Headlines

ಪೂಜೆ ಮಾಡಿ ಹೊಸ್ತಿಲು ಮೇಲೆ ಇಟ್ಟಿದ್ದ ಹೂ 6 ತಿಂಗಳ ಕಂದಮ್ಮನ ಉಸಿರಾಟ ನಿಲ್ಲಿಸ್ತು! ತಾಯಂದಿರೇ ಈ ತಪ್ಪು ಮಾಡ್ಬೇಡಿ! | Mysuru 6 Month Old Baby Chokes To Death After Swallowing Hibiscus Flower In Hunsur Rav

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ, ಆಟವಾಡುತ್ತಿದ್ದ ಆರುವರೆ ತಿಂಗಳ ಮಗು ಮನೆಯ ಹೊಸಿಲಿಗೆ ಇಟ್ಟಿದ್ದ ಒಣ ದಾಸವಾಳ ಹೂವನ್ನು ನುಂಗಿ ಉಸಿರುಗಟ್ಟಿ ಮೃತಪಟ್ಟಿದೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

ಹುಣಸೂರು (ಮಾ.31): ಒಣಗಿದ್ದ ದಾಸವಾಳ ಹೂವಿನ ತುಂಡನ್ನು ನುಂಗಿದ್ದ ಆರುವರೆ ತಿಂಗಳ ಮಗು ಉಸಿರುಗಟ್ಟಿ ಮೃತಪಟ್ಟಿದ ದಾರುಣ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ. 

ಹೊಸಲಿಗೆ ಪೂಜೆಗೆ ಇಟ್ಟಿದ್ದ ಹೂ ಮಗುವಿನ ಉಸಿರಾಟ ನಿಲ್ಲಿಸಿತು!

ದೊಡ್ಡಹೆಜ್ಜೂರಿನ ಸುದರ್ಶನ್ ಮತ್ತು ನವ್ಯಾ ದಂಪತಿಯ ಎರಡನೇ ಪುತ್ರ, ಆರೂವರೆ ತಿಂಗಳ ಚಿನ್ಮಯ್ ಗೌಡ ಮೃತಪಟ್ಟ ದುರ್ದೈವಿ. ಶನಿವಾರ ತನ್ನ ಅಣ್ಣನೊಂದಿಗೆ ಆಟವಾಡುತ್ತಿದ್ದ ಚಿನ್ಮಯ್ ಗೌಡ, ಮನೆಯ ಹೊಸಿಲಿಗೆ ಪೂಜೆಗೆ ಇಟ್ಟಿದ್ದ ದಾಸವಾಳದ ಹೂ ಒಣಗಿತ್ತು. ಆ ಹೂವಿನ ತುಂಡನ್ನು ಬಾಯಿಗೆ ಹಾಕಿಕೊಂಡಿದೆ. 

ಚಿಕಿತ್ಸೆ ಫಲಿಸದೇ ಮಗು ಸಾವು

ಈ ವೇಳೆ ಅಣ್ಣ ಕಿತ್ತುಕೊಂಡರೂ ಮಗು ಒಣಗಿದ ಹೂವನ್ನು ನುಂಗಿದ್ದರಿಂದ ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡಿತ್ತು. ತಕ್ಷಣವೇ ಪೋಷಕರು ಹನಗೋಡು ಆಸ್ಪತ್ರೆಯಲ್ಲಿ ಮಗುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮಗು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಪೋಷಕರ, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

Source link

Leave a Reply

Your email address will not be published. Required fields are marked *