Headlines

ಎಐ ದುರ್ಬಳಕೆ ತಡೆಗೆ ಕಠಿಣ ನಿಯಮ ಜಾರಿ -ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಿದ್ದುಪಡಿ : ಹೊಸ ನಿಯಮದಲ್ಲೇನಿದೆ? | Stringent Rules Enforced To Curb Misuse Of Ai

ಎಐ ದುರ್ಬಳಕೆ ತಡೆಗೆ ಕಠಿಣ ನಿಯಮ ಜಾರಿ -ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಿದ್ದುಪಡಿ : ಹೊಸ ನಿಯಮದಲ್ಲೇನಿದೆ? | Stringent Rules Enforced To Curb Misuse Of Ai



ಎಐ ದುರ್ಬಳಕೆ ತಡೆಗೆ ಕಠಿಣ ನಿಯಮ ಜಾರಿ -ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಿದ್ದುಪಡಿ : ಹೊಸ ನಿಯಮದಲ್ಲೇನಿದೆ? | Stringent Rules Enforced To Curb Misuse Of Ai

ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ಅಶ್ಲೀಲ ಮತ್ತು ಮಾನಹಾನಿಕರ ಚಿತ್ರಗಳನ್ನು ರಚಿಸುವ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ‘ಯಾವುದೇ ಎಐ ಕಂಟೆಂಟ್‌ ಇದ್ದರೆ ‘ಎಐ’ ಎಂಬ ಲೇಬಲ್‌ ಕಡ್ಡಾಯವಾಗಿ ನಮೂದಿಸಬೇಕು.

ನವದೆಹಲಿ : ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ಅಶ್ಲೀಲ ಮತ್ತು ಮಾನಹಾನಿಕರ ಚಿತ್ರಗಳನ್ನು ರಚಿಸುವ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ‘ಯಾವುದೇ ಎಐ ಕಂಟೆಂಟ್‌ ಇದ್ದರೆ ‘ಎಐ’ ಎಂಬ ಲೇಬಲ್‌ ಕಡ್ಡಾಯವಾಗಿ ನಮೂದಿಸಬೇಕು. ಸಕ್ಷಮ ಪ್ರಾಧಿಕಾರ ಅಥವಾ ಕೋರ್ಟ್‌ನಿಂದ ನಿಷಿದ್ಧ ಎಂದು ಪರಿಗಣಿಸಲಾದ ಯಾವುದೇ ವಿಷಯಗಳು ಪೋಸ್ಟ್‌ ಆದರೆ, ಅವುಗಳನ್ನು 3 ಗಂಟೆಯ ಒಳಗೆ ತೆಗೆದುಹಾಕಬೇಕು’ ಎಂದು ಎಕ್ಸ್‌, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಆದೇಶಿಸಿದೆ.

ಸರ್ಕಾರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021ಕ್ಕೆ ತಿದ್ದುಪಡಿ ತಂದಿದೆ. ಹೊಸ ನಿಯಮಗಳು ಫೆ.20ರಿಂದ ಜಾರಿಗೆ ಬರಲಿವೆ. ಈ ಕುರಿತು ಮಂಗಳವಾರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಹೊಸ ನಿಯಮದಲ್ಲೇನಿದೆ?:

ಹೊಸ ನಿಯಮದಲ್ಲಿ, ಎಐ ಮೂಲಕ ರಚಿಸಲಾದ ಅಥವಾ ಬದಲಾಯಿಸಲಾದ ಆಡಿಯೋ, ವಿಡಿಯೋ ಹಾಗೂ ಎರಡನ್ನೂ ಉಳ್ಳ ಮಾಹಿತಿಗಳನ್ನು ಸೇರಿಸಲಾಗಿದೆ. ಸಾಮಾನ್ಯ ಎಡಿಟಿಂಗ್‌, ಪ್ರವೇಶಿಸುವಿಕೆ ಸುಧಾರಣೆಗಳು, ಉತ್ತಮ ಶೈಕ್ಷಣಿಕ ಮತ್ತು ಡಿಸೈನ್‌ ಕೆಲಸಗಳನ್ನು ಇದರಿಂದ ಹೊರಗಿಡಲಾಗಿದೆ. ವಿಶೇಷವಾಗಿ ಎಐ ರಚಿತ ವಿಷಯಗಳನ್ನು ‘ಮಾಹಿತಿ’ ಎಂದು ಪರಿಗಣಿಸಲಾಗಿದೆ. ಇದರನ್ವಯ, ಐಟಿ ನಿಯಮಗಳ ಅಡಿಯಲ್ಲಿ ಇತರ ಮಾಹಿತಿಗಳಿಗೆ ಸಮಾನವಾಗಿ ಎಐ ರಚಿತ ಮಾಹಿತಿಗಳನ್ನೂ ಪರಿಗಣಿಸಲಾಗುತ್ತದೆ.

