
13ನೇ ಮಹಡಿಯಿಂದ ಜಿಗಿದು ಜ್ಯೋತಿಷಿ ದುರಂತ ಸಾವು, ಮನೆಯ ಬೆಡ್ ಮೇಲೆ ತಾಯಿ ಶವ ಪತ್ತೆಯಾಗಿದ್ದಾರೆ. ತಾಯಿ ಮೃತಪಟ್ಟು 2 ರಿಂದ 3 ದಿನದ ಬಳಿಕ ಜ್ಯೋತಿಷಿ ದುರಂತ ಅಂತ್ಯಕಂಡಿದ್ದಾರೆ. ಜ್ಯೋತಿಷಿ ಇಡೀ ಕುಟುಂಬವೇ ನಿರ್ನಾಮಗೊಂಡಿದೆ.
ಘಾಜಿಯಾಬಾದ್ (ಮಾ.20) ಹಲವರ ಭವಿಷ್ಯ, ಎದುರಾಗುವ ಆಪತ್ತು, ಅದಕ್ಕೆ ಪರಿಹಾರಗಳನ್ನು ಸೂಚಿಸಿ ಹಲವರ ಬಾಳಿಗೆ ಬೆಳಕಾಗಿದ್ದ ಖ್ಯಾತ ಜ್ಯೋತಿಷಿ 13ನೇ ಮಹಡಿಯಿಂದ ಜಿಗಿದು ದುರಂತ ಅಂತ್ಯಕಂಡ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್‌ನ 13ನೇ ಮಹಡಿಯಲ್ಲಿನ ಮನೆಯಲ್ಲಿ ವಾಸವಾಗಿದ್ದ ಜ್ಯೋತಿಷಿ ಹಾಗೂ ಆತನ ತಾಯಿ ಇಬ್ಬರು ಅಂತ್ಯಕಂಡಿದ್ದಾರೆ. ಜ್ಯೋತಿಷಿ ಸಾವಿನ ಬಳಿಕ ಮನೆ ಪರಿಶೋಧಿಸಿದ ಪೊಲೀಸರಿಗೆ ಬೆಡ್ ಮೇಲೆ ಜ್ಯೋತಿಷಿ ತಾಯಿ ಶವ ಪತ್ತೆಯಾಗಿದೆ. ತಾಯಿ ಮೃತಪಟ್ಟು 2 ರಿಂದ 3 ದಿನದ ಬಳಿಕ ಜ್ಯೋತಿಷಿ ದುರಂತ ಅಂತ್ಯಕಂಡ ಘಟನೆ ಘಾಜಿಯಾಬಾದ್‌ನಲ್ಲಿ ನಡೆದಿದೆ.
ಅನುಮಾನ ತಂದ ತಾಯಿ ಸಾವು
13ನೇ ಮಹಡಿಯಿಂದ ವ್ಯಕ್ತಿಯೊಬ್ಬರು ಜಿಗಿದಿದ್ದಾರೆ ಅನ್ನೋ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದರು. ಬಳಿಕ ಜ್ಯೋತಿಷಿ ಮನೆಯ ಪರಿಶೋಧನೆಗೆ ತೆರಳಿದ್ದಾರೆ. 13ನೇ ಮಹಡಿಯಲ್ಲಿರುವ ಮನೆ ಪರಿಶೀಲನೆ ನಡೆಸುತ್ತಿರುವಾಗ ಬೆಡ್ ಮೇಲೆ ಜ್ಯೋತಿಷಿ ತಾಯಿ ಶವ ಪತ್ತೆಯಾಗಿದೆ. ಅಚ್ಚರಿ ಎಂದರೆ ಜ್ಯೋತಿಷಿ ತಾಯಿ ಸತ್ನನಂ ಕೌರ್ ಮೃತಪಟ್ಟು 2 ರಿಂದ 3 ದಿನ ಆಗಿತ್ತು. ತಾಯಿ ಮೃತಪಟ್ಟ 2ರಿಂದ 3 ದಿನದ ಬಳಿಕ ಜ್ಯೋತಿಷಿ ಮಹಡಿಯಿಂದ ಜಿಗಿದು ಅಂತ್ಯಕಂಡಿದ್ದರು. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ.
