Headlines

Trump Warning ಇಂದು ರಾತ್ರಿ ಇಡೀ ನಾಗರೀಕತೆಯನ್ನು ಭಸ್ಮ ಮಾಡುತ್ತೇವೆ, ಇರಾನ್‌ಗೆ ಟ್ರಂಪ್ ವಾರ್ನಿಂಗ್ | Whole Civilization Will Die Tonight Trump Issues Chilling Ultimatum To Iran

Trump Warning ಇಂದು ರಾತ್ರಿ ಇಡೀ ನಾಗರೀಕತೆಯನ್ನು ಭಸ್ಮ ಮಾಡುತ್ತೇವೆ, ಇರಾನ್‌ಗೆ ಟ್ರಂಪ್ ವಾರ್ನಿಂಗ್ | Whole Civilization Will Die Tonight Trump Issues Chilling Ultimatum To Iran



Trump Warning ಇಂದು ರಾತ್ರಿ ಇಡೀ ನಾಗರೀಕತೆಯನ್ನು ಭಸ್ಮ ಮಾಡುತ್ತೇವೆ, ಇರಾನ್‌ಗೆ ಟ್ರಂಪ್ ವಾರ್ನಿಂಗ್ | Whole Civilization Will Die Tonight Trump Issues Chilling Ultimatum To Iran

ಇಂದು ರಾತ್ರಿ ಇಡೀ ನಾಗರೀಕತೆಯನ್ನು ಭಸ್ಮ ಮಾಡುತ್ತೇವೆ, ಇರಾನ್‌ಗೆ ಟ್ರಂಪ್ ವಾರ್ನಿಂಗ್, ಮತ್ತೆಂದು ಈ ನಾಗರೀಕರತೆ ಮರಳವುದಿಲ್ಲ. ಯೋಚನೆ ಮಾಡಿ, ಡೀಲ್ ಒಪ್ಪಿಕೊಳ್ಳಿ ಇದು ಲಾಸ್ಟ್ ಎಚ್ಚರಿಕೆ ಎಂದಿದ್ದಾರೆ. 

ವಾಶಿಂಗ್ಟನ್ (ಏ.07) ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಹೊರ್ಮೊಜ್ ಜಲಸಂಧಿ ತೆರೆಯುವಂತೆ ಅಮೆರಿಕ, ಇರಾನ್‌ಗೆ ತಾಕೀತು ಮಾಡಿದೆ. ಇಂದು ರಾತ್ರಿ 8 ಗಂಟೆ ಒಳಗೆ ಇರಾನ್ ಅಧಿಪತ್ಯ ಸಾಧಿಸಿರುವ ಹೊರ್ಮುಜ್ ಜಲಸಂಧಿ ತೆರೆಯದಿದ್ದರೆ ಇಡೀ ನಾಗರೀಕತೆಯನ್ನೇ ಮುಗಿಸುತ್ತೇವೆ. ಮತ್ತೆ ಯಾವತ್ತೂ ಈ ನಾಗರೀಕತೆ ಮರಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಇಂದು ರಾತ್ರಿ 8ಗಂಟೆವರೆಗೆ ಮಾತ್ರ ಸಮಯ

