‘ಕಾಂತಾರ ಚಾಪ್ಟರ್ 1’ಗೆ ಯಾಕೆ ಹೆಚ್ಚು ಪ್ರಚಾರ ಮಾಡ್ತಿಲ್ಲ? ರಿಷಬ್ ಶೆಟ್ಟಿ ಹೇಳಿದ ಸೀಕ್ರೆಟ್ ಏನು? | Rishab Shetty Secret Behind Not To Promote More For Kantara Chapter 1

‘ಕಾಂತಾರ ಚಾಪ್ಟರ್ 1’ಗೆ ಯಾಕೆ ಹೆಚ್ಚು ಪ್ರಚಾರ ಮಾಡ್ತಿಲ್ಲ? ರಿಷಬ್ ಶೆಟ್ಟಿ ಹೇಳಿದ ಸೀಕ್ರೆಟ್ ಏನು? | Rishab Shetty Secret Behind Not To Promote More For Kantara Chapter 1



‘ಕಾಂತಾರ ಚಾಪ್ಟರ್ 1’ಗೆ ಯಾಕೆ ಹೆಚ್ಚು ಪ್ರಚಾರ ಮಾಡ್ತಿಲ್ಲ? ರಿಷಬ್ ಶೆಟ್ಟಿ ಹೇಳಿದ ಸೀಕ್ರೆಟ್ ಏನು? | Rishab Shetty Secret Behind Not To Promote More For Kantara Chapter 1

‘ಕಾಂತಾರ ಚಾಪ್ಟರ್ 1’ ಸಿನಿಮಾಕ್ಕೆ ಸಾಮಾನ್ಯವಾಗಿ ಬೇರೆ ಸಿನಿಮಾಗಳಿಗೆ ಮಾಡುವಂತೆ ಹೆಚ್ಚಿನ ಪ್ರಚಾರ ಮಾಡುತ್ತಿಲ್ಲ, ಪೋಸ್ಟರ್, ಟೀಸರ್, ಟ್ರೈಲರ್ ಇಷ್ಟನ್ನೇ ಮಾಡಿ, ಬೇರೆ ಭಾಷೆಗಳಲ್ಲಿ ಆಯಾ ಭಾಷೆಗಳ ಸ್ಟಾರ್‌ ನಟರೊಬ್ಬರಿಂದ ಟ್ರೈಲರ್ ರಿಲೀಸ್ ಮಾಡಿಸಿ ಸುಮ್ಮನಾಗಿದ್ದಾರೆ ಅಷ್ಟೇ..

ಸ್ಯಾಂಡಲ್‌ವುಡ್ ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ನಟನೆ ಹಾಗೂ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ ಸಿನಿಮಾ ರಿಲೀಸ್‌ಗೆ ಸಜ್ಜಾಗಿ ನಿಂತಿರೋದು ಗೊತ್ತೇ ಇದೆ. 02 ಅಕ್ಟೋಬರ್ 2025ರಂದು ಬಿಡುಗಡೆ ಆಗಲಿರುವ ಕಾಂತಾರ ಚಾಪ್ಟರ್ 1 (Kantara Chapter 1) ಸಿನಿಮಾಗೆ ಅಪಾರ ನಿರೀಕ್ಷೆ ಸೃಷ್ಟಿಯಾಗಿದೆ. ಈ ಮೊದಲು ತೆರೆಗೆ ಬಂದಿದ್ದ ‘ಕಾಂತಾರ’ ಚಿತ್ರವು 14 ಕೋಟಿ ಬಜೆಟ್‌ನಲ್ಲಿ ಸಿದ್ಧವಾಗಿ 450 ರಿಂದ 500 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು. ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾದ ಬಜೆಟ್ 125 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಆದರೆ, ಅಧಿಕೃತವಾಗಿ ಈ ಸಿನಿಮಾ ಬಜೆಟ್ ಎಷ್ಟು ಎಂಬುದನ್ನು ನಿರ್ಮಾಪಕರು ಬಿಟ್ಟುಕೊಟ್ಟಿಲ್ಲ.

ಅದೇನೇ ಇದ್ದರೂ, ಮುಂಬರುವ ಕಾಂತಾರ ಸಿನಿಮಾಗೆ ಭಾರೀ ನಿರೀಕ್ಷೆ ಹುಟ್ಟಿರುವುದು ಬಜೆಟ್ ಅಥವಾ ಮೇಕಿಂಗ್ ವಿಷಯಕ್ಕೆ ಅಲ್ಲ. ಇದಕ್ಕೂ ಮೊದಲು ಬಂದಿದ್ದ ಕಾಂತಾರ ಹುಟ್ಟಿಸಿರುವ ಕ್ರೇಜ್ ಅದು.. ಕಾಂತಾರದ ಹಿಂದಿನ ಭಾಗ ಎಂಬ ಕಾರಣಕ್ಕೆ, ಕಥೆಯಲ್ಲಿ ಏನಿರಬಹುದು? ಇದು ಪ್ರೀಕ್ವೆಲ್ ಆಗಿರುವುದರಿಂದ ಕೆಲವರಿಗೆ ವ್ಯಕ್ತಿಗತವಾಗಿ ಈ ಹಿಂದಿನ ಸಿನಿಮಾದಲ್ಲಿ ಮೂಡಿದ್ದ ಕೆಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಬಹುದಾ ಎಂಬ ಕುತೂಹಲ ಇರಬಹುದು. ಹೀಗಾಗಿಯೋ ಏನೋ, ಕಾಂತಾರ ಪ್ರೀಕ್ವೆಲ್‌ಗೆ ಸಿನಿಪ್ರೇಕ್ಷಕರು ಕಾಯುವಂತಾಗಿದೆ.