ಜ್ಯೋತಿಷಿ ತಾಯಿ ಮೃತದೇಹದಲ್ಲಿ ಯಾವುದೇ ಗಾಯದ ಗುರುತುಗಳಿರಲಿಲ್ಲ. ಕೋಣೆ ಸೇರಿದಂತೆ ಇಡೀ ಮನೆಯಲ್ಲಿ ಹುಡುಕಾಡಿದರೂ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ. ತಾಯಿಯನ್ನು ಹತ್ಯೆ ಮಾಡಿ ಜ್ಯೋತಿಷಿ ರಾಜವೀರ್ ದುರಂತ ಅಂತ್ಯಕಂಡಿದ್ದಾರಾ, ಅಥವಾ ಸ್ವಯಂ ಬದುಕುಂ ಅಂತ್ಯಗೊಳಿಸಿದ್ದಾರೋ ಅನ್ನೋ ಕುರಿತು ಮರಣೋತ್ತರ ಪರೀಕ್ಷೆ ವರದಿಗೆ ಪೊಲೀಸರು ಕಾಯುತ್ತಿದ್ದಾರೆ.
ತೀವ್ರ ಸಂಕಷ್ಟ ಎದುರಿಸುತ್ತಿದ ಜ್ಯೋತಿಷಿ
42 ವರ್ಷದ ಜ್ಯೋತಿಷಿ ರಾಜವೀರ್ ಘಾಜಿಯಾಬಾದ್‌ನ ಕವಿನಗರದಲ್ಲಿ ಜನಪ್ರಿಯರಾಗಿದ್ದರು. ತಾಯಿ ಜೊತೆ ಮಹಗನ್ ಸೊಸೈಟಿಯ ವಿನಾಯಕ ಟವರ್‌ನ 13ನೇ ಮಹಡಿಯಲ್ಲಿ ವಾಸವಿದ್ದರು. ಪತ್ನಿ ಹಾಗೂ ಮಕ್ಕಳು ದೂರವಾದ ಬಳಿಕ ತಾಯಿ ಜೊತೆ ವಾಸವಿದ್ದರು. ಜ್ಯೋತಿಷಿ ಕಳೆದೊಂದು ವರ್ಷದಿಂದ ಖಿನ್ನತೆಗೆ ಜಾರಿದ್ದರು. ಕುಟುಂಬದಲ್ಲಿ ಎದ್ದ ಬಿರುಗಾಳಿ, ಒಂದೇ ವರ್ಷದಲ್ಲಿ ಎಲ್ಲರನ್ನು ಕಳೆದುಕೊಂಡ ನೋವು ಜ್ಯೋತಿಷಿಗೆ ಕಾಡಿತ್ತು. ಇತ್ತ ಜ್ಯೋತಿಷಿ ವೃತ್ತಿಯಲ್ಲೂ ಆದಾಯ ಕುಂಠಿತವಾಗಿತ್ತು. ಹೀಗಾಗಿ ಆರ್ಥಿಕವಾಗಿಯೂ ತೀವ್ರ ಸಂಕಷ್ಟ ಎದುರಿಸುತ್ತಿದ್ದರು ಅನ್ನೋದು ವಿಚ್ಚೇದಿತ ಪತ್ನಿ ಹೇಳಿದ್ದಾರೆ.
ಸರಿಸುಮಾರು ಒಂದು ವರ್ಷದಲ್ಲಿ ಜ್ಯೋತಿಷಿ ಬಾಳಿನಲ್ಲಿ ಅಲ್ಲೋಲಕಲ್ಲೋಲ ಎದ್ದಿದೆ. ಪತ್ನಿ ಹಾಗೂ ಮಕ್ಕಳೂ ದೂರವಾಗಿದ್ದರೆ. ವಿಚ್ಚೇದನ ಪಡೆದು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಇಷ್ಟೇ ಅಲ್ಲ ಒಂದೇ ವರ್ಷದಲ್ಲಿ ಜ್ಯೋತಿಷಿ ತಂದೆ ಹಾಗೂ ಸಹೋದರ ಮೃತಪಟ್ಟಿದ್ದಾರೆ. ಸಹೋದನ ಪತ್ನಿ ಮರು ಮದುವೆಯಾಗಿ ತೆರಳಿದ್ದಾಳೆ. ಜ್ಯೋತಿಷಿ ಹಾಗೂ ತಾಯಿ ಇಬ್ಬರೇ ಮನೆಯಲ್ಲಿ ವಾಸವಿದ್ದರು. ಕಳೆದ ನಾಲ್ಕು ತಿಂಗಳಿನಿಂದ ವಿಚ್ಚೇದಿತ ಪತ್ನಿಗೆ ಜೀವನಾಂಶ ಕೂಡ ನೀಡಿಲ್ಲ. ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದರು ಎನ್ನಲಾಗುತ್ತಿದೆ.