Headlines

ನಡುರಸ್ತೆಯಲ್ಲಿ ಸ್ಕೂಟರ್ ನಿಲ್ಲಿಸಿ ಜೋಡಿಯ ಫೋಟೋಶೂಟ್‌: ಎಚ್ಚರಿಸಿದ ಕಾರು ಚಾಲಕನ ಜೊತೆಗೂ ಗಲಾಟೆ | Couple Stops Scooter In Middle Of Road For Photoshoot Netizens Slams Video

ನಡುರಸ್ತೆಯಲ್ಲಿ ಸ್ಕೂಟರ್ ನಿಲ್ಲಿಸಿ ಜೋಡಿಯ ಫೋಟೋಶೂಟ್‌: ಎಚ್ಚರಿಸಿದ ಕಾರು ಚಾಲಕನ ಜೊತೆಗೂ ಗಲಾಟೆ | Couple Stops Scooter In Middle Of Road For Photoshoot Netizens Slams Video



ನಡುರಸ್ತೆಯಲ್ಲಿ ಸ್ಕೂಟರ್ ನಿಲ್ಲಿಸಿ ಜೋಡಿಯ ಫೋಟೋಶೂಟ್‌: ಎಚ್ಚರಿಸಿದ ಕಾರು ಚಾಲಕನ ಜೊತೆಗೂ ಗಲಾಟೆ | Couple Stops Scooter In Middle Of Road For Photoshoot Netizens Slams Video

ವಾಹನ ಸಂಚಾರವಿದ್ದ ನಡುರಸ್ತೆಯಲ್ಲಿ ಸ್ಕೂಟರ್ ನಿಲ್ಲಿಸಿ ಸೆಲ್ಫಿ ತೆಗೆದುಕೊಂಡ ಜೋಡಿಯ ವೀಡಿಯೋ ವೈರಲ್ ಆಗಿದೆ. ತಮ್ಮ ಕೃತ್ಯವನ್ನು ಪ್ರಶ್ನಿಸಿದ ಕಾರು ಚಾಲಕನೊಂದಿಗೆ ಜೋಡಿ ಉದ್ಧಟತನದಿಂದ ವಾದಕ್ಕಿಳಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ವಾಹನವನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಸೆಲ್ಫಿ:

ಇತ್ತೀಚೆಗೆ ಕೆಲವರು ಎಲ್ಲೆಂದರಲ್ಲಿ ಸೆಲ್ಫಿ ಕ್ಲಿಕ್ಕಿಸುವುದು ವೀಡಿಯೋ ಮಾಡುವುದು ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ವ್ಯಾಪಕ ತೊಂದರೆ ಆಗುತ್ತಿದೆ. ಅದೇ ರೀತಿ ಇಲ್ಲೊಂದು ಕಡೆ ಜೋಡಿಯೊಂದು ವಾಹನಗಳು ಸಂಚರಿಸುವ ನಡುರಸ್ತೆಯಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ಸೆಲ್ಫಿ ತೆಗೆದುಕೊಂಡಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ನಡುಸ್ತೆಯಲ್ಲಿ ಜೋಡಿ ಸೆಲ್ಫಿ ಕ್ಲಿಕ್ಕಿಸಿದ್ದಲ್ಲದೇ ಈ ಬಗ್ಗೆ ಪ್ರಶ್ನೆ ಮಾಡಿದ ಆ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರ ಜೊತೆಗೂ ಈ ಜೋಡಿ ಉದ್ಧಟತನದಿಂದ ವರ್ತಿಸಿದ್ದಾರೆ.

ತಮ್ಮ ಸ್ಕೂಟರ್‌ ಅನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಅದರ ಪಕ್ಕ ಕುಳಿತು ಜೋಡಿ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನಲ್ಲಿದ್ದವರು ಕಾರಿನ ಒಳಭಾಗದಿಂದಲೇ ಈ ಘಟನೆಯ ವೀಡಿಯೋ ಮಾಡಿದ್ದಾರೆ. ಇಳಿಜಾರಿನ ಕಾರಣ ಅಲ್ಲಿ ಗೋಚರತೆ ಕಡಿಮೆ ಆಗಿತ್ತು, ಅಂತಹ ಅಪಾಯಕಾರಿ ಜಾಗದಲ್ಲಿ ಜೋಡಿಯೊಂದು ಸೆಲ್ಫಿ ತೆಗೆದುಕೊಳ್ಳುವುದಕ್ಕಾಗಿ ರಸ್ತೆ ಮಧ್ಯೆ ಕುಳಿತಿದ್ದು, ಅಲ್ಲಿದ್ದವರನ್ನು ಸಿಟ್ಟಿಗೆಬ್ಬಿಸಿದೆ. ಕಾರು ಹತ್ತಿರಕ್ಕೆ ಬರುತ್ತಿದ್ದಂತೆ, ಹೆದ್ದಾರಿಯ ಎಡಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ನಲ್ಲಿ ಕುಳಿತಿದ್ದ ದಂಪತಿಗಳು ಇದ್ದಕ್ಕಿದ್ದಂತೆ ಕಾಣಿಸುತ್ತಾರೆ. ಹಿಂದಿನಿಂದ ಬರುತ್ತಿರುವ ವಾಹನಗಳ ಭಯವಿಲ್ಲದೇ ಇವರು ನಡುರಸ್ತೆಯಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದಿದ್ದು ನೋಡಿ ಕಾರಿನಲ್ಲಿದ್ದವರು ಸಿಟ್ಟಿನಿಂದಲೇ ಅವರನ್ನು ವಿಚಾರಿಸಿದ್ದಾರೆ.

