
ಅಮೆರಿಕಾ ಇಸ್ರೇಲ್ ತನ್ನ ಮೇಲೆ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿರುವುದು ಗೊತ್ತೇ ಇದೆ. ಬಹುಶಃ ಈ ವಿಚಾರವನ್ನೇ ಪ್ರೇರಣೆಯಾಗಿರಿಸಿಕೊಂಡು ಪಾಕಿಸ್ತಾನ ಮಾಜಿ ಹೈ ಕಮೀಷನರ್ ಹೇಳಿಕೆಯೊಂದನ್ನು ನೀಡಿದ್ದು, ಈ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಪಾಕಿಸ್ತಾನದ ಮಾಜಿ ಹೈಕಮೀಷನರ್ ವಿವಾದಾತ್ಮಕ ಹೇಳಿಕೆ
ಅಮೆರಿಕಾ ಇಸ್ರೇಲ್ ತನ್ನ ಮೇಲೆ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿರುವುದು ಗೊತ್ತೇ ಇದೆ. ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕಾದ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ನಿರಂತರ ದಾಳಿ ನಡೆಸಿದ್ದು, ಇದರಿಂದ ಗಲ್ಫ್ ರಾಷ್ಟ್ರಗಳ ಆರ್ಥಿಕತೆಯೇ ಅಲ್ಲೋಲ್ಲ ಕಲ್ಲೋಲವಾಗಿದೆ. ಬಹುಶಃ ಈ ವಿಚಾರವನ್ನೇ ಪ್ರೇರಣೆಯಾಗಿರಿಸಿಕೊಂಡು ಪಾಕಿಸ್ತಾನ ಮಾಜಿ ಹೈ ಕಮೀಷನರ್ ಹೇಳಿಕೆಯೊಂದನ್ನು ನೀಡಿದ್ದು, ಈ ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಹಾಗಿದ್ರೆ ಪಾಕಿಸ್ತಾನದ ಮಾಜಿ ಹೈ ಕಮೀಷನರ್ ಅಬ್ದುಲ್ ಬಸಿತ್ ಹೇಳಿದ್ದೇನು? ಇಲ್ಲಿದೆ ನೋಡಿ ಡಿಟೇಲ್ ಸ್ಟೋರಿ…
ಅಮೆರಿಕಾ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಪಾಕಿಸ್ತಾನ ಭಾರತದ ನಗರಗಳ ಮೇಲೆ ದಾಳಿ ಮಾಡಲಿದೆ:
ಒಂದು ವೇಳೆ ಅಮೆರಿಕಾ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಪಾಕಿಸ್ತಾನ ಭಾರತದ ದೆಹಲಿ ಹಾಗೂ ಮುಂಬೈ ಮೇಲೆ ದಾಳಿ ಮಾಡಲಿದೆ ಎಂಬ ಅಧಿಕಪ್ರಸಂಗಿ ಹೇಳಿಕೆಯನ್ನು ಪಾಕಿಸ್ತಾನದ ಮಾಜಿ ಹೈಕಮೀಷನರ್ ಅಬ್ದುಲ್ ಬಸೀತ್ ನೀಡಿದ್ದು, ಈ ವಿಚಾರ ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಮೇಲೆ ಒಂದು ವೇಳೆ ಅಮೆರಿಕಾ ದಾಳಿ ಮಾಡಿದರೆ ಎಂಬ ಕಾಲ್ಪನಿಕ ಸಂಘರ್ಷದ ಕುರಿತಾದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಬಾಸಿತ್, ಅಮೆರಿಕವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಇಸ್ಲಾಮಾಬಾದ್ ಮರು ಆಲೋಚನೆಯಿಲ್ಲದೆ ಹಲವಾರು ಭಾರತೀಯ ನಗರಗಳನ್ನು ಗುರಿಯಾಗಿಸುತ್ತದೆ ಎಂದು ಹೇಳಿದ್ದಾರೆ. ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ನಾವು ಭಾರತದ ಮೇಲೆ ದಾಳಿ ಮಾಡಬೇಕಾಗುತ್ತದೆ. ನಮ್ಮ ಕ್ಷಿಪಣಿಗಳು ಅಮೆರಿಕವನ್ನು ತಲುಪದಿರಬಹುದು. ಆದರೆ ನಾವು ಎರಡನೇ ಯೋಚನೆಯಿಲ್ಲದೆ ಭಾರತದಲ್ಲಿ ಮುಂಬೈ ಮತ್ತು ನವದೆಹಲಿಯ ಮೇಲೆ ದಾಳಿ ಮಾಡುತ್ತೇವೆ. ನಾವು ಅದನ್ನು ಬಿಡುವುದಿಲ್ಲ, ನಂತರ ಏನಾಗುತ್ತದೆ ಎಂದು ನೋಡೋಣ ಎಂದು ಅವರು ಸ್ಥಳೀಯ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಪಾಕಿಸ್ತಾನದ ಈ ಮಾಜಿ ರಾಯಭಾರಿಯ ಈ ಬೇಜವಾಬ್ದಾರಿ ಹೇಳಿಕೆಗೆ ಭಾರತವಿನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಭಾರತ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ
ಪಾಕಿಸ್ತಾನದ ಮಾಜಿ ರಾಯಭಾರಿಯ ಇತ್ತೀಚಿನ ಹೇಳಿಕೆಯ ಬಗ್ಗೆ ಭಾರತ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೊಂದು ಕೆಟ್ಟ ಸನ್ನಿವೇಶ, ನಾವು ಹಾಗೆ ಆಗಬೇಕೆಂದು ಬಯಸುವುದಿಲ್ಲ ಇದು ಕೇವಲ ಕಾಲ್ಪನಿಕ ಪರಿಸ್ಥಿತಿ ಎಂದು ಬಸಿತ್ ಹೇಳಿದ್ದರೂ, ಭಾರತದ ನಗರಗಳ ಮೇಲೆ ನೇರ ದಾಳಿ ಮಾಡುವುದಾಗಿ ಅವರು ನೀಡಿದ ಹೇಳಿಕೆಗೆ ಭಾರತದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಬಸಿತ್ ಹೇಳಿಕೆಗೆ ಇತ್ತ ಭಾರತವೂ ಅದನ್ನು ಬಯಸುವುದಿಲ್ಲ ಎಂದು ಸುದ್ದಿ ನಿರೂಪಕ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಮೀನುಹಾವನ್ನು ಗುದದ್ವಾರದೊಳಗೆ ತುಂಬಿಸಿಕೊಂಡು ಆಸ್ಪತ್ರೆ ಸೇರಿದ ಯುವಕ
ಅಬ್ದುಲ್ ಬಾಸಿತ್ ಯಾರು?
ಗಮನಾರ್ಹವಾಗಿ ಅಬ್ದುಲ್ ಬಸಿತ್ ಅವರು 2014 ರಿಂದ 2017 ರವರೆಗೆ ಭಾರತದಲ್ಲಿ ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಾಗಿ ಸೇವೆ ಸಲ್ಲಿಸಿದ್ದಾರೆ. ಆ ಸಮಯದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧಗಳು ಬಹಳ ಉದ್ವಿಘ್ನಗೊಂಡಿದ್ದವು. ಭಾರತ ಪಾಕಿಸ್ತಾನ ಸಂಬಂಧಗಳ ಬಗ್ಗೆ ಅವರ ಈಗಿನ ಹೇಳಿಕೆಯನ್ನು ಗಮನಿಸಿದರೆ ಅವರು ಎರಡು ದೇಶಗಳ ಪರಿಸ್ಥಿತಿ ಉಲ್ಬಣಗೊಳ್ಳುವುದಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಸಾಧ್ಯತೆ ಇದೆ. ಹೀಗಾಗಿ ಅವರು ಈ ಹಿಂದೆ ಹೊಂದಿದ್ದ ಹುದ್ದೆಯಿಂದಾಗಿ ಈಗ ಅವರು ನೀಡಿದ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದೆ.
ಇದನ್ನೂ ಓದಿ: ರಾಮಲಲ್ಲಾನ ಭೇಟಿ ಮಾಡಿದ ಆಂಜನೇಯ: ಅಯೋಧ್ಯೆಗೆ ಬಂದ ಜರ್ಮನ್ ಬಾಲಕನ ವೀಡಿಯೋ ಭಾರಿ ವೈರಲ್
Scroll to load tweet…