Headlines

ಮದುವೆ ಸಮಾರಂಭ ಹತ್ತಿರ ಬರ್ತಿದಂತೆ ಚಿನ್ನದ ಬೆಲೆ ಭಾರೀ ಇಳಿಕೆ, ಡಾಲರ್ ಮೌಲ್ಯ ಏರಿಕೆ ಕನಿಷ್ಟ ಮಟ್ಟಕ್ಕೆ ಇಳಿದ ಬಂಗಾರ! | Gold Prices Fall To One Week Low As Dollar Strengthens February 17 Gold Rates Drop Across Major Indian Cities Gow

ಮದುವೆ ಸಮಾರಂಭ ಹತ್ತಿರ ಬರ್ತಿದಂತೆ ಚಿನ್ನದ ಬೆಲೆ ಭಾರೀ ಇಳಿಕೆ, ಡಾಲರ್ ಮೌಲ್ಯ ಏರಿಕೆ ಕನಿಷ್ಟ ಮಟ್ಟಕ್ಕೆ ಇಳಿದ ಬಂಗಾರ! | Gold Prices Fall To One Week Low As Dollar Strengthens February 17 Gold Rates Drop Across Major Indian Cities Gow



ಮದುವೆ ಸಮಾರಂಭ ಹತ್ತಿರ ಬರ್ತಿದಂತೆ ಚಿನ್ನದ ಬೆಲೆ ಭಾರೀ ಇಳಿಕೆ, ಡಾಲರ್ ಮೌಲ್ಯ ಏರಿಕೆ ಕನಿಷ್ಟ ಮಟ್ಟಕ್ಕೆ ಇಳಿದ ಬಂಗಾರ! | Gold Prices Fall To One Week Low As Dollar Strengthens February 17 Gold Rates Drop Across Major Indian Cities Gow

ಜಾಗತಿಕ ರಾಜಕೀಯ ಬೆಳವಣಿಗೆಗಳು ಮತ್ತು ಡಾಲರ್ ಮೌಲ್ಯದ ಏರಿಕೆಯಿಂದಾಗಿ ಚಿನ್ನದ ಬೆಲೆಗಳು ಒಂದು ವಾರದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿವೆ. ಫೆಬ್ರವರಿ 17 ರಂದು ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ 24, 22, ಮತ್ತು 18 ಕ್ಯಾರೆಟ್ ಚಿನ್ನದ ದರದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಬೆಂಗಳೂರು: ಮಂಗಳವಾರ ಷೇರು ಮಾರುಕಟ್ಟೆ ವಹಿವಾಟು ಮುಗಿದಾಗ ಚಿನ್ನದ ಬೆಲೆಗಳು ಒಂದು ವಾರಕ್ಕಿಂತಲೂ ಹೆಚ್ಚು ಅವಧಿಯಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿವೆ. ಜಾಗತಿಕ ಭೌಗೋಳಿಕ ರಾಜಕೀಯ ಬೆಳವಣಿಗೆಗಳು ಹಾಗೂ ಅಮೆರಿಕದ Federal Reserve (ಫೆಡರಲ್ ರಿಸರ್ವ್) ನ ಮುಂದಿನ ಹಣಕಾಸು ನೀತಿ ದೃಷ್ಟಿಕೋನಕ್ಕೆ ಸಂಬಂಧಿಸಿದ ಸಂಕೇತಗಳನ್ನು ಹೂಡಿಕೆದಾರರು ಸಮೀಪದಿಂದ ಗಮನಿಸುತ್ತಿರುವ ಹಿನ್ನೆಲೆಯಲ್ಲಿ, ಡಾಲರ್ ಮೌಲ್ಯದಲ್ಲಿ ಬಲವಾದ ಏರಿಕೆ ಕಂಡುಬಂದಿದ್ದು, ಇದರ ಪರಿಣಾಮವಾಗಿ ಚಿನ್ನದ ಬೆಲೆಗಳು ಇಳಿಕೆಯತ್ತ ಸಾಗಿದೆ.

