coconut ice cream recipe : ಚಟ್ನಿ ಮಾಡುಳಿದ ತೆಂಗಿನಕಾಯಿಯಲ್ಲಿ ಮಾಡಿ ಮಕ್ಕಳು ಇಷ್ಟಪಡೋ ಐಸ್ ಕ್ರೀಮ | How To Make Coconut Ice Cream Using A Cup Of Coconut Simple Recipe

coconut ice cream recipe : ಚಟ್ನಿ ಮಾಡುಳಿದ ತೆಂಗಿನಕಾಯಿಯಲ್ಲಿ ಮಾಡಿ ಮಕ್ಕಳು ಇಷ್ಟಪಡೋ ಐಸ್ ಕ್ರೀಮ | How To Make Coconut Ice Cream Using A Cup Of Coconut Simple Recipe



coconut ice cream recipe : ಚಟ್ನಿ ಮಾಡುಳಿದ ತೆಂಗಿನಕಾಯಿಯಲ್ಲಿ ಮಾಡಿ ಮಕ್ಕಳು ಇಷ್ಟಪಡೋ ಐಸ್ ಕ್ರೀಮ | How To Make Coconut Ice Cream Using A Cup Of Coconut Simple Recipe

coconut ice cream recipe : ಬೇಸಿಗೆ ರಜೆಯಲ್ಲಿ ಮಕ್ಕಳು ಇಡೀ ದಿನ ತಿನ್ನೋಕೆ ಕೇಳ್ತಾರೆ. ಐಸ್‌ ಕ್ರೀಮ್‌, ಚಿಪ್ಸ್‌, ಜ್ಯೂಸ್‌ ಅಂತ ಎಷ್ಟು ಹೊರಗಿಂತ ತರ್ತೀರಿ. ಮನೆಯಲ್ಲೇ ಸಿಂಪಲ್‌ ಐಸ್‌ ಕ್ರೀಮ್‌ ಮಾಡಿ ನೋಡಿ. 

ಬೇಸಿಗೆ ಬರ್ತಿದ್ದಂತೆ ಐಸ್ ಕ್ರೀಂ (Ice cream) ತಿನ್ನುವ ಆಸೆ ಡಬಲ್ ಆಗುತ್ತೆ. ಮಧ್ಯಾಹ್ನ, ಸಂಜೆ ವೆರೈಟಿ ಐಸ್ ಕ್ರೀಮನ್ನು ಮನಸ್ಸು ಬಯಸುತ್ತೆ. ಎಲ್ಲ ಟೈಂ ಹೊರಗೆ ಸಿಗೋ ಐಸ್ ಕ್ರೀಂ ತಿನ್ನೋದು ಒಳ್ಳೆಯದಲ್ಲ. ಅದನ್ನು ಹೇಗೆ ತಯಾರಿಸ್ತಾರೋ ಎನ್ನುವ ಭಯ ನಮ್ಮನ್ನು ಕಾಡುತ್ತೆ. ಹಾಗಿರುವಾಗ ರುಚಿಯಾದ ಐಸ್ ಕ್ರೀಮನ್ನು ನಾವು ಮನೆಯಲ್ಲೇ ತಯಾರಿಸ್ಬಹುದು. ನಿಮ್ಮ ಮನೆಯಲ್ಲೂ ತೆಂಗಿನಕಾಯಿ ಇದ್ರೆ ಅದ್ರಲ್ಲಿ ಐಸ್ ಕ್ರೀಂ ತಯಾರಿಸೋದು ಹೇಗೆ ಅಂತ ನಾವು ಹೇಳ್ತೇವೆ.

ತೆಂಗಿನಕಾಯಿ ಐಸ್ ಕ್ರೀಂ (coconut ice cream)

ತೆಂಗಿನಕಾಯಿ ಐಸ್ ಕ್ರೀಂ ತಯಾರಿಸೋದು ಬಹಳ ಸುಲಭ. ಇದ್ರ ರುಚಿ ಮಾತ್ರ ಅದ್ಭುತ. ತೆಂಗಿನಕಾಯಿ ಐಸ್ ಕ್ರೀಂಗೆ ಒಂದು ಕಪ್ ತೆಂಗಿನತುರಿ, ಒಂದು ಕಪ್ ಹಾಲು, ಅರ್ಧ ಕಪ್ ಸಕ್ಕರೆ, ಮೂರು ಚಮಚ ಹಾಲಿನ ಪುಡಿ, ಮೂರು ಚಮಚ ವಿಪ್ಪಿಂಗ್ ಕ್ರೀಂ ಇಲ್ಲ ಹಾಲಿನ ಕೆನೆ ಅಗತ್ಯವಿದೆ.

