Lavanya Tripathi: ಮೆಗಾ ಸೊಸೆ ಲಾವಣ್ಯ ಕೈಬಿಟ್ಟ ವಿಜಯ್ ಸಿನಿಮಾ ಸೂಪರ್ ಹಿಟ್: ರಶ್ಮಿಕಾ ಮಾಡಿದ ಪಾತ್ರ ವೈರಲ್ | Lavanya Tripathi Reveals Why She Rejected Vijay Deverakondas Geetha Govindam Gvd

Lavanya Tripathi: ಮೆಗಾ ಸೊಸೆ ಲಾವಣ್ಯ ಕೈಬಿಟ್ಟ ವಿಜಯ್ ಸಿನಿಮಾ ಸೂಪರ್ ಹಿಟ್: ರಶ್ಮಿಕಾ ಮಾಡಿದ ಪಾತ್ರ ವೈರಲ್ | Lavanya Tripathi Reveals Why She Rejected Vijay Deverakondas Geetha Govindam Gvd



Lavanya Tripathi: ಮೆಗಾ ಸೊಸೆ ಲಾವಣ್ಯ ಕೈಬಿಟ್ಟ ವಿಜಯ್ ಸಿನಿಮಾ ಸೂಪರ್ ಹಿಟ್: ರಶ್ಮಿಕಾ ಮಾಡಿದ ಪಾತ್ರ ವೈರಲ್ | Lavanya Tripathi Reveals Why She Rejected Vijay Deverakondas Geetha Govindam Gvd

ಮೆಗಾ ಸೊಸೆ ಲಾವಣ್ಯ ತ್ರಿಪಾಠಿ ತಮ್ಮ ಹೊಸ ಚಿತ್ರ ‘ಸತಿ ಲೀಲಾವತಿ’ ಪ್ರಚಾರದಲ್ಲಿ ನಿರತರಾಗಿದ್ದಾರೆ. ಮದುವೆಯ ನಂತರದ ಅವರ ಮೊದಲ ಚಿತ್ರ ಇದಾಗಿದ್ದರಿಂದ ಅಭಿಮಾನಿಗಳಲ್ಲಿ ವಿಶೇಷ ಆಸಕ್ತಿ ಮೂಡಿದೆ.

ಮೆಗಾ ಕುಟುಂಬದ ಸೊಸೆ ಲಾವಣ್ಯ ತ್ರಿಪಾಠಿ, ಕಥೆಯನ್ನೂ ಕೇಳದೆ ಒಂದು ದೊಡ್ಡ ಹಿಟ್ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದರಂತೆ. ವಿಜಯ್ ದೇವರಕೊಂಡ ನಟನೆಯ ಆ ಸಿನಿಮಾ ಮಾಡಿದ್ದರೆ, ಲಾವಣ್ಯ ಕೆರಿಯರ್ ಬೇರೆಯೇ ಮಟ್ಟದಲ್ಲಿ ಇರುತ್ತಿತ್ತು.

ಟಾಲಿವುಡ್ ನಟಿ ಮತ್ತು ಮೆಗಾ ಸೊಸೆ ಲಾವಣ್ಯ ತ್ರಿಪಾಠಿ ತಮ್ಮ ಹೊಸ ಚಿತ್ರ ‘ಸತಿ ಲೀಲಾವತಿ’ ಪ್ರಚಾರದಲ್ಲಿ ನಿರತರಾಗಿದ್ದಾರೆ. ಮದುವೆಯ ನಂತರದ ಅವರ ಮೊದಲ ಚಿತ್ರ ಇದಾಗಿದ್ದರಿಂದ ಅಭಿಮಾನಿಗಳಲ್ಲಿ ವಿಶೇಷ ಆಸಕ್ತಿ ಮೂಡಿದೆ. ಈ ಸಂದರ್ಭದಲ್ಲಿ, ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಲ್ಲಿ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ತಾವು ಕಳೆದುಕೊಂಡ ದೊಡ್ಡ ಹಿಟ್ ಚಿತ್ರದ ಬಗ್ಗೆ ಅವರು ಬಹಿರಂಗಪಡಿಸಿದ ವಿಷಯ ಸದ್ಯ ವೈರಲ್ ಆಗಿದೆ.

