Headlines

high demand blue collar jobs: 45 ನಿಮಿಷದ ಕೆಲಸಕ್ಕೆ 900 ರೂಪಾಯಿ ಚಾರ್ಜ್ ಮಾಡಿದ ಕಾರ್‌ಪೆಂಟರ್‌ | No Ai Threat These Jobs Better Than Software Jobs Hourly Work Pays In Thousands

high demand blue collar jobs: 45 ನಿಮಿಷದ ಕೆಲಸಕ್ಕೆ 900 ರೂಪಾಯಿ ಚಾರ್ಜ್ ಮಾಡಿದ ಕಾರ್‌ಪೆಂಟರ್‌ | No Ai Threat These Jobs Better Than Software Jobs Hourly Work Pays In Thousands



high demand blue collar jobs: 45 ನಿಮಿಷದ ಕೆಲಸಕ್ಕೆ 900 ರೂಪಾಯಿ ಚಾರ್ಜ್ ಮಾಡಿದ ಕಾರ್‌ಪೆಂಟರ್‌ | No Ai Threat These Jobs Better Than Software Jobs Hourly Work Pays In Thousands

high demand blue collar jobs: ಕೃತಕ ಬುದ್ಧಿಮತ್ತೆಯಿಂದಾಗಿ (ಎಐ) ಸಾಫ್ಟ್‌ವೇರ್ ಉದ್ಯೋಗಗಳು ಅಪಾಯದಲ್ಲಿರುವಾಗ, ಕಾರ್ಪೆಂಟರ್‌, ಪ್ಲಂಬರ್‌ಗಳಂತಹ ಬ್ಲೂ ಕಾಲರ್ ಉದ್ಯೋಗಗಳಿಗೆ ನಗರಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.ಇವರು ಗಂಟೆಗೆ ಸಾವಿರಾರು ರೂಪಾಯಿ ಸಂಪಾದಿಸುತ್ತಿದ್ದಾರೆ.

ಎಐ ಯುಗದಲ್ಲಿ ಬೆಳಗಿದ ಬ್ಲೂ ಕಾಲರ್ ಬದುಕು

ಕೃತಕ ಬುದ್ಧಿಮತ್ತೆ ಅಥವಾ ಎಐ ತಂತ್ರಜ್ಞಾನದ ವ್ಯಾಪಕ ಬೆಳವಣಿಗೆಯಿಂದಾಗಿ ಇಂದು ಹಲವು ಕಂಪನಿಗಳು ತಮ್ಮ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿವೆ. ಇದರ ಪರಿಣಾಮ ಸಾವಿರಾರು ಜನ ಈಗಾಗಲೇ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಸಾಮೂಹಿಕ ಉದ್ಯೋಗ ಕಡಿತದಿಂದಾಗಿ ವೈಟ್‌ ಕಾಲರ್ ಉದ್ಯೋಗಿಳೆಂದೇ ಕರೆಯಲ್ಪಡುವ ಸಾಫ್ಟ್‌ವೇರ್ ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದರೆ ಇತ್ತ ಎಐ ಟಚ್ ಮಾಡಲು ಕೂಡ ಸಾಧ್ಯವಿಲ್ಲದ ಉದ್ಯೋಗಗಳನ್ನು ಮಾಡುತ್ತಿರುವ ಹೆಚ್ಚೇನು ಓದದ ಉದ್ಯೋಗಿಗಳು ದಿನಕ್ಕೆ ಗಂಟೆಗೆ ಸಾವಿರಾರು ರೂಪಾಯಿಗಳನ್ನು ದುಡಿಯುತ್ತಿದ್ದಾರೆ.

