Headlines

Salim Khan Health Update: ಸಲ್ಮಾನ್ ಖಾನ್ ತಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಯಾವಾಗ? ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್ | Salim Khan Health Improves Expected Discharge From Lilavati Hospital Soon Gvd

Salim Khan Health Update: ಸಲ್ಮಾನ್ ಖಾನ್ ತಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಯಾವಾಗ? ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್ | Salim Khan Health Improves Expected Discharge From Lilavati Hospital Soon Gvd



Salim Khan Health Update: ಸಲ್ಮಾನ್ ಖಾನ್ ತಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಯಾವಾಗ? ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್ | Salim Khan Health Improves Expected Discharge From Lilavati Hospital Soon Gvd

ಸಲ್ಮಾನ್ ಖಾನ್ ಅವರ 90 ವರ್ಷದ ತಂದೆ ಸಲೀಂ ಖಾನ್, ಸಣ್ಣ ಬ್ರೈನ್ ಹೆಮರೇಜ್ ಕಾರಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 14 ದಿನಗಳಿಂದ ಅವರು ಆಸ್ಪತ್ರೆಯಲ್ಲಿದ್ದಾರೆ. ಇದೀಗ ಅವರ ಆರೋಗ್ಯದ ಬಗ್ಗೆ ಹೊಸ ಅಪ್‌ಡೇಟ್ ಬಂದಿದೆ.

ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಅವರ ತಂದೆ ಹಾಗೂ ಪ್ರಸಿದ್ಧ ಚಿತ್ರಕಥೆಗಾರ ಸಲೀಂ ಖಾನ್, ಸುಮಾರು 14 ದಿನಗಳಿಂದ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಅವರ ಆರೋಗ್ಯದ ಬಗ್ಗೆ ಒಂದು ಗುಡ್ ನ್ಯೂಸ್ ಕೇಳಿಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಅವರು ಶೀಘ್ರದಲ್ಲೇ ಮನೆಗೆ ಮರಳಲಿದ್ದಾರೆ. 90 ವರ್ಷದ ಸಲೀಂ ಖಾನ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಕಾರಣ, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷೆ ನಡೆಸಿ, ಅವರಿಗೆ ಸಣ್ಣ ಪ್ರಮಾಣದ ಬ್ರೈನ್ ಹೆಮರೇಜ್ ಆಗಿದೆ ಎಂದು ತಿಳಿಸಿದ್ದರು. ಔಷಧಿಗಳ ಮೂಲಕವೇ ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಹಾಗಾದ್ರೆ, ಸಲ್ಮಾನ್ ತಂದೆ ಯಾವಾಗ ಡಿಸ್ಚಾರ್ಜ್ ಆಗಬಹುದು? ಇಲ್ಲಿದೆ ಮಾಹಿತಿ.

ಸಲ್ಮಾನ್ ಖಾನ್ ತಂದೆ ಡಿಸ್ಚಾರ್ಜ್ ಯಾವಾಗ?

90 ವರ್ಷದ ಸಲೀಂ ಖಾನ್ ಅವರ ಆರೋಗ್ಯದ ಬಗ್ಗೆ ಈಗ ಪಾಸಿಟಿವ್ ಅಪ್‌ಡೇಟ್ ಬಂದಿದೆ. ವೈದ್ಯರ ತಂಡದ ಶ್ರಮ ಹಾಗೂ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. ಸಲೀಂ ಅವರು ಈಗ ಮೊದಲಿಗಿಂತ ಸಾಕಷ್ಟು ಚೇತರಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇನ್ನು 3-4 ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬಹುದು. ವಿಕ್ಕಿ ಲಾಲ್ವಾನಿ ಅವರ ಒಂದು ಪೋಸ್ಟ್‌ನಲ್ಲಿ, ‘ಸಲೀಂ ಖಾನ್ ಅವರ ಆರೋಗ್ಯದಲ್ಲಿ ಈಗ ಸುಧಾರಣೆ ಕಂಡುಬಂದಿದೆ. ಶೀಘ್ರದಲ್ಲೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು, ಅದಕ್ಕೆ ಚಿಕಿತ್ಸೆ ನೀಡಲಾಗಿದೆ.

