Headlines

ವಯಸ್ಕ ನಟನೊಂದಿಗೆ ಇಂಟಿಮೇಟ್ ಸೀನ್‌ನಲ್ಲಿ 16ರ ಬಾಲೆಯ ನಟನೆ: ಟಿವಿ ಶೋ ವಿರುದ್ಧ ಜನರ ತೀವ್ರ ಆಕ್ರೋಶ | Dangal Tv Choti Umar Bada Safar Serial Dispute People Outraged On Social Media

ವಯಸ್ಕ ನಟನೊಂದಿಗೆ ಇಂಟಿಮೇಟ್ ಸೀನ್‌ನಲ್ಲಿ 16ರ ಬಾಲೆಯ ನಟನೆ: ಟಿವಿ ಶೋ ವಿರುದ್ಧ ಜನರ ತೀವ್ರ ಆಕ್ರೋಶ | Dangal Tv Choti Umar Bada Safar Serial Dispute People Outraged On Social Media



ವಯಸ್ಕ ನಟನೊಂದಿಗೆ ಇಂಟಿಮೇಟ್ ಸೀನ್‌ನಲ್ಲಿ 16ರ ಬಾಲೆಯ ನಟನೆ: ಟಿವಿ ಶೋ ವಿರುದ್ಧ ಜನರ ತೀವ್ರ ಆಕ್ರೋಶ | Dangal Tv Choti Umar Bada Safar Serial Dispute People Outraged On Social Media

ಕಲಾವಿದರಿಗೆ ವಯಸ್ಸಿನ ಹಂಗಿಲ್ಲ ನಿಜ ಆದರೆ ಸಣ್ಣ ಮಕ್ಕಳನ್ನು ವಯಸ್ಕರು ಮಾಡುವಂತಹ ಪಾತ್ರಗಳಲ್ಲಿ ತೋರಿಸುವುದು ಎಷ್ಟು ಸರಿ? ಎಂದು ಟಿವಿ ಶೋವೊಂದರ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. 

ಗಂಡು ಹೆಣ್ಣಿನ ಸಾಮೀಪ್ಯದ ಸೀನ್‌ನಲ್ಲಿ ವಯಸ್ಕ ನಟನೊಂದಿಗೆ 16ರ ಬಾಲೆಯ ನಟನೆ:

ಕಲಾವಿದರಿಗೆ ವಯಸ್ಸಿನ ಹಂಗಿಲ್ಲ ನಿಜ ಆದರೆ ಸಣ್ಣ ಮಕ್ಕಳನ್ನು ವಯಸ್ಕರು ಮಾಡುವಂತಹ ಪಾತ್ರಗಳಲ್ಲಿ ತೋರಿಸುವುದು ಎಷ್ಟು ಸರಿ? ಎಂದು ಟಿವಿ ಶೋವೊಂದರ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಹೌದು ಹಿಂದಿ ಟಿವಿ ಶೋವೊಂದರ ವಿರುದ್ಧ ಈಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದಂಗಲ್ ಟಿವಿಯಲ್ಲಿ ಪ್ರಸಾರವಾಗುವ ‘ಚೋಟಿ ಉಮರ್ ಬಡಾ ಸಫರ್’ ಹೆಸರಿನ ಟಿವಿ ಶೋದಲ್ಲಿ ಯಶಿಕಾ ಶರ್ಮಾ ಹಾಗೂ ಹಿಮಾಂಶು ಅವಸ್ಥಿ ಎಂಬ ಕಲಾವಿದರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಟಿವಿ ಶೋದ ಇತ್ತೀಚಿನ ಎಪಿಸೋಡ್ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜನ ಈ ಸೀನ್‌ನಲ್ಲಿ ಇನ್ನೂ ಪ್ರಾಪ್ತ ವಯಸ್ಕಳಲ್ಲದ ಬಾಲ ನಟಿಯನ್ನು ವಯಸ್ಕ ನಟನೊಂದಿಗೆ ನಟನೆ ಮಾಡಿಸಿರುವುದಕ್ಕೆ ಈಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸೀರಿಯಲ್ ಹದಿಹರೆಯದ ಹುಡುಗಿ ಹಾಗೂ ವಯಸ್ಕ ವ್ಯಕ್ತಿಯ ನಡುವೆ ಇರುವ ಪ್ರೇಮ ಸಂಬಂಧದ ಕತೆ ಆಧರಿಸಿದ ಶೋ ಆಗಿದೆ. ಇದರಲ್ಲಿ ನಟಿಸುತ್ತಿರುವ ಯಶಿಕಾ ಶರ್ಮಾ ವಯಸ್ಸು ಕೇವಲ 16 ಹಾಗೆಯೇ ನಟ ಹಿಮಾಂಶು ಅವಸ್ಥಿ ವಯಸ್ಸು 24.

