ಡಿ.ಕೆ.ಸುರೇಶ್ ಧ್ವನಿಯಲ್ಲಿ ಮಾತನಾಡಿದ ಆರೋಪ: ಬಂಗಾರಿ ಕೇಸ್‌ನಲ್ಲಿ ನಟ ಧರ್ಮಗೆ CID ಧ್ವನಿ ಪರೀಕ್ಷೆ | Multi Crore Fraud Case Cid Conducts Voice Test On Actor Dharma In Bangari Case

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ. ಕೆ.ಸುರೇಶ್ ಹೆಸರಿನಲ್ಲಿ ಬಹು ಕೋಟಿ ವಂಚನೆ ಪ್ರಕರಣ ಸಂಬಂಧ ನಟ ಧರ್ಮ ಅವರನ್ನು ರಾಜ್ಯ ಅಪರಾಧ ತನಿಖಾ ಇಲಾಖೆ ಸಿಐಡಿ ಧ್ವನಿ ಪರೀಕ್ಷೆಗೆ ಒಳಪಡಿಸಿದೆ.

ನಟ ಧರ್ಮಗೆ ಸಿಐಡಿ ಧ್ವನಿ ಪರೀಕ್ಷೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ. ಕೆ.ಸುರೇಶ್ ಹೆಸರಿನಲ್ಲಿ ಬಹು ಕೋಟಿ ವಂಚನೆ ಪ್ರಕರಣ ಸಂಬಂಧ ನಟ ಧರ್ಮ ಅವರನ್ನು ರಾಜ್ಯ ಅಪರಾಧ ತನಿಖಾ ಇಲಾಖೆ ಸಿಐಡಿ ಧ್ವನಿ ಪರೀಕ್ಷೆಗೆ ಒಳಪಡಿಸಿದೆ. ಈ ಪರೀಕ್ಷೆ ಸಂಬಂಧ ನ್ಯಾಯಾಲಯದ ಅನುಮತಿಯನ್ನು ಸಿಐಡಿ ಪಡೆದಿತ್ತು. ಬಳಿಕ ನೋಟಿಸ್ ನೀಡಿ ಧರ್ಮ ಅವರ ಧ್ವನಿ ಮಾದರಿ (ಸ್ಯಾಂಪಲ್) ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಿಐಡಿ ಅಧಿಕಾರಿಗಳು ಕಳುಹಿಸಿದ್ದಾರೆ

ಎಫ್‌ಎಸ್ ಎಲ್ ವರದಿ ಬಳಿಕ ವಂಚನೆ ಕೃತ್ಯದಲ್ಲಿ ಧರ್ಮ ಅವರು ಚಿನ್ನದ ವ್ಯಾಪಾರಿ ಜತೆ ಡಿ.ಕೆ.ಸುರೇಶ್ ದನಿ ಅನುಕರಣೆ ಮಾಡಿ ಮಾತನಾಡಿದ್ದಾರೋ ಅಥವಾ ಇಲ್ಲವೋ ಎಂಬುದು ಖಚಿತವಾಗಲಿದೆ ಎಂದು ‘ಕನ್ನಡಪ್ರಭ’ಕ್ಕೆ ಮೂಲಗಳು ಮಾಹಿತಿ ನೀಡಿವೆ. ಚಿನ್ನ ವ್ಯಾಪಾರಿಗೆ ಮಾಜಿ ಸಂಸದ ಸುರೇಶ್ ಸೋದರಿ ಎಂದು ಹೇಳಿಕೊಂಡು ಐಶ್ವರ್ಯಗೌಡ ಕೋಟ್ಯಂತರ ರೂಪಾಯಿ ವಂಚಿಸಿದ್ದ ಆರೋಪ ಕೇಳಿ ಬಂದಿತ್ತು. ಪ್ರಕರಣದಲ್ಲಿ ಐಶ್ವರ್ಯಾಗೆ ಧರ್ಮ ಸಹಕರಿಸಿದ್ದರು ಎಂದು ದೂರ ಲಾಗಿತ್ತು.

ಇದನ್ನೂ ಓದಿ: ಮನೆಕೆಲಸದವರಾಗಿ ಬಂದು ಮನೆಮಂದಿಯನ್ನೇ ಮುಗಿಸಿದರು: IISC ವಿಜ್ಞಾನಿ ಹಾಗೂ ಕುಟುಂಬವನ್ನು ಕೊಂದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

 ಅಂದು ಚಿನ್ನ ವ್ಯಾಪಾರಿ ವನಿತಾ ಅವರ ಜತೆ ಮೊಬೈಲ್‌ನಲ್ಲಿ ತಾವೇ ಸಂಸದ ಸುರೇಶ್ ಎಂದು ಧರ್ಮ ಮಾತನಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಆಡಿಯೋ ವೈರಲ್ ಆಗಿತ್ತು. ಈ ಆಡಿಯೋದಲ್ಲಿರುವ ದನಿಯ ಸಾಚಾತನಕ್ಕೆ ಧರ್ಮರನ್ನು ಧ್ವನಿ ಪರೀಕ್ಷೆಗೆ ಒಳಪಡಿಸಲಾಗಿದೆ. ಧರ್ಮ ಅವರ ಧ್ವನಿ ಪರೀಕ್ಷೆ ನಡೆಯಬಹುದು ಎಂದು ಕನ್ನಡಪ್ರಭ 2025ರ ಡಿ.9ರಂದೇ ವರದಿ ಪ್ರಕಟಿಸಿತ್ತು.

ಇದನ್ನೂ ಓದಿ: ಖಮೇನಿ ಸಾವನ್ನಪ್ಪಿ 5 ದಿನದ ನಂತರ ಕಡೆಗೂ ಸಂತಾಪ ಸೂಚಿಸಿದ ಭಾರತ ಸರ್ಕಾರ

Source link

Leave a Reply

Your email address will not be published. Required fields are marked *