Headlines

ಬರೋಬ್ಬರಿ 228 ಕೋಟಿ ಬ್ಯಾಂಕ್ ವಂಚನೆ ಪ್ರಕರಣ: ಸಿಬಿಐನಿಂದ 6 ಗಂಟೆ ಅನಿಲ್ ಅಂಬಾನಿ ಪುತ್ರ ಜೈ ವಿಚಾರಣೆ | Cbi Questions Jai Anmol Ambani For 6 Hours In Rs 228 Crore Reliance Home Finance Bank Fraud Case Gdp

ಬರೋಬ್ಬರಿ 228 ಕೋಟಿ ಬ್ಯಾಂಕ್ ವಂಚನೆ ಪ್ರಕರಣ: ಸಿಬಿಐನಿಂದ 6 ಗಂಟೆ ಅನಿಲ್ ಅಂಬಾನಿ ಪುತ್ರ ಜೈ ವಿಚಾರಣೆ | Cbi Questions Jai Anmol Ambani For 6 Hours In Rs 228 Crore Reliance Home Finance Bank Fraud Case Gdp



ಬರೋಬ್ಬರಿ 228 ಕೋಟಿ ಬ್ಯಾಂಕ್ ವಂಚನೆ ಪ್ರಕರಣ: ಸಿಬಿಐನಿಂದ 6 ಗಂಟೆ ಅನಿಲ್ ಅಂಬಾನಿ ಪುತ್ರ ಜೈ ವಿಚಾರಣೆ | Cbi Questions Jai Anmol Ambani For 6 Hours In Rs 228 Crore Reliance Home Finance Bank Fraud Case Gdp

ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ₹228 ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್ ಅಂಬಾನಿ ಅವರನ್ನು ಸಿಬಿಐ ಸುದೀರ್ಘವಾಗಿ ವಿಚಾರಣೆ ನಡೆಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದ್ದು, ಸಾಲದ ಖಾತೆಯನ್ನು ವಂಚನೆ ಎಂದು ವರ್ಗೀಕರಿಸಿದ ನಂತರ ತನಿಖೆ ತೀವ್ರಗೊಂಡಿದೆ.

ನವದೆಹಲಿ: ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (Reliance Home Finance Limited-RHFL) ಸಂಸ್ಥೆಗೆ ಸಂಬಂಧಿಸಿದ 228 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆ, ಅನಿಲ್ ಅಂಬಾನಿ ಪುತ್ರ ಜೈ ಅನ್ಮೋಲ್ ಅಂಬಾನಿ ಅವರನ್ನು ಕೇಂದ್ರ ತನಿಖಾ ದಳ (Central Bureau of Investigation – CBI) ಶುಕ್ರವಾರ ನವದೆಹಲಿಯಲ್ಲಿ ಸುದೀರ್ಘವಾಗಿ ವಿಚಾರಣೆ ನಡೆಸಿತು. ದಿವಾಳಿಯಾಗಿರುವ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಪುತ್ರರಾಗಿರುವ ಜೈ ಅನ್ಮೋಲ್ ಅಂಬಾನಿ, ಸಮನ್ಸ್ ಹಿನ್ನೆಲೆಯಲ್ಲಿ ದೆಹಲಿಯ ಸಿಬಿಐ ಮುಖ್ಯ ಕಚೇರಿಯಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದು, ಅವರನ್ನು ಸುಮಾರು ಆರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೊಳಪಡಿಸಲಾಯಿತು.

ಸಿಬಿಐ ಅಧಿಕಾರಿಗಳ ಪ್ರಕಾರ, ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ನಡೆದಿರುವ ಆರ್ಥಿಕ ಅಕ್ರಮಗಳ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಜೈ ಅನ್ಮೋಲ್ ಅಂಬಾನಿಯನ್ನು ಪ್ರಶ್ನಿಸಲಾಗಿದೆ. ಸುದೀರ್ಘ ವಿಚಾರಣೆಯ ನಂತರ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಶನಿವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಯೂನಿಯನ್ ಬ್ಯಾಂಕ್ ದೂರಿನ ಆಧಾರದ ಮೇಲೆ ಪ್ರಕರಣ

ಸಿಬಿಐ ಡಿಸೆಂಬರ್ 6, 2025 ರಂದು RHFL, ಜೈ ಅನ್ಮೋಲ್ ಅಂಬಾನಿ, ಮಾಜಿ ಸಿಇಒ ಮತ್ತು ಪೂರ್ಣಾವಧಿ ನಿರ್ದೇಶಕ ರವೀಂದ್ರ ಸುಧಾಲ್ಕರ್ ಹಾಗೂ ಅಪರಿಚಿತ ವ್ಯಕ್ತಿಗಳು ಮತ್ತು ಗುರುತಿಸಲಾಗದ ಕೆಲವು ಸಾರ್ವಜನಿಕ ಸೇವಕರ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಪ್ರಕರಣವು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) ನೀಡಿದ ದೂರಿನ ಮೇರೆಗೆ ದಾಖಲಾಗಿದ್ದು, ಕ್ರಿಮಿನಲ್ ಪಿತೂರಿ, ವಂಚನೆ ಹಾಗೂ ಕ್ರಿಮಿನಲ್ ದುಷ್ಕೃತ್ಯದ ಪರಿಣಾಮವಾಗಿ ಹಿಂದಿನ ಆಂಧ್ರ ಬ್ಯಾಂಕ್‌ ಗೆ ಸುಮಾರು 228.06 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ಸಾಲ ಖಾತೆ ಮೊದಲು NPA, ಬಳಿಕ ವಂಚನೆ ಎಂದು ವರ್ಗೀಕರಣ

