Headlines

2026: ಜನವರಿಯಿಂದ ಬದಲಾಗಲಿದೆ ನಿಮ್ಮ ದೈನಂದಿನ ಬದುಕು: ಹೊಸ ನಿಯಮ, ಮಹತ್ವದ ಬದಲಾವಣೆ | From January 1 Significant Changes In Several Rules Like Pm Kisan Upi Sim Mrq

2026: ಜನವರಿಯಿಂದ ಬದಲಾಗಲಿದೆ ನಿಮ್ಮ ದೈನಂದಿನ ಬದುಕು: ಹೊಸ ನಿಯಮ, ಮಹತ್ವದ ಬದಲಾವಣೆ | From January 1 Significant Changes In Several Rules Like Pm Kisan Upi Sim Mrq



2026: ಜನವರಿಯಿಂದ ಬದಲಾಗಲಿದೆ ನಿಮ್ಮ ದೈನಂದಿನ ಬದುಕು: ಹೊಸ ನಿಯಮ, ಮಹತ್ವದ ಬದಲಾವಣೆ | From January 1 Significant Changes In Several Rules Like Pm Kisan Upi Sim Mrq

ಜನವರಿ 1 ರಿಂದ, ಪಿಎಂ ಕಿಸಾನ್, ಯುಪಿಐ, ಮತ್ತು ಸಿಮ್ ದೃಢೀಕರಣದಂತಹ ಹಲವಾರು ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಇದರೊಂದಿಗೆ, ಫ್ರಿಡ್ಜ್, ಎಸಿ ಮತ್ತು ಕಾರುಗಳ ಬೆಲೆಗಳು ಏರಿಕೆಯಾಗಲಿದ್ದು, ಇದು ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ.

ನವದೆಹಲಿ: ನವವರ್ಷದ ಹರ್ಷದ ನಡುವೆಯೇ, ಜ.1ರಿಂದ ಜನಜೀವನದ ಮೇಲೆ ಪರಿಣಾಮ ಬೀರುವ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಕೆಲ ಪ್ರಮುಖ ಮಾರ್ಪಾಡುಗಳು ಇಂತಿವೆ.

ಪಿಎಂ ಕಿಸಾನ್‌:

ಮುಂದಿನ ವರ್ಷದಿಂದ ಪಿಎಂ ಕಿಸಾನ್‌ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ರೈತರು ವಿಶೇಷ ಕಿಸಾನ್‌ ಐಡಿ ಹೊಂದುವುದು ಕಡ್ಡಾಯವಾಗಲಿದೆ. ರೈತರ ಭೂ ದಾಖಲೆಗಳು, ಬೆಳೆ ಮಾಹಿತಿ, ಆಧಾರ್ ಮತ್ತು ಬ್ಯಾಂಕ್ ವಿವರಗಳು ಈ ಐಡಿಗೆ ಲಿಂಕ್‌ ಆಗಿರಲಿವೆ. ಯೋಜನೆಯ ದುರುಪಯೋಗ ತಡೆದು, ಅರ್ಹರಷ್ಟೇ ಅದರ ಲಾಭ ಪಡೆಯುವಂತೆ ಮಾಡಲು ಈ ನಿಯಮ ಜಾರಿಗೆ ತರಲಾಗಿದೆ.

8ನೇ ವೇತನ ಆಯೋಗ:

ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವನ್ನು ಸೂಚಿಸಲಾಗಿರುವ 8ನೇ ವೇತನ ಆಯೋಗದ ಶಿಫಾರಸುಗಳು ಜ.1ರಿಂದ ಜಾರಿಗೆ ಬರಲಿವೆ. ಪಿಂಚಣಿದಾರರಿಗೆ ಸಿಗುವ ಪಿಂಜಣಿಯೂ ಹೆಚ್ಚಳವಾಗಲಿದೆ.

ಯುಪಿಐ: ಹೆಚ್ಚುತ್ತಿರುವ ಸೈಬರ್‌ ವಂಚನೆ ಹಾಗೂ ಅಪರಾಧಗಳಿಗೆ ಕಡಿವಾಣ ಹಾಕಲು, ಡಿಜಿಟಲ್‌ ಪಾವತಿ ವ್ಯವಸ್ಥೆಯಾಗಿರುವ ಯುಪಿಐನಲ್ಲಿ ಕೆಲ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಇನ್ನುಮುಂದೆ ಮೊಬೈಲ್‌ ಸಿಮ್‌ ದೃಢೀಕರಣ ಕಡ್ಡಾಯವಾಗಲಿದೆ.

ಸಿಮ್‌ ದೃಢೀಕರಣ:

ಯುಪಿಐಗೆ ಮಾತ್ರವಲ್ಲ, ಸಂವಹನ ಆ್ಯಪ್‌ಗಳಾದ ವಾಟ್ಸಪ್‌, ಟೆಲಿಗ್ರಾಂಗಳ ಬಳಕೆಗೂ ಸಿಮ್‌ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ, ಇವುಗಳಲ್ಲಾಗುವ ಅಕ್ರಮಗಳ ಪತ್ತೆ ಸುಲಭವಾಗಲಿದೆ.