ದಂಗಲ್ ಟಿವಿ ಶೋ ವಿರುದ್ಧ ಭಾರಿ ಆಕ್ರೋಶ:

ಕಳೆದ ಬುಧವಾರ ಈ ವಿವಾದಿತ ಸೀನ್ ಒಳಗೊಂಡ ಎಪಿಸೋಡ್ ದಂಗಲ್ ಟಿವಿಯಲ್ಲಿ ಪ್ರಸಾರವಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಇದರ ತುಣುಕೊಂದು ಪ್ರಸಾರವಾಗುತ್ತಿದ್ದು, ಅನೇಕರು ಈ ಇಬ್ಬರ ನಡುವಿನ ಪ್ರೇಮ ಸಲ್ಲಾಪದ ಈ ಸೀನ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಕಾಣುವಂತೆ ಸಮೀರ್ ಪಾತ್ರದಲ್ಲಿರುವ ಹಿಮಾಂಶು ತನ್ನ ಶರ್ಟ್‌ನ್ನು ರಿಮ್ಜಿಮ್ ಪಾತ್ರದಲ್ಲಿರುವ ಬಾಲನಟಿ ಯಶಿಕಾ ಶರ್ಮಾ ಮುಂದೆಯೇ ಬಿಚ್ಚುತ್ತಾನೆ. ಜೊತೆಗೆ ಆಕೆಯನ್ನು ಹತ್ತಿರಕ್ಕೆ ಎಳೆದುಕೊಳ್ಳುತ್ತಾನೆ. ನಂತರ ಅವಳ ರವಿಕೆ ಬಿಚ್ಚಿರುವುದನ್ನು ಗಮನಿಸಿ ಅದನ್ನು ಸರಿಪಡಿಸುತ್ತಾನೆ. ಇಬ್ಬರು ಪರಸ್ಪರ ತಬ್ಬಿಕೊಳ್ಳುವುದರೊಂದಿಗೆ ಈ ಸೀನ್ ಕೊನೆಯಾಗುತ್ತದೆ. ಇದೇ ಶೋದಲ್ಲಿ ಈ ಹಿಂದೆಯೂ ಒಮ್ಮೆ ಇಬ್ಬರು ನಟರು ಬೆಡ್‌ನಲ್ಲಿ ಜೊತೆಗೆ ಮಲಗಿದ ಸೀನ್‌ಗಳಿದ್ದವು. ಇದರ ಜೊತೆಗೆ ಈ ಶೋದಲ್ಲಿ ರಿಮ್ಜಿಮ್ ಪಾತ್ರದಲ್ಲಿರುವ ನಟಿ ಬೆತ್ತಲೆ ಬೆನ್ನನ್ನು ತೋರಿಸಲಾಗಿತ್ತು. ಇದು ಕೂಡ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ವಾರಣಾಸಿ ಸಿನಿಮಾ ಶೂಟ್‌: ಪ್ರಿಯಾಂಕಾ ಚೋಪ್ರಾ ಆಸೆಗೆ ನೋ ಎನ್ನಲಾಗದೇ ಚಡಪಡಿಸಿದ ಮಹೇಶ್ ಬಾಬು

