್ರಶ್ನಿಸಬೇಕು’ ಎಂದು ಅವರು ವಾದಿಸಿದ್ದಾರೆ.

ಮಾತಿನ ಬೆನ್ನಲ್ಲೇ, ‘ಮುತ್ತು ನಿಷೇಧ’ ಎಂಬ ಫಲಕದ ಹಿನ್ನೆಲೆಯಲ್ಲೇ ಖ್ಯಾತಿ ಶ್ರೀ ಮತ್ತು ಆಕೆಯ ಪತಿ ಶಹಬಾಜ್ ಪರಸ್ಪರ ಮುತ್ತಿಟ್ಟು ಆ ಕ್ಷಣವನ್ನು ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ಈಗ ಇನ್‌ಸ್ಟಾಗ್ರಾಂ ಮತ್ತು ಎಕ್ಸ್ (ಟ್ವಿಟರ್) ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ನೆಟ್ಟಿಗರ ಪರ-ವಿರೋಧ ಚರ್ಚೆ:

ಈ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಒಂದು ವರ್ಗದ ಜನರು ಇನ್‌ಫ್ಲುಯೆನ್ಸರ್ ನಡೆಯನ್ನು ಬೆಂಬಲಿಸಿದ್ದಾರೆ. ‘ಪ್ರೀತಿ ಮಾಡುವುದು ಅಪರಾಧವಲ್ಲ, ಕಿರುಕುಳ ನೀಡುವುದು ಅಸಭ್ಯ ವರ್ತನೆ ಎಂಬ ಅವರ ಮಾತು ನೂರಕ್ಕೆ ನೂರರಷ್ಟು ಸತ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಮತ್ತೊಂದು ವರ್ಗದ ಜನರು ಈ ಜೋಡಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ‘ಭಾರತದಲ್ಲಿ ನಾಗರಿಕ ಪ್ರಜ್ಞೆ (Civic sense) ಬಹಳ ಮುಖ್ಯ. ಉದ್ಯಾನವನಗಳು ಕುಟುಂಬ ಸಮೇತ ಜನರು ಬಂದು ಸಮಯ ಕಳೆಯುವ ಸ್ಥಳಗಳೇ ಹೊರತು ಪ್ರೇಮ ಸಲ್ಲಾಪ ನಡೆಸುವ ತಾಣಗಳಲ್ಲ. ಮುತ್ತಿಡುವುದು ಅಕ್ರಮವಲ್ಲದಿರಬಹುದು, ಆದರೆ ಸಾರ್ವಜನಿಕ ಸ್ಥಳದ ಘನತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಇಂತಹ ಕೆಲಸಗಳನ್ನು ಮನೆಯ ನಾಲ್ಕು ಗೋಡೆಗಳ ಮಧ್ಯೆ ಮಾಡುವುದು ಸೂಕ್ತ’ ಎಂದು ನೆಟ್ಟಿಗರು ಛೀಮಾರಿ ಹಾಕಿದ್ದಾರೆ.

ಒಟ್ಟಾರೆಯಾಗಿ, ಕಬ್ಬನ್ ಪಾರ್ಕ್‌ನ ಈ ‘ಕಿಸ್ಸಿಂಗ್’ ವಿವಾದವು ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಮರ್ಯಾದೆಯ ನಡುವಿನ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.



Source link

Leave a Reply

Your email address will not be published. Required fields are marked *