Headlines

ಹೇರ್​ ಡೈ ಬಳಸ್ತಿದ್ದೀರಾ? ಹಾಗಿದ್ರೆ ಬೆಂಗಳೂರಿನ ಕ್ಯಾನ್ಸರ್​ ಸರ್ಜನ್​ ಮಾತು ಕೇಳಿ, ಮುಂ | Hair Dye May Brings Cancer Says Bangalore Cancer Surgeon Dr Raghunath Sk Suc

ಹೇರ್​ ಡೈ ಬಳಸ್ತಿದ್ದೀರಾ? ಹಾಗಿದ್ರೆ ಬೆಂಗಳೂರಿನ ಕ್ಯಾನ್ಸರ್​ ಸರ್ಜನ್​ ಮಾತು ಕೇಳಿ, ಮುಂ | Hair Dye May Brings Cancer Says Bangalore Cancer Surgeon Dr Raghunath Sk Suc



ಹೇರ್​ ಡೈ ಬಳಸ್ತಿದ್ದೀರಾ? ಹಾಗಿದ್ರೆ ಬೆಂಗಳೂರಿನ ಕ್ಯಾನ್ಸರ್​ ಸರ್ಜನ್​ ಮಾತು ಕೇಳಿ, ಮುಂ | Hair Dye May Brings Cancer Says Bangalore Cancer Surgeon Dr Raghunath Sk Suc

ಇಂದಿನ ದಿನಗಳಲ್ಲಿ ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದು ಸಾಮಾನ್ಯವಾಗಿದ್ದು, ಹೇರ್ ಡೈ ಬಳಕೆ ಹೆಚ್ಚಾಗಿದೆ. ಆದರೆ, ಹೇರ್ ಡೈಗಳಲ್ಲಿರುವ ರಾಸಾಯನಿಕಗಳು ರಕ್ತ ಸೇರಿ ಮೂತ್ರಕೋಶದ ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಕ್ಯಾನ್ಸರ್ ತಜ್ಞರು ಎಚ್ಚರಿಸಿದ್ದಾರೆ.

ಮುಂಚೆಲ್ಲಾ ಒಂದು ವಯಸ್ಸು ದಾಟಿದ ಮೇಲೆ ಕೂದಲು ಬೆಳ್ಳಗಾಗುತ್ತಿತ್ತು. ಅದು ವಯಸ್ಸಾಗಿರುವ ಲಕ್ಷಣವಾಗಿತ್ತು. ಆದರೆ ಇಂದು ಚಿಕ್ಕಮಕ್ಕಳ ಕೂದಲೂ ಬೆಳ್ಳಗಾಗುತ್ತಿವೆ. ಇವತ್ತಿನ ಜೀವನ ಕ್ರಮ, ಆಹಾರ ಪದ್ಧತಿ, ಪ್ರದೂಷಣೆ, ಮೇಲಾಗಿ ಒತ್ತಡ… ಇನ್ನು ಏನೇನೋ ಕಾರಣಗಳು ಇವುಗಳಿಗೆ ಇವೆ. 25-30 ದಾಟುತ್ತಿದ್ದಂತೆಯೇ ಕೂದಲು ಬೆಳ್ಳಗಾಗುವುದು ಮಾಮೂಲಾಗಿಬಿಟ್ಟಿದೆ. ಇದೇ ಕಾರಣಕ್ಕೆ ಹಲವರಿಗೆ ಮದುವೆ ಕೂಡ ಆಗುತ್ತಿಲ್ಲವಾದರೆ, ಮತ್ತೆ ಕೆಲವರು ಖಿನ್ನತೆಗೆ ಜಾರುವುದು ಇದೆ. ಇದೇ ಕಾರಣಕ್ಕೆ ಹೇರ್​ಡೈ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಪ್ರತಿ ಮನೆಯಲ್ಲಿ ಒಬ್ಬರಾದರೂ ವ್ಯಕ್ತಿ ಹೇರ್​ಡೈ ಬಳಸಿಯೇ ಬಳಸುತ್ತಾರೆ ಎನ್ನುತ್ತದೆ ಅಧ್ಯಯನ.