ಒಂದು ನಾಗರೀಕತೆಯನ್ನು ಮುಗಿಸುವುದು ನನಗೂ ಇಷ್ಟವಿಲ್ಲ. ಆದರೆ ಪರಿಸ್ಥಿತಿ ನೋಡಿದರೆ ಇದು ಆಗಲಿದೆ. ಇರಾನ್‌ನಲ್ಲಿ ಸಂಪೂರ್ಣ ಹಾಗೂ ಪೂರ್ಣಪ್ರಮಾಣದ ಆಡಳಿತ ಬದಲಾವಣೆ ಗುರಿ ಹೊಂದಿದ್ದೇವೆ. ಇದರತ್ತ ಸಾಗುತ್ತಿದ್ದೇವೆ. ಹೊಸ ಆಡಳಿತದಲ್ಲಿ ಮೂಲಭೂತವಾದಿಗಳಿಗೆ ಅವಕಾಶವಿಲ್ಲ. ಕ್ರಾಂತಿಕಾರಕ ಅದ್ಭುತವೊಂದು ಸಂಭವಿಸಲಿದೆ. ಅತ್ಯಂತ ಸಂಕೀರ್ಣ ಹಾಗೂ ದುರ್ಗಮ ಕ್ಷಣಗಳಲ್ಲಿ ಒಂದಾಗಿದೆ. ಇಂದು ರಾತ್ರಿಯೇ ಭವಿಷ್ಯ ನಿರ್ಧಾರವಾಗಲಿದೆ. ಕಳೆದ 47 ವರ್ಷಗಳಿಂದ ನಡೆಯುತ್ತಿದ್ದ ಭ್ರಷ್ಟಾಚಾರ, ಸುಲಿಗೆ, ಸಾವು, ಅತಿಕ್ರಮಣಗಳ ಕೊನೆಗೊಳ್ಳುತ್ತಿದೆ. ಇರಾನ್ ಜನರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಟ್ರುಥ್ ಸೋಶಿಯಲ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಖರ್ಗ್ ಆಯಿಲ್ ರಫ್ತು ಘಟಕದ ಮೇಲೆ ದಾಳಿ

ಡೋನಾಲ್ಡ್ ಟ್ರಂಪ್ ಲಾಸ್ಟ್ ವಾರ್ನಿಂಗ್ ನೀಡುವ ಮೊದಲೇ ಅಮೆರಿಕ ಸೇನಾ ಇರಾನ್‌ನ ಅತ್ಯಂತ ಪ್ರಮುಖ ಖರ್ಗ್ ದ್ವೀಪದ ಮೇಲೆ ದಾಳಿ ಮಾಡಿದೆ. ಖರ್ಗ್‌ನಲ್ಲಿ ತೈಲ ಘಟಕ, ತೈಲ ಸಂಸ್ಕರಣ ಘಟಕದ ಮೇಲೆ ಅಮೆರಿಕ ದಾಳಿ ಮಾಡಿದೆ. ಖರ್ಗ್ ದ್ವೀಪದ ಹಲವೆಡೆ ದಾಳಿ ನಡೆಯುತ್ತಿದೆ. ಇರಾನ್ ಕೂಡ ಪ್ರತಿ ದಾಳಿಗೆ ಸಜ್ಜಾಗಿದೆ.

ಇರಾನ್ ಹೆಜ್ಜೆ ಹೆಜ್ಜೆಗೂ ಅಮೆರಿಕಗೆ ಎಚ್ಚರಿಕೆ ನೀಡುತ್ತಿದೆ. ಜೊತೆಗೆ ತನ್ನ ದಾಳಿ ಮುಂದುವರಿಸುತ್ತಿದೆ. ಇದೇ ವೇಳೆ ಹೊರ್ಮುಜ್ ಜಲಸಂಧಿ ಆತ್ಮೀಯರಿಗೆ, ಆಪ್ತ ಸ್ನೇಹಿತರಿಗೆ ತೆರೆದಿದೆ ಎಂದು ಅಮೆರಿಕವನ್ನು ಅಣಕಿಸಿದೆ. ಇತ್ತ ಇರಾನ್ ಪ್ರತಿ ದಾಳಿ ನಡೆಸಿತ್ತು. ಅರಬ್ ರಾಷ್ಟ್ರಗಳ ಮೇಲೆ ಮಿಸೈಲ್ ದಾಳಿಯಾಗಿದೆ. ಇದು ಅರಬ್ ರಾಷ್ಟ್ರಗಳ ಕಣ್ಣು ಕೆಂಪಾಗಿಸಿದೆ.



Source link

Leave a Reply

Your email address will not be published. Required fields are marked *