ಸಾಫ್ಟ್‌ವೇರ್ ಉದ್ಯೋಗಿಗಳಿಗಿಂತ ಬಡಗಿ, ಪ್ಲಂಬರ್‌ಗಳೇ ಈಗ ‘ಕಿಂಗ್

ಹೌದು ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರೊಬ್ಬರು ಈ ಬ್ಲೂ ಕಾಲರ್ ಜಾಬ್ ಉದ್ಯೋಗಿಗಳ ಕೆಲಸ ಹಾಗೂ ಸಂಪಾದನೆಯ ಬಗ್ಗೆ ಬರೆದುಕೊಂಡಿದ್ದು, ಸಾಕಷ್ಟು ವೈರಲ್ ಆಗಿದೆ. ಹೌದು ಕಾರ್‌ಪೆಂಟರ್‌ಗಳು(ಮರದ ಕೆಲಸ ಮಾಡುವ ಬಡಗಿ) ಪ್ಲಂಬರ್‌ಗಳು, ವೈರಿಂಗ್ ಮಾಡುವವರಿಗೆ ನಗರ ಪ್ರದೇಶದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ನಗರಗಳಲ್ಲಿ ಅವರನ್ನು ಹುಡುಕುವುದೇ ಒಂದು ದೊಡ್ಡ ಕೆಲಸ ಇದರ ಜೊತೆಗೆ ಅವರಿಗೆ ಕೇವಲ ಕೆಲ ಗಂಟೆಗಳ ಕೆಲಸಕ್ಕೆ ಸಾಕಷ್ಟು ಮೊತ್ತದ ಹಣ ನೀಡಬೇಕಾಗುತ್ತದೆ. ಹಾಗೆಯೇ ಇಲ್ಲಿ ಈ ಉದ್ಯೋಗದ ಬಗ್ಗೆ ಹೇಳಿಕೊಂಡಿದ್ದು ಅವರ ಪೋಸ್ಟ್‌ ಎಕ್ಸ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೈರಲ್ ಪೋಸ್ಟ್ ಬಿಚ್ಚಿಟ್ಟ ಅಚ್ಚರಿಯ ಸತ್ಯ!

@GurugramDeals ಎಂಬುವವರು ಈ ಪೋಸ್ಟ್ ಮಾಡಿದ್ದು, ತಮ್ಮ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ. ಕೆಲವು ಕಪಾಟುಗಳನ್ನು ಅಳವಡಿಸುವ ಮತ್ತು ಒಂದೆರಡು ಪೇಟಿಂಗ್ ಚಿತ್ರಗಳನ್ನು ನೇತುಹಾಕುವ 45 ನಿಮಿಷಗಳ ಕೆಲಸಕ್ಕೆ ಬಡಗಿಗೆ 900 ರೂ. ಪಾವತಿಸಲಾಯಿತು. ಬ್ಲೂ ಕಾಲರ್ ಉದ್ಯೋಗಕ್ಕೆ ಭವಿಷ್ಯವಿದೆ, ಯುವಕರಿಗೆಇತರ ಬಳಕೆಯಲ್ಲಿಲ್ಲದ ಪದವಿಗಳಿಗಿಂತ ಕೌಶಲ್ಯ ಆಧಾರಿತ ತರಬೇತಿಗೆಆದ್ಯತೆ ನೀಡಬೇಕು. ಇವುಗಳಿಗೆ ಎಐನಿಂದ ಯಾವುದೇ ಬೆದರಿಕೆ ಇರುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ. ಜೊತೆಗೆ ಅನೇಕರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.

ಗಂಟೆಯ ಕೆಲಸಕ್ಕೆ ಸಾವಿರಗಳಲ್ಲಿ ಸಂಭಾವನೆ

ನಿಜ ಫಾಲ್ಸ್ ಸೀಲಿಂಗ್ ಎಲೆಕ್ಟ್ರಿಕ್ ವೈರಿಂಗ್‌ಗಾಗಿ ಸುಮಾರು 30000 ರೂಪಾಯಿ ಪಾವತಿಸಬೇಕಾಯಿತು ಮತ್ತು ಅವನು ಮಾಡಿದ ಕೆಲಸವನ್ನು ನೋಡಿ ನಾನು ಮೋಡಿಗೊಂಡೆ, ನನಗೂ ಅದನ್ನು ಮಾಡಬೇಕು ಎನಿಸಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕಳೆದ ತಿಂಗಳು, ಮುಂಬೈನ ವ್ಯಕ್ತಿಯೊಬ್ಬರು ತಮ್ಮ ಸೊಸೈಟಿಯ ಪ್ಲಂಬರ್ ಮೀರಾ ರಸ್ತೆ, ಬೋರಿವಲಿ ಮತ್ತು ಕಂಡಿವಲಿ ಪಟ್ಟಣಗಳಲ್ಲಿ ಕೆಲಸ ಮಾಡುತ್ತಾ ವರ್ಷಕ್ಕೆ 18 ಲಕ್ಷ ರೂ. (LPA) ಗಳಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಆ ಪ್ಲಂಬರ್ ಚೆನ್ನಾಗಿ ಸಂಪಾದಿಸುತ್ತಿದ್ದಿದ್ದಲ್ಲದೆ, ದುಬಾರಿ ಕಾರು ಖರೀದಿಸಿದ್ದರು, ಮನೆ ಕಟ್ಟಿದ್ದರು ಮತ್ತು ಕೃಷಿಭೂಮಿಯನ್ನು ಸಹ ಖರೀದಿಸಿದ್ದರು, ಇವೆಲ್ಲವನ್ನೂ ಅವರ ಸ್ವಂತ ಅನುಕೂಲಕ್ಕೆ ತಕ್ಕಂತೆ ಮಾಡಿದ್ದರು ಎಂದು ಅವರು ಹೇಳಿಕೊಂಡಿದ್ದರು.

