
Nirmala Sitharaman vs Jaya Bachchan: Heated Spat in Rajya Sabha ಬಜೆಟ್‌ನಲ್ಲಿ ಮನರಂಜನಾ ಉದ್ಯಮವನ್ನು ನಿರ್ಲಕ್ಷಿಸಲಾಗಿದೆ ಎಂದುಸಂಸದೆ ಜಯಾ ಬಚ್ಚನ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮನರಂಜನಾ ತೆರಿಗೆ ರಾಜ್ಯದ ವಿಷಯ ಎಂದು ಸ್ಪಷ್ಟಪಡಿಸಿದರು.
ನವದೆಹಲಿ (ಫೆ.14): ಕೇಂದ್ರ ಬಜೆಟ್‌ನಲ್ಲಿ ಸಿನಿಮಾ ಟಿಕೆಟ್‌ಗಳ ಮೇಲಿನ ತೆರಿಗೆ ಹಾಗೂ ಮನರಂಜನಾ ಉದ್ಯಮವನ್ನು ನಿರ್ಲಕ್ಷ್ಯ ಮಾಡಿರುವ ಬಗ್ಗೆ ರಾಜ್ಯಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಮಾಜವಾದಿ ಪಕ್ಷದ ಸಂಸದೆ ಹಾಗೂ ಅಮಿತಾಬ್ ಬಚ್ಛನ್ ಪತ್ನಿ ಜಯಾ ಬಚ್ಛನ್ ನಡುವೆ ಭಾರೀ ಪ್ರಮಾಣದ ಜಡೆ ಜಗಳ ನಡೆದಿದೆ. ಜಯಾಬಚ್ಛನ್ ಕೇಳಿದ್ದ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಅವರು ನೀಡಿದ್ದ ಉತ್ತರಿಂದ ಸಮಾಧಾನವಾಗದ ಜಯಾ ಬಚ್ಛನ್, ನೀವು ಉತ್ತಮ ಸ್ಟೋರಿ ಟೆಲ್ಲರ್, ಚೆನ್ನಾಗಿ ಕಥೆ ಹೇಳುತ್ತೀರಿ ಎಂದು ಕೆಣಕಿದರು. ಅವರ ಮಾತಿನಿಂದ ಸಿಟ್ಟಾಗಿದ್ದ ನಿರ್ಮಲಾ ಸೀತಾರಾಮನ್, ಜಯಾ ಬಚ್ಛನ್ ಮಾತು ಮುಕ್ತಾಯ ಮಾಡಿದ ಬಳಿಕ ತಾಳ್ಮೆ ಕಳೆದುಕೊಂಡು, ‘ಗಂಟಲು ನಿಮಗೆ ಮಾತ್ರ ಇರೋದಾ..? ಎಲ್ಲರ ಬಳಿಯೂ ಗಂಟಲಿದೆ..’ ಎಂದು ಹೇಳಿದರು. ಆ ಮೂಲಕ ನಿಮ್ಮ ರೀತಿಯಲ್ಲೂ ನಮಗೂ ಮಾತನಾಡಲು ಬರುತ್ತೆ ಅಂತಾ ಎಚ್ಚರಿಸಿದ್ದಾರೆ.
ಮನರಂಜನಾ ಉದ್ಯಮಕ್ಕೆ ಬಜೆಟ್‌ನಲ್ಲಿ ಏನನ್ನೂ ನೀಡಿಲ್ಲ ಎನ್ನುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಉತ್ತರಕ್ಕೆ ಅಡ್ಡಿಪಡಿಸಿದ ರಾಜ್ಯಸಭಾ ಸಂಸದೆ ಜಯಾ ಬಚ್ಚನ್, ಸಚಿವೆಯನ್ನು “ಒಬ್ಬ ಉತ್ತಮ ಸ್ಟೋರಿ ಟೆಲ್ಲರ್” ಎಂದು ಬಣ್ಣಿಸಿದರು ಮತ್ತು ಟಿಕೆಟ್ ಬೆಲೆ ಏರಿಕೆಗೆ ಕಾರಣವಾದ ತೆರಿಗೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.
ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರದ ವಿಚಾರ ಎಂದ ನಿರ್ಮಲಾ
‘ನೀವು ತುಂಬಾ ಉತ್ತಮ ಉತ್ತರ ನೀಡುತ್ತಿದ್ದೀರಿ. ಒಳ್ಳೆಯ ಕಥೆಗಾರರು ನೀವು. ನಮಗೆ ಇದು ಬಹಳ ಎಂಟರ್‌ಟೇನ್‌ಮೆಂಟ್ ಕೊಡುತ್ತಿದೆ.ನಾನು ಮನರಂಜನಾ ಉದ್ಯಮ ಮತ್ತು ಟಿಕೆಟ್ ಬೆಲೆಗಳ ಬಗ್ಗೆ ಮಾತನಾಡುತ್ತಿದ್ದೇನೆ. ನಾವು ಅತಿ ಹೆಚ್ಚು ತೆರಿಗೆ ಪಾವತಿಸುವ ಉದ್ಯಮ’ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಛನ್ ರಾಜ್ಯಸಭೆಯಲ್ಲಿ ಹೇಳಿದರು. ಈ ವೇಳೆ ಜಯಾ ಬಚ್ಛನ್ ಅವರ ಆತಂಕಕ್ಕೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಮನರಂಜನಾ ತೆರಿಗೆ ಮತ್ತು ಟಿಕೆಟ್ ಬೆಲೆ ನಿಗದಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು.
“ಟಿಕೆಟ್ ಬೆಲೆಗಳು ತುಂಬಾ ಹೆಚ್ಚಿರುವುದರಿಂದ ಉದ್ಯಮವು ಸಂಕಷ್ಟದಲ್ಲಿದೆ ಎಂದು ಅವರು ಎತ್ತಿದ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮನರಂಜನಾ ತೆರಿಗೆಯನ್ನು ವಿಚಾರದಲ್ಲಿ ಹೇಳುವುದಾದರೆ, ಟಿಕೆಟ್ ಟ್ಯಾಕ್ಸ್ ರಾಜ್ಯದ ವಿಷಯ. ನನ್ನನ್ನು ಕೇಳುವುದರಲ್ಲಿ ಅರ್ಥವಿಲ್ಲ” ಎಂದು ಅವರು ಹೇಳಿದರು.
2026 ರ ಕೇಂದ್ರ ಬಜೆಟ್ ಮನರಂಜನಾ ಉದ್ಯಮಕ್ಕೆ ಏನಾದರೂ ನೀಡುತ್ತದೆಯೇ ಎಂಬ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರಿಸುವಾಗ ಜಯಾ ಬಚ್ಚನ್ ಈ ರೀತಿ ಪ್ರತಿಕ್ರಯಿಸಿದರು. ಸಮಾಜವಾದಿ ಪಕ್ಷದ ಸಂಸದರ ಹೇಳಿಕೆಯನ್ನು ನಿರಾಕರಿಸಿದ ಹಣಕಾಸು ಸಚಿವರು, ಬಜೆಟ್ “ನಿರಂತರ ಗಮನ” ನೀಡಿದೆ ಎಂದು ಹೇಳಿದರು, ಕಂಟೆಂಟ್ ಕ್ರಿಯೇಟರ್ಸ್, ಆನಿಮೇಟರ್‌ಗಳು ಮತ್ತು ದೃಶ್ಯ ಕಲಾವಿದರ ಕೌಶಲ್ಯವನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಒತ್ತಿ ಹೇಳಿದರು.
