Headlines

ಬಿಗ್‌ಬಾಸ್‌ ಲವ್‌ಬರ್ಡ್ಸ್‌ ಸೂರಜ್‌-ರಾಶಿಕಾ ಬ್ರೇಕಪ್‌? ಉಂಗುರ ತೊಡಿಸಿದ ಬೆನ್ನಲ್ಲೇ ಶುರುವಾಯ್ತು ಅನುಮಾನ! | Suraj Singh Rashika Shetty Breakup Rumors Big Boss Kannada Social Media Posts San

ಬಿಗ್‌ಬಾಸ್‌ ಲವ್‌ಬರ್ಡ್ಸ್‌ ಸೂರಜ್‌-ರಾಶಿಕಾ ಬ್ರೇಕಪ್‌? ಉಂಗುರ ತೊಡಿಸಿದ ಬೆನ್ನಲ್ಲೇ ಶುರುವಾಯ್ತು ಅನುಮಾನ! | Suraj Singh Rashika Shetty Breakup Rumors Big Boss Kannada Social Media Posts San


ಬಿಗ್‌ಬಾಸ್-12ರ ಜೋಡಿ ಸೂರಜ್ ಸಿಂಗ್ ಮತ್ತು ರಾಶಿಕಾ ಶೆಟ್ಟಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇಬ್ಬರೂ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಿಗೂಢ ಸ್ಟೋರಿಗಳು ಈ ವದಂತಿಗೆ ಕಾರಣವಾಗಿದ್ದು, ಇವರ ಪ್ರೀತಿಯಲ್ಲಿ ಬಿರುಕು ಮೂಡಿದೆಯೇ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

ಬೆಂಗಳೂರು (ಮಾ.17): ಬಿಗ್‌ಬಾಸ್-12 ಕನ್ನಡ ಸೀಸನ್‌ನ ಲವ್‌ಬರ್ಡ್ಸ್‌ ಆಗಿಯೇ ಗುರುತಿಸಿಕೊಂಡಿದ್ದ ಮಾಡೆಲ್‌ ಸೂರಜ್‌ ಸಿಂಗ್‌ ಹಾಗೂ ನಟಿ ರಾಶಿಕಾ ಶೆಟ್ಟಿ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವ ಗಾಸಿಪ್‌ ಸ್ಯಾಂಡಲ್‌ವುಡ್‌ ಹಾಗೂ ಸ್ಮಾಲ್‌ಸ್ಕ್ರೀನ್‌ ವಲಯದಲ್ಲಿ ವೈರಲ್‌ ಆಗಿದೆ. ಅದಕ್ಕೆ ಕಾರಣ ಇತ್ತೀಚೆಗೆ ಅವರು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಸ್ಟೋರಿಗಳು. ಇಬ್ಬರ ನಡುವಿನ ಪ್ರೀತಿಯಲ್ಲಿ ಅಡ್ಡಬಂದವರು ಯಾರು ಅನ್ನೋ ಪ್ರಶ್ನೆಯೇ ಈಗ ಅವರ ಅಭಿಮಾನಿಗಳಲ್ಲಿ ಕಾಡಿದೆ.

ಬಿಗ್‌ಬಾಸ್‌ನಲ್ಲಿ ಸೂರಜ್‌ ಸಿಂಗ್‌ ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದ ದಿನದಂದಲೂ ಅವರು ಮನೆಯಿಂದ ಹೊರಹೋಗುವವರೆಗೂ ರಾಶಿಕಾ ಶೆಟ್ಟಿ ಅವರೊಂದಿಗೆ ಅತ್ಯಾಪ್ತರಾಗಿದ್ದರು. ರಾಶಿಕಾ ಶೆಟ್ಟಿ ಕ್ಯಾಪ್ಟನ್‌ ಆಗಿದ್ದ ವಾರದಲ್ಲಿ ಇಬ್ಬರ ನಡುವೆ ಸಣ್ಣ ಜಟಾಪಟಿ ಆಗಿತ್ತು ಬಿಟ್ಟರೆ, ಇಡೀ ಸೀಸನ್‌ನಲ್ಲಿ ತಾವಾಯ್ತು ತಮ್ಮ ಕೆಲಸವಾಯ್ತು ಅಂದಿದ್ದವರು. ಬಿಗ್‌ಬಾಸ್‌ ಮುಗಿದ ಬಳಿಕವೂ ಹಾಗೆಯೇ ಕಾಣಿಸಿಕೊಂಡಿದ್ದರು. ಬಿಗ್‌ಬಾಸ್‌ನಿಂದ ಹೊರಬಂದ ಮೇಲೆ ಸೂರಜ್‌ ಸಿಂಗ್‌ಗೆ ಕಲರ್ಸ್‌ ಕನ್ನಡದಲ್ಲಿಯೇ ಪವಿತ್ರ ಬಂಧನ ಸೀರಿಯಲ್‌ನಲ್ಲಿ ಹೀರೋ ಆಗಿ ನಟಿಸುವ ಅವಕಾಶ ಸಿಕ್ಕರೆ, ರಾಶಿಕಾ ಶೆಟ್ಟಿ ತಮ್ಮ ಹೊಸ ಸಿನಿಮಾದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅದರೊಂದಿಗೆ ಹೊಸ ಪ್ರಾಜೆಕ್ಟ್‌ನ ಬಗ್ಗೆಯೂ ಗಮನ ನೀಡಿದ್ದಾರೆ.

