Headlines

teacher marries student fact check ಶಿಕ್ಷಕ-ವಿದ್ಯಾರ್ಥಿನಿ ಮದುವೆ: ವೈರಲ್ ಫೋಟೋದ ಸತ್ಯಾಸತ್ಯತೆ | 42 Year Old Teacher Marries 22 Year Old Female Student As Second Wife What Is The Truth Behind The Viral Video

teacher marries student fact check ಶಿಕ್ಷಕ-ವಿದ್ಯಾರ್ಥಿನಿ ಮದುವೆ: ವೈರಲ್ ಫೋಟೋದ ಸತ್ಯಾಸತ್ಯತೆ | 42 Year Old Teacher Marries 22 Year Old Female Student As Second Wife What Is The Truth Behind The Viral Video



teacher marries student fact check ಶಿಕ್ಷಕ-ವಿದ್ಯಾರ್ಥಿನಿ ಮದುವೆ: ವೈರಲ್ ಫೋಟೋದ ಸತ್ಯಾಸತ್ಯತೆ | 42 Year Old Teacher Marries 22 Year Old Female Student As Second Wife What Is The Truth Behind The Viral Video

42 ವರ್ಷದ ಶಿಕ್ಷಕರೊಬ್ಬರು ತಮ್ಮ 22 ವರ್ಷದ ವಿದ್ಯಾರ್ಥಿನಿಯನ್ನು ಎರಡನೇ ಮದುವೆಯಾಗಿದ್ದಾರೆ ಎಂಬ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊದಲ ಪತ್ನಿಯ ಒಪ್ಪಿಗೆಯೂ ಇದೆ ಎನ್ನಲಾದ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ಇದು ಕೇವಲ ಎಡಿಟ್ ಮಾಡಿದ ಮೀಮ್ ಎಂಬುದು ಬಯಲಾಗಿದೆ.

ಸಾಮಾಜಿಕ ಜಾಲತಾಣಗಳು ಅಂದ ಮೇಲೆ ಅಲ್ಲಿ ದಿನಕ್ಕೊಂದು ವಿಚಿತ್ರ ಸುದ್ದಿಗಳು ಸದ್ದು ಮಾಡುವುದು ಸಾಮಾನ್ಯ. ಕೆಲವೊಮ್ಮೆ ಕಣ್ಣಿಗೆ ಕಂಡಿದ್ದೆಲ್ಲಾ ನಿಜವೆಂದು ನಂಬುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇತ್ತೀಚೆಗೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವೊಂದು ಭಾರಿ ಸಂಚಲನ ಸೃಷ್ಟಿಸಿದೆ. ಅದೇನೆಂದರೆ, 42 ವರ್ಷದ ಶಿಕ್ಷಕರೊಬ್ಬರು ತನ್ನದೇ ಶಾಲೆಯ 22 ವರ್ಷದ ವಿದ್ಯಾರ್ಥಿನಿಯನ್ನು ಎರಡನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಇಂಟರ್‌ನೆಂಟ್‌ಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ವೈರಲ್ ಪೋಸ್ಟ್‌ನಲ್ಲೇನಿದೆ? ಮೊದಲ ಪತ್ನಿಯ ಒಪ್ಪಿಗೆ!

ವೈರಲ್ ಆಗಿರುವ ಪೋಸ್ಟ್ ಪ್ರಕಾರ, ಈ ‘ಮಾಸ್ಟರ್’ ತಮ್ಮದೇ ಶಾಲೆಯ ವಿದ್ಯಾರ್ಥಿನಿಯನ್ನೇ ಎರಡನೇ ಮದುವೆಯಾಗಿದ್ದಾರೆ.ಎನ್ನಲಾಗಿದೆ. ಈ ಸುದ್ದಿಯಲ್ಲಿ ಅಚ್ಚರಿಯ ವಿಷಯವೆಂದರೆ, ಎರಡನೇ ಮದುವೆ ಆಗೋದಂದ್ರೆ ಮೊದಲ ಪತ್ನಿ ಡೈವೋರ್ಸ್ ಕೊಟ್ಟರುವುದು, ಮೃತವಾಗಿರುವುದು ಸಾಮಾನ್ಯಆದರೆ ಈ ಮದುವೆಗೆ ಶಿಕ್ಷಕರ ಮೊದಲ ಪತ್ನಿಯಿಂದ ಯಾವುದೇ ಆಕ್ಷೇಪವಿಲ್ಲವಂತೆ! ಈ ಒಂದು ಸಾಲು ಈಗ ಇಂಟರ್ನೆಟ್ ಲೋಕದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಈ ಬಗ್ಗೆ ಪರ-ವಿರೋಧದ ಮಾತುಗಳನ್ನಾಡುತ್ತಿದ್ದಾರೆ.

