Headlines

Amruthadhaare Serial Today Episode: ಭೂಮಿಕಾಗೆ ಸತ್ಯ ಗೊತ್ತಾಗಿದ್ದು ಒಳ್ಳೆದಾಯ್ತು! ಸಂಹಾರ ಮಾಡೋದೊಂದೇ ಬಾಕಿ! | Amruthadhaare Kannada Serial Written Update Bhoomika Want To Kill Shakuntala

Amruthadhaare Serial Today Episode: ಭೂಮಿಕಾಗೆ ಸತ್ಯ ಗೊತ್ತಾಗಿದ್ದು ಒಳ್ಳೆದಾಯ್ತು! ಸಂಹಾರ ಮಾಡೋದೊಂದೇ ಬಾಕಿ! | Amruthadhaare Kannada Serial Written Update Bhoomika Want To Kill Shakuntala



Amruthadhaare Serial Today Episode: ಭೂಮಿಕಾಗೆ ಸತ್ಯ ಗೊತ್ತಾಗಿದ್ದು ಒಳ್ಳೆದಾಯ್ತು! ಸಂಹಾರ ಮಾಡೋದೊಂದೇ ಬಾಕಿ! | Amruthadhaare Kannada Serial Written Update Bhoomika Want To Kill Shakuntala

Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಎಲ್ಲ ಸತ್ಯವೂ ಗೊತ್ತಾಗಿದೆ. ಈಗ ಅವಳಿಗೆ ವಿಷಯ ಗೊತ್ತಾಗಿರೋದು ಒಳ್ಳೆಯದು ಎಂದು ವೀಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ ( Amruthadhaare Serial ) ಮಗಳನ್ನು ಕಿಡ್ನ್ಯಾಪ್‌ ಮಾಡಿ ಕಾಡಿನಲ್ಲಿ ಬಿಟ್ಟಿರೋದು ನಾವೇ ಎಂದು ಶಕುಂತಲಾ, ಭೂಮಿಗೆ ಹೇಳಿದ್ದಳು. ತನಗೊಬ್ಬಳು ಮಗಳಿದ್ದಾಳೆ, ಈಗ ಅವಳಿಲ್ಲ, ಈ ವಿಷಯ ಗೌತಮ್‌ಗೆ ಗೊತ್ತಿದ್ದರೂ ಕೂಡ ಹೇಳಿಲ್ಲ ಎಂದು ಭೂಮಿಕಾ ಬೇಸರದಲ್ಲಿದ್ದಾಳೆ. ಆದರೂ ಅವಳು ರಣಚಂಡಿಯಾಗಿದ್ದಾಳೆ.

“ನಿನ್ನ ಮನೆಯಲ್ಲಿ ಅಮ್ಮ, ಜೀವ, ಮಹಿಮಾ ಇದ್ದಾರೆ, ಅಪೇಕ್ಷಾ ಕೂಡ ಆ ಮನೆಗೆ ಹೋಗಿದ್ದಾಳೆ. ನಿನ್ನ ಗಂಡ ಏರ್‌ಪೋರ್ಟ್‌ನಿಂದ ಹೊರಗಡೆ ಬರುತ್ತಿದ್ದಂತೆ ಕೊಲ್ಲೋಕೆ ಶಾರ್ಪ್‌ ಶೂಟರ್‌ ಕಾದು ನಿಂತಿದ್ದಾನೆ. ಒಂದು ಮಗುವನ್ನು ಸಾಯಿಸಿದ್ದೇವೆ, ಇನ್ನೊಂದು ಮಗುವನ್ನು ಸಾಯಿಸುತ್ತೇವೆ. ತಾಕತ್‌ ಇದ್ದರೆ ನಿಲ್ಲಿಸು” ಎಂದು ಶಕುಂತಲಾ, ಭೂಮಿಗೆ ಒಪನ್‌ ಚಾಲೆಂಜ್‌ ಮಾಡಿದ್ದಾರೆ. ಶಕುಂತಲಾ ಮಾತಿಗೆ ಭೂಮಿಕಾ ಬೇಸರಗೊಂಡಿದ್ದಾಳೆ. ಅದೇ ಸಮಯಕ್ಕೆ ಮತ್ತೆ ಗನ್‌ ತಗೊಂಡು, ಸಾಯಿಸೋಕೆ ರೆಡಿಯಾಗಿದ್ದಾಳೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ಈ ಎಪಿಸೋಡ್‌ ನೋಡಿ ವೀಕ್ಷಕರು ಏನು ಹೇಳಿದರು?

  • ಭೂಮಿಕಾ ಟೀಚರ್, ನಿಮ್ಮ ನಟನೆಗೆ ನೀವೆ ಸಾರಿಸಾಟಿ, ಎಂತಹ ನಟನೆ
  • ಶಕುಂತಲಾಗೆ ಒಂದು ಬುಲೆಟ್ ಹಾಕಬೇಕಿತ್ತು
  • ಭೂಮಿ ತಾಳ್ಮೆ ಕಳೆದುಕೊಳ್ಳಬೇಡ, ಅವಳು ಏನೂ ಮಾಡಕ್ಕಾಗಲ್ಲ. ನೀನು ಅವಳ ತಲೆಯಲ್ಲಿ ಬುಲೆಟ್‌ನಾ ಇಳಿಸು.
  • ನನ್ ಕೈಗೆ ಸಿಕ್ಕಿದರೆ ಈ ಶಕುಂತಲಾಳನ್ನು ನೇಣು ಹಾಕ್ಬಿಡ್ತೀನಿ.
  • ನಮ್ಮ ಭೂಮಿ ಚಾಮುಂಡಿ ಆಗೋದು ಅಂದ್ರೆ ಇದೆ ಸುಮ್ನೆ ಇದ್ದೋರನ್ನ ಕೆಣಕಿದ್ರೆ ಇದೆ ನೋಡು ಆಗೋದು.
  • ಭೂಮಿಗೆ ವಿಚಾರ ಗೊತ್ತಾಗಿದ್ದು, ಒಳ್ಳೇದೆ ಆಯ್ತು
  • ಈ ಶಕುಂತಲಾ ತನ್ನ ಹಳ್ಳ ತಾನೇ ತೊಡ್ಕೋತಾ ಇದಾಳೆ ಅನ್ನೋರು
  • ಶಕುಂತಲಾ ಸಖತ್…ಭೂಮಿಕಾ ಬುಲೆಟ್,, ಎರಡೂ ವರ್ಕ್ ಆಗಿಲ್ಲ
  • ನಮ್ ಭೂಮಿ ಚಾಮುಂಡಿ ಆಗೋದು ಅಂದ್ರೆ ಇದೆ, ಸುಮ್ನೆ ಇದ್ದೋರನ್ನ ಕೆಣಕಿದ್ರೆ ಇದೆ ನೋಡು ಆಗೋದು

