Pawan Hans helicopter crash : ಜಾರ್ಖಂಡ್ ದುರಂತದ ಬಳಿಕ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಹೆಲಿಕಾಪ್ಟರ್ ಪತನ | After Jharkhand Tragedy Another Helicopter Crashes In Andaman Sea

Pawan Hans helicopter crash : ಜಾರ್ಖಂಡ್ ದುರಂತದ ಬಳಿಕ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಹೆಲಿಕಾಪ್ಟರ್ ಪತನ | After Jharkhand Tragedy Another Helicopter Crashes In Andaman Sea



Pawan Hans helicopter crash : ಜಾರ್ಖಂಡ್ ದುರಂತದ ಬಳಿಕ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಹೆಲಿಕಾಪ್ಟರ್ ಪತನ | After Jharkhand Tragedy Another Helicopter Crashes In Andaman Sea

ದೇಶದಲ್ಲಿ ಸರಣಿ ವಾಯುಯಾನ ದುರಂತಗಳು ಮುಂದುವರೆದಿದ್ದು, ಅಂಡಮಾನ್ ಸಮುದ್ರದಲ್ಲಿ ಪವನ್ ಹನ್ಸ್ ಹೆಲಿಕಾಪ್ಟರ್ ಪತನಗೊಂಡಿದೆ. ತಾಂತ್ರಿಕ ದೋಷದಿಂದಾಗಿ ಸಮುದ್ರದಲ್ಲಿ ಕ್ರಾಶ್-ಲ್ಯಾಂಡಿಂಗ್ ಆದ ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ಪೈಲಟ್‌ಗಳು ಸೇರಿದಂತೆ ಎಲ್ಲಾ ಏಳು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 

ಅಂಡಮಾನ್ ಸಮುದ್ರದಲ್ಲಿ ಹೆಲಿಕಾಪ್ಟರ್ ಪತನ:

ನವದೆಹಲಿ: ದೇಶದಲ್ಲಿ ಒಂದಾದ ಮೇಲೊಂದರಂತೆ ಸರಣಿ ವಾಯುಯಾನ ದುರಂತಗಳು ನಡೆಯುತ್ತಲೇ ಇವೆ. ನಿನ್ನೆ ಸಂಜೆಯಷ್ಟೇ ಜಾರ್ಖಂಡ್‌ನ ರಾಂಚಿ ವಿಮಾನ ನಿಲ್ದಾಣದಿಂದ ಹೊರಟಿದ್ದ ಏರ್ ಆಂಬುಲೆನ್ಸ್‌ ಒಂದು ಟೇಕಾಫ್ ಆದ ಕೆಲ ಸಮಯದಲ್ಲೇ ಅಪಘಾತಕ್ಕೀಡಾಗಿ ಪತನಗೊಂಡು ಓರ್ವ ವೈದ್ಯ, ರೋಗಿ ಸೇರಿದಂತೆ 7 ಜನರು ಸಾವನ್ನಪ್ಪಿದ್ದರು. ಇದಾದ ನಂತರ ಇಂದು ಮುಂಜಾನೆಯಷ್ಟೇ 150 ಜನರನ್ನು ಸಾಗಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನವೊಂದು ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಎಂಜಿನ್ ವೈಫಲ್ಯವಾಗಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಟೇಕಾಫ್ ಆದ ಗಂಟೆಯೊಳಗೆ ದೆಹಲಿಗೆ ಮರಳಿ ತುರ್ತು ಲ್ಯಾಂಡಿಂಗ್ ಆಗಿತ್ತು. ಈ ವಿಮಾನವೂ ಲೇಹ್‌ಗೆ ಹೊರಟಿತ್ತು. ತಾಂತ್ರಿಕ ದೋಷ ಪತ್ತೆಯಾದ ಸ್ವಲ್ಪ ಸಮಯದ ನಂತರ ಪೈಲಟ್ ಮೇಡೇ ಕರೆ ಮಾಡಿದರು ಎಂದು ವರದಿಯಾಗಿದೆ.

ಇವರೆಡು ಘಟನೆಯ ಬಳಿಕ ಇನ್ನೊಂದು ವಿಮಾನ ಅವಘಡದ ಘಟನೆ ನಡೆದಿದೆ. ಪವನ್ ಹನ್ಸ್ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್‌ವೊಂದು ಅಂಡಮಾನ್ ಸಮುದ್ರದಲ್ಲಿ ಪತನಗೊಂಡಿದೆ. ಇಬ್ಬರು ಪೈಲಟ್ ಸೇರಿ ಒಟ್ಟು 7 ಜನರು ಈ ಹೆಲಿಕಾಪ್ಟರ್‌ನಲ್ಲಿದ್ದರು. ಈ ಪವನ್ ಹನ್ಸ್ ಹೆಲಿಕಾಪ್ಟರ್ ಮಂಗಳವಾರ ಬೆಳಗ್ಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಯಾಬಂದ‌ರ್ ಬಳಿ ಸಮುದ್ರದಲ್ಲಿ ಪತನಗೊಂಡಿದೆ.

