ಸಂಸದೆಯರ ಮುಂದೆಬಿಟ್ಟು ಪ್ರಧಾನಿ ಆಗಬೇಕೆ ? – ಪ್ರಧಾನಿ ಸ್ಥಾನಕ್ಕಾಗಿ ಜನರ ಹೃದಯ ಗೆಲ್ಲಿ : ಮೋದಿ | Should One Become Prime Minister By Putting Forward Women Mps Pm Modi

ಇತ್ತೀಚೆಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ನ ಮಹಿಳಾ ಸಂಸದರು ತಮ್ಮ ಸ್ಥಾನದತ್ತ ಧಾವಿಸಿ ಬಂದ ಘಟನೆಯ ಬಗ್ಗೆ ಮೊದಲ ಬಾರಿ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ ‘ಸಂಸತ್ತಿನಲ್ಲಿ ಕಾಂಗ್ರೆಸ್‌ ತಾನೂ ಕೆಲಸ ಮಾಡಲ್ಲ, ತನ್ನ ಮಿತ್ರ ಪಕ್ಷಗಳಿಗೂ ಕೆಲಸ ಮಾಡಲು ಬಿಡಲ್ಲ.

ನವದೆಹಲಿ: ಇತ್ತೀಚೆಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ನ ಮಹಿಳಾ ಸಂಸದರು ತಮ್ಮ ಸ್ಥಾನದತ್ತ ಧಾವಿಸಿ ಬಂದ ಘಟನೆಯ ಬಗ್ಗೆ ಮೊದಲ ಬಾರಿ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ ‘ಸಂಸತ್ತಿನಲ್ಲಿ ಕಾಂಗ್ರೆಸ್‌ ತಾನೂ ಕೆಲಸ ಮಾಡಲ್ಲ, ತನ್ನ ಮಿತ್ರ ಪಕ್ಷಗಳಿಗೂ ಕೆಲಸ ಮಾಡಲು ಬಿಡಲ್ಲ. ಕಾಂಗ್ರೆಸ್‌ನ ನಡವಳಿಕೆಗಳು ಸಂಸದೀಯ ಚಟುವಟಿಕೆಗಳಿಗೆ ಅಡ್ಡಿ ಮಾಡುತ್ತಿವೆ. ಇದರಿಂದಾಗಿ ಅವರ ಸಹಯೋಗಿ ಪಕ್ಷಗಳೇ ಹೆಚ್ಚಿನ ನಷ್ಟ ಅನುಭವಿಸುತ್ತಿವೆ’ ಎಂದು ವಿಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ನಮೋ ಭಾರತ್ ಮತ್ತು ಮೆಟ್ರೋ ಯೋಜನೆಗೆ ಚಾಲನೆ

ಇಲ್ಲಿ ನಮೋ ಭಾರತ್ ಮತ್ತು ಮೆಟ್ರೋ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ಯಾರ ಹೆಸರನ್ನೂ ಹೇಳದೆ, ‘ನೀವು ಪ್ರಧಾನಿ ಸ್ಥಾನದಲ್ಲಿ ಕೂರಬೇಕೆಂದಿದ್ದರೆ ಮೊದಲಿಗೆ ಜನರ ಹೃದಯವನ್ನು ಗೆದ್ದು ಬನ್ನಿ. ಮಹಿಳಾ ಸಂಸದೆಯರನ್ನು ಸ್ಥಾನ ಆಕ್ರಮಿಸುವಂತೆ ಕಳುಹಿಸಿಕೊಡುವ ಮೂಲಕ ಪ್ರಧಾನಿ ಸ್ಥಾನವನ್ನು ಅಲಂಕರಿಸುವುದು ಸಾಧ್ಯವಿಲ್ಲ. ಇಂಥ ಕೆಲಸಕ್ಕಾಗಿ ತಾಯಂದಿರು ಮತ್ತು ಸೋದರಿಯರನ್ನು ತಳ್ಳುವ ಅಗತ್ಯವೇನಿತ್ತು? ನೀವು ಅಷ್ಟು ಪೊಳ್ಳಾಗಿ ಹೋಗಿದ್ದೀರಾ?’ ಎಂದು ಹೆಸರು ಹೇಳದೆಯೇ ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದರು.

ಮೋದಿ ಸ್ಥಾನದತ್ತ ಧಾವಿಸಿ ಗದ್ದಲ ಎಬ್ಬಿಸಿದ್ದರು

ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಫೆ.4ರಂದು ಮೋದಿ ಮಾತನಾಡಬೇಕಿತ್ತು. ಆದರೆ ಅಂದು ಕಾಂಗ್ರೆಸ್‌ನ ಮಹಿಳಾ ಸಂಸದೆಯರು ಮೋದಿ ಸ್ಥಾನದತ್ತ ಧಾವಿಸಿ ಗದ್ದಲ ಎಬ್ಬಿಸಿದ್ದರು. ಈ ವೇಳೆ ಭಾರೀ ಗದ್ದಲ ಏರ್ಪಟ್ಟ ಕಾರಣ, ಲೋಕಸಭೆಯಲ್ಲಿ ಮೋದಿ ಭಾಷಣವನ್ನೇ ರದ್ದುಪಡಿಸಲಾಗಿತ್ತು. ಬಳಿಕ ಇದಕ್ಕೆಲ್ಲಾ ರಾಹುಲ್‌ ಕಾರಣ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು.

Source link

Leave a Reply

Your email address will not be published. Required fields are marked *