Headlines

ಮಟನ್‌ ತಿನ್ನೋದನ್ನ ರಕ್ಷಿತಾ ನೋಡಿ ಕಲೀರಿ, ಬಿಗ್‌ಬಾಸ್ ಹುಡುಗಿ ಬೆಂಗ್ಳೂರ್ ಹೈದಂಗೆ ಮಾಡಿದ ಓಪನ್‌ ಚಾಲೆಂಜ್ ಏನು? | Bigg Boss Girl Rakshita Shetty Open Challenge To Prabhu Shetty About Mutton Eating Bni

ಮಟನ್‌ ತಿನ್ನೋದನ್ನ ರಕ್ಷಿತಾ ನೋಡಿ ಕಲೀರಿ, ಬಿಗ್‌ಬಾಸ್ ಹುಡುಗಿ ಬೆಂಗ್ಳೂರ್ ಹೈದಂಗೆ ಮಾಡಿದ ಓಪನ್‌ ಚಾಲೆಂಜ್ ಏನು? | Bigg Boss Girl Rakshita Shetty Open Challenge To Prabhu Shetty About Mutton Eating Bni



ಮಟನ್‌ ತಿನ್ನೋದನ್ನ ರಕ್ಷಿತಾ ನೋಡಿ ಕಲೀರಿ, ಬಿಗ್‌ಬಾಸ್ ಹುಡುಗಿ ಬೆಂಗ್ಳೂರ್ ಹೈದಂಗೆ ಮಾಡಿದ ಓಪನ್‌ ಚಾಲೆಂಜ್ ಏನು? | Bigg Boss Girl Rakshita Shetty Open Challenge To Prabhu Shetty About Mutton Eating Bni

ಬಿಗ್‌ ಬಾಸ್‌ ವಿನ್ನರ್ ಒಂದ್ ಆಗಿಲ್ಲ ಅನ್ನೋದು ಬಿಟ್ಟರೆ ವಿನ್ನರ್‌ಗೂ ಮೀರಿದ ಪಬ್ಲಿಸಿಟಿ ಚಿಕ್‌ ಹುಡುಗಿ ರಕ್ಷಿತಾ ಶೆಟ್ಟಿಗೆ ಸಿಕ್ಕಿ ಬಿಟ್ಟಿದೆ. ಈಗ ಮಟನ್ ತಿನ್ನೋಕೆ ಕೂತಿರೋ ಈ ಬಿಗ್‌ಬಾಸ್‌ ಹುಡುಗಿ ಮಂಡ್ಯ ಹೈದಂಗೇ ಚಾಲೆಂಜ್ ಮಾಡಿದ್ದಾರೆ.

ರಕ್ಷಿತಾ ಶೆಟ್ಟಿ ಅನ್ನೋ ಹೆಸ್ರು ಈಗ ಕರ್ನಾಟಕದಲ್ಲಿ ಮನೆಮಾತು. ಬಿಗ್‌ಬಾಸ್‌ ಬಿಟ್ಟ ಮೇಲೆ ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗ್ತನೇ ಇರ್ತಾರೆ. ಮೊದಲೆಲ್ಲ ಈ ಕರಾವಳಿಯ ಅರೆಬರೆ ಕನ್ನಡ ಮಾತಾಡೋ ಹುಡುಗಿ ಊರೂರು ಅಲೆದು ಅಲ್ಲಿನ ವಿಶೇಷತೆಗಳನ್ನು ತೋರಿಸಿದರೂ ಈ ಮಟ್ಟಿನ ಜನಪ್ರಿಯತೆ ಸಿಕ್ತಿರಲಿಲ್ಲ. ಈಗ ಈಕೆ ಸ್ಕ್ರೀನ್ ಮುಂದೆ ಬಂದರೆ ಸಾಕು, ಜನ ಮುಗಿಬಿದ್ದು ಈಕೆಯನ್ನು ನೋಡ್ತಾರೆ. ರೀಸೆಂಟಾಗಿ ಸುದ್ದಿಯಾಗಿದ್ದು ಚಿನ್ನದ ಸರದ ಕಾರಣಕ್ಕೆ.

ಹಾಗಂತ ಅದೇನು ಆಕೆ ಕದ್ದ ಮಾಲಲ್ಲ, ಆದರೆ ಕೆಲವೊಬ್ಬರು ಆಕೆಯನ್ನು ಕಂಡರಾಗದವರು ಇಲ್ಲೂ ಮೂಗು ಮುರಿಯುವ ಪ್ರಯತ್ನ ಮಾಡಿದ್ರು. ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿದ್ದ ರಕ್ಷಿತಾ ಅವರಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ 20 ಲಕ್ಷ ರೂ. ಮೌಲ್ಯದ ಗಿಫ್ಟ್ ವೋಚರ್ ಸಿಕ್ಕಿತ್ತು. ಅವರು ಇತ್ತೀಚೆಗೆ ಖರೀದಿ ಮಾಡಿದ್ರು. ಬಂಗಾರ ಖರೀದಿ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವ ರಕ್ಷಿತಾ, “ಹಾಯ್ ಗಯ್ಸ್.. ನಾನು ರನ್ನರ್ ಅಪ್ ಆಗಿದ್ದಕ್ಕೆ ಸಿಕ್ಕ 20 ಲಕ್ಷ ರೂ. ಮೌಲ್ಯದ ವೋಚರ್ ಸಿಕ್ಕಿತ್ತು. ಅದನ್ನು ಇಂದು ನಾನು ಬಳಸಿದ್ದೇನೆ. ಸಾಯಿ ಗೋಲ್ಡ್ ಪ್ಯಾಲೇಸ್‌ಗೆ ಬಂದು ಚಿನ್ನದ ಸರಗಳನ್ನು ತೆಗೆದುಕೊಂಡಿದ್ದೇನೆ” ಎಂದು ಖುಷಿ ಖಷಿಯಾಗಿ ಹೇಳ್ಕೊಂಡ್ರು.

