
ಚುನಾವಣೆಗೂ ಮುನ್ನ ಬಿಜೆಪಿ ಪಹಲ್ಗಾಂ ಮಾದರಿಯ ದಾಳಿ ನಡೆಸಲು ಯೋಜಿಸುತ್ತಿದೆಯೇ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಸಚಿವರ ಕೋಲ್ಕತಾ ದಾಳಿ ಬೆದರಿಕೆಗೆ ಪ್ರಧಾನಿ ಮೋದಿ ಮೌನವಾಗಿರುವುದನ್ನು ಅವರು ಪ್ರಶ್ನಿಸಿದ್ದಾರೆ.
ನವದೆಹಲಿ: ‘ಚುನಾವಣೆಗೂ ಮುನ್ನ ಪಹಲ್ಗಾಂ ಮಾದರಿಯ ದಾಳಿ ನಡೆಸಲು ಬಿಜೆಪಿ ಯೋಜನೆ ರೂಪಿಸಿದೆಯೇ?’ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ಫೋಟಕ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ, ದೀದಿ ನೇತೃತ್ವದ ರಾಜ್ಯಸರ್ಕಾರವನ್ನು ಹಿಂದೂ ವಿರೋಧಿ ಎಂದು ಕರೆದಿದ್ದು, ‘ಅಲ್ಪಸಂಖ್ಯಾತರ ಮತ ಸೆಳೆಯಲು ಇಂತಹ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದೆ.
ಖ್ವಾಜಾರ ಹೇಳಿಕೆಗೆ ಪ್ರತಿಕ್ರಿಯೆಯನ್ನೇಕೆ ನೀಡಲಿಲ್ಲ?
ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಕೋಲ್ಕತಾದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದನ್ನು ಉಲ್ಲೇಖಿಸಿದ ಮಮತಾ, ‘ಕೂಚ್ಬೆಹಾರ್ನಲ್ಲಿ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಖ್ವಾಜಾರ ಹೇಳಿಕೆಗೆ ಪ್ರತಿಕ್ರಿಯೆಯನ್ನೇಕೆ ನೀಡಲಿಲ್ಲ? ಇನ್ನೊಂದು ಪಹಲ್ಗಾಂ ದಾಳಿ ನಡೆಸುವ ಯೋಜನೆಯಿದೆಯೇ? ಯಾರಾದರೂ ಕೋಲ್ಕತಾದ ಮೇಲೆ ದಾಳಿ ಮಾಡುವ ಬಗ್ಗೆ ಮಾತನಾಡಿದರೆ ಭಾರತೀಯರಾದ ನಾವದನ್ನು ಸಹಿಸೆವು. ಹಾಗಿರುವಾಗ ನೀವು ಸುಮ್ಮನೆ ಇರಲು ಹೇಗೆ ಸಾಧ್ಯ’ ಎಂದು ಕೇಳಿದ್ದಾರೆ. ಜತೆಗೆ ಮೋದಿ ರಾಜೀನಾಮೆಗೂ ಆಗ್ರಹಿಸಿದ್ದಾರೆ.
ದೀದಿ ಹಿಂದೂ ವಿರೋಧಿ ಎಂದ ಬಿಜೆಪಿ
ಮಮತಾರ ಹೇಳಿಕೆಗೆ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಪ್ರತಿಕ್ರಿಯಿಸಿದ್ದು, ‘ಮತಬ್ಯಾಂಕ್ಗಾಗಿ ದೀದಿ, ಹಿಂದೂಗಳನ್ನು ಬಲಿ ಪಡೆದ ಕ್ರೂರ ಪಹಲ್ಗಾಂ ಉಗ್ರದಾಳಿಯನ್ನು ಯೋಜಿತ ಎಂದು ಕರೆಯುತ್ತಿದ್ದಾರೆ. ಅವರು ಹಿಂದೂ ವಿರೋಧಿ’ ಎಂದು ತಿವಿದಿದ್ದಾರೆ.
ಇದನ್ನೂ ಓದಿ: ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಜಡ್ಜ್ಗಳೂ ಸುರಕ್ಷಿತ ಅಲ್ಲ: ಪ್ರಧಾನಿ ಮೋದಿ ವಾಗ್ದಾಳಿ
‘ಪಹಲ್ಗಾಂ ದಾಳಿಗೆ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಭಾರತ ಮತ್ತೆ ಉಗ್ರದಾಳಿಯ ನೆಪ ಹೇಳಿ ನಮ್ಮ ಮೇಲೆ ನಕಲಿ ಕಾರ್ಯಾಚರಣೆ ಕೈಗೊಳ್ಳಬಹುದು. ಹಾಗೇನಾದರೂ ಮಾಡಿದರೆ ನಾವು ಕೋಲ್ಕತಾವನ್ನು ಗುರಿಯಾಗಿಸಿ ಆಕ್ರಮಣ ಮಾಡುತ್ತೇವೆ’ ಎಂದು ಖ್ವಾಜಾ ನಾಲಗೆ ಹರಿಬಿಟ್ಟಿದ್ದರು.
ಇದನ್ನೂ ಓದಿ: ಬಿಜೆಪಿ ಬಂದರೆ ಮೀನು ಮಾಂಸ ತಿನ್ನಲು ಬಿಡಲ್ಲ, ವಿವಾದ ಸೃಷ್ಟಿಸಿದ ಸಿಎಂ ಮಮತಾ ಹೇಳಿಕೆ
Scroll to load tweet…