‘AI ತಂತ್ರಜ್ಞಾನಕ್ಕಲ್ಲ, ಅಶ್ಲೀಲ ಡಾನ್ಸ್‌ಗೆ ಗಲ್ಗೋಟಿಯಾಸ್ ಫೇಮಸ್’! ಒಂದಾದ ಮೇಲೊಂದರಂತೆ ವಿಡಿಯೋ ವೈರಲ್ | From Robotics To Reels How Galgotias University Became A Meme Content Hub

‘AI ತಂತ್ರಜ್ಞಾನಕ್ಕಲ್ಲ, ಅಶ್ಲೀಲ ಡಾನ್ಸ್‌ಗೆ ಗಲ್ಗೋಟಿಯಾಸ್ ಫೇಮಸ್’! ಒಂದಾದ ಮೇಲೊಂದರಂತೆ ವಿಡಿಯೋ ವೈರಲ್ | From Robotics To Reels How Galgotias University Became A Meme Content Hub



‘AI ತಂತ್ರಜ್ಞಾನಕ್ಕಲ್ಲ, ಅಶ್ಲೀಲ ಡಾನ್ಸ್‌ಗೆ ಗಲ್ಗೋಟಿಯಾಸ್ ಫೇಮಸ್’! ಒಂದಾದ ಮೇಲೊಂದರಂತೆ ವಿಡಿಯೋ ವೈರಲ್ | From Robotics To Reels How Galgotias University Became A Meme Content Hub

Galgotias Viral Dance Video: ‘ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ’ಯಲ್ಲಿ ಚೀನಾ ಮೂಲದ ರೋಬೋಟ್ ಅನ್ನು ತನ್ನದೇ ಸಂಶೋಧನೆ ಎಂದು ಸುಳ್ಳು ಹೇಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರಿ ವೈರಲ್ ಆಗುತ್ತಿವೆ.

ತ್ತೀಚೆಗೆ ನಡೆದ ‘ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ’ಯಲ್ಲಿ (India AI Impact Summit) ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದ ಬೆನ್ನಲ್ಲೇ, ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ (Galgotias University) ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಇದನ್ನು ನೋಡಿ ನೆಟ್ಟಿಗರು ವಿಶ್ವವಿದ್ಯಾಲಯವನ್ನು ಮನಬಂದಂತೆ ಟ್ರೋಲ್ ಮಾಡುತ್ತಿದ್ದಾರೆ.

ಏನಿದು ಘಟನೆ?
ದೆಹಲಿಯಲ್ಲಿ ನಡೆದ AI ಶೃಂಗಸಭೆಯಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ಒಂದು ‘ರೋಬೋಟಿಕ್ ನಾಯಿ’ಯನ್ನು ಪ್ರದರ್ಶಿಸಿತ್ತು. ಇದನ್ನು ತಮ್ಮ ವಿದ್ಯಾರ್ಥಿಗಳೇ ತಯಾರಿಸಿದ್ದು ಎಂದು ವಿಶ್ವವಿದ್ಯಾಲಯ ಹೇಳಿಕೊಂಡಿತ್ತು. ಆದರೆ, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇದು ಚೀನಾ ಮೂಲದ ಕಂಪನಿ ತಯಾರಿಸಿದ ಸಾಧನ ಎಂಬ ಸತ್ಯ ಬಯಲಾಯಿತು. ಸುಳ್ಳು ಹೇಳಿ ಸಿಕ್ಕಿಬಿದ್ದ ಕಾರಣ, ಶೃಂಗಸಭೆಯಿಂದ ಈ ವಿಶ್ವವಿದ್ಯಾಲಯದ ಸ್ಟಾಲ್ ಅನ್ನು ತಕ್ಷಣವೇ ತೆರವುಗೊಳಿಸುವಂತೆ ಸೂಚಿಸಲಾಯಿತು.

ಈಗ ವೈರಲ್ ಆಗುತ್ತಿರುವುದೇನು?

ಈ ಅವಮಾನದ ಬೆನ್ನಲ್ಲೇ, ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದಿದ್ದ ಹಳೆಯ ಅಶ್ಲೀಲ ಅಥವಾ ಮಿತಿಮೀರಿದ ನೃತ್ಯದ ವಿಡಿಯೋಗಳನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ. “ಗಲ್ಗೋಟಿಯಾಸ್ ಇರುವುದು ಇಂತಹ ಡಾನ್ಸ್‌ಗಳಿಗಾಗಿಯೇ ಹೊರತು AI ಸಂಶೋಧನೆಗಲ್ಲ” ಎಂದು ಕಾಲೆಳೆಯುತ್ತಿದ್ದಾರೆ.

