ನಲ್ಲಿಮೂಳೆ ಸ್ಟಾರ್​​​​​ ವಿರುದ್ದ ತಿರುಗಿಬಿದ್ದ ರಘು? ಗಿಲ್ಲಿಯನ್ನ ಫ್ರೆಂಡ್ಸ್​ ಗ್ರೂಪ್​​​ ನಿಂದ ಹೊರಗಿಟ್ಟ ರಘು..! | Bigg Boss Kannada Season 12 Winner Gilli Trends Again As Raghu Unfollows Him On Instagram Kvn

ನಲ್ಲಿಮೂಳೆ ಸ್ಟಾರ್​​​​​ ವಿರುದ್ದ ತಿರುಗಿಬಿದ್ದ ರಘು? ಗಿಲ್ಲಿಯನ್ನ ಫ್ರೆಂಡ್ಸ್​ ಗ್ರೂಪ್​​​ ನಿಂದ ಹೊರಗಿಟ್ಟ ರಘು..! | Bigg Boss Kannada Season 12 Winner Gilli Trends Again As Raghu Unfollows Him On Instagram Kvn


ಬಿಗ್‌ ಬಾಸ್​ ಸೀಸನ್​​ 12ರ ವಿನ್ನರ್​ ಗಿಲ್ಲಿ, ದೊಡ್ಮನೆಯಲ್ಲಿ ಸಂಪಾದಿಸಿದ್ದ ಸ್ನೇಹವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರ ಆಪ್ತ ಸ್ನೇಹಿತನಾಗಿದ್ದ ರಘು, ಇದೀಗ ಇನ್‌ಸ್ಟಾಗ್ರಾಂನಲ್ಲಿ ಗಿಲ್ಲಿಯನ್ನು ಅನ್‌ಫಾಲೋ ಮಾಡುವ ಮೂಲಕ ತಮ್ಮ ಸ್ನೇಹದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದಾರೆ.

ಬಿಗ್‌ ಬಾಸ್​ ಸೀಸನ್​​ 12ರ ವಿನ್ನರ್​ ಗಿಲ್ಲಿ ನಟ ಈಗ ಸಿಕ್ಕಾಪಟ್ಟೆ ಟ್ರೆಂಡಿಂಗ್. ಗಿಲ್ಲಿ ಹೋದಲ್ಲಿ ಬಂದಲ್ಲೆಲ್ಲಾ ಜನವೋ ಜನ. ಆ ಮಟ್ಟಕ್ಕೆ ಜನರ ಮನಸ್ಸು ಗೆದ್ದಿದ್ದಾನೆ. ಆದ್ರೆ ಇಂಥಹ ನಲ್ಲಿ ಮೂಳೆ ಸ್ಟಾರ್‌ಗೆ ಒಂಟಿ ಮನೆ ಸ್ನೇಹಿತ ರಘು ಮನಸ್ಸು ಗೆಲ್ಲೋಕೆ ಇನ್ನೂ ಆಗ್ಲೇ ಇಲ್ಲ. ಇಷ್ಟು ದಿನ ಹೇಗೋ ಗಿಲ್ಲಿ ಕ್ವಾಟ್ಲೆ ಸಹಿಸಿಕೊಂಡಿದ್ದ ರಘು ಈಗ ಗಿಲ್ಲಿ ವಿರುದ್ಧನೇ ತಿರುಗಿ ಬಿದ್ದಿದ್ದಾರೆ. ಇವನ ಸಹವಾಸವೇ ಬೇಡ ಅಂತ ಡಿಸೈಡ್ ಮಾಡಿದ್ದಾರೆ. ಹಾಗಾದ್ರೆ ಗಿಲ್ಲಿಗೂ ರಘು ಮಧ್ಯೆ ಏನಾಗಿದೆ. ಗಿಲ್ಲಿಯನ್ನ ರಘು ದೂರ ಇಟ್ಟಿದ್ದು ಯಾಕೆ? ನೋಡೋಣ ಬನ್ನಿ.

ಬಿಗ್‌ ಬಾಸ್ ಬಳಿಕವೂ ಹೆಚ್ಚಾಗಿದೆ ಗಿಲ್ಲಿ ಗಮ್ಮತ್ತು!

ಬಿಗ್‌ ಬಾಸ್ ಸೀಸನ್ -12 ಮುಗಿದಿದೆ. ಇದನ್ನ ನೋಡುತ್ತಿದ್ದ ಜನ ಈಗ ತಣ್ಣಗಾಗಿದ್ದಾರೆ. ಆದ್ರೆ ಗಿಲ್ಲಿ ನಟ ಕೊಡೋ ಕ್ವಾಟ್ಲೆ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹೊಸ ಬೆಂಕಿ ಹೊಚ್ಚುತ್ತಿದೆ. ಗಿಲ್ಲಿ ನಟ ಬಿಗ್‌ ಬಾಸ್​ ಗೆದ್ದಿದ್ದು, ಅಲ್ಲಿದ್ದ ಹಲವು ಸಹ ಸ್ಪರ್ಧಿಗಳಿಗೆ ಇಷ್ಟವಿಲ್ಲ. ಯಾಕಂದ್ರೆ ಮನೆಯೊಳಗೆ ಇದ್ದಾಗ ಸಹ ಸ್ಪರ್ಧಿಗಳನ್ನ ವಯಕ್ತಿಯ ತೇಜೋವಧೆ ಮಾಡುತ್ತಲೇ ಗಿಲ್ಲಿ ಗೆದ್ದಿದ್ದಾನೆ ಅನ್ನೋದು ಅವರ ವಾದ. ಗಿಲ್ಲಿಯ ಕೆಲವೊಂದು ನಡವಳಿಕೆ ನೋಡಿದ್ರೆ ಅದು ನಿಜ ಅನ್ನಬಹುದೇನೋ.

