
ಬಂಗಾಳ ಚುನಾವಣೆ ಸಮೀಕ್ಷೆ ಫಲಿತಾಂಶ, ಬಿಜೆಪಿ ಹೋರಾಟ, ಮಮತಾ ಬ್ಯಾನರ್ಜಿ ಟಿಎಂಸಿಗೆ ನಡುಕ, ಪಂಚ ರಾಜ್ಯ ಚುನಾವಣೆ ಕಾವು ಹೆಚ್ಚಾಗಿದೆ. ಇದರ ನಡುವೆ ಪಶ್ಚಿಮ ಬಂಗಾಳದ ಚುನಾವಣೆ ಸಮೀಕ್ಷೆಯಲ್ಲಿ ಫಲಿತಾಂಶ ಬಯಲಾಗಿದೆ.
ನವದೆಹಲಿ (ಏ.04) ಪಂಚ ರಾಜ್ಯ ಚುನಾವಣೆಗಳ ಭರಾಟೆ ಜೋರಾಗಿದೆ. ಕರ್ನಾಟಕದಲ್ಲಿ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ. ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ವಿಧಾನಸಭಾ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಪೈಕಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಪೂರ್ವ ಸಮೀಕ್ಷಾ ಫಲಿತಾಂಶ ಬಹಿರಂಗವಾಗಿದೆ. ಮ್ಯಾಟ್ರಿಜ್ ಹಾಗೂ ಚಾಣಾಕ್ಯ ಎಜೆನ್ಸಿ ಸಮೀಕ್ಷಾ ಫಲಿತಾಂಶ ಬಹಿರಂಗ ಮಾಡಿದೆ.
294 ಸ್ಥಾನ ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಬಹುಮತ ಪಡೆದು ಯಾರು ಅಧಿಕಾರ ಹಿಡಿಯುತ್ತಾರೆ ಅನ್ನೋ ಕುತೂಹಲ ತೀವ್ರಗೊಂಡಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಅಂತ್ಯಹಾಡಿ ಮಹತ್ತರ ಬದಲಾವಣೆಗೆ ಬಿಜೆಪಿ ಸಜ್ಜಾಗಿದೆ. ಇದೀಗ ಎರಡು ಎಜೆನ್ಸಿಗಳು ನೀಡಿದ ಸಮೀಕ್ಷಾ ಫಲಿತಾಂಶದಲ್ಲಿ ಜಿದ್ದಾಜಿದ್ದಿ ವ್ಯಕ್ತವಾಗಿದೆ.
ಬಂಗಾಳ ವಿಧಾನಸಭೆ ಚುನಾವಣೆ ಸಮೀಕ್ಷಾ ಫಲಿತಾಂಶ(ಮ್ಯಾಟ್ರಿಜ್)
- ಟಿಎಂಸಿ: 140 ರಿಂದ 160 ಸ್ಥಾನ
- ಬಿಜೆಪಿ: 130 ರಿಂದ 150 ಸ್ಥಾನ
- ಇತರರು: 8 ರಿಂದ 16 ಸ್ಥಾನ
ಬಂಗಾಳ ವಿಧಾನಸಭೆ ಚುನಾವಣೆ ಸಮೀಕ್ಷಾ ಫಲಿತಾಂಶ(ಚಾಣಾಕ್ಯ)
- ಟಿಎಂಸಿ: 155 ರಿಂದ 160 ಸ್ಥಾನ
- ಬಿಜೆಪಿ: 110 ರಿಂದ 115 ಸ್ಥಾನ
- ಇತರರು: 9 ರಿಂದ 14 ಸ್ಥಾನ
ಶೇಕಡಾವಾರು ಮತ (ಮ್ಯಾಟ್ರಿಜ್)
- ಟಿಎಂಸಿ: 43%
- ಬಿಜೆಪಿ: 41%
- ಇತರರು: 16%
ಚುನಾವಣಾ ಫಲಿತಾಂಶದ ಸಮೀಕ್ಷೆಯಲ್ಲಿ ಟಿಎಂಸಿ ಮ್ಯಾಜಿಕ್ ನಂಬರ್ ಪಡೆದಿದೆ. ಮತ್ತೆ ಟಿಎಂಸಿ ಅಧಿಕಾರಕ್ಕೆ ಬರಲಿದೆ ಎಂದಿದೆ. ಆದರೆ ಬಿಜಿಪಿ ಶಕ್ತ ಹೋರಾಟ ನೀಡಿದೆ. ಜಿದ್ದಾಜಿದ್ದಿನ ಹೋರಾಟ ನೀಡಿದೆ. ಹೀಗಾಗಿ ಅಸಲಿ ಫಲಿತಾಂಶದ ವೇಳೆ ಮಹತ್ತರ ಬದಲಾವಣೆ ಆದರೂ ಅಚ್ಚರಿಪಡಬೇಕಿಲ್ಲ.