ಕ್ರೆಡಿಟ್ ಸ್ಕೋರ್ ನವೀಕರಣ:

ಇನ್ನುಮುಂದೆ ಕ್ರೆಡಿಟ್‌ ಬ್ಯೂರೋಗಳು ಸಾಪ್ತಾಹಿಕವಾಗಿ ಕ್ರೆಡಿಟ್‌ ಸ್ಕೋರ್‌ಗಳನ್ನು ನವೀಕರಿಸುತ್ತವೆ. ಈ ಮೊದಲು ಇದನ್ನು 15 ದಿನಗಳಿಗೊಮ್ಮೆ ಮಾಡಲಾಗುತ್ತಿತ್ತು. ಇದರಿಂದ ಸಾಲ ಮರುಪಾವತಿಯು ಕ್ರೆಡಿಟ್ ಸ್ಕೋರ್‌ಗೆ ಬೇಗ ಸೇರ್ಪಡೆಯಾಗಿ, ಸಾಲ ಪಡೆಯುವ ಅರ್ಹತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಇಂಧನ ಬೆಲೆ:

ಗೃಹಬಳಕೆ, ವಾಣಿಜ್ಯ, ವಾಯುಯಾನ ಟರ್ಬೈನ್ ಇಂಧನ(ಎಟಿಎಫ್‌) ಸೇರಿದಂತೆ ವಿವಿಧ ಇಂಧನಗಳ ಬೆಲೆಗಳಲ್ಲಿ ಭಾರೀ ವ್ಯತ್ಯಾಸವಾಗಲಿದೆ. ನಿಖರ ಬೆಲೆ ಬದಲಾವಣೆ ಘೋಷಣೆಯಾಗದಿದ್ದರೂ, ಇವುಗಳು ಇಳಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಐಟಿಆರ್‌ ಫೈಲಿಂಗ್‌:

2026ರಿಂದ ಐಟಿಆರ್‌ ಫೈಲಿಂಗ್‌ ಪ್ರಕ್ರಿಯೆ ಸರಳವಾಗಿರಲಿದೆ. ಸಂಬಳ, ಬ್ಯಾಂಕ್ ಬಡ್ಡಿ, ಹೂಡಿಕೆ, ದೊಡ್ಡ ವೆಚ್ಚಗಳಂತಹ ಮಾಹಿತಿಗಳು ಮೊದಲೇ ಸ್ವಯಂಚಾಲಿತವಾಗಿ ಭರ್ತಿಯಾಗಿರುತ್ತವೆ. ಇದರಿಂದ ಪ್ರಕ್ರಿಯೆ ವೇಗವಾಗಿಯೂ ಆಗುತ್ತದೆ.

ಫ್ರಿಡ್ಜ್‌, ಎ.ಸಿ. ದರ ಏರಿಕೆ:

ಜ.1ರಿಂದ ಫ್ರಿಡ್ಜ್‌ ದರದಲ್ಲಿ ಶೇ.5ರಷ್ಟು ಹಾಗೂ ಎ.ಸಿ. ದರದಲ್ಲಿ ಶೇ.10ರಷ್ಟು ಏರಿಕೆಯಾಗಲಿದೆ. ಉಪಕರಣಗಳು ಬಳಸುವ ವಿದ್ಯುತ್‌ನ ಆಧಾರದಲ್ಲಿ ನೀಡಲಾಗುವ ರೇಟಿಂಗ್‌(1-5 ಸ್ಟಾರ್‌) ನವೀಕರಣದ ಹಿನ್ನೆಲೆಯಲ್ಲಿ ಈ ಬದಲಾವಣೆಯಾಗಲಿದೆ.

ಕಾರು ದರ ಏರಿಕೆ:

ಬಿಡಿಭಾಗಗಳ ದರ ಏರಿಕೆ ಕಾರಣ ಹೊಸ ವರ್ಷದಲ್ಲಿ ಫೋಕ್ಸ್‌ವ್ಯಾಗನ್‌ ಮತ್ತು ಹ್ಯುಂಡೈ ವಾಹನಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ವರ್ಷದ ಮೊದಲ ದಿನದಿಂದಲೇ ತನ್ನೆಲ್ಲಾ ಮಾಡೆಲ್‌ ವಾಹನಗಳ ಬೆಲೆಯಲ್ಲಿ ಶೇ.0.6ರಷ್ಟು ಏರಿಕೆ ಮಾಡುವುದಾಗಿ ಹ್ಯುಂಡೈ ಮೋಟಾರ್‌ ಇಂಡಿಯಾ ಹೇಳಿದೆ. ಪ್ರಸ್ತುತ ಹ್ಯುಂಡೈನ ಹ್ಯಾಚ್‌ಬ್ಯಾಕ್‌ ಐ10 ನಿಯೋಸ್‌ನಿಂದ ಹಿಡಿದು ಎಸ್‌ಯುವಿ ಇಯೋನಿಕ್ಸ್‌ 5 ಮಾದರಿಯ ಕಾರುಗಳ ಶೋರೂಂ ಬೆಲೆ 5.47 ಲಕ್ಷ ರು.ನಿಂದ 47 ಲಕ್ಷ ರು. ವರೆಗಿದೆ. ಇದು ಜ.1ರಿಂದ ಕೊಂಚ ಏರಿಕೆ ಕಾಣಲಿದೆ. 

ಅತ್ತ, ಅನೇಕ ದೇಶಗಳ ಮೇಲೆ ಅಮೆರಿಕ ತೆರಿಗೆ ವಿಧಿಸಿರುವ ಕಾರಣ ಬಿಡಿಭಾಗಗಳು ದುಬಾರಿಯಾಗಿದ್ದು, ಫೋಕ್ಸ್‌ವ್ಯಾಗನ್‌ ಕೂಡ ಬೆಲೆ ಏರಿಕೆಯ ಹಾದಿ ಹಿಡಿದಿದೆ. ಶೇ.2.9ರಿಂದ ಶೇ.6.5ರ ವರೆಗೆ ಮಾಡಲ್‌ಗೆ ಅನುಗುಣವಾಗಿ ದರವನ್ನು ಹೆಚ್ಚಿಸಲಾಗುವುದು.



Source link

Leave a Reply

Your email address will not be published. Required fields are marked *