ಆದರೆ, ‘ಕಾಂತಾರ ಚಾಪ್ಟರ್ 1’ ಸಿನಿಮಾಕ್ಕೆ ಸಾಮಾನ್ಯವಾಗಿ ಬೇರೆ ಸಿನಿಮಾಗಳಿಗೆ ಮಾಡುವಂತೆ ಹೆಚ್ಚಿನ ಪ್ರಚಾರ ಮಾಡುತ್ತಿಲ್ಲ, ಪೋಸ್ಟರ್, ಟೀಸರ್, ಟ್ರೈಲರ್ ಇಷ್ಟನ್ನೇ ಮಾಡಿ, ಬೇರೆ ಭಾಷೆಗಳಲ್ಲಿ ಆಯಾ ಭಾಷೆಗಳ ಸ್ಟಾರ್‌ ನಟರೊಬ್ಬರಿಂದ ಟ್ರೈಲರ್ ರಿಲೀಸ್ ಮಾಡಸಿ ಸುಮ್ಮನಾಗಿದ್ದಾರೆ. ಅದೇ ಪ್ರಚಾರ ಇನ್ನಷ್ಟು ಪ್ರಚಾರ ಪಡೆಯುತ್ತಿದೆ ಅನ್ನೋದು ಬಿಟ್ಟರೆ ಕಾಂತಾರ ಸಿನಿಮಾ ಟೀಮ್ ಹೆಚ್ಚಿನ ಪ್ರಚಾರಕ್ಕೆ ಮುಂದಾಗಿಲ್ಲ. ಹಾಗಿದ್ದರೆ ಹೀಗೇಕೆ? ಕಾಂತಾರ ಟೀಮ್‌ಗೆ ಯಾಕೆ ಪ್ರಚಾರ ಮಾಡೋಕೆ ಆಸಕ್ತಿ ಇಲ್ಲ?

ಈ ಪ್ರಶ್ನೆಗೆ ಸ್ವತಃ ಕಾಂತಾರ ಸೃಷ್ಟಿಕರ್ತ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. ‘ಹೆಚ್ಚಿನ ಪ್ರಚಾರ ಮಾಡೋದು ಸಿನಿಮಾದ ಸವಿಯನ್ನ ಕೆಡಿಸಬಹುದು, ಸಿನಿಮಾಗೆ ಅತಿಯಾದ ನಿರೀಕ್ಷೆಯೇ ಭಾರವಾಗಿ ಪರಿಣಮಿಸಬಹುದು.. ಸೋ ಟೀಸರ್, ಮೇಕಿಂಗ್, ಟ್ರೈಲರ್ ಇಷ್ಟು ಸಾಕು ಇನ್ನೇನಿದ್ರೂ ಸಿನಿಮಾ ನೋಡಿ..’ ಎಂದಿದ್ದಾರೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ. ದಸರಾ, ವಿಜಯದಶಮಿ ಹಬ್ಬದ ದಿನ ಕಾಂತಾರ-1 ತೆರೆಗೆ ಬರಲಿದೆ. ಆ ದಿನ ಸಿನಿಮಾ ನೋಡಿ ಜನರು ಇಷ್ಟಪಡಲಿ, ಆ ದೃಶ್ಯವೈಭವ ನೋಡಿ ಪ್ರೇಕ್ಷಕರು ಸಿನಿಮಾಗೆ ‘ಜೈ’ ಎನ್ನಲಿ ಎಂದು ರಿಷಬ್ ಶೆಟ್ಟಿ ಕಾಯುತ್ತಿದ್ದಾರೆ ಎನ್ನಬಹುದು.

ನನ್ನಿಂದ ‘ಕಾಂತಾರ’ ಅಲ್ಲ, ಎಲ್ಲರೂ ಪಿಲ್ಲರ್‌ಗಳು!

ಜೊತೆಗೆ, ರಿಷಬ್ ಶೆಟ್ಟಿಯವರು ಬಹಳಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ‘ನನ್ನಿಂದ ‘ಕಾಂತಾರ’ ಅಲ್ಲ.. ಎಲ್ಲರೂ ಪಿಲ್ಲರ್‌ಗಳು.. ಖಂಡಿತ ನನ್ನೊಬ್ಬನಿಂದ ಆಗಿಲ್ಲ ಇದು.. 5 ವರ್ಷದಿಂದ ಸಿನಿಮಾ ಮಾಡಿದ್ದೀನಿ, ಆದ್ರೆ ಹೊಂಬಾಳೆ ಸಂಸ್ಥೆ ಯಾವತ್ತೂ ಬಜೆಟ್ ಬಗ್ಗೆ ಲೆಕ್ಕ ಕೇಳಲಿಲ್ಲ.. 3 ತಿಂಗಳಿಂದ ನಿದ್ರೆ ಮಾಡಿಲ್ಲನಾನು..