ಸಿನಿಮಾ ಇಂಡಸ್ಟ್ರಿಯಲ್ಲಿ ಎಷ್ಟೋ ಸಲ ಒಳ್ಳೆಯ ಅವಕಾಶಗಳು ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗುತ್ತದೆ. ಕೆಲವು ಬಾರಿ ನಟ-ನಟಿಯರು ರಿಜೆಕ್ಟ್ ಮಾಡಿದ ಸಿನಿಮಾಗಳೇ ಮುಂದೆ ದೊಡ್ಡ ಬ್ಲಾಕ್‌ಬಸ್ಟರ್ ಆಗುತ್ತವೆ. ಅನೇಕ ಸ್ಟಾರ್‌ಗಳ ವಿಷಯದಲ್ಲಿ ಇದು ನಡೆದಿದೆ. ಲಾವಣ್ಯ ತ್ರಿಪಾಠಿ ವಿಷಯದಲ್ಲೂ ಹೀಗೆಯೇ ಆಗಿದೆ. ತಮ್ಮ ಕೆರಿಯರ್‌ನಲ್ಲೂ ಇಂಥದ್ದೊಂದು ಅನುಭವ ಆಗಿದೆ ಎಂದು ಲಾವಣ್ಯ ತ್ರಿಪಾಠಿ ಹೇಳಿಕೊಂಡಿದ್ದಾರೆ.

ಒಂದು ಸಂದರ್ಶನದಲ್ಲಿ ಲಾವಣ್ಯ ಅವರಿಗೆ, “ನೀವು ರಿಜೆಕ್ಟ್ ಮಾಡಿದ ಮೇಲೆ ಹಿಟ್ ಆದ ಸಿನಿಮಾ ಯಾವುದಾದರೂ ಇದೆಯಾ?” ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಅವರು ಇಂಟ್ರೆಸ್ಟಿಂಗ್ ಉತ್ತರ ನೀಡಿದ್ದಾರೆ. ಒಂದು ಸಿನಿಮಾ ಆಫರ್ ಬಂದಾಗ, ಮೊದಲು ಕಥೆಯನ್ನೇ ಕೇಳದೆ ತಾನು ‘ನೋ’ ಎಂದು ಹೇಳಿದ್ದಾಗಿ ಲಾವಣ್ಯ ತಿಳಿಸಿದರು. ಆದರೆ, ನಂತರ ಆ ಕಥೆಯ ಬಗ್ಗೆ ತಿಳಿದಾಗ ಆ ಪ್ರಾಜೆಕ್ಟ್ ಮಾಡಬೇಕಿತ್ತು ಎನಿಸಿತಂತೆ. ಅಷ್ಟರಲ್ಲಾಗಲೇ ಆ ಅವಕಾಶ ಅವರ ಕೈತಪ್ಪಿ ಹೋಗಿತ್ತು. ನಂತರ ಅದೇ ಸಿನಿಮಾದಲ್ಲಿ ಬೇರೆ ನಟಿ ನಟಿಸಿ ದೊಡ್ಡ ಯಶಸ್ಸು ಗಳಿಸಿದರು.

ಗೀತ ಗೋವಿಂದಂನಲ್ಲಿ ಲಾವಣ್ಯ ನಟಿಸಿದ್ದರೆ?

ಆ ಸಿನಿಮಾ ಬೇರೆ ಯಾವುದೂ ಅಲ್ಲ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿದ ಸೂಪರ್‌ಹಿಟ್ ಚಿತ್ರ ‘ಗೀತ ಗೋವಿಂದಂ’. ಮೊದಲು ಈ ಸಿನಿಮಾಗೆ ನಿರ್ದೇಶಕರು ಲಾವಣ್ಯ ಅವರನ್ನೇ ಸಂಪರ್ಕಿಸಿದ್ದರಂತೆ. ಆದರೆ ಕೆಲವು ಕಾರಣಗಳಿಂದ ಲಾವಣ್ಯ ಆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ಆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆಯಾದರು. ಒಂದು ವೇಳೆ ಈ ಸಿನಿಮಾದಲ್ಲಿ ಲಾವಣ್ಯ ನಟಿಸಿದ್ದರೆ, ರಶ್ಮಿಕಾ ವಿಜಯ್ ಜೀವನಕ್ಕೆ ಬರುತ್ತಿರಲಿಲ್ಲವೇನೋ? ಈ ಸಿನಿಮಾದ ಯಶಸ್ಸಿನಿಂದ ವಿಜಯ್-ರಶ್ಮಿಕಾ ಜೋಡಿಗೆ ಸಖತ್ ಕ್ರೇಜ್ ಬಂತು. ಅವರ ಸ್ನೇಹ ಪ್ರೀತಿಗೆ ತಿರುಗಿ, ಮದುವೆಯವರೆಗೂ ಬಂದಿದೆ.



Source link

Leave a Reply

Your email address will not be published. Required fields are marked *