ಈಗ ಈ ಸೀನ್‌ ನೋಡಿದ ನೆಟ್ಟಿಗರು ಟಿವಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ರೆಡಿಟ್‌ನಲ್ಲಿ ಈ ಸೀನ್ ಅನ್ನು ಹಂಚಿಕೊಂಡಿರುವ ಒಬ್ಬರು ಇಂತಹ ಬಹಳ ಸಾಮೀಪ್ಯದ ದೃಶ್ಯದಲ್ಲಿ 15 ವರ್ಷದ ಬಾಲಕಿ ನಟಿಸುವುದಕ್ಕೆ ಯಾವ ಪ್ರಪಂಚ ಓಕೆ ಹೇಳುತ್ತದೆ ಎಂದು ಪ್ರಶ್ನಿಸಲಾಗಿದೆ. ಇದು ಏಕೆ ಇನ್ನೂ ಕಾನೂನಾತ್ಮಕವಾಗಿದೆ. ಏಕೆ ಈ ಸೀನ್‌ಗಳಿಗೆ ಪ್ರಾಪ್ತ ವಯಸ್ಕ ನಟರನ್ನು ಬಳಸುತ್ತಿಲ್ಲ, ಈ ದೇಶದಲ್ಲಿ ಇಂತಹ ಸೀರಿಯಲ್‌ನಲ್ಲಿ ನಟಿಸುವುದಕ್ಕೆ ಯೋಗ್ಯರಾದ ಬೇರೆ ಯಾವ ನಟರು ಕೂಡ ಇಲ್ಲವೇ ಇವರು ಏಕೆ ಅಪ್ರಾಪ್ತರ ವಯಸ್ಕರನ್ನು ಇಂತಹ ರೋಮ್ಯಾಂಟಿಕ್ ಸೀನ್‌ಗಳಿಗೆ ಬಳಸುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ಕೇವಲ 15 ದಿನದಲ್ಲಿ 807 ಜನ ನಾಪತ್ತೆ: ಬೆಚ್ಚಿ ಬೀಳಿಸಿದ ವರದಿ

ಭಾರತೀಯ ಟಿವಿ ಶೋಗಳು ತಮ್ಮ ವಿವಿಧ ಕಾರ್ಯಕ್ರಮಗಳಲ್ಲಿ 15ರಿಂದ18 ವರ್ಷದೊಳಗಿನ ನಟರನ್ನು ಲೈಂಗಿಕವಾಗಿ ಚಿತ್ರಿಸುವುದನ್ನು ನಿಯಮಿತವಾಗಿ ತೋರಿಸುತ್ತಿವೆ. ಅಪ್ರಾಪ್ತ ವಯಸ್ಕರನ್ನು ಲೈಂಗಿಕವಾಗಿ ಚಿತ್ರಿಸುವುದನ್ನು ನಿಲ್ಲಿಸಿ!! 16 ವರ್ಷದ ರೀಮ್ ಶೇಖ್ 30 ವರ್ಷಕ್ಕಿಂತ ಮೇಲ್ಪಟ್ಟ ಸೆಹಬಾನ್ ಅಜೀಮ್ ಜೊತೆ ಪ್ರೇಮ ಸಂಬಂಧ ಬೆಳೆಸುವುದನ್ನು ನೋಡಿದಾಗ ನನಗೆ ಎಷ್ಟು ಆಘಾತವಾಯಿತು ಎಂಬುದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಒಬ್ಬರು ಬರೆದಿದ್ದಾರೆ. ಅನೇಕ ಕಾಮೆಂಟ್‌ಗಳು ಯಾಶಿಕಾ ಅವರ ಪೋಷಕರು ಇದರಲ್ಲಿ ಮಧ್ಯಪ್ರವೇಶಿಸಿ ಇದನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.



Source link

Leave a Reply

Your email address will not be published. Required fields are marked *