Scroll to load tweet…

ನೆಟ್ಟಿಗರ ಕಾಮೆಂಟ್ಸ್
“ಗೈಸ್, ಇದೇ ಆ ಯೂನಿವರ್ಸಿಟಿ! ನನಗೊಂದು ಪ್ರಶ್ನೆ, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲೂ ಇಂತಹ ‘ರಂಗುರಂಗಿನ’ ಕಾರ್ಯಕ್ರಮಗಳು ನಡೆಯುತ್ತವಾ?”.
“ಗಲ್ಗೋಟಿಯಾಸ್ ಇಂತಹ ನೃತ್ಯಕ್ಕೆ ಹೆಸರುವಾಸಿಯೇ ಹೊರತು ತಂತ್ರಜ್ಞಾನಕ್ಕಲ್ಲ”.
“ಹೇ ಪಾರ್ಥ (ಶ್ರೀಕೃಷ್ಣ), ರಥವನ್ನು ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಕಡೆಗೆ ತಿರುಗಿಸು! ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ ಹೋದದ್ದಾಯಿತು, ಈಗ ಈ ಡಾನ್ಸ್ ನೋಡಿ ಟೆನ್ಷನ್ ದೂರ ಮಾಡಿಕೊಳ್ಳೋಣ”.
“ಇವರ ಡಾನ್ಸ್ ನೋಡಿದರೆ ನಾನೂ ಇಲ್ಲಿ ಬಿ.ಟೆಕ್ ಮಾಡಬೇಕಿತ್ತು ಅನಿಸುತ್ತಿದೆ. ಇಂಜಿನಿಯರ್ ಆಗದಿದ್ದರೂ ಪರವಾಗಿಲ್ಲ, ಇಂತಹ ರೀಲ್ಸ್ ಡಾನ್ಸ್ ನೋಡಿ ಸ್ಟ್ರೆಸ್ ಆದರೂ ದೂರವಾಗುತ್ತಿತ್ತು!”.
ಒಟ್ಟಾರೆಯಾಗಿ, ಸುಳ್ಳು ಕ್ರೆಡಿಟ್ ಪಡೆಯಲು ಹೋಗಿ ಈಗ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗಿದೆ.

Scroll to load tweet…

ವಿವಾದ ಶುರುವಾಗಿದ್ದು ಹೇಗೆ?

ದೆಹಲಿಯಲ್ಲಿ ಆಯೋಜಿಸಲಾದ ‘ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ’ಯಲ್ಲಿ (India AI Impact Summit) ಗ್ರೇಟರ್ ನೋಯ್ಡಾ ಮೂಲದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯ ಚೀನಾ ಮೂಲದ ರೋಬೋಟ್ ಅನ್ನು ತಮ್ಮದೇ ಸಂಶೋಧನೆ ಎಂದು ಸುಳ್ಳು ಹೇಳಿಕೊಂಡ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಎಕ್ಸ್‌ಪೋ ಪ್ರದೇಶದಿಂದ ಸ್ಟಾಲ್ ಖಾಲಿ ಮಾಡುವಂತೆ ವಿಶ್ವವಿದ್ಯಾಲಯಕ್ಕೆ ಆದೇಶಿಸಲಾಯಿತು.

ವಿವಾದಕ್ಕೀಡಾದ ರೋಬೋಟ್ ಚೀನಾದ ‘ಯೂನಿಟ್ರೀ ರೋಬೋಟಿಕ್ಸ್’ ಕಂಪನಿ ತಯಾರಿಸಿದ ‘ಯೂನಿಟ್ರೀ ಗೋ2’ (Unitree Go2) ಎಂಬ ಮಾಡೆಲ್ ಆಗಿದೆ. ಭಾರತದಲ್ಲಿ ಇದು ಆನ್‌ಲೈನ್‌ನಲ್ಲಿ ಸುಮಾರು 2 ರಿಂದ 3 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.