ದಂಪತಿಯ ವೀಡಿಯೋಗೆ ತೀವ್ರ ಆಕ್ರೋಶ:

ಕಾರಿನ ಚಾಲಕ ಕಾರನ್ನು ನಿಲ್ಲಿಸಿ ಇಲ್ಲಿ ನೀವು ಏನು ಮಾಡುತ್ತಿದ್ದೀರಿ? ಹೀಗೆ ಮಾಡುವುದು ಎಷ್ಟು ಅಪಾಯಕಾರಿ ಗೊತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ತಪ್ಪು ಒಪ್ಪಿಕೊಳ್ಳದ ಆ ಜೋಡಿ ಕಾರು ಚಾಲಕನ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ. ತಮಗೆ ರಸ್ತೆಯಲ್ಲಿ ಫೋಟೋ ತೆಗೆಯುವ ಹಕ್ಕಿದೆ. ನಾವು ಪಕ್ಕದಲ್ಲಿ ಫೋಟೋ ತೆಗೆಯುತ್ತಿದ್ದೇವೆ. ರೋಡ್‌ನ ಉಳಿದ ಭಾಗ ಫ್ರಿಯಾಗಿಯೇ ಇದೆಯಲ್ಲಾ ಎಂದು ಅವರು ಕಾರು ಚಾಲಕನಿಗೆ ದುರಂಕಾರದಿಂದಲೇ ಮರು ಪ್ರಶ್ನೆ ಮಾಡಿದ್ದಾರೆ.

ಆನ್‌ಲೈನ್‌ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದ್ದು, ಅನೇಕರು ಈ ಮಹಿಳೆಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ವಾಹನದ ಫೋಟೋ ತೆಗೆದು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಬೇಕಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಗಂಡ ಹೆಂತಿ ಇಬ್ಬರನ್ನು ಗಲ್ಲಿಗೇರಿಸಬೇಕು ಎಂದು ಒಬ್ಬರು ಆಕ್ರೋಶ ಹೊರಹಾಕಿದ್ದಾರೆ. ಒಂದು ಕ್ಲಿಕ್ ಅಥವಾ ಒಂದು ವೈರಲ್ ವೀಡಿಯೊಗಾಗಿ ಜನರು ಸುರಕ್ಷತೆ, ಘನತೆ ಮತ್ತು ಜೀವಗಳನ್ನು ಸಹ ಪಣಕ್ಕಿಡುತ್ತಿದ್ದಾರೆ. ಅವಿದ್ಯಾವಂತ ಜನರು ತಮ್ಮ ತಪ್ಪುಗಳ ನಂತರವೂ ತಾವು ಸರಿ ಎಂದು ಭಾವಿಸುತ್ತಾರೆ. ಇದಕ್ಕೆ ಒಂದೇ ಪರಿಹಾರವೆಂದರೆ ಸಕಾಲಿಕ ಶಿಕ್ಷಣ; ಈಗ, ಅದನ್ನು ತಪ್ಪಿಸಿಕೊಂಡವರಿಗೆ ಪೊಲೀಸರು ಶಿಕ್ಷಣ ನೀಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: IAS ಅಧಿಕಾರಿಯ ದಿಟ್ಟ ನಿರ್ಧಾರ: ಮಗಳನ್ನು ಫ್ರೀ ಸ್ಕೂಲ್ ಬದಲು ಸರ್ಕಾರಿ ಅಂಗನವಾಡಿಗೆ ಸೇರಿಸಿದ ಪುಲ್ಕಿತ್ ಗಾರ್ಗ್

ಆದರೆ ಇವರಂತೆ ‘ಹಮ್ ಲೋಗ್ ಕರ್ ಭಿ ಸಕ್ತೇ ಹೈ, ಹಮ್ ಭಿ ರೋಡ್ ಕಾ ಟ್ಯಾಕ್ಸ್ ದೇ ರಹೇ ಹೈ'( ನಾವು ಫೋಟೋ ತೆಗಿಬಹುದು ಏಕೆಂದರೆ ನಾವು ಕೂಡ ರೋಡ್‌ ಟ್ಯಾಕ್ಸ್ ಕಟ್ಟುತ್ತಿದ್ದೇವೆ) ಎಂದು ಹೇಳುವ ಧೈರ್ಯ ನನಗೆ ಮಾತ್ರ ಅಸಾಧ್ಯ ಇದು ಗೋಚರಿಸದ ತಿರುವು ಅಲ್ಲ, ಆದರೆ ಗೋಚರಿಸಿದ ಇಳಿಜಾರು. ಕಾರು ಹೆಚ್ಚಿನ ವೇಗದಲ್ಲಿದ್ದರೆ, ದುರಂತವನ್ನು ತಪ್ಪಿಸುವುದು ಕಷ್ಟಕರವಾಗುತ್ತಿತ್ತು ಮತ್ತು ಯಾರನ್ನು ದೂಷಿಸುತ್ತಿದ್ದರು ಎಂದು ಊಹಿಸಿ ಕಾರವರನ್ನೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದು, ರಸ್ತೆಯಲ್ಲಿ ಸೆಲ್ಪಿ ಕ್ಲಿಕ್ಕಿಸುತ್ತಿದ್ದ ದಂಪತಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಪಂಚಾಯತ್ ಚುನಾವಣೆಗೆ ನಿಲ್ಲುವುದಕ್ಕಾಗಿ ಮಗಳನ್ನೇ ಕೊಂದ ತಂದೆ



Source link

Leave a Reply

Your email address will not be published. Required fields are marked *