ಮಟನ್‌ ತಿನ್ನೋಕೂ ಗೊತ್ತು, ಮಾಡೋಕೂ ಗೊತ್ತು

ಅದೇ ರಕ್ಷಿತಾ ಇದೀಗ ಮಟನ್ ತಿನ್ತಾ ಬೆಂಗ್ಳೂರ್ ಹೈದನಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ. ಅದಕ್ಕೂ ಮೊದ್ಲು ಅಲ್ಲೇನಾಯ್ತು ಅಂತ ನೋಡ್ಬೇಕು. ಈ ಬಿಗ್‌ಬಾಸ್‌ ಪುಟ್ಟಿಗೆ ಬಿಸಿಬಿಸಿ ಮಟನ್‌ ಊಟ ಹಾಕಿದ್ದು ಖ್ಯಾತ ಫುಡ್ ವ್ಲಾಗರ್‌ ಪ್ರಭು ಶೆಟ್ಟಿ. ಚೆನ್ನಾಗಿ ಮಟನ್ ಊಟ ಮಾಡಿಯೂ ತನ್ನೂರಿನ ಮೀನು ರೆಸಿಪಿಯನ್ನು ಬಿಡದ ರಕ್ಷಿತಾ, ‘ನಂಗೆ ಮಟನ್‌ ಎಲ್ಲ ಅಷ್ಟಕ್ಕಷ್ಟೇ. ನೀವ್ ಮೀನಲ್ಲಿ ಏನೆಲ್ಲ ವೆರೈಟಿ ಮಾಡ್ತೀರಿ, ಅದನ್ನು ಮೊದಲು ಹೇಳಿ’ ಅಂತ ಹೇಳಿದ್ದಾರೆ.

‘ಮೀನಿನ ಪಲ್ಯ ಮಾಡ್ತೀನಿ, ಸಾರು, ಕರಿ, ಫಿಶ್ ದೋಸೆನೂ ಮಾಡ್ತೀನಿ’ ಅಂತೆಲ್ಲ ಡೈಲಾಗ್ ಹೊಡೆದುಬಿಟ್ಟರು.

ಬಿಸಿ ಬಿಸಿ ಮಟನ್‌ ಊಟ ಮಾಡ್ತಿರುವಾಗಲೇ ಪ್ರಭು ಅವ್ರು ತಾನು ಸ್ಟವ್ ಇಲ್ದೇ ಪಾತ್ರೆ ಇಲ್ದೇ ಅಡುಗೆ ಮಾಡ್ತೀನಿ ಅಂತೆಲ್ಲ ಡೈಲಾಗ್ ಹೊಡೆಯಲು ಶುರು ಮಾಡಿದ್ದಾರೆ. ಅದಕ್ಕೆ ಟಕ್ಕಂತ ಪ್ರತಿಕ್ರಿಯೆ ಕೊಟ್ಟಿರೋ ರಕ್ಷಿತಾ, ‘ನೀವು ಉಡುಪಿಗೆ ನಮ್ಮೂರಿಗೆ ಒಮ್ಮೆ ಬನ್ನಿ. ನೀವೀಗ ಏನೆಲ್ಲ ಹೇಳಿದ್ರೋ ಅದನ್ನೆಲ್ಲ ಮಾಡಿಕೊಡಿ. ಹಾಗೆ ಮಾಡಿ ಕೊಟ್ಟ ಮೇಲೇ ನಾನ್ ನಿಮ್ಮ ಮಾತು ನಂಬ್ತೀನಿ’ ಅಂತ ಸಖತ್ತಾಗಿ ಡೈಲಾಗ್ ಹೊಡೆದುಬಿಟ್ರು.

ಇಂಥಾ ಮಾತಿಗೇ ಕಾಯ್ತಿದ್ದ ಪ್ರಭು ಡೇಟ್‌ ಫಿಕ್ಸ್‌ ಮಾಡೇ ಬಿಟ್ರು. ಮುಂದಿನ ವಾರ ಅವ್ರು ರಕ್ಷಿತಾ ಊರಿಗೆ ಹೋಗ್ತಾರಂತೆ. ಅವರೂರಿಗೆ ಹೋಗಿ ಅವರೂರಿನ ಮೀನು ತಂದು ಅದರಲ್ಲಿ ತನ್ನ ನಳಪಾಕ ಸಿದ್ಧ ಮಾಡ್ತಾರಂತೆ. ಅಂಥಾದ್ದೊಂದು ದಿವ್ಯ ಕ್ಷಣಕ್ಕೆ ತಾವೂ ಕಾಯ್ತಿದ್ದೀವಿ ಅಂತ ವೀಕ್ಷಕರೂ ಭಲೇ ಡೈಲಾಗ್ ಹೊಡೆದ್ರು ಬಿಡಿ..



Source link

Leave a Reply

Your email address will not be published. Required fields are marked *