ಈ ಮೊದಲು ಕೋರ್ಟ್‌ ಅಥವಾ ಸಕ್ಷಮ ಪ್ರಾಧಿಕಾರದ ಆದೇಶದ 36 ಗಂಟೆಯ ಒಳಗೆ ಕ್ರಮ ಕೈಗೊಳ್ಳಲು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಅವಕಾಶವಿತ್ತು. ಈಗ ಅದನ್ನು 3 ಗಂಟೆಗಳಿಗೆ ಇಳಿಸಲಾಗಿದೆ. ಬಳಕೆದಾರರ ಕುಂದುಕೊರತೆ ಪರಿಹಾರದ ಸಮಯಾವಧಿಯನ್ನು ಸಹ ಕಡಿಮೆ ಮಾಡಲಾಗಿದೆ.

ಲೇಬಲ್‌ ಕಡ್ಡಾಯ:

ಎಐ ರಚಿತ ಚಿತ್ರ ಅಥವಾ ದೃಶ್ಯಗಳಿಗೆ ಲೇಬಲ್‌ ಮಾಡುವುದು ಕಡ್ಡಾಯವಾಗಿದೆ. ಕಾನೂನುಬಾಹಿರ, ಮೋಸಗೊಳಿಸುವ, ಲೈಂಗಿಕವಾಗಿ ಶೋಷಿಸುವ, ಸುಳ್ಳು ದಾಖಲೆ, ಮಕ್ಕಳ ಮೇಲಿನ ದೌರ್ಜನ್ಯದ ವಸ್ತುಗಳು, ಸ್ಫೋಟಕಗಳು ಅಥವಾ ಅನುಕರಣೆಗೆ ಸಂಬಂಧಿಸಿದ ಎಐ ವಿಷಯವನ್ನು ತಡೆಯಲು ವೇದಿಕೆಗಳು ಸ್ವಯಂಚಾಲಿತ ಸಾಧನಗಳನ್ನು ನಿಯೋಜಿಸಬೇಕು ಎಂದು ನಿಯಮದಲ್ಲಿ ಹೇಳಲಾಗಿದೆ. ಒಮ್ಮೆ ಎಐ ಲೇಬಲ್‌ ಹಾಕಿದ ನಂತರ ಮಧ್ಯವರ್ತಿಗಳು ತೆಗೆದುಹಾಕಲು ಅವಕಾಶವಿಲ್ಲ ಎಂದೂ ತಿಳಿಸಲಾಗಿದೆ.

-ಇದೇ ಫೆ.20ರಿಂದ ಹೊಸ ನಿಯಮಗಳು ಜಾರಿ

-ನಿಷೇಧಿತ ಪೋಸ್ಟ್‌ ತೆಗೆಯಲು 3 ಗಂಟೆ ಮಿತಿ

-ಎಐ ರಚಿತ ಚಿತ್ರಗಳಿಗಿನ್ನು ಲೇಬಲ್‌ ಕಡ್ಡಾಯ

-ಎಕ್ಸ್‌, ಇನ್‌ಸ್ಟಾಗ್ರಾಂ ವೇದಿಕೆಗಳಿಗೆ ಆದೇಶ



Source link

Leave a Reply

Your email address will not be published. Required fields are marked *