Rented Husband ಪತಿಗೆ ಡಿವೋರ್ಸ್ ಬದಲು ಆತನ ಪ್ರೇಯಿಸಿಗೆ ಬಾಡಿಗೆ ನೀಡಲು ಮುಂದಾದ ಪತ್ನಿ, ತಿಂಗಳಿಗೆ 85000 ರೂ | No Divorce Only Business Thai Wife Asks Mistress For Monthly Rent To Keep Her Husband

Rented Husband ಪತಿಗೆ ಡಿವೋರ್ಸ್ ಬದಲು ಆತನ ಪ್ರೇಯಿಸಿಗೆ ಬಾಡಿಗೆ ನೀಡಲು ಮುಂದಾದ ಪತ್ನಿ, ತಿಂಗಳಿಗೆ 85000 ರೂ | No Divorce Only Business Thai Wife Asks Mistress For Monthly Rent To Keep Her Husband



Rented Husband ಪತಿಗೆ ಡಿವೋರ್ಸ್ ಬದಲು ಆತನ ಪ್ರೇಯಿಸಿಗೆ ಬಾಡಿಗೆ ನೀಡಲು ಮುಂದಾದ ಪತ್ನಿ, ತಿಂಗಳಿಗೆ 85000 ರೂ | No Divorce Only Business Thai Wife Asks Mistress For Monthly Rent To Keep Her Husband

ಪತಿಗೆ ಡಿವೋರ್ಸ್ ಬದಲು ಆತನ ಪ್ರೇಯಿಸಿಗೆ ಬಾಡಿಗೆ ನೀಡಲು ಮುಂದಾದ ಪತ್ನಿ, ತಿಂಗಳಿಗೆ 85000 ರೂ, ಇದಕ್ಕೆ ಗಂಡನ ಪ್ರೇಯಸಿ ಒಪ್ಪಿಕೊಂಡಿದ್ದಾಳೆ. ಹಣ ಎಷ್ಟುಬೇಕಾದರೂ ಕೊಡ್ತಿನಿ ಎಂದಿದ್ದಾಳೆ

ಮದುವೆ ಹಾಗೂ ಆಕ್ರಮ ಸಂಬಂಧ ಕುರಿತು ಸಾಕಷ್ಟು ಘಟನೆ ಕೋಲಾಹಲ ಸೃಷ್ಟಿಸಿದೆ. ಪತ್ನಿ ಅಥವಾ ಪತಿಗೆ ಗೊತ್ತಿಲ್ಲದಂತೆ ಅಕ್ರಮ ಸಂಬಂಧ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಹೀಗೆ ಹಲವಿದೆ. ಇದೀಗ ಮಹಿಳೆಯೊಬ್ಬಳು ತನ್ನ ಗಂಡನ ಅಕ್ರಮ ಸಂಬಂಧ ಪತ್ತೆ ಹಚ್ಚಿದ್ದಾಳೆ. ಬಳಿಕ ನಡೆದ ಘಟನೆ ಇದೀಗ ಭಾರಿ ಕುತೂಹಲ ಕೆರಳಿಸಿದೆ. ಸಾಮಾನ್ಯವಾಗಿ ಗಂಡನ ರೆಡ್‌ಹ್ಯಾಂಡ್ ಆಗಿ ಹಿಡಿದ ಬೆನ್ನಲ್ಲೇ ಥಳಿಸುವುದು, ವಾಕ್ಸಮರ, ಬಳಿಕ ಜಗಳ, ಮಾತು ಕತೆ ಬಂದ್, ಡಿವೋರ್ಸ್ ಇದು ಸಾಮಾನ್ಯ. ಆದರೆ ಇಲ್ಲಿ ಮಹಿಳೆ ಭಿನ್ನ ನಿರ್ಧಾರ ಕೈಗೊಂಡಿದ್ದಾಳೆ. ಪತಿಯ ಅಕ್ರಮ ಸಂಬಂಧ ಸರಿಪಡಿಸಲು ಸಾಧ್ಯವಿಲ್ಲ ಎಂದು ಅರಿತ ಮಹಿಳೆ, ಪತಿಗೆ ಡಿವೋರ್ಸ್ ನೀಡಿ ಪ್ರಯೋಜನವಿಲ್ಲ ಎಂದು, ಪತಿಯನ್ನು ಆತನ ಪ್ರೇಯಸಿಗೆ ಬಾಡಿಗೆ ನೀಡಲು ಮುಂದಾಗಿದ್ದಾಳೆ. ತಿಂಗಳಿಗೆ 85,000 ರೂಪಾಯಿಗೆ ಬಾಡಿಗೆಗೆ ಡೀಲ್ ಒಕೆ ಆಗಿದೆ. ಗಂಡನ ಜೊತೆ ಅಕ್ರಮ ಸಂಬಂಧ ಹೊಂದಿರುವ ಪ್ರೇಯಸಿ ಹಣ ಎಷ್ಟು ಬೇಕಾದರು ಕೊಡುತ್ತೇನೆ ಎಂದಿದ್ದಾಳೆ. ಆದರೆ ಗಂಡ ಈ ಡೀಲ್ ನಿರಾಕರಿಸಿದ್ದಾನೆ.