ಮನರಂಜನಾ ಕ್ಷೇತ್ರಕ್ಕೆ ನಿರಂತರ ಗಮನ ನೀಡಿದ್ದೇವೆ ಎಂದ ನಿರ್ಮಲಾ
“ನಿರಂತರ ಗಮನ ನೀಡಲಾಗಿದೆ. ಬಜೆಟ್ ಅನಿಮೇಷನ್, ವಿಶುವಲ್ ಎಫೆಕ್ಟ್‌ಸ್ ಮತ್ತು ಕಂಟೆಂಟ್ ಕ್ರಿಯೇಟರ್ ಆರ್ಥಿಕತೆಯನ್ನು ಬೆಳವಣಿಗೆಯ ಎಂಜಿನ್ ಎಂದು ಗುರುತಿಸುತ್ತದೆ. ಇದರ ಪರಿಣಾಮವಾಗಿ, ಬೆಂಬಲವನ್ನು ಘೋಷಿಸಲಾಗಿದೆ: ಭಾರತೀಯ ಸೃಜನಶೀಲ ತಂತ್ರಜ್ಞಾನಗಳ ಸಂಸ್ಥೆ ಈಗ ದೇಶಾದ್ಯಂತ 1500 ಶಾಲೆಗಳಲ್ಲಿ ಕೌಶಲ್ಯ ಮತ್ತು ವಿಷಯ-ಸೃಷ್ಟಿಕರ್ತ ಪ್ರಯೋಗಾಲಯಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. 2030 ರ ವೇಳೆಗೆ ಎರಡು ಮಿಲಿಯನ್ ವೃತ್ತಿಪರರನ್ನು ರಚಿಸಲಾಗುವುದು. ವಿಷಯ ಸೃಷ್ಟಿ ಹೆಚ್ಚು ಕೌಶಲ್ಯಪೂರ್ಣ ವಲಯವಾಗಿದೆ,” ಎಂದು ಅವರು ಹೇಳಿದರು.
“ಕೌಶಲ್ಯ ಕೊರತೆ, ಪ್ರೊಡಕ್ಷನ್ ಆಫ್ ಡಿಸೈನ್ಸ್, ಕಾಸ್ಟೂಮ್ಸ್, ಸೆಟ್‌ಗಳು ಮತ್ತು ವಿಶುವಲ್ ಆಸ್ತೆಟಿಕ್ಸ್” ವನ್ನು ಪರಿಹರಿಸಲು ಹೊಸ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯ ಶಾಖೆಗಳನ್ನು ಘೋಷಿಸಲಾಗುತ್ತಿದೆ ಎಂದು ಅವರು ಹೇಳಿದರು. ಮುಂಬೈನಲ್ಲಿ ನಡೆದ ವಿಶ್ವ ಆಡಿಯೋ ವಿಷುಯಲ್ ಮತ್ತು ಮನರಂಜನಾ ಶೃಂಗಸಭೆ 2025 ರ ಬಗ್ಗೆಯೂ ಅವರು ಮಾತನಾಡಿದರು.
“ನಾವು ವೇವ್ಸ್ 2025 ಅನ್ನು ಆಯೋಜಿಸಿದ್ದೇವೆ. ಇದು ಜಾಗತಿಕ ಕೈಗಾರಿಕಾ ವೇದಿಕೆಯಾಗಿತ್ತು. ತೊಂಬತ್ತಕ್ಕೂ ಹೆಚ್ಚು ದೇಶಗಳು ಇದರಲ್ಲಿ ಭಾಗವಹಿಸಿದ್ದವು. 10,000 ಕ್ಕೂ ಹೆಚ್ಚು ಪ್ರತಿನಿಧಿಗಳು ಅಲ್ಲಿದ್ದರು. ಸಾವಿರಾರು ಸೃಷ್ಟಿಕರ್ತರು ಅಲ್ಲಿದ್ದರು. 300 ಕ್ಕೂ ಹೆಚ್ಚು ಕಂಪನಿಗಳು ಇದರಲ್ಲಿ ಭಾಗವಹಿಸಿದ್ದವು. ಇವು ಮನರಂಜನಾ ಉದ್ಯಮದ ಕಡೆಗೆ ಪ್ರಯತ್ನಗಳಲ್ಲವೇ?” ಎಂದು ಅವರು ಪ್ರಶ್ನೆ ಮಾಡಿದ್ದಾರೆ.
Scroll to load tweet…