ಅವಘಡಗಳ ಬಗ್ಗೆ ಕೇಳ್ತಿದ್ರಿ.. 4-5 ಸಲ ನಾನೇ ಹೋಗ್ಬಿಡ್ತಿದ್ದೆ.. ಅಂಥಹ ರಿಸ್ಕಿ ಶೂಟಿಂಗ್ ಮಾಡಿದ್ವಿ ಈ ಸಿನಿಮಾಕ್ಕಾಗಿ.. ಆದರೆ ದೈವವೇ ಮತ್ತೆ ಕರೆದುಕೊಂಡು ಬಂದಿದೆ.. ಕಾಂತಾರ ಬಗ್ಗೆ ಹೇಳೋಕೆ ನನ್ನ ಬಳಿ ಪದಗಳಿಲ್ಲ.. ಇದು ನಂಗೆ ಎಮೋಷನಲ್ ಜರ್ನಿ… ವಿಶ್ವಮನ್ನಣೆ ಸಿಕ್ಕಿರೋದು ಕನ್ನಡಿಗರಿಂದ.. ನಿಮ್ಮಿಂದಲೇ ಚಾಪ್ಟರ್ 1 ಆಗಿದೆ.. ಈ ಸಿನಿಮಾ ಬಗ್ಗೆ ಜನರೇ ಮಾತಾಡ್ಬೇಕು..

ನನಗೆ ಸಾಮಾನ್ಯ ಜ್ಞಾನ ಹೋಗಿಬಿಟ್ಟಿದೆ.. ಸಿನಿಮಾದೊಳಗೆ ಸಂಪೂರ್ಣವಾಗಿ ಮುಳುಗಿದೀನಿ.. ಇನ್ನೊಂದು ಸಲ ಮಾಡೋಕೆ ಆಗುತ್ತೋ ಇಲ್ವೋ ಗೊತ್ತಿಲ್ಲ.. ‘ಕಾಂತಾರ’ ನಿಮ್ಮಿಂದ ನಿಮಗಾಗಿ.. ಮೊದಲ ಭಾಗ ಮಾಡಿದಾಗ ಅದು ಅಪ್ಪಟ ಕನ್ನಡದ ಸಿನಿಮಾ ಆಗಿತ್ತು. ಅದನ್ನು ದೇಶದ ಮಟ್ಟಕೆ ತೆಗೆದುಕೊಂದಿದ್ದು ಹೋಗಿದ್ದು ನಮ್ಮ ಜನರು.. ಹೀಗಾಗಿ ಈಗ ಬರ್ತಿರೋ ಕಾಂತಾರದಲ್ಲಿ ದೇಶದ ಹಲವು ಸಿನಿಮಾ ಮಂದಿ ಕೆಲ್ಸ ಮಾಡಿದ್ದಾರೆ.

ನಾನು ಈಗ ಹಳೆಯ ರಿಷಬ್ ಶೆಟ್ಟಿ ಅಲ್ಲ, ನನಗೆ ವಾಯ್ಸ್ ಬರ್ತಾ ಇಲ್ಲಾ!

ಇದರಲ್ಲಿ ನಮ್ಮ ಜನ ಕೂಡ ಕೆಲಸ ಮಾಡಿದ್ದಾರೆ. ನಾನು ಈಗ ಹಳೆಯ ರಿಷಬ್ ಶೆಟ್ಟಿ ಅಲ್ಲ, ನನಗೆ ವಾಯ್ಸ್ ಬರ್ತಾ ಇಲ್ಲಾ.. ನಾರ್ಮಲಿ ನಾನು ತುಂಬಾ ಸ್ಟ್ರಾಂಗ್ ಆಗಿ ಇರ್ತೇನೆ.. ನೀವೆಲ್ಲ ಹೆಮ್ಮೆ ಪಡೋ ಸಿನಿಮಾ ಆಗುತ್ತೆ ಅಂತ ನಂಬಿದ್ದೇನೆ.. ಏಳು ಸಾವಿರ ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ..’ ಎಂದಿದ್ದಾರೆ ಮುಂದಿನ ತಿಂಗಳು 2ರಂದು (02 October 2025) ಬಿಡುಗಡೆ ಕಾಣಲಿರುವ ಕಾಂತಾರ ಚಾಪ್ಟರ್ 1 ಸಿನಿಮಾದ ನಟ-ನಿರ್ದೇಶಕ ರಿಷಬ್ ಶೆಟ್ಟಿ.



Source link

Leave a Reply

Your email address will not be published. Required fields are marked *