ಶತಕೋಟಿ ಡಾಲರ್​ ವ್ಯವಹಾರ

ಇದೇ ಕಾರಣಕ್ಕೆ ಹೇರ್​ ಡೈ ಮಾರುಕಟ್ಟೆ ಕೋಟ್ಯಂತರ ಬಿಲಿಯನ್​ ವ್ಯವಹಾರ ನಡೆಸುತ್ತಿದೆ. ಭಾರತ ಒಂದರಲ್ಲಿಯೇ 2024ರಲ್ಲಿ 0.66 ಶತಕೋಟಿ ಡಾಲರ್ ಮೌಲ್ಯದ ಭಾರತೀಯ ಕೂದಲು ಬಣ್ಣ ಮಾರುಕಟ್ಟೆ ಇತ್ತು. ಅದು 2030ರ ವೇಳೆಗೆ 1.72 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ ಎನ್ನಲಾಗಿದೆ. ಹಾಗಿದ್ದರೆ ಅದೆಷ್ಟು ಮಂದಿ ಇದನ್ನು ಬಳಸುತ್ತಾರೆ ಎನ್ನುವುದನ್ನು ನೋಡಬಹುದು. ಜನರನ್ನು ಆಕರ್ಷಿಸಲು ಕಂಪೆನಿಗಳು ಕೋಟಿ ಕೋಟಿ ಹಣ ಕೊಟ್ಟು ಸಿನಿಮಾ, ಕ್ರಿಕೆಟ್​ ಸೆಲೆಬ್ರಿಟಿಗಳನ್ನು ರಾಯಭಾರಿ ಮಾಡುತ್ತಿದ್ದಾರೆ. ಇದೀಗ ಸೋಷಿಯಲ್​ ಮೀಡಿಯಾ ಸ್ಟ್ರಾಂಗ್​ ಆಗಿರುವ ಕಾರಣ, ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಕಂಟೆಂಟ್​ ಕ್ರಿಯೇಟರ್ಸ್​ಗಳು ತಾವೇ ಇದನ್ನು ಬಳಸುವಂತೆ ಹೇಳುತ್ತಾರೆ. ಅದು ಎಷ್ಟು ನಿಜ ಎನ್ನಿಸುತ್ತದೆ ಎಂದು ನಿಮಗೆ ಅದು ಜಾಹೀರಾತು ಎಂದು ಎನ್ನಿಸುವುದೇ ಇಲ್ಲ. ಅವರ ಕೂದಲಿನ ಬಣ್ಣ ನೋಡಿ ಮನಸೋತು, ಖರೀದಿಸಲೇ ಬೇಕು, ಹಾಗೆ ಮೋಡಿ ಮಾಡುತ್ತಾರೆ.