ಈ ಧಾರಾವಾಹಿ ಕಥೆ ಏನು?

ಗೌತಮ್‌ಗೆ ಶಕುಂತಲಾ ಎಂಬ ಮಲತಾಯಿ ಇದ್ದಾಳೆ, ಅವಳಿಗೆ ಜಯದೇವ್‌ ಎಂಬ ನೀಚ ಮಗನೂ ಇದ್ದಾನೆ. ಶಕುಂತಲಾ ಆಸ್ತಿಗೋಸ್ಕರ ಏನು ಬೇಕಿದ್ರೂ ಮಾಡ್ತಾಳೆ. ಆದರೆ ಗೌತಮ್‌ ಮಾತ್ರ ಈ ಮಾತನ್ನು ನಂಬಲು ರೆಡಿ ಇಲ್ಲ. ಇನ್ನೊಂದು ಕಡೆ ಭೂಮಿಕಾ ಮಗಳನ್ನು ಕಿಡ್ನ್ಯಾಪ್‌ ಮಾಡಿರೋದು ಶಕುಂತಲಾ ಅನ್ನೋದು ಅವಳಿಗೆ ಗೊತ್ತಾಗಿದೆ. ಭೂಮಿಕಾಗೆ ಈ ವಿಷಯ ಹೇಳಿದರೆ ಅವಳ ಆರೋಗ್ಯ ಹಾಳಾಗುತ್ತದೆ ಎಂದು ಗೌತಮ್‌ ಸುಮ್ಮನಿದ್ದನು. ಈಗ ಗೌತಮ್‌ ಹಾಗೂ ಭೂಮಿಕಾ ನಡುವೆ ಮನಸ್ತಾಪ ಬರಲಿದೆಯಾಬೆಂಬ ಸಂದೇಹ ಶುರು ಆಗಲಿದೆ.

ಮುಂದೆ ಏನಾಗುವುದು?

ಮಗಳು ಕಿಡ್ನ್ಯಾಪ್‌ ಆದರೂ ಕೂಡ ಗೌತಮ್‌ಗೆ ಅವಳನ್ನು ಹುಡುಕಲು ಆಗಿಲ್ಲ. ಆದರೆ ಶಕುಂತಲಾಗೆ ಜಯದೇವ್‌ ಹಾಗೂ ಶಾಕುಂತಲಾ ಹಣೆಬರಹ ಏನು ಎನ್ನೋದು ಗೊತ್ತಾಗಿದೆ. ಈಗ ಮಗಳು ಹುಟ್ಟಿದ್ದಳು, ಅದನ್ನು ಶಕುಂತಲಾ ಕಾಡಿನಲ್ಲಿ ಬಿಟ್ಟಿದ್ದಳು ಎನ್ನೋದು ಕೂಡ ಅವಳಿಗೆ ಗೊತ್ತಾಗಿದೆ. ಭೂಮಿಗೆ ಈ ವಿಷಯ ಗೊತ್ತಾಗಿರೋದು ಒಳ್ಳೆಯದು, ಗೊತ್ತಾದರೆ ಆ ಮಗು ಸಿಗುತ್ತದೆ ಎಂದು ವೀಕ್ಷಕರು ಕೂಡ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಭೂಮಿ ಫ್ರೆಂಡ್‌ ಕೂಡ ಓರ್ವ ಮಗಳನ್ನು ದತ್ತು ತಗೊಂಡಿದ್ದಾಳೆ. ದತ್ತು ತಗೊಂಡ ಮಗುವೇ ಭೂಮಿಕಾ ಮಗು ಎಂದು ಕೂಡ ಹೇಳಲಾಗುತ್ತಿದೆ. ಆ ಮಗು ಹುಡುಕಲು ಭೂಮಿ ಏನು ಮಾಡುತ್ತಾಳೆ? ಶಕುಂತಲಾ ಎನ್ನುವ ಹೆಂಗಸಿನಿಂದ ಭೂಮಿ ತನ್ನವರನ್ನು ಹೇಗೆ ರಕ್ಷಣೆ ಮಾಡಿಕೊಳ್ತಾಳೆ ಎಂದು ಕಾದು ನೋಡಬೇಕಿದೆ.

ಪಾತ್ರಧಾರಿಗಳು

ಶಕುಂತಲಾ- ವನಿತಾ ವಾಸು

ಭೂಮಿ- ಛಾಯಾ ಸಿಂಗ್‌

ಜಯದೇವ್-‌ ರಾಣವ್‌

ಗೌತಮ್-‌ ರಾಜೇಶ್‌ ನಟರಂಗ

 



Source link

Leave a Reply

Your email address will not be published. Required fields are marked *