ಪೊಲೀಸ್ ಅಧಿಕಾರಿಯ ಅಕ್ರಮ ಸಂಬಂಧ

ಪತಿಗೆ ಡಿವೋರ್ಸ್ ಬದಲು ಆತನ ಪ್ರೇಯಸಿಗೆ ತಿಂಗಳಿಗೆ ಬಾಡಿಗೆ ನೀಡಲು ಮುಂದಾಗಿರುವ ಘಟನೆ ನಡೆದಿರುವುಗು ಥಾಯ್ಲೆಂಡ್‌ನಲ್ಲಿ. ಥಾಯ್ಲೆಂಡ್‌ನ 31 ವರ್ಷದ ಮಹಿಳೆ ಖುನ್ ಕ್ವಾಂಗ್ ಮದುವೆಯಾಗಿ ಸರಿಸುಮಾರು 10 ವರ್ಷಗಳಾಗಿದೆ. ಪ್ರೀತಿಸಿ ಮದುವೆಯಾದ ಈ ಜೋಡಿಗೆ 8 ವರ್ಷದ ಮಗಳಿದ್ದಾಳೆ. ಖುನ್ ಕ್ವಾಂಗ್ ಪತಿ ಪೊಲೀಸ್ ಅಧಿಕಾರಿಯಾಗಿದ್ದಾರೆ. 35 ವರ್ಷದ ಪೊಲೀಸ್ ಅಧಿಕಾರಿಗೆ ಕಳೆದೊಂದು ವರ್ಷದಿಂದ ಬೇರೊಬ್ಬಳ ಜೊತೆ ಅಕ್ರಮ ಸಂಬಂಧ ಬೆಳೆದಿದೆ. ಸೋಶಿಯಲ್ ಮೀಡಿಯಾ ಮೂಲಕ ಶುರುವಾದ ಈ ಸ್ನೇಹ, ಬಳಿಕ ಅಕ್ರಮ ಸಂಬಂಧವಾಗಿ ಗಟ್ಟಿಯಾಗಿದೆ.

ಪತಿಯ ಅಕ್ರಮ ಸಂಬಂಧ ಪತ್ತೆ ಹಚ್ಚಲು ಡಿಟೆಕ್ಟರ್

ಪತಿಯ ಅಕ್ರಮ ಸಂಬಂಧ ಕುರಿತು ಖುನ್ ಕ್ವಾಂಗ್‌ಗೆ ಅನುಮಾನ ಹೆಚ್ಚಾಯಿತು. ಇಷ್ಟೇ ಅಲ್ಲ ಅಕ್ರಮ ಸಂಬಂಧ ಇರುವುದು ಬಲಗೊಂಡಿತ್ತು. ಕಾರಣ ಪ್ರತಿ ದಿನ ಮನೆಗೆ ಬರುತ್ತಿರಲಿಲ್ಲ. ಪ್ರೇಯಸಿ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದ. ಇಷ್ಟಾದರೂ ತನ್ನ ಬಳಿಕ ಸಾಕ್ಷ್ಯ ಇರಲಿಲ್ಲ. ಹೀಗಾಗಿ ಖಾಸಗಿ ಡಿಟೆಕ್ಟರ್ ಮೂಲಕ ಪತಿಯನ್ನು ಫಾಲೋ ಮಾಡಲು ಸೂಚಿಸಿದ್ದಾಳೆ. ಪ್ರತಿ ದಿನಕ್ಕೆ 25000 ರೂಪಾಯಿಯಂತೆ ಪಾವತಿ ಮಾಡಿದ್ದಾಳೆ. ಪತ್ತೇದಾರ ಒಂದೇ ದಿನದಲ್ಲಿ ಖುನ್ ಕ್ವಾಂಗ್ ಪತಿ ಪ್ರೇಯಸಿ ಮನೆಗೆ ತೆರಳಿ ಆಕೆಯ ಜೊತೆಯಲ್ಲಿರುವುದು ಪತ್ತೆ ಹಚ್ಚಿದ್ದ. ಪತಿಯ ಅಕ್ರಮ ಸಂಬಂಧ ಖಚಿತ ಮಾಹಿತಿ ಪಡೆದು ಮಾತುಕತೆ ಮುಂದಾಗಿದ್ದಾಳೆ. ತಮಗೆ ಮಗಳಿದ್ದರೂ ಈ ರೀತಿ ಮಾಡಿದ್ದೇಕೆ ಎಂದು ಕೇಳಿದ್ದಾಳೆ. ಮಾತಿ ಮಾತು ಬೆಳೆಯುತ್ತಿದ್ದಂತೆ ನಾನು ಪ್ರೇಯಸಿ ಜೊತೆಗೆ ಇರುವುದಾಗಿ ಗಂಡ ಹೇಳಿದ್ದಾನೆ. ತಕ್ಷಣವೇ ಖುನ್ ಕ್ವಾಂಗ್ ಮಾತುಕತೆ ನಿಲ್ಲಿಸಿ ಮೌನಕ್ಕೆ ಜಾರಿದ್ದಾಳೆ.