ಇದನ್ನೂ ಓದಿ: 21ನೇ ವಯಸ್ಸಿಗೆ ಅಕ್ಷರಾಭ್ಯಾಸ: ಏರ್‌ಪೋರ್ಟ್ ಸ್ಟಾಫ್ ಆಗಿ ಬದುಕು ಬಲಿಸಿಕೊಂಡ ಮನೆಗೆಲಸದ ಹುಡುಗಿ

ಬೆಂಗಳೂರಿನಲ್ಲಿ ಇದು ತುಂಬಾ ಸಾಮಾನ್ಯವಾಗಿದೆ ನೀವು ಯಾವುದೇ ಎಲೆಕ್ಟ್ರಿಷಿಯನ್/ಬಡಗಿ/ಪ್ಲಂಬರ್‌ನ್ನು ಕರೆಯುತ್ತೀರಿ. ಅವರು 1-2 ಗಂಟೆಗಳ ಕೆಲಸಕ್ಕೆ 1000-2000 ಕೇಳುತ್ತಾರೆ. ಅದರ ಮೇಲೆ, ಅವರು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಅಲ್ಲ, ಅವರ ಇಚ್ಛೆಗೆ ಅನುಗುಣವಾಗಿ ಕೆಲಸ ಮಾಡುತ್ತಾರೆ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಜನರು ಬ್ಲೂ-ಕಾಲರ್ ಕೆಲಸ ಹಾಗೂ ಕೆಲಸಗಾರರನ್ನು ಗೌರವಿಸಲು ಪ್ರಾರಂಭಿಸಿದರೆ ಅದು ಉತ್ತಮ ಆಯ್ಕೆಯಾಗುತ್ತದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಭಾರತದ ಈ ಸಮುದಾಯದಲ್ಲಿ ಮದುವೆಗೂ ಮೊದಲೇ ಯುವತಿ ಗರ್ಭಿಣಿ ಆದರಷ್ಟೇ ಮದುವೆ

ನಮಗೆ ಹೋಲಿಸಿದರೆ ವಿಯೆಟ್ನಾಂ ಉತ್ಪಾದನೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಇದೇ ಕಾರಣ. ಅವರು ದೊಡ್ಡ ದೊಡ್ಡ ಡಿಗ್ರಿಯ ಉನ್ನತ ಶಿಕ್ಷಣದ ಬದಲು ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಮತ್ತು ವೃತ್ತಿಪರ ತರಬೇತಿಯತ್ತ ಹೆಚ್ಚಿನ ಗಮನಹರಿಸಿದರು ಎಂದು ಮತ್ತೊಬ್ಬರು ಹೇಳಿದ್ದಾರೆ. ಒಟ್ಟಿನಲ್ಲಿ ಬ್ಲೂ ಕಾಲರ್ ಜಾಬ್‌ಗಳಿಗೆ ಇರುವ ಉದ್ಯೋಗವಕಾಶಗಳು ನಗರಗಳಲ್ಲಿ ಧಾರಾಳವಾಗಿದ್ದಲ್ಲದೇ ಅವರ ಸಂಪಾದನೆಯೂ ಚೆನ್ನಾಗಿರುತ್ತದೆ.

Scroll to load tweet…



Source link

Leave a Reply

Your email address will not be published. Required fields are marked *