ಸಲ್ಮಾನ್ ಅವರ ತಂದೆ ಇನ್ನು 3-4 ದಿನಗಳಲ್ಲಿ ಮನೆಗೆ ಮರಳಲಿದ್ದಾರೆ. ಇದು ಸುಲಭವಾಗಿರಲಿಲ್ಲ, ಆದರೆ ಪ್ರಾರ್ಥನೆಗಳು ಫಲ ನೀಡಿವೆ. ಚಿಕಿತ್ಸೆ ನೀಡಿದ ವೈದ್ಯರ ತಂಡ ಅದ್ಭುತ ಕೆಲಸ ಮಾಡಿದೆ. ಖಾನ್ ಕುಟುಂಬ ಈಗ ನಿರಾಳವಾಗಿದೆ ಮತ್ತು ಸಂತೋಷದಲ್ಲಿದೆ’ ಎಂದು ಬರೆಯಲಾಗಿದೆ. ಇತ್ತೀಚೆಗೆ, ಜಾವೇದ್ ಅಖ್ತರ್ ಕೂಡ ಸಲೀಂ ಖಾನ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ‘ಹಿಂದೂಸ್ತಾನ್ ಟೈಮ್ಸ್’ ಜೊತೆ ಮಾತನಾಡುತ್ತಾ, ‘ಸಲೀಂ ಈಗ ಚೆನ್ನಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದಾರೆ, ಅಂದರೆ ಅವರ ಸ್ಥಿತಿ ಸುಧಾರಿಸಿದೆ’ ಎಂದು ಹೇಳಿದ್ದರು.

ಸಲೀಂ ಖಾನ್ ಬಗ್ಗೆ ಒಂದಿಷ್ಟು ಮಾಹಿತಿ

ಸಲೀಂ ಖಾನ್ ಮೂಲತಃ ಇಂದೋರ್‌ನವರು. ಹೀರೋ ಆಗಬೇಕೆಂದು ಮುಂಬೈಗೆ ಬಂದಿದ್ದರು. ಕೆಲವು ಸಿನಿಮಾಗಳಲ್ಲಿ ನಟಿಸಿದರೂ, ಯಾವ ಚಿತ್ರವೂ ಹಿಟ್ ಆಗಲಿಲ್ಲ. ನಂತರ, ನಟನಾಗುವ ಕನಸನ್ನು ಕೈಬಿಟ್ಟರು. ಇದೇ ಸಮಯದಲ್ಲಿ ಅವರಿಗೆ ಜಾವೇದ್ ಅಖ್ತರ್ ಅವರ ಪರಿಚಯವಾಯಿತು. ಇಬ್ಬರೂ ಸೇರಿ ಸಿನಿಮಾಗಳಿಗೆ ಕಥೆ ಬರೆಯಲು ನಿರ್ಧರಿಸಿದರು. ಈ ಜೋಡಿ ‘ಯಾದೋಂ ಕಿ ಬಾರಾತ್’, ‘ಜಂಜೀರ್’, ‘ಹಾಥ್ ಕಿ ಸಫಾಯಿ’, ‘ದೀವಾರ್’, ‘ತ್ರಿಶೂಲ್’, ‘ಕಾಲಾ ಪತ್ಥರ್’, ‘ದೋಸ್ತಾನಾ’, ‘ಸೀತಾ ಔರ್ ಗೀತಾ’, ‘ಶೋಲೆ’, ‘ಜಮಾನಾ’, ‘ಮಿಸ್ಟರ್ ಇಂಡಿಯಾ’, ‘ಡಾನ್’ ಸೇರಿದಂತೆ ಸುಮಾರು 24 ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದಾರೆ. ಇವುಗಳಲ್ಲಿ 4 ಸಿನಿಮಾಗಳನ್ನು ಹೊರತುಪಡಿಸಿ, ಉಳಿದೆಲ್ಲವೂ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆದವು. 12 ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದ ನಂತರ ಇಬ್ಬರೂ ಬೇರೆಯಾದರು.



Source link

Leave a Reply

Your email address will not be published. Required fields are marked *