ಪತಿಯನ್ನು ಬಾಡಿಗೆ ನೀಡಲು ಡೀಲ್

ಪತಿ ಬಳಿ ಇನ್ನು ಮಾತನಾಡಿ ಪ್ರಯೋಜನವಿಲ್ಲ ಎಂದು ಅರಿತ ಖುನ್ ಕ್ವಾಂಗ್ ನೇರವಾಗಿ ಪತಿಯ ಪ್ರಯೆಸಿ ಜೊತೆ ಮಾತನಾಡಿದ್ದಾಳೆ. ಬಳಿಕ ತನ್ನ ಪತಿಗೆ ಡಿವೋರ್ಸ್ ಕೊಟ್ಟಿಲ್ಲ, ಅಕ್ರಮ ಸಂಬಂಧ ಕುರಿತು ದೂರು ನೀಡಿದರೆ ಪರಿಣಾಮ ಏನು ಅನ್ನೋದು ನಿಮಗೆ ಗೊತ್ತಿದೆ. ಗಂಡನ ಜೊತೆಗೆ ನೀವೂ ಕೋರ್ಟ್ ಮೆಟ್ಟಿಲೇರಬೇಕು ಎಂದು ಎಚ್ಚರಿಸಿದ್ದಾಳೆ. ಹೀಗಾಗಿ ತನ್ನ ಗಂಡನನ್ನು ಬಾಡಿಗೆ ನೀಡುತ್ತೇನೆ. ತಿಂಗಳಿಗೆ 85,000 ರೂಪಾಯಿ ಬಾಡಿಗೆ ನೀಡಬೇಕು ಎಂದಿದ್ದಾಳೆ. ಈ ಡೀಲ್‌ಗೆ ಮರುಕ್ಷಣದಲ್ಲೇ ಗಂಡನ ಪ್ರೇಯಸಿ ಒಪ್ಪಿಕೊಂಡಿದ್ದಾಳೆ. ಹಣ ಎಷ್ಟಾದರು ಕೊಡುತ್ತೇನೆ ಎಂದಿದ್ದಾಳೆ. ಆದರೆ ಈ ಡೀಲ್ ಗಂಡನ ಕಿವಿಗೆ ಬೀಳುತ್ತಿದ್ದಂತೆ ರಂಪಾಟ ಶುರುವಾಗಿದೆ. ಈ ಡೀಲ್‌ಗೆ ನಿರಾಕರಿಸಿರುವ ಗಂಡ ಡಿವೋರ್ಸ್‌ಗೆ ಮುಂದಾಗಿದ್ದಾನೆ.

ಈ ವಿಚಿತ್ರ ಘಟನೆ ಥಾಯ್ಲೆಂಡ್‌ನ ಜನಪ್ರಿಯ ಟಿವಿ ಕಾರ್ಯಕ್ರಮ ಹೊನೆ ಕ್ರಸೈನಲ್ಲಿ ಪ್ರಸಾರವಾಗಿದೆ. ಈ ಕಾರ್ಯಕ್ರಮದಲ್ಲಿರುವ ವಕೀರಲು ಈ ಪ್ರಕರಣ ಕೋರ್ಟ್‌ನಲ್ಲಿ ಖುನ್ ಕ್ವಾಂಗ್‌ಗೆ ಸಂಕಷ್ಟ ತರಲಿದೆ. ಥಾಯ್ಲೆಂಡ್‌ನಲ್ಲಿ ಬಾಡಿಗೆ ನೀಡುವ ನಿಯಮವಿಲ್ಲ. ಇದಕ್ಕೆ ಅವಕಾಶವೂ ಇಲ್ಲ. ಹೀಗಾಗಿ ಇದು ಸಮಸ್ಯೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.



Source link

Leave a Reply

Your email address will not be published. Required fields are marked *