ಶೃಂಗಸಭೆಯಲ್ಲಿ ಈ ರೋಬೋಟ್‌ಗೆ ‘ಓರಿಯನ್’ ಎಂದು ಹೆಸರಿಟ್ಟು ಪ್ರದರ್ಶಿಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ, ವಿಶ್ವವಿದ್ಯಾಲಯದ ಪ್ರತಿನಿಧಿ ಎನ್ನಲಾದ ಮಹಿಳೆಯೊಬ್ಬರು, “ಓರಿಯನ್ ಅನ್ನು ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ” ಎಂದು ಮಾಧ್ಯಮಗಳಿಗೆ ವಿವರಿಸುತ್ತಿರುವುದು ಕಂಡುಬಂದಿದೆ. ಮತ್ತೊಂದು ವಿಡಿಯೋದಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಕೂಡ ಇದೇ ದಾವೆ ಮಾಡಿದ್ದರು. ಆದರೆ, ತಾಂತ್ರಿಕ ಜ್ಞಾನವಿರುವ ನೆಟ್ಟಿಗರು ಇದು ಚೀನಾ ನಿರ್ಮಿತ ರೋಬೋಟ್ ಎಂದು ತಕ್ಷಣವೇ ಗುರುತಿಸಿ ವಿಶ್ವವಿದ್ಯಾಲಯದ ಮರ್ಯಾದೆ ಹರಾಜು ಹಾಕಿದರು.

ವಿಶ್ವವಿದ್ಯಾಲಯದ ಸ್ಪಷ್ಟನೆ ಏನು?
ವಿವಾದ ತೀವ್ರಗೊಂಡ ನಂತರ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ಸಾಮಾಜಿಕ ಜಾಲತಾಣ ‘X’ ನಲ್ಲಿ ಸ್ಪಷ್ಟನೆ ನೀಡಿದೆ. “ನಾವು ಈ ರೋಬೋಟ್ ಅನ್ನು ತಯಾರಿಸಿದ್ದೇವೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಇದನ್ನು ಯೂನಿಟ್ರೀ ಕಂಪನಿಯಿಂದ ಖರೀದಿಸಲಾಗಿದೆ ಮತ್ತು ವಿದ್ಯಾರ್ಥಿಗಳ ಕಲಿಕೆಗಾಗಿ ಬಳಸಲಾಗುತ್ತಿದೆ. ಇದು ಕೇವಲ ಪ್ರದರ್ಶನದ ವಸ್ತುವಲ್ಲ, ಬದಲಿಗೆ ವಿದ್ಯಾರ್ಥಿಗಳಿಗೆ ಇದೊಂದು ಚಲಿಸುವ ಕ್ಲಾಸ್ರೂಮ್ ಇದ್ದಂತೆ” ಎಂದು ಸಮರ್ಥಿಸಿಕೊಂಡಿದೆ. ಆದರೆ ಕ್ಯಾಮೆರಾದ ಮುಂದೆ ಅವರದೇ ಸಿಬ್ಬಂದಿ “ನಮ್ಮ ಸಂಶೋಧನೆ” ಎಂದು ಹೇಳಿರುವುದು ಈಗ ಇಕ್ಕಟ್ಟಿಗೆ ಸಿಲುಕಿಸಿದೆ.

ಪರಿಣಾಮ ಮತ್ತು ಪ್ರತಿಕ್ರಿಯೆ
ವಿಶ್ವವಿದ್ಯಾಲಯದ ಕಮ್ಯುನಿಕೇಷನ್ ಪ್ರೊಫೆಸರ್ ನೇಹಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, “ಇದೊಂದು ತಪ್ಪು ತಿಳುವಳಿಕೆಯಿಂದ ಉಂಟಾದ ವಿವಾದ. ನಾನು ವಿಷಯವನ್ನು ಸರಿಯಾಗಿ ವಿವರಿಸಿರಲಿಕ್ಕಿಲ್ಲ ಅಥವಾ ನೀವು ಸರಿಯಾಗಿ ಅರ್ಥೈಸಿಕೊಂಡಿರಲಿಕ್ಕಿಲ್ಲ. ರೋಬೋಟ್ ಅನ್ನು ಕೇವಲ ಪ್ರದರ್ಶನಕ್ಕಾಗಿ ತರಲಾಗಿತ್ತು” ಎಂದು ಹೇಳಿದ್ದಾರೆ. ಆದರೂ, ಸರ್ಕಾರದ ನಿರ್ದೇಶನದಂತೆ ಕೊನೆಗೂ ವಿಶ್ವವಿದ್ಯಾಲಯವು ತನ್ನ ಸ್ಟಾಲ್ ಅನ್ನು ಅಲ್ಲಿಂದ ತೆರವುಗೊಳಿಸಿದೆ.



Source link

Leave a Reply

Your email address will not be published. Required fields are marked *