ಈಜುಕೊಳದಲ್ಲಿ ಇಬ್ಬರು ಪತ್ನಿಯರೊಂದಿಗೆ ಮೋಜು ಮಸ್ತಿ

ಈ ವೈರಲ್ ಪೋಸ್ಟ್‌ನಲ್ಲಿ ಒಬ್ಬ ಮಾಸ್ಟರ್, ಇಬ್ಬರು ಮಹಿಳೆಯರು ಮತ್ತು ಒಂದು ಮಗು ಈಜುಕೊಳದಲ್ಲಿ ಕುಳಿತು ಫೋಟೋಗೆ ಫೋಸ್ ನೀಡುತ್ತಿದ್ದಾರೆ. ಈ ಚಿತ್ರಕ್ಕೆ ‘ಇದು 42 ವರ್ಷದ ಶಿಕ್ಷಕ, ತನ್ನದೇ ಶಾಲೆಯ 22 ವರ್ಷದ ವಿದ್ಯಾರ್ಥಿಯನ್ನು ಮರುಮದುವೆಯಾಗಿದ್ದಾರೆ. ಇವರ ಮೊದಲ ಪತ್ನಿಗೆ ಇದಕ್ಕೆ ಯಾವುದೇ ಆಕ್ಷೇಪವಿಲ್ಲ’ಎಂದು ಎಂಬ ಕ್ಯಾಪ್ಷನ್ ಬರೆಯಲಾಗಿದೆ. ಈ ಪೋಸ್ಟ್‌ಗೆ ಹಲವು ಹಲವರು ಕಾಮೆಂಟ್ ಮಾಡಿದ್ದು,’ನಾವು ಬರೀ ಜನಗಣತಿ ಹೆಚ್ಚಿಸಲು ಹುಟ್ಟಿದ್ದೇವೆ, ಮಾಸ್ಟರರು ನಿಜವಾದ ಜೀವನ ನಡೆಸುತ್ತಿದ್ದಾರೆ’ ಎಂಬ ತಮಾಷೆಯ ಸಾಲುಗಳು ಬರೆಯಲಾಗಿೆ. ನೆಟ್ಟಿಗರ ತಮಾಷೆಯ ಕಾಮೆಂಟ್‌ಗಳು ‘ಮಾಸ್ತರ್ ಶಾಲೆಗೆ ಹೋಗೋದು ಪಾಠ ಕಲಿಸೋಕ, ಹುಡುಗಿಯರ ಹಾರ್ಟ್ ಗೆಲ್ಲೋಕಾ? ಈ ಫೋಟೋ ನೋಡಿದ ಮೇಲೆ ಸಾಮಾಜಿಕ ಮಾಧ್ಯಮ ಬಳಕೆದಾರರು ಸುಮ್ಮನಿರುತ್ತಾರೆಯೇ? ಕಾಮೆಂಟ್ ಬಾಕ್ಸ್ ತುಂಬೆಲ್ಲಾ ತಮಾಷೆಯ ಹೊಳೆಯೇ ಹರಿಸಿದ್ದಾರೆ. ಇನ್ನೂ ಕೆಲವು ಯುವಕರು ‘ನಮ್ದು ದುರಾದೃಷ್ಟ’ ಎಂದು ಮರುಗುತ್ತಿದ್ದಾರೆ. ಒಟ್ಟಿನಲ್ಲಿ ಈ ಫೋಟೋ ಇಡೀ ದಿನ ಸೋಷಿಯಲ್ ಮೀಡಿಯಾ ಕಬಳಿಸಿದೆ.

ಫ್ಯಾಕ್ಟ್ ಚೆಕ್ ಮಾಡಿದಾಗ ಬಯಲಾಯ್ತು ಅಸಲಿ ಸತ್ಯ !

ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಅಸಲಿ ಕಥೆಯೇ ಬೇರೆಯಿದೆ ಎಂಬುದು ಬಹಿರಂಗವಾಗಿದೆ. ಎಕ್ಸ್ (ಟ್ವಿಟರ್) ನ AI ಪರಿಕರವಾದ ‘ಗ್ರೋಕ್’ ಪ್ರಕಾರ, ಈ ಚಿತ್ರವು ಕೇವಲ ಒಂದು ಮೀಮ್ (Meme) ಸೃಷ್ಟಿಸಲು ಎಡಿಟ್ ಮಾಡಲಾದ ಫೋಟೋವಾಗಿದೆ. ಎಡಿಟಿಂಗ್ ಟೂಲ್ಸ್ ಅಥವಾ AI ಬಳಸಿ ಚಿತ್ರದ ಮುಖದ ಭಾವನೆಗಳನ್ನು ಮತ್ತು ಲೇಬಲ್‌ಗಳನ್ನು ಬದಲಾಯಿಸಲಾಗಿದೆ. ಆದ್ದರಿಂದ, ವೈರಲ್ ಆಗಿರುವ ಈ ‘ಮಾಸ್ಟರ್‌ಜಿ’ ಕಥೆ ಕೇವಲ ಒಂದು ಕಪೋಲಕಲ್ಪಿತ ತಮಾಷೆಯಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದೆ.

ಗಮನಿಸಿ: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಇಂತಹ ವಿಚಿತ್ರ ಸುದ್ದಿಗಳನ್ನು ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಒಮ್ಮೆ ಪರಿಶೀಲಿಸುವುದು ಒಳಿತು.

Scroll to load tweet…



Source link

Leave a Reply

Your email address will not be published. Required fields are marked *