ತೆಂಗಿನಕಾಯಿ ಐಸ್ ಕ್ರೀಂ ತಯಾರಿಸುವ ವಿಧಾನ

ಮೊದಲು ತೆಂಗಿನ ಕಾಯಿಯನ್ನು ತುರಿದಿಟ್ಟುಕೊಳ್ಳಿ. ತೆಂಗಿನ ನೀರು ಸಿಕ್ಕಿದ್ರೆ ಅದನ್ನು ಬಳಸಬಹುದು. ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ಸ್ವಲ್ಪ ತೆಂಗಿನ ನೀರು ಹಾಕಿ ರುಬ್ಬಿಕೊಳ್ಳಬೇಕು. ತೆಂಗಿನ ನೀರಿಲ್ಲ ಅಂದ್ರೆ ಎಳ ನೀರು ಇಲ್ಲ ಬಿಸಿ ಮಾಡಿ ತಣ್ಣಗಾಗಿಸಿದ ಹಾಲನ್ನು ನೀವು ಬಳಸಬಹುದು. ಒಂದು ಕಪ್ ಹಾಲಿನಲ್ಲಿ ಕಾಲು ಕಪ್ ಹಾಲನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತ್ರ ರುಬ್ಬಿದ ಮಿಶ್ರಣವನ್ನು ಇನ್ನೊಂದು ಬೌಲ್ ಗೆ ಹಾಕಿ. ಬೌಲ್ ಗೆ ಅರ್ಧ ಕಪ್ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಮಸಾಲೆ ದೋಸೆ ಬ್ರೇಕ್ ಫಾಸ್ಟ್ ಗೆ ಬೆಸ್ಟ್ ಅಲ್ವಂತೆ ! ಏನ್‌ ಅಂತಿದ್ದಾರೆ ಇವ್ರು?

ಇನ್ನೊಂದು ಕಡೆ ಅರ್ಧ ಕಪ್ ಸಕ್ಕರೆಯನ್ನು ಮಿಕ್ಸಿ ಜಾರಿಗೆ ಹಾಕಿ ಅದಕ್ಕೆ ಹಾಲನ್ನು ಹಾಕಿ ನಂತ್ರ ಮೂರು ಚಮಚ ಹಾಲಿನ ಪುಡಿಯನ್ನು ಅದಕ್ಕೆ ಹಾಕಿ ಚೆನ್ನಾಗಿ ಮಿಕ್ಸಿ ಮಾಡಿ. ಈ ಮಿಶ್ರಣವನ್ನು ತೆಂಗಿನ ಹಾಲಿನ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ವಿಪ್ಪಿಂಗ್ ಕ್ರೀಮ್ ಸೇರಿಸಿ ಮಿಕ್ಸ್ ಮಾಡಿ. ನಂತ್ರ ಐಸ್ ಕ್ರೀಂ ಬೌಲ್ ಗೆ ಈ ಮಿಶ್ರಣವನ್ನು ಹಾಕಿ ಫ್ರೀಜರ್ ನಲ್ಲಿಡಿ. ಸುಮಾರು 8 ಗಂಟೆಗಳ ಕಾಲ ಫ್ರೀಜರ್ ನಲ್ಲಿ ಇಟ್ಮೇಲೆ ಐಸ್ ಕ್ರೀಂ ತಿನ್ನಲು ಸಿದ್ಧ. ಅದನ್ನು ಹೊರ ತೆಗೆದು, ತಣ್ಣನೆ ನೀರಿನಲ್ಲಿ ಒಂದೆರಡು ನಿಮಿಷ ಇಟ್ಟು ನಂತ್ರ ಬೌಲ್ ನಿಂದ ಐಸ್ ಕ್ರೀಂ ಬೇರ್ಪಡಿಸಿ ತಿನ್ನಿ.

ಕಡಿಮೆ ಖರ್ಚಿನಲ್ಲಿ, ಕಡಿಮೆ ಸಮಯದಲ್ಲಿ ಮಾಡಬಹುದಾದದ ರುಚಿಕರವಾದ ಐಸ್ ಕ್ರೀಂ ಇದಾಗಿದೆ. ಚಟ್ನಿ ಮಾಡಿ ಉಳಿದ ಕಾಯಿ ತುರಿಯಲ್ಲಿಯೇ ನೀವು ಈ ಐಸ್ ಕ್ರೀಂ ತಯಾರಿಸಬಹುದು. ಯಾವುದೇ ಕೆಮಿಕಲ್ ಬಳಸದ, ಮನೆಯಲ್ಲೇ ಮಾಡಿದ ಐಸ್ ಕ್ರೀಂ ಮಕ್ಕಳ ಆರೋಗ್ಯಕ್ಕೂ ಒಳ್ಳೆಯದು.

ಮೈದಾ ಬೇಡವೇ ಬೇಡ; ಇದೊಂದು ಹಾಕಿದ್ರೆ ಪದರು ಪದರಾಗುತ್ತೆ, ಮೃದುವಾದ, ಮಂಗಳೂರು ಬನ್ಸ್ ರೆಡಿ ಆಗುತ್ತೆ!

ತೆಂಗಿನಕಾಯಿ ಆರೋಗ್ಯ ಲಾಭ

ಹಸಿ ತೆಂಗಿನಕಾಯಿ ಸಾಕಷ್ಟು ಆರೋಗ್ಯ ಪ್ರಯೋಜನ ಹೊಂದಿದೆ. ಹಸಿ ತೆಂಗಿನಕಾಯಿ ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಸಿ ತೆಂಗಿನಕಾಯಿ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಹಸಿ ತೆಂಗಿನಕಾಯಿ ಫೈಬರ್ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ, ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.



Source link

Leave a Reply

Your email address will not be published. Required fields are marked *