ಶ್ರೀ ವಿಜಯಪುರಂನಿಂದ ಬೆಳಿಗ್ಗೆ 8.45 ರ ಸುಮಾರಿಗೆ ಹೊರಟಿದ್ದ ಹೆಲಿಕಾಪ್ಟರ್, ಸುಮಾರು 9.30 ರ ಸುಮಾರಿಗೆ ಮಾಯಾಬಂದರ್ ಬಳಿ ಸಮುದ್ರದಲ್ಲಿ ಪತನಗೊಂಡಿದೆ. ಪ್ರಾಥಮಿಕ ತನಿಖೆಯಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡುಬಂದಿದ್ದು, ಪೈಲಟ್ ಸಮುದ್ರದಲ್ಲಿ ಕ್ರಾಶ್-ಲ್ಯಾಂಡಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ ಎಂದು ಹಿರಿಯ ನಾಗರಿಕ ವಿಮಾನಯಾನ ಅಧಿಕಾರಿಯೊಬ್ಬರು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಈ ವಿಮಾನದಲ್ಲಿ ಮೂವರು ಪುರುಷರು, ಒಬ್ಬ ಮಹಿಳೆ ಮತ್ತು ಒಂದು ಮಗು ಮತ್ತು ಇಬ್ಬರು ಪೈಲಟ್‌ಗಳು ಇದ್ದರು. ಅವರನ್ನು ಸಮುದ್ರದಿಂದ ರಕ್ಷಿಸಲಾಗಿದೆ. ರಕ್ಷಿಸಲ್ಪಟ್ಟ ಪ್ರಯಾಣಿಕರನ್ನು ರಜಿತಾ ದೇವಿ ಮತ್ತು ಅವರ ಮಗು ಕಮಲ್ ಚಿ. ದಾಸ್. ಸಿಪ್ರಾ ಸಹಾ ಮತ್ತು ನಂಬಿ ಅಮ್ಮ ಅವರನ್ನು ಮಾಯಾಬಂದರ್‌ನ ಡಾ. ಆರ್‌ಪಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೈಲಟ್‌ಗಳು ಸಹ ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಗಂಡಾಗಿ ಹುಟ್ಟಿ ಅಪ್ಸರೆಯಾಗಿ ಬದಲಾದ: ಮೊದಲು ಹಾಗೂ ನಂತರದ ಫೊಟೋಗೆ ಶಾಕ್ ಆದ ನೆಟ್ಟಿಗರು

ಇಂದು ಬೆಳಿಗ್ಗೆ 9:30 ರ ಸುಮಾರಿಗೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಯಾಬಂದರ್ ಬಳಿ ಪವನ್ ಹನ್ಸ್ ಹೆಲಿಕಾಪ್ಟ‌ರ್ ಪತನಗೊಂಡಿದೆ. ಈ ಹೆಲಿಕಾಪ್ಟರ್ ಪೋರ್ಟ್ ಬ್ಲೇರ್‌ನಿಂದ ಇಬ್ಬರು ಸಿಬ್ಬಂದಿ ಮತ್ತು ಐದು ಪ್ರಯಾಣಿಕರೊಂದಿಗೆ ಹೊರಟಿತ್ತು. ಎಲ್ಲರನ್ನೂ ರಕ್ಷಿಸಲಾಗಿದೆ ಮತ್ತು ಅವರು ಸುರಕ್ಷಿತವಾಗಿದ್ದಾರೆ. ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಪವನ್ ಹನ್ಸ್ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಜಾರ್ಖಂಡ್ ಏರ್ ಆಂಬುಲೆನ್ಸ್ ದುರಂತ: ಡಾಕ್ಟರ್ ಆಗಿದ್ದ ಒಬ್ಬನೇ ಒಬ್ಬ ಮಗನನ್ನೂ ಕಳೆದುಕೊಂಡು ಗೋಳಾಡಿದ ಅಪ್ಪ

ಎಲ್ಲಾ ಅಗತ್ಯ ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸಲಾಗಿದೆ ಮತ್ತು ಅಧಿಕಾರಿಗಳು ಸಿಬ್ಬಂದಿ ಮತ್ತು ಪ್ರಯಾಣಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಪರಿಸ್ಥಿತಿಯನ್ನು ನಿರ್ಣಯಿಸುತ್ತಿದ್ದಾರೆ ಮತ್ತು ಘಟನೆಯ ಕಾರಣ ಮತ್ತು ಸಂದರ್ಭಗಳ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.



Source link

Leave a Reply

Your email address will not be published. Required fields are marked *