ರಿಸರ್ವೇಷನ್‌ ಕೌಂಟರ್‌ನಲ್ಲಿ ತತ್ಕಾಲ್‌ ಟಿಕೆಟ್‌ ಬುಕಿಂಗ್‌ಮಾಡಲು ಒಟಿಪಿ ಕಡ್ಡಾಯ-ಟಿಕೆಟ್‌ ಲಭ್ಯತೆ ಹೆಚ್ಚಳಕ್ಕೆ ಕ್ರಮ | Otp Made Mandatory For Tatkal Ticket Booking At Reservation Counters

ತತ್ಕಾಲ್‌ ಟಿಕೆಟ್‌ ಬುಕಿಂಗ್‌ನಲ್ಲಿ ನಕಲಿ ಟಿಕೆಟ್‌ಗಳನ್ನು ತಡೆಯುವ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ರಿಸರ್ವೇಷನ್‌ ಕೌಂಟರ್‌ನಲ್ಲಿ ತತ್ಕಾಲ್‌ ಟಿಕೆಟ್‌ ಬುಕಿಂಗ್‌ ಮಾಡುವವರಿಗೆ ಶೀಘ್ರದಲ್ಲಿ ಒಟಿಪಿ ಕಡ್ಡಾಯಗೊಳಿಸಲಿದೆ.

ನವದೆಹಲಿ: ತತ್ಕಾಲ್‌ ಟಿಕೆಟ್‌ ಬುಕಿಂಗ್‌ನಲ್ಲಿ ನಕಲಿ ಟಿಕೆಟ್‌ಗಳನ್ನು ತಡೆಯುವ ಮತ್ತು ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ರಿಸರ್ವೇಷನ್‌ ಕೌಂಟರ್‌ನಲ್ಲಿ ತತ್ಕಾಲ್‌ ಟಿಕೆಟ್‌ ಬುಕಿಂಗ್‌ ಮಾಡುವವರಿಗೆ ಶೀಘ್ರದಲ್ಲಿ ಒಟಿಪಿ ಕಡ್ಡಾಯಗೊಳಿಸಲಿದೆ.

ಪ್ರಸ್ತುತ 52 ರೈಲುಗಳ ತತ್ಕಾಲ್‌ ಟಿಕೆಟ್‌ ಬುಕಿಂಗ್‌ನಲ್ಲಿ ಪ್ರಾಯೋಗಿಕವಾಗಿ ಚಾಲ್ತಿಯಲ್ಲಿರುವ ಈ ವಿಧಾನವನ್ನು ಮುಂದಿನ ದಿನಗಳಲ್ಲಿ ಎಲ್ಲ ರೈಲುಗಳಿಗೂ ತರಲಾಗುವುದು ಎಂದು ಇಲಾಖೆ ತಿಳಿಸಿದೆ.

ಒಟಿಪಿ ಸೇವೆ ಹೇಗೆ?

ರಿಸರ್ವೇಷನ್‌ ಕೌಂಟರ್‌ನಲ್ಲಿ ತತ್ಕಾಲ್‌ ಟಿಕೆಟ್‌ ಬುಕಿಂಗ್‌ ಮಾಡುವಾಗ, ಪ್ರಯಾಣಿಕರ ವಿವರದ ಜೊತೆಗೆ ಕೊಡುವ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರಲಿದೆ. ಈ ಒಟಿಪಿಯನ್ನು ಕೌಂಟರ್‌ನಲ್ಲಿರುವ ಸಿಬ್ಬಂದಿಗೆ ಕೊಡಬೇಕು. ಅವರು ಒಟಿಪಿಯನ್ನು ಕಂಪ್ಯೂಟರ್‌ನಲ್ಲಿ ನಮೂದಿಸಿದರೆ ಮಾತ್ರ ಟಿಕೆಟ್‌ ಆಗಲಿದೆ. ಒಟಿಪಿ ಬಾರದಿದ್ದರೆ ಟಿಕೆಟ್‌ ಬುಕ್‌ ಆಗುವುದಿಲ್ಲ.

ವೆಬ್‌ಸೈಟ್‌/ಆ್ಯಪ್‌ನಲ್ಲಿ ಬುಕಿಂಗ್‌ ಮಾಡುವವರಿಗೆ ಯಾವುದೇ ಒಟಿಪಿ ಇರುವುದಿಲ್ಲ

ಮಿಕ್ಕಂತೆ ಐಆರ್‌ಸಿಟಿಸಿ ವೆಬ್‌ಸೈಟ್‌/ಆ್ಯಪ್‌ನಲ್ಲಿ ಬುಕಿಂಗ್‌ ಮಾಡುವವರಿಗೆ ಯಾವುದೇ ಒಟಿಪಿ ಇರುವುದಿಲ್ಲ. ಇವರಿಗೆ ಈಗಾಗಲೇ ವೆಬ್‌/ಆ್ಯಪ್‌ಗೆ ಆಧಾರ್‌ ನೋಂದಣಿ ಕಡ್ಡಾಯ ಮಾಡಲಾಗಿದೆ.

Source link

Leave a Reply

Your email address will not be published. Required fields are marked *