ಕ್ಯಾನ್ಸರ್​ ಸರ್ಜನ್​ ಮಾತು ಕೇಳಿ

ಆದರೆ, ಹೀಗೆ ಮಾಡುವ ಮುನ್ನ ಕ್ಯಾನ್ಸರ್​ ಸರ್ಜನ್​ ಡಾ.ರಘುನಾಥ್​ ಎಸ್​.ಕೆ. ಅವರ ಮಾತನ್ನೊಮ್ಮೆ ಕೇಳಿಬಿಡಿ. ಕಿರಣ್​ ಸಾಗರ್​ ಫಿಟ್​ನೆಸ್​ ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದ್ದು, ಅದರಲ್ಲಿ ವೈದ್ಯರು ಹೇಳಿದ್ದು ಹೀಗಿದೆ: ಬಹುತೇಕ ಎಲ್ಲಾ ಹೇರ್​ಡೈಗಳಲ್ಲಿ ಕೆಮಿಕಲ್ಸ್​ ಇರುತ್ತದೆ. ತಲೆಗೆ ಹೋದಾಗ ಅದು ಹೀರಿಕೊಳ್ಳುತ್ತದೆ. ಕ್ರಮೇಣ ಅದು ಶರೀರದ ಒಳಗೆ ಹೋಗುತ್ತದೆ. ಅದು ರಕ್ತವನ್ನು ಸೇರುತ್ತದೆ. ರಕ್ತಕ್ಕೆ ಹೋದ ಮೇಲೆ ಅದು ಹೊರಕ್ಕೆ ಬರಲೇಬೇಕು. ಕಿಡ್ನಿ ಮೂಲಕ ಅದು ಆಚೆ ಬಂದಾಗ ಮೂತ್ರಕೋಶ (Bladder)ನಲ್ಲಿ ಸ್ಟೋರ್​ ಆಗುತ್ತದೆ. ಅಲ್ಲಿಯೇ ಕ್ಯಾನ್ಸರ್​ ಉತ್ಪತ್ತಿಯಾಗುವುದು ಎಂದಿದ್ದಾರೆ. ಇದಕ್ಕೇನಾದರೂ ಲೆವೆಲ್​ ಒನ್ ಸಾಕ್ಷಿ ಇದ್ಯಾ ಎಂದು ಕೇಳಿದರೆ, ಎಲ್ಲಾ ಸಮದಯಲ್ಲಿಯೂ ಸಾಕ್ಷಿ ಇರುವುದಿಲ್ಲ. ಉದಾಹರಣೆಗೆ ಸ್ಮೋಕ್​ ಮಾಡುವವರಿಗೆ ಎಲ್ಲರಿಗೂ ಶ್ವಾಸಕೋಶದ ಕ್ಯಾನ್ಸರ್​ ಬರುವುದಿಲ್ಲ. ಆದರೆ ನಾವು ಸ್ಟಡಿ ಮಾಡಿದಾಗ, ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಹೆಂಗಸರು ಡೇರ್​ಡೈ ಹೆಚ್ಚಾಗಿ ಉಪಯೋಗಿಸುವ ಕಾರಣದಿಂದ ಮೂತ್ರಕೋಶದ ಕ್ಯಾನ್ಸರ್​ ಹೆಚ್ಚಾಗುತ್ತಿದೆ ಎಂದಿದ್ದಾರೆ ವೈದ್ಯರು.

ಹೇರ್​ ಕಲರಿಂಗ್​

ಹೆನ್ನಾ ಅದೂಇದೂ ಎನ್ನುತ್ತಾರೆ. ಅದರಲ್ಲಿ ಎಷ್ಟು ಕೆಮಿಕಲ್ಸ್​ ಇದೆ ಎನ್ನುವುದು ಸಾಬೀತಾಗಿಲ್ಲ. ಅದರ ಬದಲು ಇರುವುದನ್ನೇ ಒಪ್ಪಿಕೊಂಡು ಚೆನ್ನಾಗಿ ಇದ್ದರೆ ಒಳ್ಳೆಯದು ಎನ್ನುವುದು ಅವರ ಮಾತು. ಅಷ್ಟಕ್ಕೂ, ಹೇರ್​ ಕಲರ್​ನಿಂದಲೂ ಕ್ಯಾನ್ಸರ್​ ಬರುತ್ತಿವೆ. ಬ್ಲಡ್​ ಕ್ಯಾನ್ಸರ್ ಹೆಚ್ಚುತ್ತಿದೆ ಎಂದು ಸಂಶೋಧನೆಗಳು ಇದಾಗಲೇ ಹೇಳಿವೆ. ಚರ್ಮದ ಕ್ಯಾನ್ಸರ್​, ಗರ್ಭಾಶಯದ ಕ್ಯಾನ್ಸರ್​, ಸ್ತನ ಕ್ಯಾನ್ಸರ್​ಗಳಿಗೂ ಇದು ಕಾರಣವಾಗಬಲ್ಲುದು ಎಂದು ತಜ್ಞರು ಇದಾಗಲೇ ಹೇಳಿದ್ದಾರೆ. ಚರ್ಮದ ಸಮಸ್ಯೆ ಮಾತ್ರವಲ್ಲದೇ ಹೇರ್​ ಡೈಯಲ್ಲಿ ಇರುವ ರಾಸಾಯನಿಕಗಳಿಂದ ಮಾನಸಿಕ ರೋಗಗಳೂ ಬರುತ್ತಿವೆ ಎನ್ನಲಾಗಿದೆ.



Source link

Leave a Reply

Your email address will not be published. Required fields are marked *