ಆದ್ರೆ ಅದೆಲ್ಲಾ ಮುಗಿದ ಅಧ್ಯಾಯ. ಬಟ್ ಈಗ ಹೊಸ ಮ್ಯಾಟರ್ ಏನಪ್ಪ ಅಂದ್ರೆ, ಗಿಲ್ಲಿ ಬಿಗ್‌ ಬಾಸ್ ಮನೆಯಲ್ಲಿ ಸಂಪಾದಿಸಿದ್ದ ಸ್ನೇಹವನ್ನ ಮನೆಯಿಂದ ಹೊರ ಬಂದ ಮೇಲೆ ಕಾಪಾಡಿಕೊಳ್ಳುತ್ತಿಲ್ಲ. ಯಾಕಂದ್ರೆ ಗಿಲ್ಲಿ ನಟನಿಂದ ಒಬ್ಬೊಬ್ಬರೇ ಸ್ಪರ್ಧಿಗಳು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಅಂಥವರಲ್ಲಿ ಬಾಡಿ ಬಿಲ್ಡರ್​, ಬಿಗ್‌ ಬಾಸ್​ ಮನೆಯಲ್ಲಿ ಗಿಲ್ಲಿಗೆ ಸಿಕ್ಕ ಒಳ್ಳೆಯ ಸ್ನೇಹಿತ ರಘು ಕೂಡ ಒಬ್ರು.

ಗಿಲ್ಲಿಯನ್ನ ಫ್ರೆಂಡ್ಸ್​ ಗ್ರೂಪ್​​​ನಿಂದ ಹೊರಗಿಟ್ಟ ರಘು!

ಬಿಗ್‌ ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ಮ್ಯೂಟಂಟ್ ರಘು ನಡುವೆ ಒಳ್ಳೆ ಸ್ನೇಹ ಇತ್ತು. ಕೆಲವೊಮ್ಮೆ ಕಿತ್ತಾಡಿದ್ದು ಇದೆ. ಗಿಲ್ಲಿ ಮೇಲೆ ರಘು ಸಿಟ್ಟಾಗಿದ್ದು ಆಗಿದೆ. ಇವರಿಬ್ಬರನ್ನ ಟಾಮ್ ಆ್ಯಂಡ್ ಜರಿ ಅಂತಲೂ ಕರೆದಿದ್ರು. ಇದನ್ನ ರಘು ಕೂಡ ಎಂಜಾಯ್ ಮಾಡಿದ್ರು. ದೊಡ್ಮನೆಯಿಂದ ಹೊರ ಬಂದ ಬಳಿಕ ರಘು ಗಿಲ್ಲಿ ಸ್ನೇಹ ಮುಂದುವರೆದಿದ್ದು. ಈಗ ಇದ್ದಕ್ಕಿಂದಂತೆ ಗಿಲ್ಲಿಯನ್ನ ತನ್ನ ಫ್ರೆಂಡ್ಸ್​ ಲೀಸ್ಟ್‌ನಿಂದ ಡಿಲೀಟ್ ಮಾಡಿದ್ದಾರೆ ರಘು. ಇನ್‌ಸ್ಟಾಗ್ರಾಂನಲ್ಲಿ ಮಂಡ್ಯ ಹೈದನನ್ನ ಅನ್‌ ಫಾಲೋ ಮಾಡಿದ್ದಾರೆ ಬಾಡಿ ಬಿಲ್ಡರ್​ ರಘು..

ಇನ್ಸ್ಟಾಗ್ರಾಮ್‌ನಲ್ಲಿ ರಘು ಅಕೌಂಟ್ ಅನ್ನು ಗಿಲ್ಲಿ ಫಾಲೋ ಮಾಡ್ತಿಲ್ಲ. ಆದರೆ ರಘು ಮಾತ್ರ ಗಿಲ್ಲಿ ಅಕೌಂಟ್ ಫಾಲೋ ಮಾಡುತ್ತಿದ್ದರು. ಇದೀಗ ದಿಢೀರನೆ ಗಿಲ್ಲಿಯನ್ನು ರಘು ಅನ್ ಫಾಲೋ ಮಾಡಿದ್ದೇಕೆ? ಕಾರಣ ಏನು ಅಂತ ಹುಡುಕುತ್ತಿದ್ದಾರೆ ಗಿಲ್ಲಿ ಫ್ಯಾನ್ಸ್. ಹೀಗಾಗಿ ಗಿಲ್ಲಿ ಸ್ನೇಹಕ್ಕೆ ಅರ್ಹನಾ ಅನ್ನೋ ಬಗ್ಗೆ ರಘು ಉತ್ತರಿಸಬೇಕಿದೆ.

ವಿಜಯ್ ಪಟೆದಾರ್, ಏಷ್ಯಾನೆಟ್ ಸುವರ್ಣ ನ್ಯೂಸ್



Source link

Leave a Reply

Your email address will not be published. Required fields are marked *