ಫೆಬ್ರವರಿ 17ರಂದು ಭಾರತದೆಲ್ಲೆಡೆ ಚಿನ್ನದ ದರ ಕುಸಿತ

ಫೆಬ್ರವರಿ 17 ರಂದು ಭಾರತದಲ್ಲಿನ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ, ಎಲ್ಲ ನಗರಗಳಲ್ಲೂ 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆಗಳು ಕಡಿಮೆಯಾಗಿವೆ. ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನದ ಬೆಲೆಗಳ ವಿವರ ಇಲ್ಲಿದೆ. ಭಾರತದಲ್ಲಿ ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನ: ₹1,41,350 ರೂ ಇದೆ.

ಬೆಂಗಳೂರಿನಲ್ಲಿ ಇಂದಿನ ಅಂದರೆ ಫೆಬ್ರವರಿ 17ರಂದು ಚಿನ್ನದ ಬೆಲೆ ಈ ರೀತಿ ಇದೆ

  • 24 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹15,420 (ಇಂದು ಮಾತ್ರ ₹224 ಇಳಿಕೆ)
  • 22 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹14,135 (ಇಂದು ಮಾತ್ರ ₹205 ಇಳಿಕೆ)
  • 18 ಕ್ಯಾರೆಟ್ ಚಿನ್ನ (999 ಚಿನ್ನ): ಪ್ರತಿ ಗ್ರಾಂಗೆ ₹11,565 (ಇಂದು ಮಾತ್ರ ₹168 ಇಳಿಕೆ)

ಈ ತಿಂಗಳು ಒಟ್ಟು 6,380 ರೂ ಇಳಿಕೆ ಕಂಡ ಚಿನ್ನ

ಇದನ್ನು ಫೆಬ್ರವರಿ 1 ರ ಆರಂಭದ ದರಗಳೊಂದಿಗೆ ಇಂದಿನ ದರ ಹೋಲಿಕೆ ಮಾಡಿದರೆ ಗಣನೀಯ ಇಳಿಕೆ ಕಂಡಿದೆ. 22 ಕ್ಯಾರೆಟ್ ಚಿನ್ನದ 1 ಗ್ರಾಂ ನಲ್ಲಿ ಬರೋಬ್ಬರಿ 585 ರೂ ಇಳಿಕೆ ಕಂಡಿದೆ. ಅಂದರೆ 10 ಗ್ರಾಂಗೆ ಬರೋಬ್ಬರಿ 5,850 ಇಳಿಕೆ ಕಂಡಿದೆ. ಇನ್ನು 24 ಕ್ಯಾರೆಟ್ ಚಿನ್ನ 1 ಗ್ರಾಂ ನಲ್ಲಿ ಬರೋಬ್ಬರಿ 638 ರೂ ಇಳಿಕೆ ಕಂಡಿದೆ. 10 ಗ್ರಾಂಗೆ ಅಂದರೆ 6,380 ರೂ ಇಳಿಕೆ ಕಂಡಿದೆ.

22 ಕ್ಯಾರೆಟ್ ಚಿನ್ನ

ಫೆಬ್ರವರಿ 1ರ ದರ: ₹14,720

ಫೆಬ್ರವರಿ 17ರ ದರ: ₹14,135

24 ಕ್ಯಾರೆಟ್ ಚಿನ್ನ

ಫೆಬ್ರವರಿ 1ರ ದರ: ₹16,058

ಫೆಬ್ರವರಿ 17ರ ದರ: ₹15,420

ದೆಹಲಿಯಲ್ಲಿ ಇಂದು ಚಿನ್ನದ ಬೆಲೆ

24 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹15,435

22 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹14,150

18 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹11,580

ಮುಂಬೈನಲ್ಲಿ ಚಿನ್ನದ ಬೆಲೆ

24 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹15,420

22 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹14,135

18 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹11,565

ಹೂಡಿಕೆದಾರರ ದೃಷ್ಟಿ ಮುಂದೇನು?

ಜಾಗತಿಕ ಆರ್ಥಿಕ ಅನಿಶ್ಚಿತತೆ, ಡಾಲರ್ ಬಲವರ್ಧನೆ ಹಾಗೂ ಅಮೆರಿಕದ ಬಡ್ಡಿದರ ನೀತಿಗೆ ಸಂಬಂಧಿಸಿದ ನಿರೀಕ್ಷೆಗಳ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಳಿತಗಳ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



Source link

Leave a Reply

Your email address will not be published. Required fields are marked *