ಇತ್ತೀಚೆಗೆ ಚಿನ್ನದಂಗಡಿಯ ಕಾರ್ಯಕ್ರಮಕ್ಕೂ ಸೂರಜ್‌ ಹಾಗೂ ರಾಶಿಕಾ ಜೋಡಿಯಾಗಿ ತೆರಳಿದ್ದರು. ರಾಶಿಕಾ ತಿಳಿ ಹಸಿರು ಬಣ್ಣದ ಸೀರೆಯುಟ್ಟು ಬಂದಿದ್ದರೆ, ಸೂರಜ್‌ ಸಿಂಗ್‌ ಎಂದಿನ ಫಾರ್ಮಲ್ಸ್‌ನಲ್ಲಿ ಬಂದಿದ್ದರು. ಈ ವೇಳೆ ರಾಶಿಕಾ ಅವರ ಬೆರಳಿಗೆ ಸೂರಜ್‌ ಸಿಂಗ್‌ ಉಂಗುರ ಹಾಕಿದ ವಿಡಿಯೋ ಸಖತ್‌ ವೈರಲ್‌ ಆಗಿತ್ತು.

ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿನ ಕುತೂಹಲ

ಇಬ್ಬರ ನಡುವೆ ಇಷ್ಟೆಲ್ಲಾ ಆತ್ಮೀಯತೆ ಇರುವಾಗ ಒಂದು ದಿನದ ಹಿಂದೆ ಸೂರಜ್‌ ತಮ್ಮ ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ ಒಂದು ವಿಚಾರ ಬರೆದುಕೊಂಡಿದ್ದಾರೆ. ‘ನನ್ನ ಜೀವನವನ್ನು ಬದಲಾಯಿಸಿದ ಎರಡು ಮಾತುಗಳು: ಯಾರಿಗೂ ಚಿಂತೆಯಿಲ್ಲ. ಯಾರೂ ನಿಮ್ಮನ್ನು ನೋಡುತ್ತಿಲ್ಲ. ನೀವು ನಿಯಂತ್ರಣದಲ್ಲಿ ನೀವಿದ್ದೀರಿ. ಆದ್ದರಿಂದ ಕೆಲಸ ಮಾಡಿ’ ಎಂದು ಅವರು ಬರೆದುಕೊಂಡಿದ್ದಾರೆ. ಅವರು ಹೇಳಿರುವ ಈ ಮಾತುಗಳು ಯಾರಿಗೆ ಅಂತಾ ಗೊತ್ತಾಗೋಕು ಮುಂಚೆಯೇ, ರಾಶಿಕಾ ಶೆಟ್ಟಿ ಅವರ ಇನ್ಸ್‌ಟಾಗ್ರಾಮ್‌ ಸ್ಟೋರಿಯಲ್ಲಿ ಒಂದು ಸಾಲು ಕಾಣಿಸಿಕೊಂಡಿತ್ತು. ‘ಪ್ರತಿ ವ್ಯಕ್ತಿಯಲ್ಲೂ ತಪ್ಪುಗಳೂ ಇರುತ್ತವೆ, ಒಳ್ಳೆಯದೂ ಇರುತ್ತದೆ. ನಾವು ಯಾವುದನು ನೋಡುತ್ತೇವೆ ಅನ್ನೋದ್ ಮುಖ್ಯ.’ ಎಂದು ಬರೆದುಕೊಂಡಿದ್ದರು.

ಈ ಮಾತಿನ ಏಟುಗಳು ಇಬ್ಬರೂ ಪರಸ್ಪರವಾಗಿ ನೀಡಿದ್ದಾರೋ ಅಥವಾ ಆಕಸ್ಮಿಕವೋ ಅನ್ನೋದು ಗೊತ್ತಿಲ್ಲ. ಅದರೆ, ಇದನ್ನು ನೋಡಿದ ಅವರ ಅಭಿಮಾನಿಗಳು ಮಾತ್ರ ಇಬ್ಬರ ನಡುವೆ ಏನೋ ಸರಿ ಇಲ್ಲ. ಸಮಸ್ಯೆ ಇರುವ ಹಾಗೆ ಕಾಣುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಇವರ ನಡುವಿನ ಈ ಭಿನ್ನಾಭಿಪ್ರಾಯಕ್ಕೆ ಕಾರಣವೇನು ಅನ್ನೋದರ ಬಗ್ಗೆಯೂ ಚರ್ಚೆ ಶುರುವಾಗಿದೆ.



Source link

Leave a Reply

Your email address will not be published. Required fields are marked *