BJP ಚುನಾವಣೆ ಬೆನ್ನಲ್ಲೇ ಆತ್ಮ**ತ್ಯೆ ಶರಣಾದ ಬಿಜೆಪಿ ಅಭ್ಯರ್ಥಿ, ಕಟುಂಬಸ್ಥರಿಂದ ಸ್ಫೋಟಕ ಮಾಹಿತಿ ಬಹಿರಂಗ | Bjp Candidate Erukali Mahadev Found Dead Ahead Of Telangana Municipality Election

BJP ಚುನಾವಣೆ ಬೆನ್ನಲ್ಲೇ ಆತ್ಮ**ತ್ಯೆ ಶರಣಾದ ಬಿಜೆಪಿ ಅಭ್ಯರ್ಥಿ, ಕಟುಂಬಸ್ಥರಿಂದ ಸ್ಫೋಟಕ ಮಾಹಿತಿ ಬಹಿರಂಗ | Bjp Candidate Erukali Mahadev Found Dead Ahead Of Telangana Municipality Election



BJP ಚುನಾವಣೆ ಬೆನ್ನಲ್ಲೇ ಆತ್ಮ**ತ್ಯೆ ಶರಣಾದ ಬಿಜೆಪಿ ಅಭ್ಯರ್ಥಿ, ಕಟುಂಬಸ್ಥರಿಂದ ಸ್ಫೋಟಕ ಮಾಹಿತಿ ಬಹಿರಂಗ | Bjp Candidate Erukali Mahadev Found Dead Ahead Of Telangana Municipality Election

ಚುನಾವಣೆ ಬೆನ್ನಲ್ಲೇ ಆತ್ಮ**ತ್ಯೆ ಶರಣಾದ ಬಿಜೆಪಿ ಅಭ್ಯರ್ಥಿ, ನಾಯಕನ ದುರಂತ ಸಾವಿನ ಬೆನ್ನಲ್ಲೇ ಇದೀಗ ಕೆಲ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಕುಟುಂಬಸ್ಥರು ಕಾಂಗ್ರೆಸ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. 

ಹೈದರಾಬಾದ್ (ಫೆ.10) ಉದ್ಯಮಿ ಸಿಜೆ ರಾಯ್ ದುರಂತ ಸಾವಿನ ಬಳಿಕ ಕೆಲ ಪ್ರಮುಖ ಉದ್ಯಮಿಗಳು ದುರಂತ ಸಾವು ಕಂಡಿದ್ದಾರೆ. ಸಂದಿಗ್ದ ಪರಿಸ್ಥಿಗಳಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೀಗ ಬಿಜೆಪಿಯ ಪ್ರಮುಖ ನಾಯಕ ಬದುಕು ಅಂತ್ಯಗೊಳಿಸದ ಘಟನೆ ನಡೆದಿದೆ. ತೆಲಂಗಾಣದ ಮತ್ಕಲ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಗೆ ಧುಮಿಕಿದ್ದ ಬಿಜೆಪಿ ನಾಯಕ ಇರುಕಾಲಿ ಮಹಾದೇವ್ ಸಾವು ಕಂಡಿದ್ದಾರೆ. ಇರುಕಾಲಿ ಮಹಾದೇವ್ ದುರಂತ ಸಾವಿನ ಬೆನ್ನಲ್ಲೇ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ನಾಯಕನ ಸಾವಿನ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ ಎಂದಿದ್ದಾರೆ. ಇದೀಗ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.

ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಕಿರುಕುಳ

ಇರುಕಾಲಿ ಮಹಾದೇವ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನದಿಂದ ಕಾಂಗ್ರೆಸ್ ಪಕ್ಷದ ನಾಯಕರ ಕಿರಕುಳ ನೀಡಿದ್ದಾರೆ. ನಾಮಪತ್ರ ಹಿಂತೆಗೆದುಕೊಳ್ಳುಂತೆ ಒತ್ತಾಯ ಮಾಡಿದ್ದು ಮಾತ್ರವಲ್ಲ, ಮಾನಸಿಕವಾಗಿ ಚಿತ್ರ ಹಿಂಸೆ ನೀಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಥಳೀಯ ಕಾಂಗ್ರೆಸ್ ನಾಯಕರ ಒತ್ತಡ, ಕಿರುಕುಳದ ಕಾರಣಕ್ಕೆ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಹಾಗೂ ಸಚಿವ ಶ್ರಹರಿ ಹಾಗೂ ಆತನ ಬೆಂಬಲಿಗರ ಕಿರುಕುಳವೇ ಈ ಘಟನೆಗೆ ಕಾರಣ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕರ ಕಿರಕುಳ ವಿರುದ್ಧ ಬಿಜೆಪಿ ಕಿಡಿ

ಕುಟುಂಬಸ್ಥರ ಆರೋಪದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಎನ್ ರಾಮಚಂದ್ರ ರಾವ್ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ನಾಯಕರ ಸತತವಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಹಲವರು ಈ ಹೋರಾಟದಲ್ಲಿ ಪ್ರತಿರೋಧ ತೋರಿದ್ದಾರೆ. ಆದರೆ ಇರುಕಾಲಿ ಮಹಾದೇವ್ ಈ ಹೋರಾಟದಲ್ಲಿ ದುರಂತ ಅಂತ್ಯಕಂಡಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಎನ್ ರಾಮಚಂದ್ರ ರಾವ್ ಆಗ್ರಹಿಸಿದ್ದಾರೆ.

ಫೆಬ್ರವರಿ 11ಕ್ಕೆ ಚುನಾವಣೆ

ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ ಫೆಬ್ರವರಿ 11ರಂದು ನಡೆಯಲಿದೆ. ಫೆಬ್ರವರಿ 9ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಈ ಚುನಾವಣೆ ನಾಮಪತ್ರ ಸಲ್ಲಿಕೆಯಿಂದ ಆರಂಭಗೊಂಡ ಕಿರಕುಳ ತೀವ್ರಗೊಂಡಿತ್ತು ಎಂದು ಬಿಜೆಪಿ ಆರೋಪಿಸಿದೆ. ಇರುಕಾಲಿ ಮಹಾದೇವ್ ಗೆಲ್ಲುವ ಅಭ್ಯರ್ಥಿ. ಅಪಾರ ಜನಬೆಂಬಲ ಪಡೆದಿದ್ದ ನಾಯಕ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನನಾಯಕನಾಗಿ ಬೆಳೆದಿದ್ದರು ಎಂದು ಬಿಜೆಪಿ ಹೇಳಿದೆ.



Source link

Leave a Reply

Your email address will not be published. Required fields are marked *