ತನಿಖಾಧಿಕಾರಿಗಳ ಮಾಹಿತಿಯಂತೆ, ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್‌ನ ಸಾಲ ಖಾತೆಯನ್ನು ಸೆಪ್ಟೆಂಬರ್ 30, 2019 ರಂದು ಅನುತ್ಪಾದಕ ಆಸ್ತಿ (NPA) ಎಂದು ಘೋಷಿಸಲಾಗಿತ್ತು. ಬಳಿಕ ದೀರ್ಘ ಪರಿಶೀಲನೆಯ ನಂತರ ಅಕ್ಟೋಬರ್ 10, 2024 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಈ ಖಾತೆಯನ್ನು ಅಧಿಕೃತವಾಗಿ ವಂಚನೆ ಖಾತೆ ಎಂದು ವರ್ಗೀಕರಿಸಿತು.

ದೂರಿನ ಪ್ರಕಾರ, ರಿಲಯನ್ಸ್ ಎಡಿಎ ಗ್ರೂಪ್‌ಗೆ ಸೇರಿದ RHFL ಸಂಸ್ಥೆ ಯೂನಿಯನ್ ಬ್ಯಾಂಕ್ ಸೇರಿದಂತೆ ಸುಮಾರು 18 ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು ಹಾಗೂ ಇತರ ಕಾರ್ಪೊರೇಟ್ ಸಂಸ್ಥೆಗಳ ಒಕ್ಕೂಟದಿಂದ ಒಟ್ಟು 5,572.35 ಕೋಟಿ ರೂಪಾಯಿ ಸಾಲವನ್ನು ಪಡೆದುಕೊಂಡಿತ್ತು. ಈ ಸಾಲದ ಬಳಕೆ ಮತ್ತು ವಾಪಸಿ ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು ನಡೆದಿರುವ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿದೆ.

ಮುಂಬೈನಲ್ಲಿ ನಡೆದ ಶೋಧ ಕಾರ್ಯಾಚರಣೆ

ಈ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಡಿಸೆಂಬರ್ 9, 2025 ರಂದು ಮುಂಬೈನಲ್ಲಿ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ವಿಶೇಷ ಸಿಬಿಐ ನ್ಯಾಯಾಲಯದಿಂದ ವಾರಂಟ್ ಪಡೆದ ಬಳಿಕ RHFL ಸಂಸ್ಥೆಯ ಎರಡು ಅಧಿಕೃತ ಕಚೇರಿಗಳು ಹಾಗೂ ಜೈ ಅನ್ಮೋಲ್ ಅಂಬಾನಿ ಮತ್ತು ರವೀಂದ್ರ ಸುಧಾಲ್ಕರ್ ಅವರ ನಿವಾಸಗಳಲ್ಲಿ ಶೋಧ ನಡೆಸಲಾಯಿತು.

ಶೋಧ ಕಾರ್ಯಾಚರಣೆಯ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಖಲೆಗಳ ಆಧಾರದಲ್ಲಿ ಬಹು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಒಳಗೊಂಡಿರುವ ಆರ್ಥಿಕ ವಂಚನೆ ಆರೋಪಗಳ ಬಗ್ಗೆ ಸಿಬಿಐ ಇನ್ನಷ್ಟು ಆಳವಾದ ತನಿಖೆ ಮುಂದುವರೆಸುತ್ತಿದೆ.

ಪ್ರಕರಣವು ಡಿಸೆಂಬರ್ 6, 2025 ರಂದು ಅಧಿಕೃತವಾಗಿ ದಾಖಲಾಗಿದ್ದು, RHFL, ಜೈ ಅನ್ಮೋಲ್ ಅಂಬಾನಿ, ಮಾಜಿ ಸಿಇಒ ರವೀಂದ್ರ ಸುಧಾಲ್ಕರ್ ಹಾಗೂ ಹಲವು ಸಾರ್ವಜನಿಕ ಸೇವಕರು ಮತ್ತು ವ್ಯಕ್ತಿಗಳ ವಿರುದ್ಧ ಆರೋಪಗಳು ದಾಖಲಿಸಲಾಗಿದೆ. ಬ್ಯಾಂಕ್‌ಗಳಿಗೆ ಸಂಭವಿಸಿರುವ ನಷ್ಟದ ಸಂಪೂರ್ಣ ಪ್ರಮಾಣ ಮತ್ತು ಅಕ್ರಮದ ಸ್ವರೂಪವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಸಿಬಿಐ ತನಿಖೆ ಮುಂದುವರಿಸುತ್ತಿದೆ.



Source link

Leave a Reply

Your email address will not be published. Required fields are marked *